‌ತಲೆಕೂದಲಿನ ಕಪ್ಪು ಬಣ್ಣ ಹೆಚ್ಚು ಕಾಲ ಉಳಿಯಲು 9 ಟಿಪ್ಸ್

Published : May 13, 2025, 09:13 PM ISTUpdated : May 14, 2025, 10:15 AM IST
‌ತಲೆಕೂದಲಿನ ಕಪ್ಪು ಬಣ್ಣ ಹೆಚ್ಚು ಕಾಲ ಉಳಿಯಲು 9  ಟಿಪ್ಸ್

ಸಾರಾಂಶ

ತಲೆಕೂದಲು ಬೇಗನೆ ಬಿಳಿಯಾಗಿಬಿಟ್ಟರೆ ಯವ್ವನ ಮುಗಿಯಿತೆಂದು ಮಂಕಾಗುವ ಬದಲು ಹೇರ್‌ ಡೈ ಹಚ್ಚಿ ಕಳೆಕಳೆಯಾಗಿರುವುದು ಒಳ್ಳೆಯದೇ. ಆದರೆ ಈ ಕಲರ್‌ ಮಂಕಾಗಿ ಕೂದಲು ಕೆಂಚಾಗದಂತೆ ಕಾಪಾಡಿಕೊಳ್ಳುವ ಕಲೆಯೂ ಗೊತ್ತಿರಬೇಕು. ಅದಕ್ಕೆ 9 ಟಿಪ್ಸ್‌ ಇಲ್ಲಿದೆ.  

ಈಗ ಕೆಲವರಿಗೆ ಮೂವತ್ತು ವರ್ಷವಾದ ಕೂಡಲೇ ತಲೆಕೂದಲು ಬಿಳಿಯಾಗಲು ಶುರುವಾಗುತ್ತದೆ. ಕೂಡಲೇ ಕಂಗಾಲಾಗಿ ಬ್ಲ್ಯಾಕ್‌ ಹೇರ್‌ ಡೈ ಹಚ್ಚಲು ಶುರುಮಾಡುತ್ತಾರೆ. ಆದರೆ ನಾಲ್ಕಾರು ವಾರದಲ್ಲಿ ಈ ಕಲರ್‌ ಎಲ್ಲಾ ಎದ್ದು ಹೋಗಿ ಮತ್ತೆ ಬಿಳಿಕೂದಲುಗಳು ಕಾಣಲು ಶುರುವಾಗುತ್ತದೆ ಅಥವಾ ಕಪ್ಪು- ಕೆಂಚು ಮಿಶ್ರಿತವಾಗಿ ಕಾಣಲು ಆರಂಭಿಸುತ್ತದೆ. ಇಷ್ಟೊಂದು ಬೇಗನೆ ಕಲರ್‌ ಮಂಕಾಗಬಾರದು ಎಂದು ನಿಮಗಿದೆ. ಆದರೆ ಹೇಗೆ ಕಾಪಾಡಿಕೊಳ್ಳುವುದು ಅಂತ ಗೊತ್ತಿಲ್ಲ ಅನ್ನುವವರಿಗಾಗಿ ಕೆಲವು ಟಿಪ್ಸ್‌ ಇಲ್ಲಿದೆ. ಬಣ್ಣ ಮಸುಕಾಗುವುದನ್ನು ತಡೆಗಟ್ಟುವುದರಿಂದ ಹಿಡಿದು, ಕೂದಲಿನ ಹಾನಿಯನ್ನು ಕಡಿಮೆ ಮಾಡುವವರೆಗೆ, ತಜ್ಞರು ಶಿಫಾರಸು ಮಾಡಿದ ಈ ಕೂದಲಿನ ಆರೈಕೆ ಸಲಹೆಗಳು ನಿಮ್ಮ ಕೂದಲನ್ನು ಕಪ್ಪು ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತವೆ. 

