ಯಾರೂ ಇಲ್ಲ ಎನ್ನುವುದು ನಿಮ್ಮ ಕೊರಗೇ? ನಿಮಗೆ ಸ್ನೇಹಿತರು ಯಾರೂ ಇಲ್ವಾ? ಸಾಮಾಜಿಕ ಒಡನಾಟವೂ ಇಲ್ದೆ ಒಂಟಿಯಾಗಿರ್ತೀರಾ? ಇದು ನಿಮ್ಮೊಬ್ಬರದೇ ಸಮಸ್ಯೆ ಅಲ್ಲ, ಜಾಗತಿಕ ಆರೋಗ್ಯ ಅಪಾಯವಾಗಿ ಬೆಳೆದಿದೆ.
'ನನಗೆ ಯಾರೂ ಇಲ್ಲ, ಜೀವನದಲ್ಲಿ ಒಬ್ಬನೇ, ಎಲ್ಲ ಇದ್ದರೂ ನನಗಾಗಿ ಯಾರೂ ಇಲ್ಲ, ಯಾರೂ ನನ್ನ ಸಹಾಯಕ್ಕೆ ಬರಲ್ಲ, ಯಾರಿಗೂ ನನ್ನ ಬಗ್ಗೆ ಆಸಕ್ತಿಯಿಲ್ಲ, ಕಾಳಜಿ ಇಲ್ಲ...’ ಮುಂತಾದ ಭಾವನೆಗಳು ಎಲ್ಲರಿಗೂ ಒಂದಲ್ಲ ಒಂದು ಬಾರಿ ಬರುವುದು ಸಹಜ. ಆದರೆ, ಈ ಭಾವನೆಗಳೇ ತೀವ್ರವಾದರೆ ಅದು ಖಿನ್ನತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ. ಆರೋಗ್ಯದ ಮೇಲೆ ಭಾರೀ ಪರಿಣಾಮವುಂಟಾಗಬಹುದು. ಈ ಮನೋಭಾವವನ್ನೇ ಒಂಟಿತನವೆಂದು ಹೇಳುತ್ತೇವೆ. ಇದಕ್ಕೆ ಬಲಿಯಾದವರ ಆರೋಗ್ಯದ ಮೇಲೆ ದಿನಕ್ಕೆ ಕನಿಷ್ಠ 15 ಸಿಗರೇಟ್ ಸೇದಿದಷ್ಟು ಪರಿಣಾಮ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ, ಒಂಟಿತನವನ್ನು ಜಾಗತಿಕ ಅಪಾಯ ಎಂದು ಪ್ರಕಟಿಸಿದೆ. ಒಂಟಿತನದ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡಲು ಅಮೆರಿಕದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಆಯೋಗ ರಚಿಸಲಾಗಿತ್ತು. ಆಫ್ರಿಕನ್ ಯೂನಿಯನ್ ಸೇರಿದಂತೆ ಹಲವು ಸರ್ಕಾರಗಳ ಸಚಿವರು ಇದರ ಸದಸ್ಯರಾಗಿದ್ದರು. “ಸಾಮಾಜಿಕ ಬಾಂಧವ್ಯ ಜನರಿಗೆ ಅತಿ ಅಗತ್ಯ. ಒಂಟಿಯಾಗಿರುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ’ ಎನ್ನುವುದನ್ನು ಈ ಆಯೋಗ ಹೇಳಿದ್ದು, ಒಂಟಿತನದಿಂದ ದೂರವಿರುವುದು ಎಷ್ಟು ಅಗತ್ಯ ಎನ್ನುವುದನ್ನು ತಿಳಿಸಿದೆ. ಸಾಮಾಜಿಕ ಒಡನಾಟಕ್ಕೆ ಆದ್ಯತೆ ನೀಡಲು ಸೂಚಿಸಿದೆ. ಕಳೆದ ಮೂರು ವರ್ಷಗಳಿಂದಲೂ ಈ ಕುರಿತು ವಿಚಾರ ವಿಮರ್ಶೆ ನಡೆಯುತ್ತಿತ್ತು. ಇದೀಗ, ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಒಂಟಿತನ ಇಡೀ ಜಗತ್ತಿಗೆ ಅತಿದೊಡ್ಡ ಅಪಾಯ ತಂದೊಡ್ಡಿದೆ ಎಂದು ಹೇಳಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಗಂಭೀರ (Serious) ಪರಿಣಾಮಗಳು
ಯಾವುದೇ ದೈಹಿಕ (Physical) ಸಮಸ್ಯೆಯಿಲ್ಲ, ಅನಾರೋಗ್ಯವಿಲ್ಲ (Health Problems) ಎಂದರೂ ಎಲ್ಲ ರೀತಿಯ ಅನಾರೋಗ್ಯಗಳನ್ನು ಸೃಷ್ಟಿ ಮಾಡಲು ಒಂಟಿತನದ (Loneliness) ಭಾವನೆಯೊಂದೇ ಸಾಕು. ತಂತ್ರಜ್ಞಾನದ ಬಳಕೆಯ ಪರಿಣಾಮ ಸಮಾಜದಲ್ಲಿ ಒಬ್ಬರಿಗೊಬ್ಬರ ಸಂಬಂಧ ಸಡಿಲಾಗಿದೆ. ಎಲ್ಲರೂ ಒಂದು ರೀತಿಯ ಅಜ್ಞಾತದಲ್ಲಿ ಬದುಕುತ್ತಿದ್ದಾರೆ. ಶಹರಗಳ ಮಾತಿರಲಿ, ಗ್ರಾಮಗಳಲ್ಲೂ ಈ ಧೋರಣೆ ಹೆಚ್ಚಾಗಿದೆ. ಅವರ ಸುದ್ದಿ ಇವರಿಗೆ ಬೇಡ, ಇವರ ಸುದ್ದಿ ಅವರಿಗೆ ಬೇಡ. ಸಾಮಾಜಿಕವಾಗಿ ಒಡನಾಡುವ (Social Interaction) ಸಂದರ್ಭಗಳು ಸಹ ಕಡಿಮೆಯಾಗುತ್ತಿದೆ. ಒಡನಾಡಲು ಅನೇಕರು ಭಯ ಪಡುತ್ತಾರೆ.
undefined
ಫಿಶ್ ಪೆಡಿಕ್ಯೂರ್ ಹಿತ ಎನಿಸಬಹುದು, ಜೊತೆಗೆ ಜೀವಕ್ಕೂ ತರಬಹುದು ಕುತ್ತು!
