ಗರ್ಭಾವಸ್ಥೆಯಲ್ಲಿ ನಿಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಗರ್ಭಿಣಿಯರು ಮಾಡುವ ಪ್ರತಿಯೊಂದು ಕೆಲಸ ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ. ಅನಿವಾರ್ಯ ಕಾರಣಕ್ಕೆ ರಾತ್ರಿ ಕೆಲಸ ಮಾಡುವ ಗರ್ಭಿಣಿಯರು ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕು.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಈಗ ಅನೇಕರಿಗೆ ಅನಿವಾರ್ಯ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡೋದ್ರಿಂದ ಆರೋಗ್ಯದಲ್ಲಿ ಏರುಪೇರಾಗೋದು ಸಹಜ. ಅದ್ರಲ್ಲೂ ಗರ್ಭಿಣಿಯರು ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡೋದು ಬಹಳ ಅಪಾಯಕಾರಿ ಅಂದ್ರೆ ತಪ್ಪಾಗಲಾರದು. ಗರ್ಭಿಣಿಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದ್ರಿಂದ ಅವರಿಗೆ ವಿಶ್ರಾಂತಿ ಪಡೆಯಲು ಮತ್ತು ಸಾಕಷ್ಟು ನಿದ್ರೆ ಮಾಡಲು ಸಮಯ ಸಿಗುವುದಿಲ್ಲ. ಇದ್ರಿಂದ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ, ಗರ್ಭಧಾರಣೆಯಲ್ಲಿ ಹಾರ್ಮೋನುಗಳಲ್ಲಿ ಸಾಕಷ್ಟು ಏರುಪೇರುಗಳಾಗ್ತಿರುತ್ತವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗರ್ಭಾವಸ್ಥೆಯಲ್ಲಿ ಕೆಲ ಅನಾರೋಗ್ಯ ನಿಮ್ಮನ್ನು ಕಾಡುವುದ್ರಿಂದ ಹಗಲಿನಲ್ಲಿ ಕೆಲಸ ಮಾಡುವುದೇ ಕಷ್ಟವಾಗಿರುತ್ತದೆ. ಅಂಥದ್ರಲ್ಲಿ ರಾತ್ರಿ ಕೆಲಸ ಮಾಡೋದು ಸವಾಲಿನ ಸಂಗತಿ.
ರಾತ್ರಿ (Night) ಪಾಳಿ ಮಾಡುವ ಜನರಿಗೆ ಬೆಳಿಗ್ಗೆ ಸರಿಯಾಗಿ ನಿದ್ರೆ (Sleep ) ಮಾಡಲು ಸಾಧ್ಯವಾಗುವುದಿಲ್ಲ. ಹಗಲಿನಲ್ಲಿ ನಿದ್ರೆ ಬರುವುದಿಲ್ಲ. ಗಲಾಟೆ, ಬೆಳಕು ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಕೆಲವರು ವಾರಾಂತ್ಯ (Weekend) ದಲ್ಲಿ ಮಾತ್ರ ನಿದ್ರೆ ಮಾಡ್ತಾರೆ. ಗರ್ಭಿಣಿ (pregnant) ಯರು ವಾರಗಟ್ಟಲೆ ನಿದ್ರೆ ಬಿಟ್ಟರೆ ಅವರ ಆರೋಗ್ಯದ ಜೊತೆ ಮಗುವಿನ ಆರೋಗ್ಯ (Health) ಹದಗೆಡುತ್ತದೆ. ಗರ್ಭಿಣಿಯರಿಗೆ ನಿದ್ರೆ ಬಹಳ ಮುಖ್ಯ. ನಿದ್ರಾಹೀನತೆ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸ್ಲೀಪ್ ಫೌಂಡೇಶನ್ ಸೂಚಿಸುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತಿರುವ ಗರ್ಭಿಣಿಯರು ಕೆಲ ವಿಷ್ಯವನ್ನು ತಿಳಿದಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
undefined
ರಾತ್ರಿ ಪಾಳಿಯಲ್ಲಿ ಗರ್ಭಿಣಿಯರನ್ನು ಕಾಡುತ್ತೆ ಈ ಸಮಸ್ಯೆ : ರಾತ್ರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಿರುತ್ತದೆ. ಗರ್ಭಿಣಿಯರಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿದ್ರೆ ಅದು ಸಿಗದೆ ಹೋಗಬಹುದು. ಹಾಗೆ ನಿದ್ರೆ ತಡೆ ಹಿಡಿದು ಕೆಲಸ ಮಾಡುವುದ್ರಿಂದ ಒತ್ತಡ ಹೆಚ್ಚಾಗುತ್ತದೆ. ರಾತ್ರಿ ಕಚೇರಿಯಲ್ಲಾಗುವ ಗಲಾಟೆ, ಯಂತ್ರಗಳ ಶಬ್ಧ ಮತ್ತಷ್ಟು ಹಾನಿ ಮಾಡುತ್ತದೆ.