1) ಶಾಂಪೂ ಕಡಿಮೆ ಮಾಡಿ, ಹೆಚ್ಚು ತೊಳೆಯಿರಿ

ಹೆಚ್ಚಾಗಿ ಶಾಂಪೂ ಹಚ್ಚಬೇಡಿ. ಹಚ್ಚಿದರೂ ಹೆಚ್ಚು ಅವಧಿ ಬಿಡಬೇಡಿ. ಸಮಯ ಸೀಮಿತಗೊಳಿಸಿ. ಇದು ಸ್ಟ್ರಿಪ್ಪಿಂಗ್ ಪರಿಣಾಮ ಕಡಿಮೆ ಮಾಡಿ ಬಣ್ಣವನ್ನು ಸಂರಕ್ಷಿಸುತ್ತದೆ. ಕೂದಲನ್ನು ನೀರಿನಿಂದ ತೊಳೆಯಿರಿ. ತೇವಾಂಶವನ್ನು ಕಾಪಾಡಿಕೊಳ್ಳಲು ಕಲರ್‌ ಹೋಗದಂಥ ಸುರಕ್ಷಿತ ಕಂಡಿಷನರ್ ಬಳಸಿ. 

2) ಡ್ರೈ ಶಾಂಪೂ ಅಳವಡಿಸಿಕೊಳ್ಳಿ

ನಿಮ್ಮ ತಲೆಕೂದಲನ್ನು ತೊಳೆಯುವ ಅವಧಿಯ ಅಂತರವನ್ನು ಹೆಚ್ಚಿಸಿ. ಅಂದರೆ, ಪ್ರತಿದಿನ ತಲೆ ಮೀಯುವವರಾದರೆ, ಎರಡು ದಿನಕ್ಕೊಮ್ಮೆ ತಲೆ ತೊಳೆದುಕೊಳ್ಳಿ. ಅತಿಯಾದ ಶುಚಿಗೊಳಿಸುವಿಕೆ ನಿಲ್ಲಿಸಿ. ಡ್ರೈ ಶಾಂಪೂವನ್ನು ನಿಮ್ಮ ಸ್ನಾನದಲ್ಲಿ ಸೇರಿಸಿಕೊಳ್ಳಿ. ಕೂದಲ ಹೊಳಪು ಮಸುಕಾಗದೆ ರಿಫ್ರೆಶ್ ಆಗಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಶಾಂಪೂ ಆರಿಸಿಕೊಳ್ಳಿ.

3) ಕೂಲ್ ಇಟ್ ಡೌನ್

ಕಲರ್‌ ಕೂದಲನ್ನು ತೊಳೆಯುವಾಗ, ಕಲರ್‌ನ ಅಣುಗಳು ತಪ್ಪಿಸಿಕೊಳ್ಳುವುದನ್ನು ತಡೆಯಲು ಹದ ಬೆಚ್ಚಗಿನ ಅಥವಾ ತಣ್ಣೀರನ್ನು ಬಳಸಿ. ತೀವ್ರ ಬಿಸಿನೀರನ್ನು ತಪ್ಪಿಸಿ. ಏಕೆಂದರೆ ಇದು ಬಣ್ಣ ಮಸುಕಾಗುವಿಕೆ ಮತ್ತು ಶುಷ್ಕತೆಗೆ ಕಾರಣವಾಗಬಹುದು.

4) ಕಂಡೀಷನಿಂಗ್ 

ಹೈಡ್ರೇಟ್ ಮಾಡಲು ನಿಮ್ಮ ತಲೆಕೂದಲನ್ನು ನಿಯಮಿತವಾಗಿ ಡೀಪ್‌ ಕಂಡೀಷನಿಂಗ್ ಮಾಡಿಸಿ. ಸಾವಯವ ಎಣ್ಣೆ ಅಥವಾ ಕೆರಾಟಿನ್‌ನಂತಹ ಪದಾರ್ಥಗಳನ್ನು ಬಳಸಿ. ಕೆಮಿಕಲ್‌ಯುಕ್ತ ಕಂಡಿಷನರ್ಸ್‌ ಬೇಡ. 

