ಮಧುಮೇಹ ಬಂದ್ಮೇಲೆ ಜೀವನ ಅರ್ಧ ಮುಗಿದಂತೆ. ಆರೋಗ್ಯದ ಬಗ್ಗೆ ಕಾಳಜಿವಹಿಸದೆ ಹೋದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಮಧುಮೇಹ ಬರಬಾರದು ಅಥವಾ ಮಧುಮೇಹ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಸಾಕು.
ಮಧುಮೇಹ ಭಾರತದಲ್ಲಿ ಹೆಚ್ಚಾಗ್ತಿರುವ ಗಂಭೀರ ಖಾಯಿಲೆಗಳಲ್ಲಿ ಒಂದಾಗಿದೆ. ಈಗಿನ ದಿನಗಳಲ್ಲಿ ಸಣ್ಣ ಮಕ್ಕಳು ಕೂಡ ಮಧುಮೇಹ ರೋಗಕ್ಕೆ ತುತ್ತಾಗ್ತಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳಲ್ಲಿ ಶೇಕಡಾ 2.5ರಷ್ಟು ಹೆಚ್ಚಳಕ್ಕೆ ಮಧುಮೇಹ ಕಾರಣವಾಗಿದೆ. ಅಧ್ಯಯನವೊಂದರ ಪ್ರಕಾರ, ಹೃದ್ರೋಗವು ಭಾರತದಲ್ಲಿ ಅಂಗವೈಕಲ್ಯ ಮತ್ತು ಸಾವಿಗೆ ಅತಿ ದೊಡ್ಡ ಕಾರಣವಾಗಿದೆ.
ಸದ್ಯ ಮಧುಮೇಹ (Diabetes) ಕ್ಕೆ ಯಾವುದೇ ಔಷಧಿ (Medicine) ಇಲ್ಲ. ಸದ್ಯ ನೀಡ್ತಿರುವ ಔಷಧಿಗಳು, ಇನ್ಸುಲಿನ್ (Insulin) ನಿಯಂತ್ರಣವನ್ನು ಮಾತ್ರ ಮಾಡುತ್ತವೆ. ಮಧುಮೇಹ ಒಮ್ಮೆ ಬಂದ್ಮೇಲೆ ಮುಗೀತು ಎಂದು ಅನೇಕರು ಬೇಸರಪಟ್ಟುಕೊಳ್ತಾರೆ. ಮಧುಮೇಹಿಗಳು ಆಹಾರ ಹಾಗೂ ಆರೋಗ್ಯ (health)ದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಮಧುಮೇಹಕ್ಕೆ ಕೆಲ ಮನೆಮದ್ದುಗಳಿವೆ. ಅವುಗಳ ಸಹಾಯದಿಂದ ನೀವು ಮನೆಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು. ನಾವಿಂದು ಮಧುಮೇಹವನ್ನು ಸುಲಭವಾಗಿ ನಿಯಂತ್ರಣದಲ್ಲಿಡಲು ಏನೆಲ್ಲ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
undefined
ಮಧುಮೇಹ ಸಾಂಕ್ರಾಮಿಕವಲ್ಲದಿದ್ದರೂ ಅದು ಸಂಪೂರ್ಣವಾಗಿ ವ್ಯಕ್ತಿಯ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ತಪ್ಪು ಆಹಾರ ಪದ್ಧತಿಗಳು, ದೈಹಿಕ ಚಟುವಟಿಕೆಗಳ ಕೊರತೆ, ದೀರ್ಘಾವಧಿಯ ಒತ್ತಡ, ನಿದ್ರಾಹೀನತೆ, ತಡರಾತ್ರಿಯವರೆಗೆ ಕೆಲಸ, ವಿಶ್ರಾಂತಿ ಕೊರತೆ ಮತ್ತು ಆನುವಂಶಿಕ ಹಿನ್ನೆಲೆಯಿಂದ ಮಧುಮೇಹ ಕಾಡುವ ಸಾಧ್ಯತೆಯಿರುತ್ತದೆ.
Pink Eye ಗುಣಪಡಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಮನೆಮದ್ದು!
ಆರೋಗ್ಯಕರ ಜೀವನಕ್ಕೆ ಈ ವಿಧಾನ ಬಳಸಿ : ಆರೋಗ್ಯಕರ ಜೀವನಶೈಲಿ ಮಧುಮೇಹದಿಂದ ನಮ್ಮನ್ನು ದೂರವಿಡುತ್ತದೆ. ತಪ್ಪು ಜೀವನಶೈಲಿಯಿಂದಾಗಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಪರಿಪೂರ್ಣ ಆಹಾರ, ಪ್ರತಿ ದಿನ ವ್ಯಾಯಾಮ, ಪ್ರಾಣಾಯಾಮ ಇವೆಲ್ಲವೂ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.
ಇದಲ್ಲದೆ ಪ್ರಕೃತಿ ಚಿಕಿತ್ಸೆ ಔಷಧಿರಹಿತ ಚಿಕಿತ್ಸೆಗೆ ನೆರವಾಗುತ್ತದೆ.
ಮಧುಮೇಹ ರಹಿತ ಜೀವನಕ್ಕೆ ಏನು ಮಾಡ್ಬೇಕು ಗೊತ್ತಾ? :
ತುಳಸಿ ಬೀಜಗಳನ್ನು ರಾತ್ರಿಯಿಡೀ ಕೋಣೆಯ ನೀರಿನಲ್ಲಿ ನೆನೆಸಿಡಬೇಕು. ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬೀಜಗಳನ್ನು ಸೇವನೆ ಮಾಡಬೇಕು. ತುಳಸಿ ಬೀಜಗಳು ಕರಗುವ ಫೈಬರ್‌ನ ಉತ್ತಮ ಮೂಲವಾಗಿದೆ. ಆದ್ದರಿಂದ ಈ ಪಾನೀಯವು ದೇಹದಲ್ಲಿ ಗ್ಲೈಸೆಮಿಕ್ ಲೋಡ್ ಮತ್ತು ಇನ್ಸುಲಿನ್ ಸ್ಪೈಕ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ವಿಟಮಿನ್ ಗಳ ಕೊರತೆಯಿಂದಾಗಿ, ಹಲ್ಲುಗಳು ದುರ್ಬಲವಾಗುತ್ತೆ!