ಈ ವಿಟಮಿನ್ ಗಳ ಕೊರತೆಯಿಂದಾಗಿ, ಹಲ್ಲುಗಳು ದುರ್ಬಲವಾಗುತ್ತೆ!
ಕಾಡುತ್ತೆ ಈ ಅನಾರೋಗ್ಯ : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ಮಧುಮೇಹದ ಅಪಾಯ ಹೆಚ್ಚಿರುತ್ತದೆ. ಇದಲ್ಲದೆ ಅಸಮರ್ಪಕ ನಿದ್ರೆಯು ಪ್ರಿಕ್ಲಾಂಪ್ಸಿಯಾ, ಹೆರಿಗೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುವಂತಹ ಅಪಾಯ ಹೆಚ್ಚಾಗುತ್ತದೆ ಎಂದು ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ವರದಿ ಮಾಡಿದೆ.
PINK EYE ಗುಣಪಡಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಮನೆಮದ್ದು!
ಗರ್ಭಿಣಿಯರು ಹೀಗೆ ಆರೋಗ್ಯ ಕಾಪಾಡಿಕೊಳ್ಳಿ : ಗರ್ಭಿಣಿಯರು ತಮ್ಮ ಮೇಲಾಧಿಕಾರಿಗಳಿಗೆ ವಿಷ್ಯ ತಿಳಿಸಿರಬೇಕು. ತುರ್ತು ಸಂದರ್ಭಕ್ಕೆ ಬೇಕಾದ ವ್ಯವಸ್ಥೆಯನ್ನು ಅವರು ಮಾಡಿರ್ತಾರೆ. ರಾತ್ರಿ ಪಾಳಿಯಲ್ಲಿ ಬಿಗಿಯಾದ ಬಟ್ಟೆ ಧರಿಸುವುದನ್ನು ತಪ್ಪಿಸಿ. ಹಾಗೆಯೇ ದಿನದಲ್ಲಿ 7 ಗಂಟೆ ನಿದ್ರೆ ಮಾಡಿ. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಬೇಡಿ. ರಾತ್ರಿ ಪಾಳಿಯಲ್ಲಿ ಆಹಾರದ ಮೇಲೆ ಗಮನವಿರಲಿ. ನಿದ್ರೆ ನಿಯಂತ್ರಣಕ್ಕೆ ಅನೇಕರು ಕಾಫಿ, ಟೀ ಸೇವನೆ ಹೆಚ್ಚು ಮಾಡ್ತಾರೆ. ಇದ್ರ ಮೇಲೆ ಗಮನವಿರಲಿ. ರಾತ್ರಿ ಸಮಯದಲ್ಲಿ ಹೆಚ್ಚು ನೀರು ಸೇವನೆ ಮಾಡಿ. ದ್ರವ ಆಹಾರ ನಿಮ್ಮ ಹೊಟ್ಟೆ ಸೇರುವಂತೆ ನೋಡಿಕೊಳ್ಳಿ. ನೀವು ಜ್ಯೂಸ್ ಸೇವನೆ ಮಾಡಬಹುದು. ಡ್ರೈ ಫ್ರೂಟ್ಸ್, ಹಣ್ಣುಗಳು ಸೇರಿದಂತೆ ಆರೋಗ್ಯಕರ ಆಹಾರ ಸೇವನೆ ಮಾಡಿ. ಮಾಂಸಾಹಾರ ಸೇವನೆ ಮಾಡಬೇಡಿ. ಇದು ಸರಿಯಾಗಿ ಜೀರ್ಣವಾಗುವುದಿಲ್ಲ. ಅಜೀರ್ಣ ಸಮಸ್ಯೆಯಿಂದ ಗ್ಯಾಸ್ ನಿಮ್ಮನ್ನು ಕಾಡುತ್ತದೆ. ಕೆಲಸ ಮಾಡಲು ಮತ್ತಷ್ಟು ಕಿರಿಕಿರಿಯಾಗುತ್ತದೆ. ರಾತ್ರಿ ಪಾಳಿಯಲ್ಲಿ ಧೂಮಪಾನ ಮಾಡಬೇಡಿ. ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ರಜೆಯ ಅಗತ್ಯವಿದ್ದರೆ ರಜೆ ತೆಗೆದುಕೊಂಡು ವಿಶ್ರಾಂತಿ ಪಡೆಯಿರಿ.