ಚೆರ್ರಿ ರುಚಿಯಲ್ಲಿ ಹುಳಿ ಅಂತಾ ಅದನ್ನು ಕೆಲವರು ಸೇವನೆ ಮಾಡೋದಿಲ್ಲ. ಮತ್ತೆ ಕೆಲವರು ಸಿಹಿ – ಹುಳಿ ಯಾವುದೇ ಹಣ್ಣಿರಲಿ ಖುಷಿಯಿಂದ ಸೇವನೆ ಮಾಡ್ತಾರೆ. ಚೆರ್ರಿ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋನವನ್ನು ಹೊಂದಿದೆ. ಹಾಗಾಗಿ ಇದನ್ನು ಪ್ರತಿಯೊಬ್ಬರೂ ಸೇವನೆ ಮಾಡ್ಬೇಕು.
ಪ್ರಕೃತಿಯಲ್ಲಿ ಸಾಕಷ್ಟು ಹಣ್ಣುಗಳು ಲಭ್ಯವಿದೆ. ಅವು ನಮ್ಮ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನು ಮಾಡುತ್ತವೆ. ಪ್ರಕೃತಿಯಲ್ಲಿ ಸಿಗುವ ಹಣ್ಣುಗಳು ಸಾಕಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಚೆರ್ರಿ ಹಣ್ಣನ್ನು ಸಾಮಾನ್ಯವಾಗಿ ಇಷ್ಟಪಡದ ಜನರಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚೆರ್ರಿ ಹಣ್ಣನ್ನು ತಿನ್ನಲು ಬಯಸ್ತಾರೆ. ಚೆರ್ರಿ ಸಾಕಷ್ಟು ಪೋಷಕಾಂಶಗಳಿಂದ ಕೂಡಿದ ರುಚಿಕರ ಹಣ್ಣಾಗಿದೆ. ಚೆರ್ರಿ ಹಣ್ಣಿನಲ್ಲಿ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳಿವೆ. ಚೆರ್ರಿ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಚೆರ್ರಿ (Cherrie) ಹಣ್ಣು ಚಿಕ್ಕದಾಗಿರುತ್ತವೆ. ದುಂಡಗಿನ ಆಕಾರದಲ್ಲಿರುತ್ತವೆ. ಚೆರ್ರಿ ಹಣ್ಣು (Fruit) ಅನೇಕ ಪ್ರಭೇದಗಳನ್ನು ಹೊಂದಿದೆ. ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಸಿಹಿ ಚೆರ್ರಿ ಮತ್ತು ಇನ್ನೊಂದು ಟಾರ್ಟ್ ಚೆರ್ರಿ. ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಚೆರ್ರಿಗಳು ಸಿಹಿ ರುಚಿಯನ್ನು ಹೊಂದಿರುತ್ತವೆ. ಟಾರ್ಟ್ ಚೆರ್ರಿ ಹುಳಿ (Sour) ರುಚಿಯನ್ನು ಹೊಂದಿರುತ್ತದೆ. ಚೆರ್ರಿ ಹಣ್ಣು ಫೈಬರ್, ಪಾಲಿಫಿನಾಲ್, ಕ್ಯಾರೊಟಿನಾಯ್ಡ್ , ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳನ್ನು ಹೊಂದಿದೆ.
undefined
ಚೆರ್ರಿ ಹಣ್ಣಿನಲ್ಲಿದೆ ಆರೋಗ್ಯ ವೃದ್ಧಿಸುವ ಗುಣ :
ಚೆರ್ರಿಯಲ್ಲಿದೆ ಉತ್ಕರ್ಷಣ ನಿರೋಧಕ ಗುಣ : ಉತ್ಕರ್ಷಣ ನಿರೋಧಕಗಳು ನಮ್ಮ ದೇಹದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ಸ್ವತಂತ್ರ ರಾಡಿಕಲ್ ಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ಸ್ವತಂತ್ರ ರಾಡಿಕಲ್ ಗಳಿಂದ ಉಂಟಾಗುತ್ತದೆ. ಇದು ಕ್ಯಾನ್ಸರ್, ಹೃದ್ರೋಗ, ಮಧುಮೇಹ, ಪಾರ್ಕಿನ್ಸನ್ ಕಾಯಿಲೆ, ಕಣ್ಣಿನ ಪೊರೆಗಳಂತಹ ಕಣ್ಣಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಚೆರ್ರಿ ಸೇವನೆಯಿಂದ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ.
ನಿದ್ರಾಹೀನತೆಗೆ ಪರಿಣಾಮಕಾರಿ : ಚೆರ್ರಿ ಸೇವನೆ ಮಾಡೋದ್ರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಚೆರ್ರಿ ರಸ ಉತ್ತಮ ನಿದ್ರೆಗೆ ಸಹಕಾರಿ. ಮೆಲಟೋನಿನ್, ಚೆರ್ರಿ ರಸದಲ್ಲಿ ಕಂಡುಬರುತ್ತದೆ. ಇದು ನಿದ್ರೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ.
