
ಹನಿಮೂನ್ (Honeymoon)ಪ್ರತಿಯೊಬ್ಬರ ಜೀವನದಲ್ಲಿ ಬಹಳ ವಿಶೇಷವಾಗಿರುತ್ತದೆ. ಮದುವೆ(Marriage)ನಿಶ್ಚಯವಾಗುವ ಮೊದಲೇ ಅನೇಕರು ಹನಿಮೂನ್ ಪ್ಲಾನ್ (Plan)ಮಾಡಿರ್ತಾರೆ. ಸದಾ ಹನಿಮೂನ್ ಕ್ಷಣಗಳು ನೆನಪಿರಲು ಎಲ್ಲ ಪ್ರಯತ್ನಗಳನ್ನು ಮಾಡ್ತಾರೆ. ಆ ಸುಂದರ ದಿನಗಳನ್ನು ಆಗಾಗ ಮೆಲುಕು ಹಾಕಲು ಬಯಸ್ತಾರೆ. ಆದ್ರೆ ಎಲ್ಲರ ಜೀವನದಲ್ಲೂ ಇದು ಸಾಧ್ಯವಿಲ್ಲ. ಅಂದುಕೊಂಡಿದ್ದು ಆಗುವುದಿಲ್ಲ. ಕೆಲವರಿಗೆ ಮದುವೆ ನಂತ್ರ ಹನಿಮೂನ್ ಗೆ ಹೋಗಲು ಆಗುವುದಿಲ್ಲ. ಸಮಯ ಸಿಕ್ಕಾಗ ಹನಿಮೂನ್ ಗೆ ಹೋಗ್ತಾರೆ. ಇಲ್ಲೊಬ್ಬ ಮಗುವಾದ್ಮೇಲೆ ಹನಿಮೂನ್ ಗೆ ಹೋಗಲು ನಿರ್ಧರಿಸಿದ್ದಾನೆ. ಆದ್ರೆ ಇಂದಿಗೂ ಆ ದಿನಗಳನ್ನು ನೆನಪಿಸಿಕೊಳ್ಳಲು ಆತನಿಗೆ ಇಷ್ಟವಾಗುವುದಿಲ್ಲ. ಹನಿಮೂನ್ ದಿನಗಳನ್ನು ಮರೆಯುವ ಪ್ರಯತ್ನ ನಡೆಸುತ್ತಿದ್ದಾನೆ. ಪತ್ನಿ,ಮಗುವಿನ ಜೊತೆ ಹನಿಮೂನ್ ಗೆ ಹೋಗಿದ್ದ ವ್ಯಕ್ತಿಗೆ ಆಗಿದ್ದೇನು? ಆತ ಅನುಭವಿಸಿದ ಕಷ್ಟವೇನು? ನಂತ್ರ ಆತ ತೆಗೆದುಕೊಂಡ ನಿರ್ಧಾರವೇನು ಎಂಬುದನ್ನು ಇಂದು ಹೇಳ್ತೆವೆ.
ಹನಿಮೂನಿನಲ್ಲಿ ಆಗಿದ್ದೇನು ?
ಇಂಗ್ಲೆಂಡ್‌ನ ವಿನ್ಸ್ಫೋರ್ಡ್‌ನಲ್ಲಿ ವಾಸವಾಗಿರುವ ಫ್ರೇಸಿಯರ್ ಕ್ಯಾರೊಲ್ಗೆ 30 ವರ್ಷ. ಮದುವೆ ನಂತ್ರ ಆತನಿಗೆ ಹನಿಮೂನ್ ಗೆ ಹೋಗಲು ಆಗಲಿಲ್ಲ. ಹಾಗಾಗಿ ಮಗು ಜನಿಸಿದ ಮೇಲೆ ಹನಿಮೂನ್ ಗೆ ಹೋಗಿದ್ದಾನೆ. ಈ ವೇಳೆ ಎಲ್ಲರೂ ಡಿನ್ನರ್ ಪ್ಲಾನ್ ಮಾಡಿದ್ದಾರೆ. ಶರ್ಟ್ ಹಾಕಲು ಹೋದ ಕ್ಯಾರೊಲ್ ಗೆ ಬಟನ್ ಹಾಕಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಆತನ ತೂಕ. 171 ಕೆ.ಜಿ ತೂಕ ಹೊಂದಿದ್ದ ಕ್ಯಾರೊಲ್ ಗೆ ಯಾವುದೇ ಕೆಲಸ ಮಾಡಲು ಆಗ್ತಿರಲಿಲ್ಲ. ಹನಿಮೂನ್ ನಲ್ಲಿ ಕ್ಯಾರೊಲ್ ಸಾಕಷ್ಟು ಸಮಸ್ಯೆ ಎದುರಿಸಿದ್ದಾನೆ. ಅಲ್ಲಿಂದ ವಾಪಸ್ ಬರ್ತಿದ್ದಂತೆ ತೂಕ ಇಳಿಸುವ ನಿರ್ಧಾರ ಕೈಗೊಂಡಿದ್ದಾನೆ.
