ಅನೇಕ ಕಾಯಿಲೆಗಳ ಆರಂಭಿಕ ಲಕ್ಷಣ ಹತ್ತು – ಹದಿನೈದು ವರ್ಷದ ಮೊದಲೇ ಶುರುವಾಗಿರುತ್ತದೆ. ನಾವದನ್ನು ನಿರ್ಲಕ್ಷ್ಯಿಸಿರುತ್ತೇವೆ. ವಯಸ್ಸಾದ್ಮೇಲೆ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ ಕೂಡ ಇದ್ರಲ್ಲಿ ಸೇರಿದೆ. ಆಲ್ಝೈಮರ್ನ ಬಗ್ಗೆ ಹೊಸ ಸಂಶೋಧನೆ ವರದಿ ಇಲ್ಲಿದೆ.
ವಯಸ್ಸಾದ ಮೇಲೆ ಬರುವ ಮರೆವಿನ ಕಾಯಿಲೆ ಆಲ್ಝೈಮರ್ನ ಬಗ್ಗೆ ಮತ್ತೊಣಂದು ಸಂಶೋಧನೆ ನಡೆದಿದೆ. ಈ ಕಾಯಿಲೆ ವಯಸ್ಸಾದ್ಮೇಲೆ ಕಾಣಿಸಿಕೊಂಡ್ರೂ ಇದು ಮಧ್ಯವಯಸ್ಸಿನ ಜೊತೆ ಸಂಬಂಧ ಹೊಂದಿದೆ ಎಂಬುದು ಸಂಶೋಧನೆಯಿಂದ ಪತ್ತೆಯಾಗಿದೆ. ಮಧ್ಯವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಹೊಟ್ಟೆಯ ಒಳಾಂಗಗ ಭಾಗದ ಕೊಬ್ಬು ಇದಕ್ಕೆ ಕಾರಣ ಎಂದು ತಜ್ಞರು ಪತ್ತೆ ಮಾಡಿದ್ದಾರೆ.
ರೇಡಿಯೊಲಾಜಿಕಲ್ ಸೊಸೈಟಿ ಆಫ್ ನಾರ್ತ್ ಅಮೇರಿಕಾ (RSNA) ವಾರ್ಷಿಕ ಸಮ್ಮೇಳನದಲ್ಲಿ ಈ ವರದಿಯನ್ನು ಪ್ರಸ್ತುತಪಡಿಸಲಾಗುವುದು. ಹೊಟ್ಟೆ (Stomach) ಯೊಳಗೆ ಆಳವಾದ ಆಂತರಿಕ ಅಂಗಗಳ ಸುತ್ತಲಿನ ಕೊಬ್ಬನ್ನು ಒಳಾಂಗಗಳ ಕೊಬ್ಬು ಎಂದು ಕರೆಯಲಾಗುತ್ತದೆ. ಈ ಕೊಬ್ಬು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಂಗತಿ ಪತ್ತೆಯಾಗಿದೆ. ಆರೋಗ್ಯವಂತ ಮಧ್ಯವಯಸ್ಕ (Middle Age)ರ ಮೇಲೆ ಈ ಸಂಶೋಧನೆ ನಡೆದಿದೆ. ಅವರ ಹೊಟ್ಟೆಯ ಎಂಆರ್ ಐ ಸ್ಕ್ಯಾನ್ ಮಾಡಲಾಗಿದೆ. ಈ ವೇಳೆ ಒಳಾಂಗಗಳ ಮತ್ತು ಸಬ್ಕ್ಯುಟೇನಿಯಸ್ ಕಿಬ್ಬೊಟ್ಟೆಯಲ್ಲಿ ಕೊಬ್ಬು ಕಾಣಿಸಿಕೊಂಡವರಿಗೆ ಮೆದುಳಿನ ಕ್ಷೀಣತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದ್ರಲ್ಲೂ ಮಹಿಳೆಯರಿಗೆ ಈ ಅಪಾಯ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ.
undefined
ಅಯ್ಯೋ ತೂಕ ಇಳಿಯೋಲ್ಲ ಅಂತ ಗೊಣಗೋದು ಬಿಡಿ, ದಕ್ಷಿಣ ಭಾರತೀಯ ಡಯಟ್ ಮಾಡಿ!
ಈ ಹೊಟ್ಟೆಯಲ್ಲಿರುವ ಕೊಬ್ಬು ಮೆದುಳಿನ ಬದಲಾವಣೆಗೆ ಸಂಬಂಧಿಸಿದೆ. ಹದಿನೈದು ವರ್ಷಗಳ ಮೊದಲೇ ಆಲ್ಝೈಮರ್ನ ತನ್ನ ಮೊದಲ ಲಕ್ಷಣವಾಗಿ ಇದನ್ನು ತೋರಿಸುತ್ತದೆ. ಹೊಸ ಅಧ್ಯಯನಕ್ಕಾಗಿ 20-80 ವರ್ಷ ವಯಸ್ಸಿನ 10,000 ಆರೋಗ್ಯವಂತ ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರೆಲ್ಲರಿಗೆ ಎಂಆರ್ ಐ ಪ್ರೋಟೋಕಾಲ್ ಅನ್ನು ನೀಡಲಾಗಿತ್ತು. ಇದಲ್ಲದೆ ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (ಪಿಇಟಿ) ಸ್ಕ್ಯಾನ್, ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ), ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಕಿಬ್ಬೊಟ್ಟೆಯ ಅಡಿಪೋಸ್ ಸೇರಿದಂತೆ ಅನೇಕ ಮಾಹಿತಿಯನ್ನು ಸಂಶೋಧನೆಗೆ ಬಳಸಿಕೊಳ್ಳಲಾಗಿದೆ.