5) ಶಾಖದ ಹೊಡೆತ ತಪ್ಪಿಸಿ

ಅತಿಯಾದ ಶಾಖ ಕೂದಲಿನ ಬಣ್ಣಕ್ಕೆ ಹಾನಿ ಮಾಡುತ್ತದೆ ಮತ್ತು ಬಣ್ಣವನ್ನು ವೇಗವಾಗಿ ಮಸುಕಾಗಿಸುತ್ತದೆ. ಶಾಖದಿಂದ ಹಾನಿಯನ್ನು ಕಡಿಮೆ ಮಾಡಲು ಶಾಖ ರಕ್ಷಕ ಸ್ಪ್ರೇ ಬಳಸಿ. 

6) ಸಲ್ಫೇಟ್‌ ಬಳಸಬೇಡಿ 

ಸಲ್ಫೇಟ್-ಮುಕ್ತ ಶಾಂಪೂಗಳು ಮತ್ತು ಕಂಡಿಷನರ್‌ಗಳನ್ನು ಆರಿಸಿಕೊಳ್ಳಿ. ಸಲ್ಫೇಟ್‌ಗಳು ಬಣ್ಣ ಮತ್ತು ನೈಸರ್ಗಿಕ ಎಣ್ಣೆಗಳನ್ನು ತೆಗೆದುಹಾಕಬಹುದು, ಇದರಿಂದಾಗಿ ನಿಮ್ಮ ಕೂದಲು ಒಣಗುತ್ತದೆ ಮತ್ತು ಮಂದವಾಗುತ್ತದೆ. 

7) ಬಿಸಿಲಿನಿಂದ ರಕ್ಷಣೆ 

ಕೂದಲಿನ ಆರೈಕೆಯ ನಂತರ ಸೂರ್ಯನ ಯುವಿ ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ನಿಮ್ಮ ಬಣ್ಣದ ಕೂದಲನ್ನು ರಕ್ಷಿಸಿ. ಬಣ್ಣ ಮಸುಕಾಗುವಿಕೆಯನ್ನು ಕಡಿಮೆ ಮಾಡಲು ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳಲು ಟೋಪಿ ಧರಿಸಿ.

ತಡೆದುಕೊಳ್ಳಲಾಗದಷ್ಟು ತಲೆನೋವಿದ್ದರೆ ಅಜ್ಜಿಯಂದಿರು ಹೇಳಿದ ಈ ಟಿಪ್ಸ್ ಫಾಲೋ ಮಾಡಿ ...

8) ಕ್ಲೋರಿನ್ ಅನ್ನು ತಪ್ಪಿಸಿ

ಈಜುಕೊಳದಲ್ಲಿ ಈಜುವ ಮೊದಲು, ನಿಮ್ಮ ಬಣ್ಣದ ಕೂದಲನ್ನು ಒದ್ದೆ ಮಾಡಿ ಮತ್ತು ಲೀವ್-ಇನ್ ಕಂಡಿಷನರ್ ಅಥವಾ ಕೂದಲಿನ ಎಣ್ಣೆಯಿಂದ ಲೇಪಿಸಿ. ಇದು ಕ್ಲೋರಿನ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಣ್ಣ ಮಸುಕಾಗುವುದನ್ನು ತಡೆಯುತ್ತದೆ.

9) ನಿಯಮಿತ ಟ್ರಿಮ್ಮಿಂಗ್‌ 

ಪ್ರತಿ 6-8 ವಾರಗಳಿಗೊಮ್ಮೆ ನಿಯಮಿತವಾಗಿ ಕೂದಲು ಟ್ರಿಮ್ಮಿಂಗ್‌ ಮಾಡಿಸಿ. ಆ ಮೂಲಕ ನಿಮ್ಮ ಬಣ್ಣದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇದು ಕೂದಲು  ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಕೂದಲು ತಾಜಾ ಮತ್ತು ರೋಮಾಂಚಕವಾಗಿ ಕಾಣುವಂತೆ ಮಾಡುತ್ತದೆ.

ಹೆಣ್ಮಕ್ಕಳೇ ಎಚ್ಚರ..ಲೋಷನ್, ಶಾಂಪೂ, ಸೋಪಿನಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