ಉರಿಯೂತ ನಿವಾರಣೆಗೆ ಚೆರ್ರಿ : ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಚೆರ್ರಿ ಪರಿಣಾಮಕಾರಿಯಾಗಿದೆ. ಸಂಶೋಧನೆಯ ಪ್ರಕಾರ, ತೀವ್ರವಾದ ಉರಿಯೂತ ಸಂಧಿವಾತ, ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಚರ್ರಿ ಸೇವನೆ ಮಾಡೋದ್ರಿಂದ ಉರಿಯೂತ ಸಮಸ್ಯೆ ಕಡಿಮೆಯಾಗುತ್ತದೆ.
ಹೃದಯದ ಆರೋಗ್ಯಕ್ಕೆ ಚೆರ್ರಿ : ಚೆರ್ರಿಯಲ್ಲಿ ಪೊಟ್ಯಾಸಿಯಮ್ ಮತ್ತು ಪಾಲಿಫಿನಾಲ್ ಉತ್ಕರ್ಷಣ ನಿರೋಧಕವಿದೆ. ಇವು ಹೃದಯವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತವೆ.
ತಲೆನೋವಿಗೆ ಪ್ರಯೋಜನಕಾರಿ : ಚೆರ್ರಿ ಸೇವನೆ ಮಾಡೋದ್ರಿಂದ ಮೈಗ್ರೇನ್ ಸೇರಿದಂತೆ ಎಲ್ಲ ರೀತಿಯ ತಲೆನೋವು ಕಡಿಮೆಯಾಗುತ್ತದೆ. ಒಂದು ಅಧ್ಯಯನದ ಪ್ರಕಾರ, 24 ವರ್ಷ ವಯಸ್ಸಿನ ಮಹಿಳಾ ರೋಗಿ ಮೈಗ್ರೇನ್ ನಿಂದ ಬಳಲುತ್ತಿದ್ದಳಂತೆ. ಆಕೆಗೆ ಚೆರ್ರಿ ನೀಡಿದ ನಂತ್ರ ಮೈಗ್ರೇಣ್ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಣ್ಣಿನ ಆರೋಗ್ಯ ಸುಧಾರಿಸುತ್ತೆ ಚೆರ್ರಿ : ಗ್ಲುಕೋಮಾ ವಯಸ್ಸಾದವರ ಸಾಮಾನ್ಯ ಕಣ್ಣಿನ ಕಾಯಿಲೆಗಳಲ್ಲಿ ಒಂದಾಗಿದೆ. ಇದು ಕುರುಡುತನದ ಅಪಾಯವನ್ನು ಹೆಚ್ಚಿಸುತ್ತದೆ. ಕಣ್ಣಿನೊಳಗಿನ ದ್ರವದ ಒತ್ತಡವು ಕ್ರಮೇಣ ಹೆಚ್ಚಾದಾಗ ಸಮಸ್ಯೆ ದೊಡ್ಡದಾಗುತ್ತದೆ. ಇದು ಆಪ್ಟಿಕ್ ನರ ಹಾನಿಗೆ ಕಾರಣವಾಗುವ ಸಾಧ್ಯತೆತಯಿರುತ್ತದೆ. ಚೆರ್ರಿ ಹಣ್ಣಿನಲ್ಲಿ ಲೋಗಾನಿಕ್ ಆಮ್ಲ ಕಂಡು ಬರುತ್ತದೆ. ಇದು ಇಂಟ್ರಾಕ್ಯುಲರ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಲ್ಲೆಡೆ ಹರಡುತ್ತಿರುವ ಮದ್ರಾಸ್ ಐ, ಹುಷಾರಾಗಿದ್ದು ಆರೋಗ್ಯ ಕಾಪಾಡಿಕೊಳ್ಳಿ
ಮಲಬದ್ಧತೆ ಸಮಸ್ಯೆಯಲ್ಲಿ ಪ್ರಯೋಜನಕಾರಿ : ಮಲಬದ್ಧತೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದೆ. ಮಲಬದ್ಧತೆಯ ಈ ಸಮಸ್ಯೆಗೆ ಚೆರ್ರಿ ಪ್ರಯೋಜನಕಾರಿ. ಚೆರ್ರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇರುವುದ್ರಿಂದ ಇದು ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿದೆ.
ಸೆಕ್ಸ್ ಮತ್ತು ಮೆನ್ ಸ್ಟ್ರುವಲ್ ಹೈಜಿನ್ ಬಗ್ಗೆ ಮಕ್ಕಳಿಗೆ ತಿಳಿ ಹೇಳಲೇಬೇಕಾದ ವಿಷಯಗಳಿವು…
ವ್ಯಾಯಾಮದ ನಂತ್ರ ಚೆರ್ರಿ ಸೇವನೆ : ವ್ಯಾಯಾಮದ ನಂತ್ರ ಚರ್ರಿ ಸೇವನೆ ಮಾಡಬೇಕು. ಟಾರ್ಟ್ ಚೆರ್ರಿ ರಸ ಮತ್ತು ಪುಡಿ, ಕ್ರೀಡಾಪಟುಗಳಿಗೆ ಒಳ್ಳೆಯದು. ವ್ಯಾಯಾಮದ ನಂತ್ರ ಕಾಡುವ ನೋವು ಮತ್ತು ಸ್ನಾಯು ಸೆಳೆತವನ್ನು ಇದು ಕಡಿಮೆ ಮಾಡುತ್ತದೆ.