ಅಡುಗೆ ಮನೆಯಲ್ಲೂ ಶತ್ರುಗಳಿರ್ತಾರೆ. ನಮಗದು ತಿಳಿದಿರೋದಿಲ್ಲ. ಆರೋಗ್ಯಕ್ಕೆ ಒಳ್ಳೆಯದು ಅಂತ ನಾವದನ್ನು ತಿನ್ನುತ್ತಿರುತ್ತೇವೆ. ನಿಧಾನವಾಗಿ ಅದು ನಮ್ಮ ಜೀವ ಹಾಳು ಮಾಡುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿರುವ ಕೆಟ್ಟ ಆಹಾರ ಯಾವುದು ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯ ಕಾಪಾಡ್ಬೇಕು ಅಂದ್ರೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡ್ಬೇಕು ಎನ್ನಲಾಗುತ್ತದೆ. ಹೋಟೆಲ್ ಆಹಾರ ಸೇವನೆ ಮಾಡಿದ್ರೆ ಗ್ಯಾಸ್, ಭೇದಿ ಸೇರಿದಂತೆ ಅನೇಕ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಇದೇ ಕಾರಣಕ್ಕೆ ಜನರು ಮನೆಯಲ್ಲಿಯೇ ಆಹಾರ ತಯಾರಿಸಿ ತಿನ್ನುತ್ತಾರೆ. ಕೆಲವೊಮ್ಮೆ ಮನೆ ಆಹಾರ ತಿಂದ್ರೂ ಅನಾರೋಗ್ಯ ಕಾಡುತ್ತದೆ. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ನಾವು ಸೇವಿಸ್ತೇವೆ ಆದ್ರೆ ಯಾಕೋ ರೋಗ ಬಿಡ್ತಿಲ್ಲ ಎನ್ನುವವರಿದ್ದಾರೆ. ಮನೆಯಲ್ಲಿ ತಯಾರಿಸಿದ ಆಹಾರ ಕೂಡ ಮಧುಮೇಹ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತದೆ.
ದೇಹದ ಅನೇಕ ಶತ್ರುಗಳು ನಮ್ಮ ಅಡುಗೆ (Cook) ಮನೆಯಲ್ಲಿಯೇ ಇರುತ್ತಾರೆ. ಗೊತ್ತಿಲ್ಲದೆ, ಮೌನವಾಗಿ ನಮ್ಮನ್ನು ಕಿತ್ತು ತಿನ್ನುತ್ತವೆ. ಅಡುಗೆ ಮನೆಯಲ್ಲಿರುವ ವಸ್ತುಗಳು ನಮ್ಮ ಹೃದಯ (Heart), ಮೆದುಳು ಮತ್ತು ಮೂತ್ರಪಿಂಡ (Kidney) ಗಳನ್ನು ಹಾಳು ಮಾಡುತ್ತವೆ. ನಾವು ಆರೋಗ್ಯವಾಗಿರಬೇಕೆಂದ್ರೆ ಅಡುಗೆ ಮನೆಯ ಸ್ವಚ್ಛತೆ ಬಗ್ಗೆ ಮೊದಲು ತಿಳಿಯಬೇಕು. ನಾವಿಂದು ಆರೋಗ್ಯಕರ ಅಡುಗೆ ಮನೆ ಹೇಗಿರಬೇಕೆಂದು ಹೇಳ್ತೇವೆ.
