ಬಾಯಿಗೆ ರುಚಿ ಅಂತಾ ನಾವು ಮಿತಿಮೀರಿ ತಿನ್ನುತ್ತೇವೆ. ನಂತ್ರ ಅದ್ರ ಪರಿಣಾಮ ಗೊತ್ತಾಗುತ್ತದೆ. ಮಿತಿ ಮೀರಿದ್ರೆ ಅಪಾಯವನ್ನುಂಟು ಮಾಡುವ ಸ್ನ್ಯಾಕ್ಸ್ ನಲ್ಲಿ ಆಲೂ ಖಾರ ಸೇವ್ ಕೂಡ ಒಂದು. ಇದನ್ನು ತಿನ್ನುವುದ್ರಿಂದ ನಷ್ಟದ ಜೊತೆ ಲಾಭವೂ ಇದೆ.
ಬೆಳಿಗ್ಗೆ ಹಾಗೂ ಸಂಜೆ ಟೀ ಇಲ್ಲ ಅಂದ್ರೆ ಮಜಾ ಇರೋದಿಲ್ಲ. ಅದ್ರಲ್ಲೂ ಚಳಿಗಾಲದಲ್ಲಿ ದಿನಕ್ಕೆ ನಾಲ್ಕೈದು ಬಾರಿ ಟೀ ಸೇವನೆಯಾಗಿರುತ್ತದೆ. ಸಾಮಾನ್ಯವಾಗಿ ಸಂಜೆ ಟೀ ಸೇವನೆ ಮಾಡುವಾಗ ಜನರು ಸ್ಯ್ಕಾಕ್ಸ್ ಇಷ್ಟಪಡ್ತಾರೆ. ಬಿಸ್ಕತ್ತು, ಚಿಪ್ಸ್, ಸಮೋಸಾ ಹೀಗೆ ಅವರಿಗೆ ಇಷ್ಟವಾದ ತಿಂಡಿ ತಿನ್ನುತ್ತಾರೆ. ಅನೇಕರು ಆಲೂಗೆಡ್ಡೆ ಖಾರ ಸೇವ್ ಸೇವನೆ ಮಾಡಲು ಬಯಸ್ತಾರೆ. ಖಾರ ಹಾಗೂ ಉಪ್ಪು ಮಿಶ್ರಿತ ಈ ಆಲೂಗಡ್ಡೆ ಖಾರ ಸೇವ್ ಸವಿಯಲು ಬಹಳ ರುಚಿ.
ಟೀ ರುಚಿಯನ್ನು ಆಲೂಗಡ್ಡೆ ಖಾರ ಸೇವ್ ಡಬಲ್ ಮಾಡುವ ಕಾರಣ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾವು ಸೇವನೆ ಮಾಡ್ತೇವೆ. ಕೆಲವೊಮ್ಮೆ ಎಷ್ಟು ತಿಂದಿದ್ದೇವೆ ಎಂಬುದೇ ನಮಗೆ ಮರೆತು ಹೋಗಿರುತ್ತದೆ. ಆಲೂಗಡ್ಡೆ ಖಾರ ಸೇವನ್ನು ಆಲೂಗೆಡ್ಡೆ ಭುಜಿಯಾ ಎಂದೂ ಕರೆಯಲಾಗುತ್ತದೆ. ನಾವಿಂದು ಆಲೂಗಡ್ಡೆ ಖಾರ ಸೇವ್ ತಿನ್ನುವುದ್ರಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ನಿಮಗೆ ಹೇಳ್ತೆವೆ.
ಆಲೂಗಡ್ಡೆ (Potato) ಖಾರ ಸೇವ್ ಅಂದ್ರೇನು? : ಆಲೂಗಡ್ಡೆ ಖಾರ ಸೇವ್ (Save) ಒಂದು ರೀತಿಯ ಸ್ನ್ಯಾಕ್ಸ್ (Snacks). ಇದಕ್ಕೆ ಬೇಯಿಸಿದ ಆಲೂಗಡ್ಡೆ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಅರಿಶಿನ, ಇಂಗು, ಮೆಣಸಿನಪುಡಿಯನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಸೇವ್ ತಯಾರಿಸಿ, ಎಣ್ಣೆಯಲ್ಲಿ ಕರಿಯಲಾಗುತ್ತದೆ.
Mediterranean Diet: ವಿಶ್ವದಲ್ಲೇ ಬೆಸ್ಟ್, ಅಷ್ಟಕ್ಕೂ ಇದರಲ್ಲಿ ಅಂಥದ್ದೇನಿದೆ?
