ನಮ್ಮ ಮಿದುಳು ಚೆನ್ನಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ದೈಹಿಕವಾಗಿ ಆರೋಗ್ಯವಾಗಿದ್ದು, ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ಗಂಟು ಬಿದ್ದರೆ ದೈಹಿಕ ಆರೋಗ್ಯವೂ ಕ್ರಮೇಣ ಕ್ಷೀಣಿಸುತ್ತದೆ. ಹೀಗಾಗಿ, ಮಿದುಳನ್ನು ಸಾಧ್ಯವಾದಷ್ಟು ಫ್ರೆಶ್ ಮತ್ತು ಯಂಗ್ ಆಗಿಟ್ಟುಕೊಳ್ಳುವುದು ಮುಖ್ಯ.
ಮಿದುಳನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳುವುದು ಎಲ್ಲರ ಆಯ್ಕೆ. ಮಿದುಳನ್ನು ಕ್ರಿಯಾಶೀಲವಾಗಿ ಹಾಗೂ ಚುರುಕಾಗಿ ಇರಿಸಿಕೊಂಡರೆ ಮಾತ್ರ ಮಿದುಳು ಆರೋಗ್ಯವಾಗಿರುತ್ತದೆ ಎನ್ನುವುದನ್ನು ಇದುವರೆಗೆ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. ಮಿದುಳನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡಾಗಲೇ ಅದು ವಯಸ್ಸಾದರೂ ಕಳೆಗುಂದದೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಮಿದುಳಿನ ತಾಜಾತನ ಅಥವಾ ಯೌವನವನ್ನು ಕಾಪಾಡಿಕೊಳ್ಳುವುದು ಭಾರೀ ಮುಖ್ಯ. ವಯಸ್ಸಾಗುವಿಕೆ ಎನ್ನುವುದು ದೇಹ ಮತ್ತು ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಮರೆವು ಸಮಸ್ಯೆ ಸೇರಿದಂತೆ ಮಿದುಳು ತನ್ನ ಕಾರ್ಯಕ್ಷಮತೆ ಕಳೆದುಕೊಳ್ಳುತ್ತದೆ. ಆದರೆ, ದಿನವೂ ನಿರ್ದಿಷ್ಟ ವ್ಯಾಯಾಮ, ಮಿದುಳಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಕೆಲವು ರೀತಿಯ ಚಟುವಟಿಕೆಗಳನ್ನು ಮಾಡುವ ಮೂಲಕ ಮಿದುಳನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಲು ಸಾಧ್ಯ. ದೈಹಿಕ ವ್ಯಾಯಾಮದ ಮೂಲಕ ಮಿದುಳನ್ನು ಚೆನ್ನಾಗಿಟ್ಟುಕೊಳ್ಳಬಹುದು. ಇದರಿಂದ ಮಿದುಳಿನ ರಕ್ತಪರಿಚಲನೆ ಸೂಕ್ತವಾಗಿರುತ್ತದೆ. ಮಿದುಳಿನ ಪ್ರತಿಯೊಂದು ಕೋಶಕ್ಕೂ ಸರಿಯಾಗಿ ಆಮ್ಲಜನಕ ದೊರೆತು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಹಾಗೆಯೇ, ಧ್ಯಾನ ಮತ್ತು ಪ್ರಾಣಾಯಾಮಗಳು ಸಹ ಮಿದುಳಿನ ಆರೋಗ್ಯಕ್ಕೆ ಅತ್ಯಗತ್ಯ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿರುವ ಸಂಗತಿ. ಒತ್ತಡ, ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಮಿದುಳು ಕ್ರಿಯಾಶೀಲವಾಗಿರುವುದು ಅತಿ ಅಗತ್ಯ.