ಮನೆಯಲ್ಲಿ ಮೈದಾ (Maida) ಹಿಟ್ಟಿದ್ರೆ ಹೊಟ್ಟೆ ಕೆಡೋದು ಗ್ಯಾರಂಟಿ : ಜನರು ಮನೆಯಲ್ಲಿ ಮಾಡಿದ ಸಮೋಸಾ ತಿಂದ್ರೆ ಆರೋಗ್ಯ ಸರಿಯಾಗಿರುತ್ತೆ ಎಂದುಕೊಳ್ತಾರೆ. ಆದ್ರೆ ಮೈದಾ ಹಿಟ್ಟಿನಲ್ಲಿ ಮಾಡಿದ ಯಾವುದೇ ಆಹಾರ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೊಟೇಲ್ ಅಥವಾ ಬೇಕರಿಯಲ್ಲಿ ಮಾಡಿದ ಕುಕೀಸ್, ಕೇಕ್, ಬ್ರೆಡ್, ಪಾಸ್ತಾ ಎಲ್ಲವೂ ಅನಾರೋಗ್ಯವನ್ನುಂಟು ಮಾಡುತ್ತೆ ಎನ್ನುತ್ತಾರೆ. ಇವೆಲ್ಲವನ್ನೂ ಮನೆಯಲ್ಲಿ ಮಾಡಿ ತಿಂದ್ರೆ ಒಳ್ಳೆಯದು ಎಂದುಕೊಳ್ತಾರೆ. ಹೋಟೆಲ್ ನಲ್ಲಿ ಮಾಡ್ಲಿ ಇಲ್ಲ ಮನೆಯಲ್ಲಿ ಮಾಡ್ಲಿ ಮೈದಾದಿಂದ ಮಾಡಿದ ಆಹಾರ ಯಾವಾಗ್ಲೂ ಆರೋಗ್ಯಕ್ಕೆ ಹಾನಿಕರ. ಸಂಸ್ಕರಿಸಿದ ಮೈದಾ ಹಿಟ್ಟಿನ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ ಕಾಡುತ್ತದೆ. ತೂಕ ಹೆಚ್ಚಾಗುವ ಅಪಾಯವಿರುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಕಾಡುವ ಜೊತೆಗೆ ಕ್ಯಾನ್ಸರ್ ಅಪಾಯವೂ ಇದೆ ಎನ್ನುತ್ತಾರೆ ತಜ್ಞರು. ಹಾಗಾಗಿ ಅಡುಗೆ ಮನೆಯಲ್ಲಿ ಮೈದಾ ಬಳಕೆ ಕಡಿಮೆ ಮಾಡಿದ್ರೆ ಒಳ್ಳೆಯದು.
ಎಣ್ಣೆ (Oil) ಬಳಕೆ ವಿಷ್ಯದಲ್ಲಿ ಹುಷಾರಿ : ಎಣ್ಣೆಯುಕ್ತ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಡುಗೆ ಮಾಡುವಾಗ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬಳಕೆ ಮಾಡ್ತೇವೆ. ಅದ್ರ ಜೊತೆಗೆ ಎಣ್ಣೆಯಲ್ಲಿ ಖರೀದ ಪದಾರ್ಥ ಸೇವನೆ ಮಾಡೋದು ಹೆಚ್ಚು. ಮನೆಯಲ್ಲಿ ಮಾಡಿದ್ದು ಎನ್ನುತ್ತ ಬಜ್ಜಿ, ಬೋಂಡಾ ತಿನ್ನುತ್ತಾರೆ. ಒಂದೇ ಎಣ್ಣೆಯನ್ನು ಪದೇ ಪದೇ ಬಳಕೆ ಮಾಡ್ತಾರೆ. ಈ ಎಣ್ಣೆಯುಕ್ತ ಪದಾರ್ಥ ಹೃದಯಾಘಾತ (Heart Attack), ಪಾರ್ಶ್ವವಾಯು (Paralysis), ಮಧುಮೇಹ (Diabetic), ಅಧಿಕ ರಕ್ತದೊತ್ತಡ (High Blood Pressure), ಬೊಜ್ಜು (Obesity), ಕೀಲು ನೋವು (Arthritis) ಅಥವಾ ಅಂಡಾಶಯದಂತಹ ಕ್ಯಾನ್ಸರ್ (Ovarian Cancer) ಅಪಾಯವನ್ನು ಇದು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ಎಣ್ಣೆ ಪದಾರ್ಥ ಬಳಕೆ ಕಡಿಮೆ ಮಾಡುವ ಜೊತೆಗೆ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸಬೇಡಿ.
