ಚಳಿಗಾಲದಲ್ಲಿ ಕಾಡುವ ಅನಾರೋಗ್ಯ ಸಮಸ್ಯೆಗಳಲ್ಲಿ ಜ್ವರ ಕೂಡ ಒಂದು. ಏಕಾಏಕಿ ಮೈ ನಡುಕ ಶುರುವಾಗಿ ದೇಹ ಬಿಸಿಯಾಗಿರುತ್ತದೆ. ಈ ಸಂದರ್ಭದಲ್ಲಿ ಒತ್ತಡಕ್ಕೊಳಗಾಗದೆ ಸುಲಭ ಟಿಪ್ಸ್ ಫಾಲೋ ಮಾಡಿದ್ರೆ ಜ್ವರ ಓಡಿ ಹೋಗುತ್ತೆ.
ಋತು ಬದಲಾದ ಸಂದರ್ಭದಲ್ಲಿ ಚಳಿ, ಕೆಮ್ಮ, ಜ್ವರ ಬರೋದು ಸಾಮಾನ್ಯ ಸಂಗತಿ. ನವಜಾತ ಶಿಶುವಿನಿಂದ ಹಿಡುವ ವೃದ್ಧರವರೆಗೆ ಎಲ್ಲರೂ ಈ ಜ್ವರಕ್ಕೆ ತುತ್ತಾಗ್ತಾರೆ. ಜ್ವರ ಬರ್ತಿದ್ದಂತೆ ಜನರು ವೈದ್ಯರ ಬಳಿ ಓಡ್ತಾರೆ. ಸಾಮಾನ್ಯವಾಗಿ ನೂರು ಡಿಗ್ರಿ ಜ್ವರವಿದ್ದರೂ ವೈದ್ಯರು ಆರಂಭದ ಮೂರು ದಿನ ಹೆಚ್ಚಿನ ಮಾತ್ರೆಗಳನ್ನು ನೀಡೋದಿಲ್ಲ. ಮೂರು ದಿನಗಳಲ್ಲಿ ಜ್ವರ ಕಡಿಮೆ ಆಗಿಲ್ಲವೆಂದ್ರೆ ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡ್ತಾರೆ. ನೀವೂ ಆಗ ಈಗ ಜ್ವರಕ್ಕೆ ತತ್ತಾಗ್ತಿದ್ದರೆ, ನಿಮ್ಮ ಜ್ವರ ನೂರು ಡಿಗ್ರಿ ದಾಟಿದ್ದರೆ ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೆವೆ. ಕೆಲ ಉಪಾಯಗಳನ್ನು ಮಾಡೋದ್ರಿಂದ 24 ಗಂಟೆಯಲ್ಲಿ ನಿಮ್ಮ ಜ್ವರದ ಅಬ್ಬರವನ್ನು ಕಡಿಮೆ ಮಾಡಬಹುದು.
100 ಡಿಗ್ರಿಗಿಂತ ಹೆಚ್ಚಿನ ಜ್ವರ (Fever) ಬಂದ್ರೆ ಏನು ಮಾಡ್ಬೇಕು ಗೊತ್ತಾ?
ಮಳೆಯಲ್ಲಿ ನೆನೆದಾಗ, ಚಳಿಗಾಲ (Winter) ದಲ್ಲಿ ಸರಿಯಾದ ಬಟ್ಟೆ ಧರಿಸದೆ ಹೋದಾಗ ನಾವು ಅನಾರೋಗ್ಯ (Unhealthy) ಕ್ಕೆ ಒಳಗಾಗುತ್ತೇವೆ. ಹಲವು ಬಾರಿ 100 ಡಿಗ್ರಿಗಿಂತ ಹೆಚ್ಚು ಜ್ವರ ಬರುತ್ತದೆ. 100 ಡಿಗ್ರಿ ಜ್ವರ ಕಾಣಿಸಿಕೊಳ್ತಿದ್ದಂತೆ ಕಂಗಾಲಾಗಬೇಡಿ. ತಕ್ಷಣ ಡೋಲೋ (Dolo) 500 ಟ್ಯಾಬ್ಲೆಟ್ ಸೇವಿಸಬೇಕು. ವಯಸ್ಸು 18 ವರ್ಷಕ್ಕಿಂತ ಹೆಚ್ಚಿದ್ದರೆ ನೀವು ಆರಾಮವಾಗಿ ಡೋಲೋ 500 ಟ್ಯಾಬ್ಲೆಟ್ ಅನ್ನು ಸೇವಿಸಬಹುದು. ನಿಮ್ಮ ವಯಸ್ಸು 18 ಕ್ಕಿಂತ ಕಡಿಮೆಯಿದ್ದರೆ ನೀವು ಪ್ಯಾರೆಸಿಟಮಾಲ್ ಮಾತ್ರೆ ತೆಗೆದುಕೊಳ್ಳಬೇಕು. ಮಕ್ಕಳಿಗೆ ಜ್ವರ ಬಂದಲ್ಲಿ ನೀವು ಪ್ಯಾರೆಸಿಟಮಾಲ್ ಸಿರಪ್ ಕೂಡ ನೀಡಬಹುದು. ಆದ್ರೆ ಮಕ್ಕಳು ಹಾಗೂ ದೊಡ್ಡವರಿಗೆ ಮಾತ್ರೆ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಮಾತ್ರೆ ನೀಡಬೇಕಾಗುತ್ತದೆ.