ಆಲೂಗಡ್ಡೆ ಖಾರ ಸೇವ್ ಆರೋಗ್ಯ (Health) ಕ್ಕೆ ಒಳ್ಳೆಯದೆ? : ಆಲೂಗೆಡ್ಡೆ ಭುಜಿಯಾದಲ್ಲಿ ಸಾಕಷ್ಟು ಉಪ್ಪಿನಂಶವಿರುತ್ತದೆ. ಇದ್ರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬನ್ನು ಕೂಡ ನೀವು ಕಾಣಬಹುದು. ಅಧಿಕ ರಕ್ತದೊತ್ತಡ ಮತ್ತು ಫ್ಯಾಟಿ ಲಿವರ್ ಸಮಸ್ಯೆ ಹೊಂದಿರುವವರು ಇದನ್ನು ಸೇವನೆ ಮಾಡದಿರುವುದು ಒಳ್ಳೆಯದು. ಈ ಆಲೂಗಡ್ಡೆ ಖಾರ ಸೇವ್ ತಯಾರಿಸಲು ಯಾವ ಆಯಿಲ್ ಬಳಕೆ ಮಾಡಲಾಗಿದೆ ಎಂಬುದು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ನೀವದನ್ನು ಮನೆಯಲ್ಲಿಯೇ ಶುದ್ಧ ಎಣ್ಣೆಯಲ್ಲಿ ತಯಾರಿಸಿದ್ದರೆ ಸಮಸ್ಯೆಯಿಲ್ಲ. ಆದ್ರೆ ಇದನ್ನು ಹೆಚ್ಚಾಗಿ ತಾಳೆ ಎಣ್ಣೆ ಅಥವಾ ಇತರ ಅಗ್ಗದ ಎಣ್ಣೆಗಳಲ್ಲಿ ಕರಿಯಲಾಗುತ್ತದೆ. ಎಣ್ಣೆಯನ್ನು ಮತ್ತೆ ಮತ್ತೆ ಬಳಸಲಾಗುತ್ತದೆ. ಇದರಿಂದ ಟಾಕ್ಸಿನ್ ಉಂಟಾಗಿ ಭುಜಿಯ ತಿಂದವರ ಆರೋಗ್ಯ ಹದಗೆಡುತ್ತದೆ ಎನ್ನುತ್ತಾರೆ ತಜ್ಞರು.
Ayurveda Tips : ಎರಡು ಹನಿ ಹಸುವಿನ ತುಪ್ಪದಲ್ಲಿ ಅಡಗಿದೆ ಆರೋಗ್ಯದ ಗುಟ್ಟು!
ಹೃದಯದ ಆರೋಗ್ಯ ಹಾಳಾಗುತ್ತೆ : ಭಾರತೀಯ ತಿಂಡಿಗಳಲ್ಲಿ ಲಾಭ ಮತ್ತು ನಷ್ಟ ಎರಡೂ ಇದೆ. ಭಾರತದ ಈ ಆಹಾರದಲ್ಲಿ ಹೆಚ್ಚು ಸೋಡಿಯಂ ಇರುವ ಕಾರಣ ಹಾಗೂ ಎಣ್ಣೆಯಲ್ಲಿ ಕರಿಯುವ ಕಾರಣ ಈ ಆಹಾರ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹೃದಯ ಸಂಬಂಧಿ ಸಮಸ್ಯೆಯಿರುವವರು ಇದನ್ನು ಮಿತವಾಗಿ ಸೇವನೆ ಮಾಡಬೇಕು.
ಆಲೂ ಖಾರ ಸೇವ್ ಪ್ರಯೋಜನವೇನು ? : ಮೊದಲೇ ಹೇಳಿದಂತೆ ಅದನ್ನು ಎಲ್ಲಿ ಮತ್ತು ಹೇಗೆ ತಯಾರಿಸಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಹಾಗೆಯೇ ಆಲೂ ಖಾರ ಸೇವ್ ತಿನ್ನುವುದ್ರಿಂದ ಎಲ್ಲರ ಆರೋಗ್ಯ ಹಾಳಾಗುತ್ತದೆ ಎಂದಲ್ಲ. ಇದರ ಸೇವನೆ ಮಾಡುವುದ್ರಿಂದ ಕೆಲ ಅನುಕೂಲವಿದೆ. ಇದ್ರಲ್ಲಿ ಆಲೂಗಡ್ಡೆ, ಕಡಲೆ ಹಿಟ್ಟು, ಮಸಾಲೆ ಪದಾರ್ಥಗಳನ್ನು ಸೇರಿಸುವುದ್ರಿಂದ ಈ ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಆಲೂ ಖಾರ ಸೇವ್ ದೈಹಿಕ ಶಕ್ತಿ, ಪ್ರೋಟೀನ್ ಮತ್ತು ಖನಿಜಗಳ ಮೂಲವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿರುವ ಚಿಪ್ಸ್, ಆಲೂಗೆಡ್ಡೆ ಚಿಪ್ಸ್, ಬಿಸ್ಕತ್ತುಗಳಿಗೆ ಹೋಲಿಕೆ ಮಾಡಿದ್ರೆ ಆಲೂ ಖಾರ ಸೇವ್ ಉತ್ತಮ ಆಯ್ಕೆ ಹೌದು. ಇದರಲ್ಲಿ ಕಡಿಮೆ ಹಾನಿಕಾರಕ ಮತ್ತು ಕೃತಕ ಪದಾರ್ಥಗಳನ್ನು ಬಳಸಲಾಗುತ್ತದೆ. ಹಾಗೆ ಇದ್ರಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ.