ಸುಂದರ ಕೇಶರಾಶಿ ಎಲ್ಲರ ಗಮನ ಸೆಳೆಯುತ್ತದೆ. ತಲೆ ತುಂಬಾ ಕೂದಲಿರಬೇಕೆಂದು ಬಯಸುವ ನಾವು, ಜೀವನದಲ್ಲಿ ಒಮ್ಮೆಯೂ ಕೂದಲು ಕತ್ತರಿಸಿಲ್ಲ ಅಂದ್ರೆ ಉದ್ದದ ಕೂದಲು ನಮಗೆ ಬರ್ತಿತ್ತೇನೋ ಅಂದುಕೊಳ್ತೇವೆ. ಆದ್ರೆ ವಿಷ್ಯ ಬೇರೆಯೇ ಇದೆ.
ಕಪ್ಪುನೆಯ ದಪ್ಪ ಹಾಗೂ ಉದ್ದವಾದ ಕೂದಲನ್ನು ಎಲ್ಲರೂ ಇಷ್ಟಪಡ್ತಾರೆ. ಈಗಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗ್ತಿದೆ. ಕೂದಲು ಉದುರಿ ಬೋಳಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ದಪ್ಪನೆಯ ಕೂದಲನ್ನು ಪಡೆಯಬೇಕೆನ್ನುವ ಕಾರಣಕ್ಕೆ ಜನರು ಕೂದಲಿಗೆ ಸಾಕಷ್ಟು ಆರೈಕೆ ಮಾಡ್ತಾರೆ. ಕೂದಲಿನ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಅವುಗಳನ್ನು ನಿಯಮಿತವಾಗಿ ಕತ್ತರಿಸಬೇಕು. ಕೂದಲನ್ನು ಕತ್ತರಿಸಿ ಅದನ್ನು ಟ್ರಿಮ್ ಮಾಡಿದ್ರೆ ಕೂದಲಿನ ಸೌಂದರ್ಯ ಹೆಚ್ಚಾಗುತ್ತದೆ. ಕೂದಲಿಗೆ ಸಂಬಂಧಿಸಿದ ಸಮಸ್ಯೆ ಕೂಡ ಇದ್ರಿಂದ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂದಲು (Hair) ಕತ್ತರಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಕೂದಲಿಗೆ ಕತ್ತರಿ (Scissors) ಹಾಕದೆ ಹೋದ್ರೂ ಕವಲೊಡೆದ ಕೂದಲನ್ನಾದ್ರೂ ಕತ್ತರಿಸುತ್ತಾರೆ. ಆದ್ರೆ ನಮ್ಮ ಜೀವನ ಪರ್ಯಂತ ಒಮ್ಮೆಯೂ ಕೂದಲಿಗೆ ಕತ್ತರಿ ಹಾಕಿಲ್ಲವೆಂದ್ರೆ ಕೂದಲು ಎಷ್ಟು ಉದ್ದ ಬೆಳೆಯಬಹುದು ಎಂಬುದು ನಿಮಗೆ ಗೊತ್ತಾ? ಜೀವನ ಪೂರ್ತಿ ನೀವು ಕೂದಲು ಕತ್ತರಿಸಿಲ್ಲವೆಂದ್ರೆ ನಿಮ್ಮ ಕೂದಲು ಎಷ್ಟು ಉದ್ದ (Length) ಬೆಳೆಯುತ್ತದೆ ಎನ್ನುವ ಬಗ್ಗೆ ನಾವಿಂದು ಮಾಹಿತಿ ನೀಡ್ತೆವೆ.
ಪುರುಷರ ಸೆಕ್ಸ್ ಪವರ್ ಹೆಚ್ಚಿಸೋದು ಮಾತ್ರವಲ್ಲ…. ಈ ಔಷಧಿಯಿಂದ ತುಂಬಾ ಪ್ರಯೋಜನ ಇದೆ
ಪ್ರತಿ ತಿಂಗಳು ಎಷ್ಟು ಉದ್ದ ಬೆಳೆಯುತ್ತೆ ಕೂದಲು ಗೊತ್ತಾ? : ಮಗು ಹುಟ್ಟಿದ ಸಯಮದಲ್ಲಿ ಮಗುವಿನ ದೇಹದ ಮೇಲೆ ಒಟ್ಟು 50 ಲಕ್ಷ ಹೇರ್ ಫಾಲಿಕಲ್ (ಕೋಶ) ಇರುತ್ತದೆ. ನಮ್ಮ ತಲೆಯಲ್ಲಿ ಸುಮಾರು 1 ಲಕ್ಷ ಹೇರ್ ಫಾಲಿಕಲ್ ಇರುತ್ತದೆ. ವಯಸ್ಸು ಹೆಚ್ಚಾದಂತೆ ಕೆಲವು ಫಾಲಿಕಲ್ ಉತ್ಪತ್ತಿ ನಿಲ್ಲುತ್ತದೆ. ಇದರಿಂದಾಗಿ ನಮ್ಮ ಕೂದಲು ತೆಳ್ಳಗಾಗುತ್ತದೆ ಅಥವಾ ಬೋಳಿನ ಸಮಸ್ಯೆ ನಮ್ಮನ್ನು ಕಾಡುತ್ತದೆ.
ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, ಪ್ರತಿ ತಿಂಗಳು ನಮ್ಮ ಕೂದಲು ಅರ್ಧ ಇಂಚಿನಷ್ಟು ಬೆಳೆಯುತ್ತದೆಯಂತೆ. ಅಂದರೆ, ಪ್ರತಿ ವರ್ಷ ನಮ್ಮ ತಲೆಯ ಕೂದಲು ಸರಾಸರಿ 6 ಇಂಚುಗಳಷ್ಟು ಬೆಳೆಯುತ್ತದೆ. ಕೂದಲಿನ ಫಾಲಿಕಲ್ ನಿಮ್ಮ ಚರ್ಮದಲ್ಲಿ ಕಂಡುಬರುವ ಭಾಗವಾಗಿದೆ. ಇದು ಚರ್ಮದ ಪದರದಲ್ಲಿರುತ್ತದೆ. ಕೂದಲಿನ ಫಾಲಿಕಲ್ ಸುಮಾರು 20 ವಿವಿಧ ರೀತಿಯ ಜೀವಕೋಶಗಳಿಂದ ಮಾಡಲ್ಪಟ್ಟಿರುತ್ತದೆ.
ಜೀವನದಲ್ಲಿ ಇಷ್ಟು ಉದ್ದ ಬೆಳೆಯುತ್ತೆ ಕೂದಲು ?: ಪ್ರತಿ ತಿಂಗಳು ನಮ್ಮ ತಲೆಯ ಕೂದಲು ಅರ್ಧ ಇಂಚು ಬೆಳೆಯುತ್ತದೆ. ಕೂದಲು 2 ರಿಂದ 6 ವರ್ಷಗಳವರೆಗೆ ಬೆಳೆಯುತ್ತದೆ. ಇದರಿಂದ ಕೆಲವು ಕೂದಲು ಕವಲೊಡೆಯಲು ಶುರು ಮಾಡುತ್ತದೆ. ಇದನ್ನು ಗಮನಿಸಿದ್ರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಕೂದಲನ್ನು ಕತ್ತರಿಸದಿದ್ದರೆ ಅವನ ಕೂದಲು 3 ಅಡಿ ಅಥವಾ ಅದಕ್ಕಿಂತ ಹೆಚ್ಚು ಬೆಳೆಯುವ ಸಾಧ್ಯತೆಯಿರುತ್ತದೆ.
ಮನುಷ್ಯ ಅಂದ್ರೆ ಅನಾರೋಗ್ಯ ಕಾಡುತ್ತೆ, ಕೆಲವೊಂದನ್ನು ಅಪ್ತಪ್ಪಿಯೂ ಇಗ್ನೋರ್ ಮಾಡ ಕೂಡದು!
ವ್ಯಕ್ತಿ ಮೇಲಿದೆ ಕೂದಲಿನ ಆರೋಗ್ಯ : ಒಬ್ಬರ ಕೂದಲು ಎಷ್ಟು ಬೆಳೆಯುತ್ತದೆ ಎಂಬುದು ವ್ಯಕ್ತಿಯ ದೈಹಿಕ ರಚನೆಯನ್ನು ಅವಲಂಬಿಸಿರುತ್ತದೆ. ಕೆಲವು ಕೂದಲು ಹೆಚ್ಚು ಬೆಳೆದ್ರೆ ಮತ್ತೆ ಕೆಲ ಕೂದಲು ಕಡಿಮೆ ಬೆಳೆಯುತ್ತದೆ. ಕೂದಲಿನ ಬೆಳವಣಿಗೆ ಆನುವಂಶಿಕತೆಯನ್ನು ಅವಲಂಬಿಸಿರುತ್ತದೆ. ನಿಮ್ಮ ತಾಯಿ ಅಥವಾ ತಂದೆ ಕೂದಲು ಹೇಗಿದೆ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ನೀವು ಕೂದಲು ಉದ್ದವಾಗ್ಲಿ ಎಂದು ಅದನ್ನು ಕತ್ತರಿಸದೆ ಬಿಟ್ರೂ ಆ ಕೂದಲು ಬೆಳೆಯುವುದಿಲ್ಲ. ಕೂದಲು ಒಂದು ಹಂತದ ನಂತ್ರ ಬೆಳವಣಿಗೆ ನಿಲ್ಲಿಸುತ್ತದೆ. ಕೂದಲು ಒಂದು ವರ್ಷದಲ್ಲಿ 6 ಇಂಚುಗಳಿಗಿಂತ ಹೆಚ್ಚು ಬೆಳೆಯುವುದಿಲ್ಲ. ಕೂದಲಿನ ಜೀವಿತಾವಧಿ ಕಡಿಮೆ. ಒಂದು ಸಮಯದಲ್ಲಿ ಹಳೆ ಕೂದಲು ಉದುರುತ್ತದೆ. ಈ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಹಾಗಾಗಿ ಪ್ರತಿ ದಿನ 50ರಿಂದ 100 ಕೂದಲು ಉದುರಿದ್ರೆ ನೀವು ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಹಳೆ ಕೂದಲು ಉದುರಿದ್ರೆ ಮಾತ್ರ ಹೊಸ ಕೂದಲಿನ ಬೆಳವಣಿಗೆಯಾಗುತ್ತದೆ.