ದೈಹಿಕ ಚಟುವಟಿಕೆಯಿಂದ (Physical Exercise) ನ್ಯೂರೋಟ್ರಾನ್ಸ್ ಮಿಟರ್ಸ್ ಎಂದು ಕರೆಯಲಾಗುವ ಡೊಪಮೈನ್ ಮತ್ತು ಸೆರೋಟೊನಿನ್ ಹಾರ್ಮೋನುಗಳು (Hormones) ಮಿದುಳಿನಲ್ಲಿ (Brain) ಸೂಕ್ತ ಪ್ರಮಾಣದಲ್ಲಿ ಸ್ರವಿಕೆಯಾಗುತ್ತವೆ. ಇವು ಒತ್ತಡ (Stress), ಆತಂಕ (Anxiety) ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತವೆ. ಜತೆಗೆ, ಮಾನಸಿಕ ವ್ಯಾಯಾಮ (Mental Activity) ಅಂದರೆ ಮಿದುಳಿಗೆ ಕಸರತ್ತು ನೀಡುವ ವಿವಿಧ ಚಟುವಟಿಕೆಗಳು ಸಹ ಇದರ ಆರೋಗ್ಯಕ್ಕೆ ಪೂರಕವಾಗಿವೆ.
• ಹೊಸತನ್ನು ಕಲೀತಾ ಇರಿ (Learn New)
ಹೊಸತರ ಕಲಿಕೆ ಎನ್ನುವುದು ವಯಸ್ಸಿನೊಂದಿಗೆ ಮುಗಿದು ಹೋಗುವುದಿಲ್ಲ. ವಯಸ್ಸಾದರೂ (Aging) ಏನಾದರೂ ಹೊಸತು ಕಲಿಯುವ ಉತ್ಸಾಹ ನಿಮಗಿದ್ದರೆ ಮಿದುಳು ಕ್ರಿಯಾಶೀಲವಾಗಿರಲು (Active) ಅನುಕೂಲ. ಹೊಸ ಭಾಷೆ, ತಂತ್ರಜ್ಞಾನ, ಸಂಗೀತ, ಹಾಡು ಯಾವುದಾದರೂ ಜ್ಞಾನ ವಿಸ್ತರಿಸಿಕೊಳ್ಳಲು ಹಿಂಜರಿಕೆ ಬೇಡ.
Health Tips : ಮಾತೆತ್ತಿದ್ದರೆ ಕೋಪ ಬರುತ್ತಾ? ಆರೋಗ್ಯದಲ್ಲೇನೂ ಆಗಿರ್ಬಹುದು!
undefined
• ವಿಡಿಯೋ ಗೇಮ್ (Video Games)
ಮಕ್ಕಳಿಗೆ ವಿಡಿಯೋ ಗೇಮ್ ಬೇಡ ಎನ್ನುವ ನಾವು ವಿಡಿಯೋ ಗೇಮ್ ಆಡಬಹುದೇ ಎನ್ನುವ ಪ್ರಶ್ನೆ ಮೂಡಬಹುದು. ಒಂದು ಮಿತಿಯಲ್ಲಿ ನಿಗದಿತ ಸಮಯ ಮಾತ್ರ ವಿಡಿಯೋ ಗೇಮ್ ಆಡುವುದರಿಂದ ಮಿದುಳು ಸಕ್ರಿಯವಾಗಿರುತ್ತದೆ.