Intimate health Tips: ಯೋನಿ ಆರೋಗ್ಯಕ್ಕೆ ವಜೈನಲ್ ಶಾಂಪೂ ಎಷ್ಟು ಸೇಫ್?
ಗುಪ್ತ ಕೊಬ್ಬು ಆಲ್ಝೈಮರ್ನ ಕಾಯಿಲೆಯ ಅಪಾಯವನ್ನು ಹೆಚ್ಚಿಸುವ ಪ್ರಮುಖ ಕಾರ್ಯವಿಧಾನವನ್ನು ಎತ್ತಿ ತೋರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಹಿಂದೆಯೂ ಆಲ್ಝೈಮರ್ನ ಕಾಯಿಲೆಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ನಡೆದಿದೆ. ಆದ್ರೆ ಅದ್ಯಾವುದೂ ಆಲ್ಝೈಮರ್ನ ಆರಂಭಿಕ ಲಕ್ಷಣವೇನು ಎಂಬುದನ್ನು ಹೇಳಿರಲಿಲ್ಲ. ಜೊತೆಗೆ ಅದು ಹದಿನಥದು ವರ್ಷದ ಮೊದಲೇ ಕೊಬ್ಬಿನ ಮೂಲಕ ಪತ್ತೆಯಾಗುತ್ತದೆ ಎಂಬುದನ್ನು ಪತ್ತೆ ಮಾಡಿರಲಿಲ್ಲ. ಈ ಹೊಸ ಸಂಶೋಧನೆ, ಕೊಬ್ಬಿನ ಜೊತೆ ಆಲ್ಝೈಮರ್ನ ಕಾಯಿಲೆ ಸಂಬಂಧವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಸಬ್ಕ್ಯುಟೇನಿಯಸ್ ಮತ್ತು ಒಳಾಂಗಗಳ ಕೊಬ್ಬು ಎರಡೂ ಮೆದುಳಿನ ಮೇಲೆ ಒಂದೇ ರೀತಿಯ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿದ ಒಳಾಂಗಗಳ ಕೊಬ್ಬಿನೊಂದಿಗೆ ಮೆದುಳಿನ ಕ್ಷೀಣತೆಯ ಅಪಾಯ ಹೆಚ್ಚಾಗಿರುತ್ತದೆ. ಆದ್ರೆ ಇದ್ರ ಬಗ್ಗೆ ಇನ್ನುಷ್ಟು ಸಂಶೋಧನೆ ನಡೆಯಬೇಕು ಎಂದು ತಜ್ಞರು ಹೇಳಿದ್ದಾರೆ.
ಆಲ್ಝೈಮರ್ಸ್ ಅಸೋಸಿಯೇಷನ್ ಪ್ರಕಾರ, 6 ಮಿಲಿಯನ್ ಅಮೆರಿಕನ್ನರು ಆಲ್ಝೈಮರ್ನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಅಂಕಿಅಂಶವು 2050 ರ ವೇಳೆಗೆ ಸುಮಾರು 13 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ. ಆಲ್ಝೈಮರ್ನ ಕಾಯಿಲೆಯು ಐದು ಮಹಿಳೆಯರಲ್ಲಿ ಒಬ್ಬರಿಗೆ ಮತ್ತು ಹತ್ತು ಪುರುಷರಲ್ಲಿ ಒಬ್ಬರಿಗೆ ಕಾಣಿಸಿಕೊಳ್ತಿದೆ. ಆಲ್ಝೈಮರ್ನ ಕಾಯಿಲೆ ಲಕ್ಷಣ : ಜ್ಞಾಪಕ ಶಕ್ತಿಯ ಕೊರತೆ, ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆ, ಮಾತನಾಡಲು ತೊಂದರೆ ಮತ್ತು ಇದರಿಂದಾಗಿ ಗಂಭೀರ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಈ ರೋಗದ ಲಕ್ಷಣಗಳಾಗಿವೆ. ರಕ್ತದೊತ್ತಡ, ಮಧುಮೇಹ, ಆಧುನಿಕ ಜೀವನಶೈಲಿ ಮತ್ತು ತಲೆ ಗಾಯ ಈ ಅಪಾಯವನ್ನು ಹೆಚ್ಚಿಸುತ್ತದೆ. 60 – 65 ವರ್ಷ ವಯಸ್ಸಿನಲ್ಲೇ ಈ ರೋಗ ಶುರುವಾಗುವುದಿದೆ. 65 ವರ್ಷಕ್ಕಿಂತ ಮೊದಲೇ ಶುರುವಾಗುವ ಈ ರೋಗವನ್ನು ಆರಂಭಿಕ ಆಲ್ಝೈಮರ್ನ ಎಂದು ಪರಿಗಣಿಸಲಾಗುತ್ತದೆ.