ಆದರೆ, ಹೀಗಿರುವುದು ಒಟ್ಟಾರೆ ಆರೋಗ್ಯ ಮತ್ತು ಕ್ಷೇಮಕ್ಕೆ ಒಳ್ಳೆಯದಲ್ಲ. ಸದೃಢ ಸಾಮಾಜಿಕ ಸಂಬಂಧ ಇಲ್ಲದವರು ಪಾರ್ಶ್ವವಾಯು (Stroke), ಆತಂಕ (Anxiety), ಮರೆವಿನ ಸಮಸ್ಯೆ, ಖಿನ್ನತೆ (Depression), ಆತ್ಮಹತ್ಯೆ (Suicide) ಸೇರಿದಂತೆ ಇನ್ನೂ ಹಲವು ರೀತಿಯ ಆರೋಗ್ಯ ಸಮಸ್ಯೆ ಹಾಗೂ ಅಪಾಯಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಧಾನ ನಿರ್ದೇಶಕ ಡಾ.ಟೆಡ್ರೋಸ್ ಅಧಾನೋಮ್ ಅವರೇ ಈ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಒಡನಾಟ ಬೆಳೆಸಿಕೊಳ್ಳದ ಹೊರತು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿಲ್ಲ ಎಂದೇ ಹೇಳಿದ್ದಾರೆ.
15 ಸಿಗರೇಟ್ ಸೇದಿದಂತೆ
ನೀವು ದಿನಕ್ಕೆ 15 ಸಿಗರೇಟ್ ಸೇದಿದರೆ (Smoke) ನಿಮ್ಮ ದೇಹದ ಮೇಲೆ ಎಷ್ಟೆಲ್ಲ ಕೆಟ್ಟ ಪರಿಣಾಮಗಳು ಆಗಲು ಸಾಧ್ಯವೋ ಅಷ್ಟು ಪರಿಣಾಮ ಒಂಟಿತನದ ಭಾವನೆಯಿಂದಾಗುತ್ತದೆ. ಒಂಟಿತನದಿಂದ ಬೊಜ್ಜು ಹೆಚ್ಚುತ್ತದೆ, ದೈಹಿಕ ಚಟುವಟಿಕೆ (Physical Activity) ಕುಂದುತ್ತದೆ. ಡಾ. ವಿವೇಕ್ ಮೂರ್ತಿ ತಿಳಿಸುವ ಪ್ರಕಾರ, ಈ ಸಮಸ್ಯೆ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಒಂಟಿತನ ಎನ್ನುವುದು ಕಡಿಮೆ ಗಮನ ಹರಿಸಿರುವ ಸಾರ್ವಜನಿಕ ಆರೋಗ್ಯ ಅಪಾಯವಾಗಿದೆ. ಮುಂದುವರಿದ ದೇಶಗಳಲ್ಲಿ ಈ ಸಮಸ್ಯೆ ಅತಿ ಹೆಚ್ಚಾಗಿದೆ. ಮುಂದುವರಿದ ದೇಶಗಳ ನಾಲ್ವರಲ್ಲಿ ಓರ್ವ ಹಿರಿಯರು ಒಂಟಿಯಾಗಿ (Alone) ಬದುಕುತ್ತಿದ್ದಾರೆ. ಅವರಿಗೆ ಯಾವುದೇ ಸಾಮಾಜಿಕ ಒಡನಾಟವಿಲ್ಲ.
ತಂಬಾಕು ಕ್ಯಾನ್ಸರ್‌ಗೆ ಭಾರತ ಸೇರಿ 7 ದೇಶದಲ್ಲಿ 13 ಲಕ್ಷ ಜನ ಬಲಿ: ಲ್ಯಾನ್ಸೆಟ್ ವರದಿಯಲ್ಲಿ ಆತಂಕಕಾರಿ ಅಂಶ ಪ್ರಕಟ
ಮರೆವು ಸಮಸ್ಯೆ ಒಂಟಿತನದಿಂದಾಗಿ ಶೇ.50ರಷ್ಟು, ಹೃದ್ರೋಗ ಶೇ.30ರಷ್ಟು ಹೆಚ್ಚಾಗುತ್ತದೆ. ಸಂಶೋಧನೆಯ ಪ್ರಕಾರ, ಶೇ.5ರಿಂದ 15ರಷ್ಟು ಯುವಜನರು ಸಹ ಒಂಟಿಯಾಗಿದ್ದಾರೆ. ಯುವ ಜನರು (Young) ತಮ್ಮ ಶಾಲೆ, ಕಾಲೇಜುಗಳಲ್ಲೇ ಒಂಟಿತನ ಅನುಭವಿಸುತ್ತಿದ್ದಾರೆ. ಇದಂತೂ ಇನ್ನಷ್ಟು ಎಚ್ಚರಿಕೆ ತೆಗೆದುಕೊಳ್ಳುವ ಸನ್ನಿವೇಶವಾಗಿದೆ.