Fitness Secret: ಸಮಂತಾ ಸ್ಲಿಮ್ ಆಗಿರೋ ಸೀಕ್ರೆಟ್ ಗೊತ್ತಾ ?

By Suvarna NewsFirst Published Feb 4, 2022, 9:43 PM IST
Highlights

ದಕ್ಷಿಣಭಾರತದ ಬೋಲ್ಡ್ ಆ್ಯಂಡ್ ಬ್ಯೂಟಿಪುಲ್ (Beautiful) ನಟಿಯರಲ್ಲೊಬ್ಬರು ಸಮಂತಾ (Samantha) ರುತು ಪ್ರಭು. ಪಕ್ಕಾ ಹಳ್ಳಿ ಸೊಗಡಿನ ಪಾತ್ರಕ್ಕೂ ಸೈ, ಸಿಕ್ಕಾಪಟ್ಟೆ ಬೋಲ್ಡ್ ಪಾತ್ರಕ್ಕೂ ಜೈ ಎಂದು ಸಾಬೀತು ಪಡಿಸಿದವರು. ಆದ್ರೆ ಸ್ಯಾಮ್ ಫಿಟ್ನೆಸ್ (Fitness) ಸೀಕ್ರೆಟ್ ಏನೂಂತ ನಿಮ್ಗೆ ಗೊತ್ತಾ..? ಅವರು ಸ್ಲಿಮ್ ಆಗಿರೋಕೆ ತಿನ್ನೋ ಫುಡ್ ಯಾವುದು ?

ಸಮಂತಾ (Samantha) ಹಾಗೂ ನಾಗ ಚೈತನ್ಯ(Naga chaitanya) ನಡುವಿನ ವಿಚ್ಚೇದನೆ ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಅವರ ವಿಚ್ಚೇದನೆಯಾಗಿ ತಿಂಗಳುಗಳು ಕಳೆದರೂ ಈ ಕುರಿತು ಚರ್ಚೆಯಾಗುತ್ತಲೇ ಇದೆ. ತೆಲುಗು, ತಮಿಳು ಸಿನಿಮಾದಲ್ಲಿ ಹೆಚ್ಚಾಗಿ ಅಭಿನಯಿಸಿರುವ ಸಮಂತಾ  ಫೇಮ್ ಫ್ಯಾಮಿಲಿ ಮ್ಯಾನ್ 2 ವೆಬ್‌ ಸಿರೀಸ್ ರಾಜಿ ಪಾತ್ರದ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದೆ. ಮಾತ್ರವಲ್ಲ, ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ಸ್ಯಾಮ್ ಮಾಡಿರೋ 'ಓ ಅಂಟಾ ವಾ ಮಾಮ' ಐಟಂ ಸಾಂಗ್ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಸಮಂತಾ ಮಾತ್ರ ಆ ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಜಾಲಿ ಟ್ರಿಪ್ ಹೋಗುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

ಅಷ್ಟೇ ಅಲ್ಲ, ಸಮಂತಾ ಫಿಟ್ನೆಸ್ (Fitness) ಉತ್ಸಾಹಿ. ಜಿಮ್‌ನಲ್ಲಿ ವ್ಯಾಯಾಮ, ಯೋಗ (Yoga) ಮಾಡುವ, ಸೈಕ್ಲಿಂಗ್‌ನಲ್ಲಿ ತೊಡಗಿರುವ ವೀಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಹಾಗೆಯೇ ತಮ್ಮ ಫಿಟ್ನೆಸ್ ಸೂತ್ರದ ಬಗ್ಗೆಯೂ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅವರು ವಿವರಿಸಿದ್ದಾರೆ. 

Latest Videos

Samantha Divorce: ನಾಗಚೈತನ್ಯನಿಂದ ಡಿವೋರ್ಸ್‌ ಕೇಳಿದ್ದೇ ಸಮಂತಾ, ನಾಗಾರ್ಜುನ ಹೇಳಿದ್ದಿಷ್ಟು

ಸುಂದರವಾಗಿ ಮತ್ತು ಆರೋಗ್ಯಕರವಾಗಿರಲು ಸರಿಯಾದ ಕ್ರಮದಲ್ಲಿ ಆಹಾರ (Food) ಸೇವಿಸುವುದು ಮುಖ್ಯ ಎಂದು ಸಮಂತಾ ರುತು ಪ್ರಭು ತಿಳಿಸಿದ್ದಾರೆ. ದೇಹಕ್ಕೆ ಸೂಕ್ತವಾಗುವ ಆಹಾರವನ್ನು ಆಯ್ಕೆ ಮಾಡುವುದು ಮುಖ್ಯವೆಂದು ಅವರು ಹೇಳುತ್ತಾರೆ. ಹೀಗೆಯೇ ನಟಿ ಪೀನಟ್ ಬಟರ್ (Peanut Butter) ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕಡಲೇಕಾಯಿ ಬೆಣ್ಣೆ ಬಾಯಿಗೆ ರುಚಿ ಮಾತ್ರವಲ್ಲ, ತೂಕ ನಷ್ಟಕ್ಕೂ ಉತ್ತಮವಾಗಿದೆ ಎಂದು ಅವರು ಸಲಹೆ ನೀಡುತ್ತಾರೆ.

