Eye Twitching: ಇದು ಕಣ್ಣ ನೋಟದ ಮಾತು: ಕಣ್ಣುಗಳು ಯಾವಾಗ ಮಿಟುಕುತ್ತವೆ?

By Suvarna News  |  First Published Nov 3, 2022, 5:39 PM IST

ಕಣ್ಣುಗಳು ಇದ್ದಕ್ಕಿದ್ದ ಹಾಗೆ ಮಿಟುಕುವುದು ದೊಡ್ಡ ಸಮಸ್ಯೆ ಏನಲ್ಲ. ಆದರೆ ಕೆಲವರು ಇದಕ್ಕಾಗಿ ಮುಜುಗರ ಪಟ್ಟುಕೊಳ್ಳುತ್ತಾರೆ. ಇದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಆದರೆ, ಕೆಲವು ಕಾರಣಗಳಿಂದ ಇದು ಉಂಟಾಗಬಹುದು. ಅವುಗಳ ಬಗ್ಗೆ ಅರಿತುಕೊಳ್ಳಿ. 
 


ಕೆಲವರು ಮಾತನಾಡುವಾಗ ಪದೇ ಪದೆ ಕಣ್ಣುಗಳನ್ನು ಮಿಟುಕಿಸುತ್ತಾರೆ. ಎದುರಿಗಿರುವವರು ಏನಂದುಕೊಳ್ಳುತ್ತಾರೋ ಎನ್ನುವ ಹಿಂಜರಿಕೆ ಇದ್ದರೂ ಅವರು ಏನೂ ಮಾಡಲು ಸಾಧ್ಯವಾಗುವುದಿಲ್ಲ. ವೈದ್ಯಕೀಯವಾಗಿ ಇದನ್ನು ಮಯೋಕಿಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು  ಚಲನಚಿತ್ರಗಳಲ್ಲಿ ಹಾಸ್ಯ ಸನ್ನಿವೇಶಗಳಿಗೆ ಸಾಕಷ್ಟು ಬಳಕೆ ಮಾಡಿಕೊಂಡಿರುವುದು ಕಂಡುಬರುತ್ತದೆ. ಚಿತ್ರಗಳಲ್ಲಿ ತೋರುವಂತೆ ಒಂದೇ ಕಣ್ಣು ಮಿಟುಕುವ ಸಮಸ್ಯೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಆದರೆ, ಎರಡೂ ಕಣ್ಣುಗಳನ್ನು ಮಿಟುಕಿಸುವವರು ಹೆಚ್ಚು. ಕಣ್ಣುಗಳು ಅತಿಯಾಗಿ ಮಿಟುಕಿಸುವಂತಾದರೆ ಅದನ್ನು ವೈದ್ಯರ ಬಳಿ ತೋರಿಸಿಕೊಳ್ಳಬೇಕು. ಅಷ್ಟಕ್ಕೂ ಈ ಸಮಸ್ಯೆ ಏಕೆ ಉಂಟಾಗುತ್ತದೆ ಎನ್ನುವುದಕ್ಕೆ ನಿರ್ದಿಷ್ಟವಾದ ಕಾರಣವಿಲ್ಲ. ಸುಸ್ತು, ಆತಂಕ, ಕಣ್ಣುಗಳ ಶುಷ್ಕತೆ ಸೇರಿದಂತೆ ಹಲವು ಕಾರಣಗಳಿಂದ ಕಣ್ಣುಗಳನ್ನು ಮಿಟುಕಿಸುವಂತಾಗಬಹುದು. ಕಣ್ಣುಗಳ ರೆಪ್ಪೆಗಳನ್ನು ತೆರೆಯುವ ಹಾಗೂ ಬಂದ್‌ ಮಾಡುವ ಮಾಂಸಖಂಡಗಳಲ್ಲಿ ಅಚಾನಕ್ಕಾಗಿ ಸೆಳೆತ ಉಂಟಾಗುವುದರಿಂದ ಕಣ್ಣುಗಳು ತನ್ನಿಂತಾನೇ ಮುಚ್ಚಿ ತೆರೆಯುತ್ತವೆ. ಇದರಲ್ಲಿ ವ್ಯಕ್ತಿಯ ಹಸ್ತಕ್ಷೇಪ ಇರುವುದಿಲ್ಲ. ನ್ಯೂಜೆರ್ಸಿಯ ದೃಷ್ಟಿವಿಜ್ಞಾನ ವೈದ್ಯಕೀಯ ಸಂಸ್ಥೆಯ ಪ್ರಕಾರ, ಮಯೋಕಿಮಿಯಾ ಯಾವುದೇ ರೀತಿಯಲ್ಲಿ ಬಾಧೆ ನೀಡುವ ಸಮಸ್ಯೆ ಅಲ್ಲ. ಇದಕ್ಕೆ ಯಾವುದೇ ಚಿಕಿತ್ಸೆಯೂ ಬೇಕಾಗುವುದಿಲ್ಲ. ತಜ್ಞರ ಪ್ರಕಾರ, ಒಂದೊಮ್ಮೆ ಸೂರ್ಯನ ಬೆಳಕಿಗೆ (Sun Light) ಹೋದಾಗ ಕಿರಿಕಿರಿ (Irritation) ಆದರೆ ಅಥವಾ ಕಣ್ಣುಗಳು ಕೆಂಪಾಗಿ (Red Eye) ಕಂಡುಬಂದರೆ ಎಚ್ಚರಿಕೆ ವಹಿಸಬೇಕು. ಕಣ್ಣುಗಳು ಸೋತ ಅನುಭವ ಉಂಟಾದರೂ ಗಮನ ಹರಿಸುವುದು ಅಗತ್ಯ. 

