ಬಾಯಿ ವಾಸನೆಯಾಗಿ ಹಿಂಸೆಯಾಗುತ್ತದೆಯೇ? ಮುಜುಗರವಾಗುತ್ತದೆಯೇ? ಬಾಯಿ ವಾಸನೆ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು ಎಂದಾದರೆ ಕೆಲವು ಕ್ರಮಗಳನ್ನು ಅನುಸರಿಸಿ ನೋಡಿ.
ಕೆಲವೊಮ್ಮೆ ಮತ್ತೊಬ್ಬರ ಬಳಿ ಮಾತನಾಡಲು ಮುಜುಗರವಾಗುತ್ತದೆ. ಅದು ಯಾವಾಗೆಂದರೆ, ನಮ್ಮ ಬಾಯಿ, ಉಸಿರು ವಾಸನೆಯಿಂದ ಕೂಡಿದ್ದಾಗ! ಹೌದು, ಇದರಲ್ಲಿ ಮುಜುಗರವೇನೂ ಬೇಕಾಗಿಲ್ಲ. ಎಲ್ಲರಿಗೂ ಒಮ್ಮೆಯಾದರೂ ಈ ಅನುಭವ ಆಗಿರುತ್ತದೆ. ಯಾವುದೋ ಕಾರಣದಿಂದ ನಮ್ಮ ಉಸಿರು ಅಥವಾ ಬಾಯಿ ವಾಸನೆಯಾಗುವುದು, ಅದು ನಮಗೇ ತಿಳಿದು, ಮಾತನಾಡಲು ಹಿಂಜರಿಕೆ ಉಂಟಾಗುವುದು ಸಹಜ. ಯಾವಾಗಲೋ ಒಮ್ಮೆ ಹೀಗಾದರೆ ಪರವಾಗಿಲ್ಲ. ಪದೇ ಪದೆ ಹೀಗಾಗುತ್ತಿದ್ದರೆ ಉದ್ಯೋಗದ ಸ್ಥಳ ಹಾಗೂ ಸಂಬಂಧದಲ್ಲೂ ಕಿರಿಕಿರಿ ಉಂಟಾಗುತ್ತದೆ. ಸಾಮಾನ್ಯವಾಗಿ ಬಾಯಿ ವಾಸನೆ ಏನಾದರೂ ತಿಂದ ಬಳಿಕ, ಹಲ್ಲುಜ್ಜದೆ ಇದ್ದಾಗ, ದಂತಕುಳಿ, ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವಾಗ ಉಂಟಾಗುತ್ತದೆ. ನಾವು ತಿನ್ನುವ ಆಹಾರದ ಚೂರೇ ಚೂರು ಬಾಯಿಯಲ್ಲಿ ಉಳಿದುಕೊಂಡರೂ ಸಾಕು, ಸ್ವಲ್ಪ ಸಮಯದ ಬಳಿಕ ವಾಸನೆ ಉಂಟಾಗುತ್ತದೆ. ಹಾಗೆಯೇ, ಈರುಳ್ಳಿ, ಬೆಳ್ಳುಳ್ಳಿ ತಿಂದ ಬಳಿಕ ವಾಸನೆ ಬರುತ್ತದೆ. ತಂಬಾಕು ಅಗಿಯುವವರ, ಧೂಮಪಾನ ಮಾಡುವವರ ಬಾಯಿ ಸಹ ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ನಿರ್ದಿಷ್ಟ ಕಾರಣವೇ ಇಲ್ಲದೆ ಪದೇ ಪದೆ ಬಾಯಿ ವಾಸನೆ ಉಂಟಾಗುತ್ತಿದ್ದರೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಜತೆಗೆ, ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಬಾಯಿ ವಾಸನೆ ನಿವಾರಣೆ ಮಾಡಿಕೊಳ್ಳಲು ನೋಡಬಹುದು.
• ಹೆಚ್ಚು ನೀರು ಕುಡಿಯಿರಿ (Consume Water)
ಬಾಯಿ ಒಣಗುವುದು ಡಿಹೈಡ್ರೇಷನ್ (Dehydration) ಲಕ್ಷಣ. ಬಾಯಿ (Mouth) ಒಣಗಿದಾಗ ಬಾಯಿ ವಾಸನೆ (Smell) ಉಂಟಾಗುವುದು ಸಹಜ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವಾಗ ಹೀಗಾಗುತ್ತದೆ. ಬಾಯಿ ವಾಸನೆ ತಡೆಗಟ್ಟಲು ದಿನವೂ ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯ. ಬಾಯಲ್ಲಿ ಹೆಚ್ಚು ತೇವಾಂಶ (Wet) ಇರುವಂತೆ ನೋಡಿಕೊಂಡರೆ ಬಾಯಲ್ಲಿ ಉತ್ಪಾದನೆ ಆಗುವ ಕೀಟಾಣುಗಳನ್ನು (Germs) ನಿಯಂತ್ರಿಸಬಹುದು. ಜೊಲ್ಲು (Saliva) ಸರಿಯಾಗಿ ಉತ್ಪಾದನೆ ಆಗುತ್ತಿದ್ದರೆ ಕೆಟ್ಟ ಕೀಟಾಣುಗಳು ಉತ್ಪನ್ನವಾಗುವುದಿಲ್ಲ.
