Health Tips: ಜಪಾನ್ ಮಂದಿ ಫಿಟ್ ಆ್ಯಂಡ್ ಫೈನ್ ಆಗಿರೋಕೆ ಕಾರಣವೇನು ಗೊತ್ತಾ?

Published : May 15, 2023, 02:51 PM IST
Health Tips: ಜಪಾನ್ ಮಂದಿ ಫಿಟ್ ಆ್ಯಂಡ್ ಫೈನ್ ಆಗಿರೋಕೆ ಕಾರಣವೇನು ಗೊತ್ತಾ?

ಸಾರಾಂಶ

ಜಪಾನಿಯರನ್ನು ನೋಡೋಕೆ ಚೆಂದ. ಅವರ ವಯಸ್ಸು ಪತ್ತೆ ಹಚ್ಚೋದು ಕಷ್ಟ. ಆರೋಗ್ಯವಂತರಾಗಿರುವ ಅವರು ದೀರ್ಘಕಾಲ ಬದುಕುತ್ತಾರೆ. ಅವರ ಫಿಟ್ನೆಸ್ ಹಾಗೂ ಆರೋಗ್ಯಕ್ಕೆ ಅವರು ಅನುಸರಿಸುವ ಆಹಾರ ಪದ್ಧತಿಯೇ ಮೂಲ.   

ಬೇಸಿಗೆ ರಜೆ, ಹುಟ್ಟುಹಬ್ಬದ ಪಾರ್ಟಿ, ಹಬ್ಬ ಅದು ಇದು ಅಂತಾ ತಿನ್ನೋದಕ್ಕೆ ಮಿತಿ ಇರೋದಿಲ್ಲ. ಮಧ್ಯರಾತ್ರಿವರೆಗೆ ಪಾರ್ಟಿ ಮಾಡಿ, ಬೆಳಿಗ್ಗೆ ತಡವಾಗಿ ಎದ್ದು, ಯಾವ್ ಯಾವಾಗ್ಲೋ ಆಹಾರ ಸೇವನೆ ಮಾಡುವ ಜನರಿಗೆ ಬೊಜ್ಜು ಹೆಚ್ಚಾಗಿದ್ದು ತಿಳಿಯೋದೇ ಇಲ್ಲ. ತೂಕ ಒಂದೇ ಸಮನೆ ಏರಿದಾಗ ಜನರು ಎಚ್ಚರಗೊಳ್ತಾರೆ. ಹೆಚ್ಚಾಗಿರುವ ಬೊಜ್ಜು ನಿಯಂತ್ರಣಕ್ಕೆ ನಾನಾ ಪ್ರಯತ್ನ ಮಾಡ್ತಾರೆ. ಏನೇ ಮಾಡಿದ್ರೂ ತೂಕ ಇಳಿಯೋದು ಸುಲಭವಲ್ಲ. ನಮಗಿಂತ ಸ್ಲಿಮ್ ಆಗಿರುವ ಜನರನ್ನು ನೋಡಿದ್ರೆ ಹೊಟ್ಟೆಯಲ್ಲಿ ಉರಿಬಿದ್ದಂತಾಗುತ್ತದೆ. ಅವರ ಫಿಟ್ನೆಸ್ ಗುಟ್ಟು ಏನು ಎಂಬ ಪ್ರಶ್ನೆ ಮೂಡುತ್ತದೆ. 

ಫಿಟ್ ಆಂಡ್ ಫೈನ್ ಆಗಿರುವ ಜನರಲ್ಲಿ ಜಪಾನಿ (Japanese) ಗಳು ಸೇರಿದ್ದಾರೆ. ಜಪಾನಿಯರನ್ನು ನೋಡಿದ್ರೆ ಅವರ ವಯಸ್ಸು ಹೇಳೋದು ಕಷ್ಟ. ಆರೋಗ್ಯವಂತ (Healthy) ಹಾಗೂ ಚುರುಕು ಬುದ್ದಿಯ ಜಪಾನಿಗಳು ಸದಾ ಲವಲವಿಕೆಯಿಂದ ಇರ್ತಾರೆ. ತೆಳ್ಳಗಿರುವ ಜಪಾನಿಗಳು ಯಾವಾಗ್ಲೂ ಯಂಗ್ ಆಗಿ ಕಾಣ್ತಾರೆ. ಜಪಾನಿಯರ ಸ್ಲಿಮ್ನೆಸ್ ಮತ್ತು ಚಟುವಟಿಕೆಯ ರಹಸ್ಯ (Secret) ವೇನು ಎಂಬುದನ್ನು ನಾವಿಂದು ಹೇಳ್ತೇವೆ. 

HEALTH TIPS: ಈ ಮೂರು ಆಹಾರದಿಂದ ದೂರವಿದ್ರೆ ಹಾರ್ಟ್‌ಅಟ್ಯಾಕ್ ಆಗೋ ಛಾನ್ಸ್‌ ಕಡಿಮೆ

ಜಪಾನಿಗಳು ಸ್ಲಿಮ್ ಆಗಿರಲು ಪಾಲಿಸ್ತಾರೆ ಹರಾ ಹಚ್ಚಿ ಬು ರೂಲ್ಸ್ : ಜಪಾನಿಯರ ಫಿಟ್ನೆಸ್ ರಹಸ್ಯ ಅವರ ಆಹಾರದ ಸ್ಥಿರ ಸೂತ್ರವನ್ನು ಅವಲಂಭಿಸಿದೆ. ಹರ ಹಚ್ಚಿ ಬು ಅನ್ನುವುದು ಹಿರಿಯರು ನಂಬಿದ್ದ ವಿಶೇಷವಾದ ಆಹಾರ ಪದ್ಧತಿ. ಅವರ ಆಹಾರ ಪದ್ಧತಿ ಅನುಸರಿಸಿದ್ರೆ ಬೊಜ್ಜಿನ ಸಮಸ್ಯೆ ಕಡಿಮೆಯಾಗುತ್ತದೆ.  ಇದು ಆರೋಗ್ಯಕರ ತಿನ್ನುವ ವಿಧಾನ ಮಾತ್ರವಲ್ಲ, ಇದು ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.