ಆರೋಗ್ಯ ಯಾಕೋ ಸರಿ ಇಲ್ವಾ? ಬೆಳಗ್ಗೆ ಎದ್ದ ಕೂಡಲೇ ಇವನ್ನು ಮಾಡೋದ ಮರೀಬೇಡಿ
ರುಚಿ ಅಂತ ಸಕ್ಕರೆ (Sugar) ತಿನ್ಬೇಡಿ : ಹೊರಗೆ ಸಿಗುವ ಸಿಹಿತಿಂಡಿ, ತಂಪು ಪಾನೀಯದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಸಿಹಿ ತಿಂಡಿ ಬಿಡ್ಬಿಟ್ಟಿದ್ದೇನೆ ಅಂತಾ ನೀವು ಹೇಳ್ಬಹುದು. ಆದ್ರೆ ಮನೆಯಲ್ಲಿ ಟೀ, ಕಾಫಿಗೆ ಸ್ಪೂನ್ ಗಟ್ಟಲೆ ಸಕ್ಕರೆ ಹಾಕಿ ಕುಡಿದ್ರೆ, ಖೀರ್ ಗೆ ಸಕ್ಕರೆ ಹಾಕಿ ತಿಂದ್ರೆ ತೊಂದರೆ ಕಾಡದೆ ಇರೋದಿಲ್ಲ. ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡೋದ್ರಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ. ಇದು ಅಧಿಕ ರಕ್ತದೊತ್ತಡ, ಉರಿಯೂತ, ಕೊಬ್ಬನ್ನು ಹೆಚ್ಚಿಸುತ್ತದೆ.
ರುಚಿಗೆ ಮಾತ್ರ ಉಪ್ಪಿರಲಿ (Salt) : ಆಹಾರದ ರುಚಿ ಹೆಚ್ಚಿಸಲು ಉಪ್ಪು ಬೇಕು. ಹಾಗಂತ ಹೆಚ್ಚೆಚ್ಚು ಉಪ್ಪು ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಹೆಚ್ಚಿನ ಜನರು ಅಗತ್ಯಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಇದರಿಂದ ರಕ್ತದೊತ್ತಡ ಸಮಸ್ಯೆ, ಪೂತ್ರಪಿಂಡದಲ್ಲಿ ಸಮಸ್ಯೆ, ಹೃದಯ ಹಾಗೂ ಮೆದುಳಿನ ಹಾನಿ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ತಜ್ಞರು.
ನ್ಯೂಸ್ ಪೇಪರಲ್ಲಿ ಕಟ್ಟಿಟ್ಟ ಆಹಾರ ತಿನ್ನುತ್ತೀರಾ? ಬಿಟ್ಟು ಬಿಡಿ ಇವತ್ತೇ ಪ್ಲೀಸ್
ಹೀಗಿರಲಿ ನಿಮ್ಮ ಮನೆಯ ಆಹಾರ (Home Food) : ಮೇಲೆ ಹೇಳಿದ ಯಾವುದೇ ವಸ್ತು ಕೂಡ ಸಂಪೂರ್ಣವಾಗಿ ಆರೋಗ್ಯಕ್ಕೆ ಹಾನಿಯಲ್ಲ. ಇತಿಮಿತಿಯಲ್ಲಿ ಇದನ್ನು ಬಳಸಿದ್ರೆ ಒಳ್ಳೆಯದು. ಇದಕ್ಕೆ ಪರ್ಯಾಯ ಪದಾರ್ಥವನ್ನು ಕೂಡ ನೀವು ಸೇವನೆ ಮಾಡಬಹುದು. ಮೈದಾ ಬದಲು ರಾಗಿ ಹಿಟ್ಟು, ಸಕ್ಕರೆ ಬದಲು ಬೆಲ್ಲ ಸೇವನೆ ಮಾಡಬಹುದು.