Health Tips : ಬಾಯಿಯ ಈ ರೋಗ ದೊಡ್ಡ ಖಾಯಿಲೆಯ ಲಕ್ಷಣ
• ಲವಂಗ ಅಗಿಯಿರಿ (Chew Clove)
ಲವಂಗ ಬಾಯಿ ವಾಸನೆಯನ್ನು ನಿಯಂತ್ರಿಸುತ್ತದೆ. ಹಾಗೂ ಹಲ್ಲಿನಲ್ಲಿ ಉಂಟಾಗುವ ಕೀಟಾಣುಗಳ ವಿರುದ್ಧ ಹೋರಾಟ ಮಾಡುತ್ತದೆ. ಬಾಯಿ ಕ್ಲೀನ್ (Clean) ಮಾಡಲು ಸಾಧ್ಯವಿಲ್ಲದ ಸಮಯದಲ್ಲಿ ಒಂದೇ ಒಂದು ಲವಂಗ ಬಾಯಿಗಿಟ್ಟುಕೊಂಡು ನಿಧಾನವಾಗಿ ಅಗಿದರೂ ಸಾಕು, ಉಸಿರಿನ ವಾಸನೆ ಇಲ್ಲವಾಗುತ್ತದೆ. ದಿನಕ್ಕೆ ಮೂರ್ನಾಲ್ಕು ಬಾರಿ ಹೀಗೆ ಮಾಡಿದರೆ, ಕೆಟ್ಟ ಕೀಟಾಣುಗಳ ಉತ್ಪಾದನೆ ನಿಂತು ಕ್ರಮೇಣ ಸಂಪೂರ್ಣ ವಾಸನೆ ದೂರವಾಗುತ್ತದೆ.
• ಗ್ರೀನ್ ಟೀ (Green Tea) ಉಪಕಾರಿ
ಬಾಯಿ ಹಾಗೂ ಹಲ್ಲುಗಳ ಆರೋಗ್ಯಕ್ಕೆ ಗ್ರೀನ್ ಟೀ ಉಪಕಾರಿ. ಅಧ್ಯಯನಗಳ ಪ್ರಕಾರ, ಗ್ರೀನ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್ (Antioxidants) ಕೆಟ್ಟ ಉಸಿರಿಗೆ ಕಾರಣವಾಗುವ ಅಂಶಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ಪಾಲಿಫೆನಾಲ್ ಅಂಶ ಕೀಟಾಣು ಹಾಗೂ ಸಲ್ಫರ್ ಸಂಯುಕ್ತಗಳನ್ನು ನಿಯಂತ್ರಿಸುತ್ತದೆ.
Personal Care: ಮೀಟಿಂಗ್ ಇರಲಿ ಡೇಟಿಂಗ್, ಜೇಬಿನಲ್ಲಿರಲಿ ಈ ಸ್ಪ್ರೇ
• ಸೋಂಪು (Fennel Seeds)
ಸೋಂಪು ಕಾಳನ್ನು ಊಟವಾದ ಬಳಿಕ ಸೇವಿಸುವುದು ಸಾಮಾನ್ಯ. ಈರುಳ್ಳಿ (Onion), ಬೆಳ್ಳುಳ್ಳಿ (Garlic)ಯುಕ್ತ ಆಹಾರ ಸೇವನೆ ಮಾಡಿದ ಬಳಿಕ ಸೋಂಪು ಕಾಳನ್ನು ತಿಂದರೆ ಕೆಟ್ಟ ಉಸಿರು ಉಂಟಾಗುವುದಿಲ್ಲ. ಸೋಂಪಿನಲ್ಲಿ ಪರಿಮಳಯುಕ್ತ ಸಾರಭೂತ ತೈಲದ ಅಂಶವಿರುತ್ತದೆ. ಹಾಗೂ ಇದು ಬ್ಯಾಕ್ಟೀರಿಯಾ (Bacteria) ನಿರೋಧಕ ಗುಣ ಹೊಂದಿದೆ. ಸೋಂಪು ಕಾಳನ್ನು ಅಗಿಯುವುದರಿಂದ ಜೊಲ್ಲು ಚೆನ್ನಾಗಿ ಬಿಡುಗಡೆಯಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
• ಮೊಸರು ಸೇವನೆ (Yogurt)
ಮೊಸರಿನಲ್ಲಿ ಲ್ಯಾಕ್ಟೊಬ್ಯಾಸಿಲಸ್ ಎನ್ನುವ ಬ್ಯಾಕ್ಟೀರಿಯಾ ಇರುತ್ತದೆ. ಇದು ಕರುಳಿನ ಆರೋಗ್ಯಕ್ಕೆ (Gut Health) ಉತ್ತಮವಾಗಿದೆ. ಸಕ್ಕರೆ (Sugar) ಅಂಶ ಕಡಿಮೆ ಇರುವ, ಕೆನೆ ಇರದ ಮೊಸರು ಉಸಿರಿನ ವಾಸನೆ ನಿಯಂತ್ರಿಸಲು ಅನುಕೂಲ. ಸಕ್ಕರೆಯಿಂದ ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತವೆ, ವಾಸನೆ ಹೆಚ್ಚುತ್ತದೆ. ಸಕ್ಕರೆ ಇರದ, ಹುಳಿ ಬರದ ಮೊಸರು ಅತ್ಯುತ್ತಮ.