
ರಾಂಚಿ (ನ. 3): ಜಾರ್ಖಂಡ್ ರಾಜ್ಯದಲ್ಲಿ ಮತ್ತೊಮ್ಮೆ ಶಾಕಿಂಗ್ ಘಟನೆ ವರದಿಯಾಗಿದೆ. ರಾಂಚಿಯಲ್ಲಿ ಬುಧವಾರ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಕೇವಲ 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಿಂದ 8 ಭ್ರೂಣವನ್ನು ವೈದ್ಯರು ಹೊರತೆಗೆದಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ, ರಾಮಗಢದ ಶಿಶು ಇದಾಗಿದ್ದು, ಅಕ್ಟೋಬರ್ 10 ರಂದು ಜನಿಸಿತ್ತು. ಮಕ್ಕಳ ಹೊಟ್ಟೆಯಿಂದ ಭ್ರೂಣ ಹೊರಬರುವ ಪ್ರಕರಣಗಳು ಅಪರೂಪ ಎಂದು ವೈದ್ಯರು ಹೇಳಿದ್ದು, 21 ದಿನಗಳ ಶಿಶುವಿನ ಹೊಟ್ಟೆಯಿಂದ 8 ಭ್ರೂಣಗಳು ಹೊರಬಂದ ಬಹುಶಃ ವಿಶ್ವದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ.ಈ ಪ್ರಕರಣ ಜಾರ್ಖಂಡ್‌ನ ರಾಮಗಢದಲ್ಲಿ ನಡೆದಿದೆ. ರಾಂಚಿಯ ರಾಣಿ ಮಕ್ಕಳ ಆಸ್ಪತ್ರೆಯಲ್ಲಿ ಈ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ತಿಂಗಳು 10 ರಂದು ಜನಿಸಿದ್ದ ಮಗುವಿನ ಹೊಟ್ಟೆ ದೊಡ್ಡ ಪ್ರಮಾಣದಲ್ಲಿ ಊದಿಕೊಂಡಿತ್ತು. ಇದಕ್ಕೆ ಕಾರಣವೇನು ಎಂದು ತಿಳಿಯಲು ವೈದ್ಯರು ಸಿಟಿ ಸ್ಕ್ಯಾನ್ ಮಾಡಿದ್ದರು. ಈ ವೇಳೆ, ಮಗುವಿನ ಹೊಟ್ಟೆಯಲ್ಲಿ ಸಣ್ಣ ಪ್ರಮಾಣದ ಗಡ್ಡೆ ಇದೆ ಎಂದು ವೈದ್ಯರು ಊಹೆ ಮಾಡಿದ್ದರು. ಹಾಗಾಗಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು.
ಬುಧವಾರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆ ಬಳಿಕವೇ ಇದು ಗಡ್ಡೆಯಲ್ಲ, ಭ್ರೂಣ ಎನ್ನುವುದು ವೈದ್ಯರಿಗೆ ಗೊತ್ತಾಗಿದೆ. ಒಂದು ಎಂಟು ಭ್ರೂಣವನ್ನು ವೈದ್ಯರು ಹೊರತೆಗೆದಿದ್ದಾರೆ. ಸಿಟಿ ಸ್ಕ್ಯಾನ್ ನೋಡಿದಾಗ ಹೊಟ್ಟೆಯಲ್ಲಿ ಡರ್ಮಟೈಟಿಸ್ ಸಿಸ್ಟ್ (Dermoid Cyst) ಇರುವುದು ಪತ್ತೆಯಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಮಗುವನ್ನು ಆಸ್ಪತ್ರೆಯಿಂದ ಮೊದಲು ಡಿಸ್ಚಾರ್ಜ್ ಮಾಡಲಾಗಿತ್ತು ಮತ್ತು 21 ದಿನಗಳ ನಂತರ ಕರೆತರುವಂತೆ ಹೇಳಲಾಗಿತ್ತು. ನವೆಂಬರ್ 2 ರಂದು ಅಂದರೆ ಬುಧವಾರ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದಾಗ 8 ಭ್ರೂಣಗಳು ಹೊರಬಂದಿವೆ.