ಕಡಲೇಕಾಯಿ ಬೆಣ್ಣೆ ಸೇವನೆಯ ಪ್ರಯೋಜನಗಳು
ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಸಮಂತಾ ಕಡಲೇಕಾಯಿ ಬೆಣ್ಣೆಯ ಬ್ರೆಡ್ ಅನ್ನು ಸವಿಯುತ್ತಿರುವುದನ್ನು ನೋಡಬಹುದು. ಜತೆಗೆ ಈ ವೀಡಿಯೋದಲ್ಲಿ ನಟಿ ತನಗೆ ಪೀನಟ್ ಬಟರ್ ಎಷ್ಟು ಇಷ್ಟವೆಂದು ಹೇಳಿಕೊಂಡಿದ್ದಾರೆ. ಇದು ಫಿಟ್ ಆಗಿರಲು ನೆರವಾಗುತ್ತದೆ. ಕಡಲೇಕಾಯಿ ಬೆಣ್ಣೆಯು ಆರೋಗ್ಯಕ್ಕೆ ಹಿತಕಾರಿ ಮತ್ತು ಬಾಯಿಗೆ ರುಚಿಕರವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಪ್ರೋಟೀನ್ (Protein), ವಿಟಮಿನ್ಸ್ ಮತ್ತು ಮಿನರಲ್ಸ್, ಫೈಬರ್, ಆ್ಯಂಟಿ ಆಕ್ಸಿಡೆಂಟ್ಸ್, ಪೊಟ್ಯಾಸಿಯಮ್, ಐರನ್‌ನಲ್ಲಿ ಕಡಲೇಕಾಯಿ ಬೆಣ್ಣೆ ಸಮೃದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸತುವು ಸೇರಿದಂತೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳ ಜೊತೆಗೆ ಕಡಲೆಕಾಯಿ ಬೆಣ್ಣೆಯು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ಹೃದಯದ ಆರೋಗ್ಯ (Health)ವನ್ನು ಸುಧಾರಿಸುತ್ತದೆ. ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ. ಹೆಚ್ಚುವರಿಯಾಗಿ, ತೂಕವನ್ನು ಕಳೆದುಕೊಳ್ಳಲು ಮತ್ತು ಸ್ಲಿಮ್ ಆಗಲು ನೆರವಾಗುತ್ತದೆ. 

Samantha To Sign another Special Song: ವಿಜಯ್ ದೇವರಕೊಂಡ ಜೊತೆ ಸಮಂತಾ ಐಟಂ ಸಾಂಗ್?

ತೂಕ ನಷ್ಟಕ್ಕೆ ಕಡಲೇಕಾಯಿ ಬೆಣ್ಣೆ ಹೇಗೆ ಸಹಾಯ ಮಾಡುತ್ತದೆ ?
ಕಡಲೆಕಾಯಿ ಬೆಣ್ಣೆಯು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದರೂ, ಇದು ಸಾಕಷ್ಟು ಪ್ರಮಾಣದ ಪ್ರೋಟೀನ್, ಕೊಬ್ಬು ಮತ್ತು ಫೈಬರ್ ಅನ್ನು ಒಳಗೊಂಡಿರುತ್ತದೆ. ಹೆಚ್ಚಿನ ಫೈಬರ್ ಆಹಾರಗಳು ಸಾಮಾನ್ಯವಾಗಿ ಜೀರ್ಣಕಾರಿ ಆರೋಗ್ಯಕ್ಕೆ ಉತ್ತಮವಾಗಿವೆ. ದೀರ್ಘಕಾಲದ ವರೆಗೆ ಹಸಿವಾಗದಂತೆ ಇರಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. 

ಆಹಾರದಲ್ಲಿ ಕಡಲೇಕಾಯಿ ಬೆಣ್ಣೆಯನ್ನು ಸೇರಿಸಿಕೊಳ್ಳುವ ವಿಧಾನಗಳು
ಕಡಲೇಕಾಯಿ ಬೆಣ್ಣೆಯ ಸೇವನೆ ಆರೋಗ್ಯಕರ ಮತ್ತು ತೂಕ ನಷ್ಟಕ್ಕೆ ಉತ್ತಮ ಆಯ್ಕೆಯಾಗಿದೆ. ಆದರೆ ಒಮ್ಮೊಮ್ಮೆ ತಿಳಿಯದೆ ಇದನ್ನು ಅತಿಯಾಗಿ ಸೇವಿಸಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಎರಡು ಟೇಬಲ್ ಸ್ಪೂನ್ ಕಡಲೆಕಾಯಿ ಬೆಣ್ಣೆಯು 200 ಕ್ಯಾಲೋರಿಗಳಷ್ಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಹೀಗಾಗಿ ಇದನ್ನು ಹಿತಮಿತವಾಗಿ ಸೇವಿಸಿ.

click me!