ಮಕ್ಕಳು ಶಾಲೆಗೆ ಹೋಗೋದನ್ನು ತಪ್ಪಿಸಲು ಅನಾರೋಗ್ಯ ನೆಪ ಹೇಳ್ತಿದ್ದಾರಾ?
ಜ್ವರ ನೆತ್ತಿಗೇರಿದ್ದರೆ ಹೀಗೆ ಮಾಡಿ: ವಿಪರೀತ ಚಳಿ, ಜ್ವರ ಬಂದಾಗ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಣ್ಣು ತೆರೆಯಲು ಸಾಧ್ಯವಾಗೋದಿಲ್ಲ. ತಲೆ ಶಾಖ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ತಣ್ಣಿರು ಪಟ್ಟಿಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕು. ಒಂದು ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದನ್ನು ಹಿಂದಿ ಬಟ್ಟೆಯನ್ನು ತಲೆಯ ಮೇಲೆ ಇಡಬೇಕು. ಇದನ್ನು ನಾಲ್ಕೈದು ಬಾರಿ ಮಾಡಬಹುದು. ಮಾತ್ರೆ ಸೇವನೆ ಮಾಡಲು ಗಲಾಟೆ ಮಾಡುವ ಮಕ್ಕಳಿಗೆ ನೀವು ಈ ವಿಧಾನವನ್ನು ಬಳಸಬಹುದು.
ವಿಶ್ರಾಂತಿ ಬಹಳ ಮುಖ್ಯ: ಜ್ವರ ಬಂದಾಗ್ಲೂ ಅನೇಕರು ಕೆಲಸ ಮಾಡಲು ಮುಂದಾಗ್ತಾರೆ. ಜ್ವರ ಆಗ್ಲೇ ನಮ್ಮ ಶಕ್ತಿಯನ್ನು ನುಂಗಿರುತ್ತದೆ. ಕೆಲಸ ಮಾಡಿದ್ರೆ ನಾವು ಮತ್ತಷ್ಟು ನಿತ್ರಾಣಗೊಳ್ಳುತ್ತೇವೆ. ಹಾಗಾಗಿ ಜ್ವರ ಬಂದ ಸಮಯದಲ್ಲಿ ಸಂಪೂರ್ಣ ವಿಶ್ರಾಂತಿ ಬೇಕಾಗುತ್ತದೆ. ನೀವು ಸಾಧ್ಯವಾದಷ್ಟು ನಿದ್ರೆ ಮಾಡಿದ್ರೆ ಜ್ವರ ಬೇಗ ಕಡಿಮೆಯಾಗುತ್ತದೆ.
Health: 15 ವರ್ಷದೊಳಗಿನ ಮಕ್ಕಳಿಗೆ ಮೆದುಳು ಜ್ವರ ಬಾಧೆ ಪೋಷಕರೇ ಎಚ್ಚರ
ನೀರಿನ ಸೇವನೆ: ಜ್ವರ ಬಂದಾಗ ಬಾಯಿ ಸೆಪ್ಪೆ ಎನ್ನಿಸುತ್ತದೆ. ಇದೇ ಕಾರಣಕ್ಕೆ ಬಹುತೇಕರು ನೀರು ಕುಡಿಯೋದಿಲ್ಲ. ಆದ್ರೆ ಜ್ವರ ಬಂದಾಗ ನೀರು ಸೇವನೆ ಬಹಳ ಮುಖ್ಯ. ನೀವು ಬೆಚ್ಚಗಿನ ನೀರನ್ನು ಕುಡಿಯಬೇಕು. ಆಗಾಗ ನೀರು ಕುಡಿಯುವುದ್ರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ನಿಮ್ಮ ಸುಸ್ತನ್ನು ಇದ್ರಿಂದ ಕಡಿಮೆ ಮಾಡಬಹುದು.
ಆರಾಮದಾಯಕ ಬಟ್ಟೆ ಧರಿಸಿ, ಆಹಾರ ಸೇವಿಸಿ : ಚಳಿ ಎನ್ನುವ ಕಾರಣಕ್ಕೆ ರಗ್ ಹೊದ್ದು ಮಲಗುವುದು ಸೂಕ್ತವಲ್ಲ ಎನ್ನುತ್ತಾರೆ ವೈದ್ಯರು. ಜ್ವರ ಬಂದಾಗ ಮೈ ಮೇಲೆ ಆರಾಮದಾಯಕ ಬಟ್ಟೆ ಇರಬೇಕು. ಹಾಗೆಯೇ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ನೀವು ಆಹಾರ ಸೇವನೆ ಬಿಟ್ರೆ ಜ್ವರ ಕಡಿಮೆಯಾದ್ರೂ ನಿಶಕ್ತಿ ಹೋಗುವುದಿಲ್ಲ. ಹಾಗಾಗಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ಮುಖ್ಯವಾಗುತ್ತದೆ.