•    ಪೌಷ್ಟಿಕಾಂಶದ ಕೊರತೆ (Lack of Nutrition)
ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶದ ಕೊರತೆ ಉಂಟಾದಾಗ ವಿವಿಧ ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಅವುಗಳಲ್ಲಿ ಮಯೋಕಿಮಿಯಾ (Myokymia) ಕೂಡ ಒಂದು. ತಜ್ಞರ ಪ್ರಕಾರ, ಮ್ಯಾಗ್ನಿಷಿಯಂ (Magnesium) ಪೋಷಕಾಂಶದ ಕೊರತೆಯಿಂದ ಮಯೋಕಿಮಿಯಾ ಉಂಟಾಗುತ್ತದೆ. ಇದರೊಂದಿಗೆ, ವಿಟಮಿನ್‌ ಬಿ12 ಕೊರತೆ, ವಿಟಮಿನ್‌ ಡಿ ಕೊರತೆ ಹಾಗೂ ಫಾಸ್ಪೇಟ್‌ ಕೊರತೆಯಿಂದಲೂ ಕಣ್ಣುಗಳು ಮಿಟುಕುತ್ತವೆ. ಕ್ಯಾಲ್ಸಿಯಂ ಅಂಶ ತೀರ ಹೆಚ್ಚಾದಾಗಲೂ, ಅತೀವ ಕಡಿಮೆಯಾದಾಗಲೂ ಸಮಸ್ಯೆ ಕಂಡುಬರಬಹುದು. ದೇಹದ ಎಲ್ಲ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಪೋಷಕಾಂಶಗಳು ಅಗತ್ಯವಾಗಿವೆ. ಕಣ್ಣುಗಳ ಆರೋಗ್ಯಕ್ಕಾಗಿ ಹಣ್ಣು (Fruits), ತರಕಾರಿ, ಬೇಳೆಕಾಳುಗಳ ಸೇವನೆ ಅತ್ಯಗತ್ಯ.

Tap to resize

Latest Videos

Home Medicine: ಕಣ್ಣಿನ ಸೋಂಕು ಕಡಿಮೆ ಮಾಡಲು ಮನೆಯಲ್ಲೆ ಇದೆ ಔಷಧ!

•    ಸುಸ್ತು (Fatigue)
ಸುಸ್ತಿನಿಂದಾಗಿ ಕಣ್ಣುಗಳು ಮಿಟುಕುವ ಸಮಸ್ಯೆ ಹೆಚ್ಚುತ್ತದೆ. ನಿಮಗೆ ಸುಸ್ತಾಗುವುದು ಏಕೆ ಎನ್ನುವುದನ್ನು ಮೊದಲು ಪತ್ತೆ ಮಾಡಿಕೊಳ್ಳಬೇಕು. ಪೋಷಕಾಂಶಗಳ ಕೊರತೆಯಿಂದ ಹೀಗಾಗಿದೆಯೇ ಅಥವಾ ಬೇರೆ ಯಾವುದಾದರೂ ಆರೋಗ್ಯ ಸಮಸ್ಯೆ ಇದೆಯೇ ಎನ್ನುವುದನ್ನು ಗುರುತಿಸಿಕೊಳ್ಳಬೇಕು. ನಿದ್ರಾಹೀನತೆ (Sleep Disorder) ಇದ್ದರೆ ಸರಿಪಡಿಸಿಕೊಳ್ಳಬೇಕು. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅಧಿಕ ವ್ಯಾಯಾಮ (Exercise), ಮದ್ಯಪಾನದಿಂದ ದೂರವಿರಬೇಕು. ಕೆಮ್ಮಿಗೆ ತೆಗೆದುಕೊಳ್ಳುವ ಔಷಧಗಳಿಂದಲೂ ದೇಹ ಸುಸ್ತಾಗಬಹುದು. ಚೆನ್ನಾಗಿ ನಿದ್ರೆ ಮಾಡುವುದು ಕಣ್ಣಿಗೆ ಉತ್ತಮ. 

