ಫಿಟ್ನೆಸ್ ಬಹುತೇಕರ ಡ್ರೀಮ್. ಇದಕ್ಕಾಗಿ ಪ್ರತಿ ದಿನ ಪ್ರಯತ್ನಿಸುತ್ತಾರೆ. ಕೊಬ್ಬು ಕರಗಿ ನಿಮ್ಮ ದೇಹ ಫಿಟ್ ಆಗ್ಬೇಕು ಜೊತೆಗೆ ಮಾನಸಿಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನೀವು ಹುಲಾ ಹೂಪ್ ವ್ಯಾಯಾಮ ಪ್ರಯತ್ನಿಸಿ. ಇದ್ರಲ್ಲಿ ಸಾಕಷ್ಟು ಪ್ರಯೋಜನವಿದೆ.
ಬಿಡುವಿಲ್ಲದ ಜೀವನಶೈಲಿಯಲ್ಲಿ ಅನೇಕರ ತೂಕ ಏರಿಕೆಯಾಗ್ತಿದೆ. ಜಿಮ್ ಗೆ ಹೋಗಲು, ಯೋಗಾಸನ ಮಾಡಲು, ವಾಕಿಂಗ್ ಮಾಡಲು ಜನರಿಗೆ ಸಮಯ ಸಿಗ್ತಿಲ್ಲ. ಹಾಗೆಯೇ ಸರಿಯಾದ ಆಹಾರ ಸೇವನೆ ಸಾಧ್ಯವಾಗ್ತಿಲ್ಲ. ಈ ಎಲ್ಲ ಕಾರಣದಿಂದಾಗಿ ಜನರು ದಿನ ದಿನಕ್ಕೂ ಭಾರವಾಗ್ತಿದ್ದಾರೆ. ಕೊಬ್ಬು ಜಾಸ್ತಿಯಾಗ್ತಿದೆ. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬೇಕು ಎನ್ನುವವರು ನೀವಾಗಿದ್ದರೆ ವಿದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಈಗ ನಮ್ಮ ದೇಶಕ್ಕೂ ಲಗ್ಗೆಯಿಟ್ಟು ಸದ್ದು ಮಾಡ್ತಿರುವ ಹುಲಾ ಹೂಪ್ ಸಹಾಯವನ್ನು ನೀವು ಪಡೆಯಬಹುದು.
ಹುಲಾ ಹೂಪ್ (Hula Hoop) ಕ್ಯಾಲೊರಿಗಳನ್ನು ಸುಡುತ್ತದೆ. ಹೊಟ್ಟೆ (Stomach) ಯ ಕೊಬ್ಬ (Fat) ನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಇದು ಉತ್ತಮ ಮಾರ್ಗವಾಗಿದೆ. ಒತ್ತಡ (Stress ) ಸೇರಿದಂತೆ ಮಾನಸಿಕ ಸಮಸ್ಯೆ ಹೋಗಲಾಡಿಸಿ ಆರೋಗ್ಯ ಕಾಪಾಡುವ ಕೆಲಸವನ್ನು ಇದು ಮಾಡುತ್ತದೆ. ನೀವು ದಿನಕ್ಕೆ ಕೇವಲ 30 ನಿಮಿಷಗಳ ಕಾಲ ಹುಲಾ ಹೂಪ್ ವ್ಯಾಯಾಮವನ್ನು ಶಾಂತಿಯುತವಾಗಿ ಮಾಡಬೇಕು. ಹುಲಾ ಹೂಪ್ ವ್ಯಾಯಾಮಗಳು ಯಾವುವು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ.
ಚಳಿಗಾಲದಲ್ಲಿ ಬೆಡ್‌ನಿಂದ ಏಳೋಕೆ ಮನಸ್ಸಾಗಲ್ವಾ ? ಈ ಅಭ್ಯಾಸ ಬಿಟ್ಬಿಡೋಕೆ ಇಲ್ಲಿದೆ ಟಿಪ್ಸ್
undefined
ಹುಲಾ ಹೂಪ್ ಎಂದರೆ ಒಂದು ದೊಡ್ಡ ರಿಂಗ್. ಇದನ್ನು ದೇಹಕ್ಕೆ ಹಾಕಿಕೊಂಡು ಅದು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡ್ತಾ ತಿರುಗಿಸಬೇಕು. ಈ ವ್ಯಾಯಾಮವನ್ನು ಒಳಾಂಗಣ, ಹೊರಾಂಗಣ ಅಥವಾ ಜಿಮ್ ಎಲ್ಲಿಯಾದ್ರೂ ನೀವು ಮಾಡಬಹುದು. ಮನೆಯಲ್ಲಿ ಬೇರೆ ಕೆಲಸ ಮಾಡ್ತಾ ನೀವು ಈ ಹುಲಾ ಹೂಪ್ ಬ್ಯಾಲೆನ್ಸ್ ಮಾಡಬಹುದು. ಈ ಹುಲಾ ಹೂಪನ್ನು ನೀವು ಅನೇಕ ರೀತಿಯಲ್ಲಿ ಅಭ್ಯಾಸ ಮಾಡಬಹುದು. ಹೊಟ್ಟೆ, ಕಾಲು, ಕೈ, ಕುತ್ತಿಗೆ ಹೀಗೆ ಬೇರೆ ಬೇರೆ ಭಾಗದಲ್ಲಿ ಇದನ್ನು ಬ್ಯಾಲನ್ಸ್ ಮಾಡ್ತಾ ತಿರುಗಿಸಬಹುದು.
