
ಆರೋಗ್ಯಕರ ಜೀವನಕ್ಕೆ ನಿದ್ರೆ ಬಹಳ ಮುಖ್ಯ. ಮನುಷ್ಯನಿಗೆ ನಿದ್ದೆ ಸರಿಯಾಗಿ ಆಗದೆ, ದೇಹ (Body) ಸರಿಯಾಗಿ ವಿಶ್ರಾಂತಿ ಪಡೆಯದೇ ಇದ್ದಾಗ ಹಲವು ಆರೋಗ್ಯ ಸಮಸ್ಯೆಗಳು (Health Problem) ಕಾಣಿಸಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ ಮನುಷ್ಯನೊಬ್ಬರಿಗೆ ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ನಿದ್ದೆಯ (Sleep) ಅಗತ್ಯವಿದೆ ಎಂದು ತಿಳಿದುಬಂದಿದೆ. ಹೆಚ್ಚಿನವರು ಆರೋಗ್ಯವಾಗಿರಲು ಇದನ್ನು ಅನುಸರಿಸುತ್ತಾರೆ ಕೂಡಾ. ನಿಮ್ಮ ಜೀವಿತಾವಧಿಯಲ್ಲಿ ನಿಮಗೆ ಅಗತ್ಯವಿರುವ ನಿದ್ರೆಯ ಪ್ರಮಾಣವು ಗಮನಾರ್ಹವಾಗಿ ಬದಲಾಗುತ್ತದೆ. ಇದು ನಿಮ್ಮ ವಯಸ್ಸು ಮತ್ತು ಚಟುವಟಿಕೆಯ ಮಟ್ಟ ಮತ್ತು ನಿಮ್ಮ ಸಾಮಾನ್ಯ ಆರೋಗ್ಯ ಮತ್ತು ಜೀವನಶೈಲಿ (Lifestyle)ಯ ಅಭ್ಯಾಸಗಳನ್ನು ಅವಲಂಬಿಸಿರುತ್ತದೆ.
ಸಾಕಷ್ಟು ನಿದ್ರೆಯ ಕೊರತೆಯು ಅನೇಕ ರೋಗಗಳಿಗೆ (Disease) ತುತ್ತಾಗುವ ಅಪಾಯ (Danger)ವನ್ನು ಹೆಚ್ಚಿಸುತ್ತದೆ. ಸಾಕಷ್ಟು ನಿದ್ದೆ ಮಾಡಿದರೆ, ನಾವು ಉಲ್ಲಾಸವನ್ನು ಅನುಭವಿಸುತ್ತೇವೆ. ನಾವು ನಿಖರವಾಗಿ 8 ಗಂಟೆಗಳ ನಿದ್ದೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರತಿಯೊಂದು ವಯೋಮಾನದವರೂ ವಿಭಿನ್ನ ಮಟ್ಟದ ನಿದ್ರೆಯನ್ನು ಹೊಂದಿರುತ್ತಾರೆ. ನೀವು ಆರೋಗ್ಯಕರ ಜೀವನವನ್ನು ಬಯಸಿದರೆ ನೀವು ಖಂಡಿತವಾಗಿಯೂ ನಿಮ್ಮ ವಯಸ್ಸಿಗೆ ತಕ್ಕಂತೆ ನಿದ್ದೆ ಮಾಡಬೇಕು. ಹೀಗಾಗಿ ಯಾವ ವಯಸ್ಸಿನಲ್ಲಿ ಎಷ್ಟು ನಿದ್ದೆ ಮಾಡಿದರೆ ಒಳ್ಳೆಯದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಬೆಳಗ್ಗೆ ಬೇಗ ಏಳೋಣ ಅಂದ್ರೂ ಆಲಸ್ಯಾನೇ ಬಿಡ್ತಿಲ್ವಾ ? ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ
6ರಿಂದ 13 ವರ್ಷ ವಯಸ್ಸು
6 ರಿಂದ 13 ವರ್ಷ ವಯಸ್ಸಿನವರು ಹೇಗೆ ಮಲಗುತ್ತಾರೆ ಎಂದು ನಿಮಗೆ ತಿಳಿಯುತ್ತದೆ. ಚಿಕ್ಕ ಮಕ್ಕಳು ಎಷ್ಟು ಹೆಚ್ಚು ನಿದ್ದೆ ಮಾಡುತ್ತಾರೆ.. ಅವರ ಮನಸ್ಸು ವೇಗವಾಗಿರುತ್ತದೆ. ಅದಕ್ಕಾಗಿಯೇ 6 ರಿಂದ 13 ವರ್ಷದೊಳಗಿನ ಮಕ್ಕಳು ರಾತ್ರಿಯಲ್ಲಿ ಕನಿಷ್ಠ 11 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. 11 ಗಂಟೆಗಳ ನಿದ್ದೆ ಮಾಡುವ ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿರುತ್ತಾರೆ.