ಫೀಟ್ ಇನ್ ಫೀಟು ಪ್ರಕರಣ: 21 ದಿನಗಳ ಶಿಶುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಇಮ್ರಾನ್ (Dr. Imran) ಪ್ರಕಾರ ಇದು ಫೀಟ್ ಫೀಟು ಪ್ರಕರಣ ಎಂದಿದ್ದಾರೆ. 'ಫೀಟ್ ಇನ್ ಫೀಟು ಎನ್ನುತ್ತಾರೆ. ಇಂತಹ ಪ್ರಕರಣ ಜಗತ್ತಿನ 5-10 ಲಕ್ಷ ಮಕ್ಕಳಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ. ಇದುವರೆಗೆ ವಿಶ್ವಾದ್ಯಂತ ಇಂತಹ 200 ಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬಂದಿವೆ. ಅಂತಹ ಸಂದರ್ಭಗಳಲ್ಲಿ ನವಜಾತ ಶಿಶುವಿನ ಹೊಟ್ಟೆಯಿಂದ ಒಂದು ಅಥವಾ ಎರಡು ಭ್ರೂಣಗಳನ್ನು (embryos) ತೆಗೆದುಹಾಕಲಾಗುತ್ತದೆ. 8 ಭ್ರೂಣಗಳು ಬಿಡುಗಡೆಯಾದ ವಿಶ್ವದ ಮೊದಲ ಪ್ರಕರಣ ಇದಾಗಿದೆ.
ಮೊಬೈಲ್ ಟವರ್ ಹತ್ತಿರ ಗರ್ಭಿಣಿ ಇದ್ದರೆ ಹುಟ್ಟೋ ಮಗುವಿನ ಮೇಲೆ ಬೀರುತ್ತಾ ಪರಿಣಾಮ?
ದೇಶದಲ್ಲಿ ಇದುವರೆಗೆ ಇಂತಹ 10 ಪ್ರಕರಣಗಳು ನಡೆದಿವೆ ಎಂದು ಪಾಟ್ನಾದ (Patna) ಸ್ತ್ರೀರೋಗ ತಜ್ಞೆ ಡಾ.ಅನುಪಮಾ ಶರ್ಮಾ ಅವರು ಫೀಟ್ ಇನ್ ಫೀಟು (Feet in Fetus) ಎಂಬಲ್ಲಿ ಮಗುವಿನ ಹೊಟ್ಟೆಯಲ್ಲಿ ಮಗು ರೂಪುಗೊಳ್ಳಲು ಆರಂಭಿಸುತ್ತದೆ. ಗರ್ಭಾಶಯದಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಬೆಳೆಯುತ್ತಿದ್ದರೆ, ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಮಗುವಿನೊಳಗೆ ಹೋದ ಜೀವಕೋಶಗಳು, ಆ ಭ್ರೂಣವು ಮಗುವಿನೊಳಗೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಆದಾಗ್ಯೂ, ಜೀವಕೋಶಗಳು ಹೇಗೆ ಪ್ರವೇಶಿಸುತ್ತವೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಅನುಭವದ ಆಧಾರದ ಮೇಲೆ ಮಾತ್ರ ಕಾರಣಗಳನ್ನು ನೀಡಲಾಗಿದೆ.
ಅರೆರೆ. ಇದು ಹೇಗಾಯ್ತು! ವೀರ್ಯ, ಅಂಡಾಣು ಇಲ್ಲದೆ ಭ್ರೂಣ ಸೃಷ್ಟಿ
ರೋಗಲಕ್ಷಣಗಳು (symptoms) ಬಗ್ಗೆ ಮಾತನಾಡುವ ಅವರು, ನವಜಾತ ಶಿಶುವಿನ (newborn) ಸೊಂಟದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಮೊಟ್ಟೆಯ ರೀತಿಯ ಗಡ್ಡೆ ಕಾಣುತ್ತದೆ. ಮೂತ್ರ ವಿಸರ್ಜನೆ ನಿಲ್ಲುತ್ತದೆ. ಇದು ತುಂಬಾ ನೋವುಂಟುಮಾಡುತ್ತದೆ. ಈ ರೋಗಲಕ್ಷಣಗಳ ನಂತರ, ವೈದ್ಯರು ಪರೀಕ್ಷಿಸಿದ ಬಳಿಕ ಫೀಟ್ ಇನ್ ಫೀಟು ಖಚಿತವಾಗುತ್ತದೆ ಎನ್ನುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.