Breast Cancer: ನಗರದ ಮಹಿಳೆಯರಲ್ಲಿ ಹೆಚ್ಚು ಸ್ತನ ಕ್ಯಾನ್ಸರ್
ತೂಕ ಏರಿಕೆಗೆ ಕಾರಣವಾಗಿತ್ತು ಖಿನ್ನತೆ : ತೂಕ ಏರಿಕೆಗೆ ಮುಖ್ಯ ಕಾರಣವಾಗಿದ್ದು ಆತನ ಖಿನ್ನತೆ. 16ನೇ ವಯಸ್ಸಿನಲ್ಲೇ ಕ್ಯಾರೊಲ್ ಮನೆಯಲ್ಲಿಯೇ ಇರುತ್ತಿದ್ದ. ಖಿನ್ನತೆಗೊಳಗಾಗಿದ್ದ ಆತನಿಗೆ ತಿನ್ನುವ ಅಭ್ಯಾಸವಿತ್ತು. ಇದೇ ಕಾರಣಕ್ಕೆ ದಿನ ದಿನಕ್ಕೂ ಆತನ ತೂಕ ಹೆಚ್ಚಾಗಿತ್ತು. ಅತಿಯಾದ ತೂಕದಿಂದ ಆತನಿಗೆ ಕಣ್ಣಿನ ಸಮಸ್ಯೆ ಶುರುವಾಗಿತ್ತು. ಪತ್ನಿಗೆ ಯಾವುದೇ ಕೆಲಸದಲ್ಲಿ ಸಹಾಯ ಮಾಡಲು ಆಗ್ತಿರಲಿಲ್ಲ. ಅಲ್ಲದೆ ಮಗಳನ್ನು ಶಾಲೆಗೆ ಬಿಡಲೂ ಸಾಧ್ಯವಾಗ್ತಿರಲಿಲ್ಲ. ಮಗಳ ಸ್ನಾನ ಮಾಡಿಸಲೂ ಆತನಿಂದ ಆಗ್ತಿರಲಿಲ್ಲ. ಇದು ಬೇಸರಕ್ಕೆ ಕಾರಣವಾಗಿತ್ತು. ತೂಕ ಇಳಿಸುವ ತೀರ್ಮಾನ ತೆಗೆದುಕೊಂಡ ಕ್ಯಾರೊಲ್ 18 ತಿಂಗಳಲ್ಲಿ 38 ಕೆ.ಜಿ ತೂಕ ಇಳಿಸಿದ್ದಾನೆ.
ಕ್ಯಾರೊಲ್ ತೂಕ ಇಳಿಸಿದ್ದು ಹೀಗೆ : ತೂಕ ಇಳಿಸಲು ಮೊದಲು ದೃಢ ಸಂಕಲ್ಪ ಮಾಡಬೇಕಾಗುತ್ತದೆ. ಎರಡು ದಿನ ವ್ಯಾಯಾಮ ಮಾಡಿ ನಂತ್ರ ಬಿಟ್ಟರೆ ತೂಕ ಇಳಿಯುವುದಿಲ್ಲ. ಕ್ಯಾರೊಲ್ ತೂಕ ಇಳಿಸಲು ಸಾಕಷ್ಟು ಸಮಯ ನೀಡಿದ್ದಾನೆ. 18 ತಿಂಗಳನ್ನು ತನಗಾಗಿ ತೆಗೆದಿಟ್ಟಿದ್ದಾನೆ. ಜೀವನ ಶೈಲಿ ಬದಲಿಸಿಕೊಂಡ ಕ್ಯಾರೊಲ್,ಡಯಟ್ ಮಾಡಿದ್ದಾನೆ. ಇದ್ರ ಜೊತೆ ಸೈಕ್ಲಿಂಗ್ ಮಾಡಿದ್ದಾನೆ. ಸೈಕ್ಲಿಂಗ್ ಆತನ ಖಿನ್ನತೆಯನ್ನು ಕಡಿಮೆ ಮಾಡಿತಂತೆ. ಜೀವನದಲ್ಲಿ ಖುಷಿ ಕಾಣಲು ಶುರು ಮಾಡಿದ ಕ್ಯಾರೊಲ್ 18 ತಿಂಗಳಲ್ಲಿ 38 ಕೆ.ಜಿ ತೂಕ ಇಳಿಸಿದ್ದಾನೆ. ಈಗ ಪತ್ನಿಗೆ ಎಲ್ಲ ಕೆಲಸದಲ್ಲಿ ನೆರವಾಗುತ್ತಾನೆ. ಮಗಳನ್ನು ಸ್ಕೂಲಿಗೆ ಬಿಡುವುದು,ಆಕೆಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಮಾಡ್ತಾನಂತೆ.
HEALTH TIPS: ಮಹಿಳೆಯರಿಗೆ ಹಾರ್ಟ್ ಅಟ್ಯಾಕ್ ಆಗೋದು ಇದೇ ಕಾರಣಕ್ಕೆ..!
ತೂಕ ಇಳಿಸಲು ಇತರರಿಗೆ ಸಲಹೆ : ಕ್ಯಾರೊಲ್ 18 ತಿಂಗಳಲ್ಲಿ 38 ಕೆ.ಜಿ ತೂಕ ಇಳಿಸುತ್ತಿದ್ದಂತೆ ಅನೇಕರು ಆತನಿಗೆ ಕರೆ ಮಾಡಿದ್ದಾರಂತೆ. ಅವರೆಲ್ಲರ ಒಂದು ಗ್ರೂಪ್ ಮಾಡಿದ ಕ್ಯಾರೊಲ್,ಅವರಿಗೆ ತೂಕ ಇಳಿಕೆಯ ಸಲಹೆ ನೀಡ್ತಿದ್ದಾನೆ. ಜೊತೆಗೆ ಬಾಕ್ಸಿಂಗ್ ಕ್ಲಾಸ್ ನಡೆಸುತ್ತಿದ್ದಾನೆ. ಖಿನ್ನತೆಗೊಳಗಾದವರ ಜೀವನ ಸರಿ ಮಾಡುವುದು ಕ್ಯಾರೊಲ್ ಗುರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.