14ರಿಂದ 17 ವರ್ಷ ವಯಸ್ಸು
14 ರಿಂದ 17 ವರ್ಷ ವಯಸ್ಸಿನವರು ಒಳ್ಳೆಯ ನಿದ್ದೆ ಮಾಡಬೇಕು. ನಿಮ್ಮ ಮಗುವಿಗೆ 14 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಆಗ ಮಕ್ಕಳಿಗೆ ಪೂರ್ಣ ನಿದ್ರೆ ಬೇಕು ಎಂದು ಗಮನಿಸಬೇಕು. ಈ ವಯಸ್ಸಿನ ಮಕ್ಕಳಿಗೆ 24 ಗಂಟೆಗಳಲ್ಲಿ ಕನಿಷ್ಠ 8 ರಿಂದ 10 ಗಂಟೆಗಳ ನಿದ್ದೆ ಬೇಕು.
18ರಿಂದ 25 ವರ್ಷಗಳು
18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತಮ್ಮ ಭವಿಷ್ಯಕ್ಕಾಗಿ ಅನೇಕ ಯೋಜನೆಗಳನ್ನು ಹೊಂದಿರುತ್ತಾರೆ. ಇದರ ಬಗ್ಗೆಯೇ ಯೋಚಿಸಿ ಹೆಚ್ಚು ನಿದ್ದೆ ಮಾಡದೆ ಸಮಯ ಕಳೆಯುತ್ತಾರೆ. ಮಕ್ಕಳು ವಿಶೇಷವಾಗಿ ಈ ವಯಸ್ಸಿನಲ್ಲಿ, ಶಿಕ್ಷಣದ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರು ನಿರಂತರವಾಗಿ ಮಲಗಲು ಸಾಧ್ಯವಾಗದಿದ್ದರೆ, ಅವರಿಗೆ ವಿವಿಧ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಈ ವಯಸ್ಸಿನ ಮಕ್ಕಳು ಕನಿಷ್ಠ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ನೀವು ಮಲಗೋ ಭಂಗಿಯಿಂದ್ಲೇ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೊತ್ತಾಗುತ್ತೆ !
25ರಿಂದ 65 ವರ್ಷಗಳು
25 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇವೆಲ್ಲದರ ನಡುವೆ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಕನಿಷ್ಠ 7 ರಿಂದ 8 ಗಂಟೆಗಳ ನಿದ್ದೆ ಬೇಕು.
65 ವರ್ಷಕ್ಕಿಂತ ಮೇಲ್ಪಟ್ಟವರಿಗೆ
ನೀವು 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿ ಹಲವಾರು ರೀತಿಯ ಕಾಯಿಲೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿದೆ. ಈ ವಯಸ್ಸಿನಲ್ಲಿ ಆರೋಗ್ಯ ತಜ್ಞರು ನಿಖರವಾಗಿ 8 ರಿಂದ 10 ಗಂಟೆಗಳ ನಿದ್ದೆ ಪಡೆಯಲು ಶಿಫಾರಸು ಮಾಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.