ಹುಲಾ ಹೂಪ್ ನಿಂದಾಗುವ ಲಾಭಗಳು :
ಸ್ನಾಯು ಬಲ : ನಿಯಮಿತವಾದ ಹುಲಾ ಹೂಪ್ ತಾಲೀಮು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹದ ಆಕಾರ ಇದ್ರಿಂದ ಉತ್ತಮವಾಗಿರುತ್ತದೆ. ಹುಲಾ ಹೂಪ್ ತಾಲೀಮು ಮಾಡಿದ ಕಾಲುಗಳ ಜೊತೆಗೆ ಭುಜದ ಸ್ನಾಯುಗಳಿಗೆ ವ್ಯಾಯಾಮ ಸಿಕ್ಕಂತಾಗುತ್ತದೆ.
ಏಕಾಗ್ರತೆ ಹೆಚ್ಚಳ : ಸಂಶೋಧನೆ ಪ್ರಕಾರ, ಹುಲಾ ಹೂಪ್ ವ್ಯಾಯಾಮವನ್ನು ಕ್ರಮಬದ್ಧವಾಗಿ ಮಾಡುವುದ್ರಿಂದ ಕೆಲಸದ ಮೇಲೆ ಕೇಂದ್ರೀಕರಿಸುವುದು ಸುಲಭವಾಗುತ್ತದೆ. ಯಾವುದೇ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಬಹುದು. ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ. ಏಕಾಗ್ರತಿ ಹೆಚ್ಚುತ್ತದೆ.
ಕೊಬ್ಬು ಕಡಿಮೆ ಮಾಡುತ್ತೆ ಹುಲಾ ಹೂಪ್ : ನಿಯಮಿತವಾಗಿ ಹುಲಾ ಹೂಪ್ ವ್ಯಾಯಾಮವು ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹುಲಾ ಹೂಪ್ ಮಾಡೋದ್ರಿಂದ ದೇಹವನ್ನು ನಾವು ಸಂಪೂರ್ಣವಾಗಿ ತಿರುಗಿಸಬೇಕಾಗುತ್ತದೆ. ಇದು ಒಂದು ರೀತಿಯ ಸಂಪೂರ್ಣ ವ್ಯಾಯಾಮವಾಗಿದ್ದು, ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು, ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ವ್ಯಾಯಾಮ.
ಸುಂದರ ಹಿಪ್ಸ್ ಬೇಕೆಂದ್ರೆ ಹುಲಾ ಹೂಪ್ ಅಭ್ಯಾಸ ಮಾಡಿ : ದೇಹದ ಉಳಿದ ಭಾಗವನ್ನು ಮಾತ್ರವಲ್ಲ ಹಿಪ್ಸ್ ಆಕಾರವನ್ನು ಕೂಡ ಇದು ಸುಧಾರಿಸುತ್ತದೆ. ಈ ವ್ಯಾಯಾಮದಿಂದ ಸೊಂಟದ ಸುತ್ತ ಇರುವ ಕೊಬ್ಬು ಕಡಿಮೆಯಾಗುತ್ತದೆ.
ಜಾಯಿಂಟ್ ಪೆಯಿನ್‌ಗೆ Cold Vs Heat Treatment ಯಾವುದು ಒಳ್ಳೇದು ?
ಹುಲಾ ಹೂಪ್ ನಿಂದ ಬರ್ನ್ ಆಗುತ್ತೆ ಇಷ್ಟೊಂದು ಕ್ಯಾಲೋರಿ : ಹುಲಾ ಹೂಪ್ ವ್ಯಾಯಾಮವು ಫಿಟ್ ಆಗಿರಲು ಮಾತ್ರ ಸಹಾಯಕಾರಿಯಲ್ಲ. ಹುಲಾ ಹೂಪ್ ವ್ಯಾಯಾಮದಿಂದ ಒಂದು ಗಂಟೆಯಲ್ಲಿ 450 ಕ್ಯಾಲೊರಿ ಬರ್ನ್ ಮಾಡಬಹುದು.
ಹುಲಾ ಹೂಪ್ ವ್ಯಾಯಾಮ ಮಕ್ಕಳಿಗೂ ಒಳ್ಳೆಯದು. ಇದ್ರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚುತ್ತದೆ. ಎಲ್ಲಾ ವಯಸ್ಸಿನ ಜನರು ಇದನ್ನು ಸುಲಭವಾಗಿ ಮಾಡಬಹುದು.