• ದೈಹಿಕ ಚಟುವಟಿಕೆ, ಮಾನಸಿಕ ಕಸರತ್ತು(Physical Activity and Mental Exercise)
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ (Walking) ಸೇರಿದಂತೆ ದೈಹಿಕ ಕಸರತ್ತು ಮಾಡುವುದರಿಂದ ಮಿದುಳು ಆರೋಗ್ಯಪೂರ್ಣವಾಗಿರುತ್ತದೆ. ಜತೆಗೆ, ಮನಸ್ಸಿಗೆ ಕೆಲಸ ನೀಡುವ ಓದುವ (Read), ಬರೆಯುವ (Write), ಆಡುವ (Play) ಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕು. ಒಳಾಂಗಣ ಆಟಗಳಲ್ಲಿ ಚೆಸ್ ಆಡುವುದು ಮಿದುಳಿಗೆ ಉತ್ತಮ. ದಿನವೂ ಅರ್ಧ ಗಂಟೆ ಓದುವುದರಿಂದ ಮಿದುಳಿಗೆ ಭಾರೀ ಲಾಭವಿದೆ. ಅಷ್ಟೇ ಏಕೆ? ರಂಗೋಲಿ ಹಾಕುವುದು ಸಹ ಮಿದುಳಿನ ಆರೋಗ್ಯಕ್ಕೆ ಅತ್ಯುತ್ತಮ. ಮಕ್ಕಳಿಗೆ ರಂಗೋಲಿ ಹಾಕುವುದನ್ನು ಅಭ್ಯಾಸ ಮಾಡಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ.
• ಸಂಗೀತ (Music)
ಸಂಗೀತ ಕೇಳುವುದು ಮತ್ತು ಹಾಡುವುದು ಎರಡೂ ಮಿದುಳಿಗೆ ಅನುಕೂಲ. ಇದು ಮಿದುಳಿನ ಕ್ರಿಯಾಶೀಲ ಚಿಂತನೆಯನ್ನು ಬಲಪಡಿಸುತ್ತದೆ. ಹಾಗೆಯೇ, ಯಾವುದಾದರೂ ವಾದ್ಯ ಸಂಗೀತ ಕಲಿಯುವ ಪ್ರಕ್ರಿಯೆ ಸಹ ಮಿದುಳಿನ ಕಾರ್ಯಕ್ಷಮತೆಯನ್ನು ವಿಸ್ತರಿಸುತ್ತದೆ.
Health Tips: ಸದ್ದಿಲ್ಲದೆ ನಿಮ್ಮ ಆರೋಗ್ಯ ಹಾಳು ಮಾಡ್ತಿದೆ ನಿಮ್ಮಿಷ್ಟದ ರೀಲ್ಸ್
• ಒಡನಾಟ (Interaction)
ಮನುಷ್ಯನಿಗೆ ಸಾಮಾಜಿಕ (Social) ಒಡನಾಟ ಅತ್ಯಂತ ಅಗತ್ಯ. ಸ್ನೇಹಿತರು, ಕುಟುಂಬಸ್ಥರೊಂದಿಗೆ ಬೆರೆಯುವುದರಿಂದ ಮಿದುಳು ಚೆನ್ನಾಗಿರುತ್ತದೆ. ಮಕ್ಕಳೊಂದಿಗೆ ಒಡನಾಡುವುದು ಸಹ ಅಗತ್ಯ. ಅವರೊಂದಿಗೆ ಸೇರಿ ನಕ್ಕು, ನಲಿಯುವುದರಿಂದ ಮಿದುಳು ತಾಜಾ (Fresh) ಆಗುತ್ತದೆ.
• ಸೂಕ್ತ ನಿದ್ರೆ (Sleep) ಇಲ್ಲದಿದ್ದರೆ ಮಿದುಳಿನ ಕ್ಷಮತೆ ಕ್ಷೀಣಿಸುತ್ತದೆ.
• ಧ್ಯಾನ (Meditation) ಮಾಡುವುದರಿಂದ ಒತ್ತಡ, ಆತಂಕ, ಖಿನ್ನತೆ (Depression) ಕಡಿಮೆಯಾಗಿ ಶಾಂತಿ ಮೂಡುತ್ತದೆ. ಸ್ಮರಣೆ ಶಕ್ತಿ ಹೆಚ್ಚುತ್ತದೆ.
• ಕ್ರಾಸ್ ವರ್ಡ್ ಪಜಲ್ ಬಿಡಿಸುವುದು ಮಿದುಳಿಗೆ ಭಾರೀ ಅನುಕೂಲ.