•    ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ (Computer Vision Syndrome)
ದೀರ್ಘಕಾಲ ಕಂಪ್ಯೂಟರ್‌ ಅಥವಾ ಸ್ಕ್ರೀನ್‌ ವೀಕ್ಷಣೆ ಮಾಡಿದರೆ ಈ ಸಮಸ್ಯೆ ಉಂಟಾಗುತ್ತದೆ. ಆಗ ಕಣ್ಣುಗಳಲ್ಲಿ ಒಂದು ರೀತಿಯ ವೈಬ್ರೇಷನ್‌ (Vibration) ಉಂಟಾಗುತ್ತದೆ. ಚುಚ್ಚಿದಂತೆ ಆಗುತ್ತದೆ. ಮಾಂಸಖಂಡಗಳ (Muscles) ಮೇಲೆ ಒತ್ತಡವುಂಟಾಗುತ್ತದೆ. ಹೀಗಾಗಿ, ಕೆಲಸ ಮಾಡುವ ಸಮಯದಲ್ಲಿ 20-30 ನಿಮಿಷಗಳಿಗೆ ಒಮ್ಮೆ ಬೇರಡೆ ನೋಡಿ ಕಣ್ಣುಗಳಿಗೆ ವಿರಾಮ ನೀಡಬೇಕು.

ಕಣ್ಣುಗಳು ಟೇಕನ್‌ ಫಾರ್‌ ಗ್ರಾಂಟೆಡ್‌ ಅಲ್ಲ, ಕಾಳಜಿಯಿಂದ ನೋಡ್ಕೊಳಿ

•    ಒತ್ತಡ (Stress)
ಒತ್ತಡದಿಂದಾಗಿ ಮಯೋಕಿಮಿಯಾ ಉಂಟಾಗಬಲ್ಲದು. ದೀರ್ಘಕಾಲದಿಂದ ಒತ್ತಡವಿದ್ದಾಗ ಮದ್ಯಪಾನ ಅಥವಾ ಡ್ರಗ್ಸ್‌ ಸೇವನೆ ಮಾಡುವವರಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಒತ್ತಡ ಕಳೆದುಕೊಳ್ಳಲು ಧ್ಯಾನ, ಪ್ರಾಣಾಯಾಮ ಉತ್ತಮ ಮಾರ್ಗ.

•    ಕಣ್ಣುಗಳ ಶುಷ್ಕತೆ (Dryness)
ಕಣ್ಣುಗಳು ತೇವಾಂಶದಿಂದ ಕೂಡಿರಬೇಕು. ಆದರೆ, ಒಮ್ಮೊಮ್ಮೆ ಅಲ್ಲಿ ಶುಷ್ಕತೆ ಉಂಟಾಗಿ ಅಗತ್ಯ ಲೂಬ್ರಿಕೆಂಟ್ಸ್‌ ಉತ್ಪಾದನೆ ಆಗುವುದಿಲ್ಲ. ಕಣ್ಣೀರಿನಲ್ಲಿ ಮೂರು ಪದರಗಳಿರುತ್ತವೆ. ತೈಲ, ದ್ರವ ಹಾಗೂ ಮ್ಯೂಕಸ್‌ ಎನ್ನುವ ಪದರಗಳು (Layers) ಸಂಯೋಜನೆಯಲ್ಲಿದ್ದಾಗಲೇ ಕಣ್ಣುಗಳ ದೃಷ್ಟಿ ಸರಿಯಾಗಿರುತ್ತದೆ. ಇವುಗಳಲ್ಲಿ ಯಾವುದಾದರೂ ಪದರದಲ್ಲಿ ಸಮಸ್ಯೆ ಉಂಟಾದರೂ ಶುಷ್ಕತೆ ಉಂಟಾಗುತ್ತದೆ. ಇದರಿಂದ ದೃಷ್ಟಿ ಮಂದವಾಗುವುದು, ಬೆಳಕಿಗೆ ಸಂವೇದನೆ (Sensitive to Light) ಉಂಟಾಗಿ  ಮಯೋಕಿಮಿಯಾ ಕಂಡುಬರುತ್ತದೆ.  

click me!