ಹೊಟ್ಟೆ ತುಂಬ ತಿನ್ನಲ್ಲ ಜಪಾನಿಗಳು : ಜಪಾನಿಗಳು ಆಹಾರ ಸೇವನೆ ಸಂದರ್ಭದಲ್ಲಿ ಹೊಟ್ಟೆ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡ್ತಾರೆ. ಅವರು ಹೊಟ್ಟೆ ತುಂಬಿ ಬಾಯಿಗೆ ಬರುವಷ್ಟು ಆಹಾರ ತಿನ್ನೋದಿಲ್ಲ. ಶೇಕಡಾ 80ರಷ್ಟು ಹೊಟ್ಟೆ ತುಂಬಿದಾಗ ಆಹಾರದ ತಟ್ಟೆಯಿಂದ ದೂರ ಉಳಿಯುತ್ತಾರೆ. ಖಾಲಿ ಉಳಿದ ಭಾಗದಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಕೊಬ್ಬು ಸೃಷ್ಟಿಯಾಗುವ ಬದಲು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ಶಕ್ತಿ ಉತ್ಪತ್ತಿಯಾಗುತ್ತದೆ.

ಒಂಟಿಯಾಗಿರೋದು 15 ಸಿಗರೇಟ್ ಸೇದಿದ್ದಕ್ಕೆ ಸಮವಂತೆ!

ಆಹಾರದ ಪ್ಲೇಟ್ ಚಿಕ್ಕದಾಗಿರ್ಲಿ : ಆಹಾರದ ಪ್ಲೇಟ್ ಚಿಕ್ಕದಾಗಿರಬೇಕು. ಪ್ಲೇಟ್ ದೊಡ್ಡದಾದ್ರೆ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಡಿಸಿಕೊಳ್ತೇವೆ. ಇದ್ರಿಂದ ಮಿತಿಗಿಂತ ಹೆಚ್ಚು ಆಹಾರ ಹೊಟ್ಟೆ ಸೇರುತ್ತದೆ. ಅದೇ ಪ್ಲೇಟ್ ಚಿಕ್ಕದಾಗಿದ್ದರೆ ಪ್ಲೇಟ್ ಗೆ ಹಾಕುವ ಆಹಾರ ಕಡಿಮೆ ಇರುತ್ತದೆ. ಎರಡನೇ ಬಾರಿ ಮತ್ತೆ ಆಹಾರ ಬಡಿಸಿಕೊಳ್ಳುವ ವೇಳೆ ನಾವು ಎಚ್ಚರಿಕೆವಹಿಸುತ್ತೇವೆ. ಹಸಿವನ್ನು ನಿಯಂತ್ರಿಸಿಕೊಳ್ಳುವ ಪ್ರಯತ್ನ ನಡೆಸ್ತೇವೆ. ಜಪಾನಿಗಳು ಕೂಡ ಸಣ್ಣ ಪ್ಲೇಟ್ ನಲ್ಲಿ ಆಹಾರ ಸೇವನೆ ಮಾಡಲು ಆದ್ಯತೆ ನೀಡ್ತಾರೆ.

ಆಹಾರ ಬಗ್ಗೆ ಫೋಕಸ್ ಇರಲಿ : ನೀವು ಟಿವಿ, ಮೊಬೈಲ್ ನೋಡ್ತಾ ಆಹಾರ ಸೇವನೆ ಮಾಡುತ್ತಿದ್ದರೆ ಎಷ್ಟು ಆಹಾರ ತಿನ್ನುತ್ತಿದ್ದೀರಿ ಎಂಬ ಗಮನವಿರೋದಿಲ್ಲ. ಟಿವಿ ಗುಂಗಿನಲ್ಲಿರುವ ಜನರಿಗೆ ಹೊಟ್ಟೆ ತುಂಬಿದ್ದೇ ತಿಳಿಯೋದಿಲ್ಲ. ಜಪಾನಿ ರೂಲ್ಸ್ ಪ್ರಕಾರ, ನೀವು ಆಹಾರ ತಿನ್ನುವಾಗ ನಿಮ್ಮ ಗಮನ ಸಂಪೂರ್ಣ ಆಹಾರದ ಮೇಲಿರಬೇಕು. ಆಗ ನೀವು ಮಿತಿಗಿಂತ ಹೆಚ್ಚು ತಿನ್ನಲು ಸಾಧ್ಯವಾಗುವುದಿಲ್ಲ.

ತುತ್ತಿನ ಬಗ್ಗೆ ಗಮನವಿರಲಿ : ನೀವು ಆಹಾರ ತಿನ್ನುವಾಗ ತುತ್ತಿನ ಬಗ್ಗೆಯೂ ಗಮನ ಹರಿಸಿ. ನೀವು ದೊಡ್ಡ ತುತ್ತನ್ನು ನುಂಗಬಾರದು. ಸಣ್ಣ ಸಣ್ಣ ತುತ್ತುಗಳನ್ನು ಮಾಡಿಕೊಂಡು, ಅದನ್ನು ಅಗೆದು ತಿನ್ನಬೇಕು. ಹೀಗೆ ಮಾಡಿದ್ರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಜಗಿಯದೆ ಆಹಾರ ತಿಂದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಅಜೀರ್ಣ ಅನೇಕ ರೋಗಕ್ಕೆ ಕಾರಣವಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!