
ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗನ ಶವವನ್ನು ಆಂಬುಲೆನ್ಸ್ ನಲ್ಲಿ ಸಾಗಿಸಲು ಹಣವಿಲ್ಲದೆ ವ್ಯಕ್ತಿಯೊಬ್ಬ ಮೃತ ದೇಹವನ್ನು ಬ್ಯಾಗಿನಲ್ಲಿರಿಸಿ ಬಸ್ ನಲ್ಲಿ ಕೊಂಡೊಯ್ದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ. ಆಂಬ್ಯುಲೆನ್ಸ್ ಶುಲ್ಕ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವ್ಯಕ್ತಿ 200 ಕಿಮೀ ದೂರದ ವರೆಗೆ ಮಗನ ಶವವನ್ನು ಚೀಲದಲ್ಲಿ ಹೊತ್ತೊಯ್ದಿದ್ದಾನೆ. ಸಿಲಿಗುರಿಯ ಕಲಿಯಾಗಂಜ್‌ನಲ್ಲಿ ಈ ಘಟನೆ ವರದಿಯಾಗಿದೆ. ತನ್ನ ಐದು ತಿಂಗಳ ಮಗುವಿನ ಶವವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು 200 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಿ ನಂತರ ಅಲ್ಲಿಂದ ಸಾರ್ವಜನಿಕ ಬಸ್‌ನಲ್ಲಿ ಪ್ರಯಾಣಿಸಿದ್ದೇನೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ.
ಆಂಬುಲೆನ್ಸ್‌ಗೆ ಹಣವಿಲ್ಲದೆ ಮಗನ ಮೃತದೇಹ ಬ್ಯಾಗ್‌ನಲ್ಲಿ ಕೊಂಡೊಯ್ದ ತಂದೆ
ಆಂಬ್ಯುಲೆನ್ಸ್ ಚಾಲಕ ಸಿಲಿಗುರಿಯಿಂದ ಕಲಿಯಾಗಂಜ್‌ಗೆ ಹೋಗಲು ನನ್ನ ಬಳಿ 8,000 ರೂ. ಕೇಳಿದ. ಅದನ್ನು ನನಗೆ ಕೊಡಲು ಸಾಧ್ಯವಾಗಲ್ಲಿಲ್ಲ ಎಂದು ವ್ಯಕ್ತಿ ತಿಳಿಸಿದ್ದಾನೆ. ಮಗುವಿನ ತಂದೆ (Father) ಆಶಿಮ್ ದೇಬ್‌ಶರ್ಮಾ, 'ನನ್ನ ಐದು ತಿಂಗಳ ಮಗು ಕಳೆದ ರಾತ್ರಿ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಚಿಕಿತ್ಸೆ (Treatment) ಪಡೆದ ನಂತರ ಸಾವನ್ನಪ್ಪಿದೆ. ಈ ಸಮಯದಲ್ಲಿ ನಾನು ಆಸ್ಪತ್ರೆಯಲ್ಲಿ (Hospital) 16,000 ರೂ. ಪಾವತಿಸಿದೆ. ಆದರೆ ನನ್ನ ಮಗುವನ್ನು (Children) ಕಲಿಯಗಂಜ್‌ಗೆ ಸಾಗಿಸಲು ಅಲ್ಲಿನ ಆಂಬ್ಯುಲೆನ್ಸ್ ಡ್ರೈವರ್ 8,000 ಕೇಳಿದ.
ಯುಕೆಯಲ್ಲಿ ಅಚ್ಚರಿ: ಇಬ್ಬರಲ್ಲ, ಮೂರು ಜನರ ಡಿಎನ್‌ಎ ಹೊಂದಿದ ಮಗು ಜನನ
ಆದರೆ ಅಷ್ಟು ರೂಪಾಯಿ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ ಎಂದು ವ್ಯಕ್ತಿ ತಿಳಿಸಿದ್ದಾನೆ. ದೇಬ್‌ಶರ್ಮಾ ಅವರು ಶವವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಯಾರಿಗೂ ತಿಳಿಸದೆ ಸ್ಥಳೀಯ ಬಸ್‌ನಲ್ಲಿ ಪ್ರಯಾಣಿಸಬೇಕಾಯಿತು, ಸಿಬ್ಬಂದಿಯ ಸಹ ಪ್ರಯಾಣಿಕರಿಗೆ ಇದರ ಬಗ್ಗೆ ತಿಳಿದರೆ ಅವರು ಡಿಬೋರ್ಡ್ ಆಗುತ್ತಾರೆ ಎಂದು ಹೆದರಿದರು.
ಅಶಿಮ್ ದೇಬ್‌ಶರ್ಮಾ ಮಕ್ಕಳಿಬ್ಬರೂ ಅನಾರೋಗ್ಯಕ್ಕೆ ಒಳಗಾದ ನಂತರ ಅವರನ್ನು ಕಲಿಯಗಂಜ್ ರಾಜ್ಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ನಂತರ ಅವರ ಸ್ಥಿತಿ ಹದಗೆಟ್ಟಿದ್ದರಿಂದ ರಾಯ್‌ಗಂಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರ ಇಬ್ಬರು ಮಕ್ಕಳನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಕ್ಕಳ ಆರೋಗ್ಯ ಹದಗೆಟ್ಟಿದ್ದರಿಂದ ಅಸೀಂ ದೇವಶರ್ಮಾ ಅವರ ಪತ್ನಿ ಗುರುವಾರ ಮಗುವಿನೊಂದಿಗೆ ಮನೆಗೆ ಮರಳಿದರು. ಆದರೆ, ಇನ್ನೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದೆ. ಈ ಮಗುವಿನ ಮೃತದೇಹವನ್ನು ಅವರು ಬ್ಯಾಗ್‌ನಲ್ಲಿ ತುಂಬಿಸಿ ಬಸ್‌ನಲ್ಲಿ ತೆಗೆದುಕೊಂಡು ಬಂದರು.
ಆಸ್ಪತ್ರೆ ಮೆಟ್ಟಿಲ ಬಳಿಯೇ ಮಗುವಿನ ಜನ್ಮ ನೀಡಿದ್ರು ಸಹಾಯಕ್ಕೆ ಬಾರದ ಆರೋಗ್ಯ ಸಿಬ್ಬಂದಿ
ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಈ ಬಗ್ಗೆ ಮಾತನಾಡಿ, ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಆರೋಗ್ಯ ಸೌಲಭ್ಯಗಳ ಕಳಪೆ ಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರವನ್ನು ದೂಷಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಸರ್ಕಾರದ ಆರೋಗ್ಯ ವಿಮಾ ಯೋಜನೆಯ ಪರಿಸ್ಥಿತಿ ಇದುವೇ ಪ್ರಶ್ನಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.