Super Food: ನಾರಿನಂಶಭರಿತ ಆಹಾರ ಹೆಚ್ಚಿಸುವುದು ಆಯಸ್ಸು

Suvarna News   | Asianet News
Published : Jan 31, 2022, 04:46 PM IST
Super Food: ನಾರಿನಂಶಭರಿತ ಆಹಾರ ಹೆಚ್ಚಿಸುವುದು ಆಯಸ್ಸು

ಸಾರಾಂಶ

ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯಕ್ಕೆ ಮೂಲ. ಹೀಗಾಗಿ, ದೇಹಕ್ಕೆ ಯಾವುದು ಅಗತ್ಯವೋ ಅದನ್ನು ಸೇವಿಸಬೇಕು. ಆರೋಗ್ಯಪೂರ್ಣ ಹಾಗೂ ದೀರ್ಘಕಾಲ ಬದುಕಿರಲು ನಾರಿನಂಶ ಹೆಚ್ಚಿರುವ ಆಹಾರ ಸೇವನೆ ಮಾಡಬೇಕು.    

ಯಾವುದೇ ವ್ಯಕ್ತಿ ಆರೋಗ್ಯಕರ (Healthy) ಜೀವನ (Life) ನಡೆಸಬೇಕೆಂದರೆ ದೇಹಕ್ಕೆ ಸೂಕ್ತವಾದ ಆಹಾರ (Food) ಸೇವನೆ ಮಾಡಬೇಕಾಗುತ್ತದೆ. ಅನೇಕ ಪೋಷಕ ತತ್ವಗಳು ದೇಹದ ಆರೋಗ್ಯಕ್ಕೆ ಅಗತ್ಯವಾಗಿರುತ್ತವೆ. ಅವುಗಳಲ್ಲಿ ನಾರಿನಂಶವೂ (Fiber) ಒಂದು. ಫೈಬರ್‌ ಅಥವಾ ನಾರಿನಂಶವು ನಮ್ಮ ಜೀರ್ಣಾಂಗ ವ್ಯವಸ್ಥೆ (Digestive System) ಸುಗಮವಾಗಿ ಸಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಜಪಾನಿ (Japan) ಜನರು ಕಷ್ಟಸಹಿಷ್ಣುಗಳು. ಅಷ್ಟೇ ಅಲ್ಲ, ಅವರು ದೀರ್ಘಾಯುಷಿಗಳು. ಇದಕ್ಕೆ ಅವರ ಆಹಾರವೇ ಪ್ರಮುಖ ಕಾರಣ ಎನ್ನುವುದು ಜಗಜ್ಜಾಹೀರಾಗಿರುವ ಅಂಶ. ಜಪಾನ್‌ ಜನ ನಾರಿನಂಶ ಅಧಿಕವಾಗಿರುವ ಆಹಾರವನ್ನು ಸೇರ್ಪಡೆ ಮಾಡುತ್ತಾರೆ. ಅವುಗಳಲ್ಲಿ ಮುಖ್ಯವಾದ ಕೆಲವು ಆಹಾರಾಂಶಗಳು ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಜನಪ್ರಿಯವಾಗತೊಡಗಿವೆ. ಡಯೆಟ್‌ (Diet) ಮಾಡುವವರು ಅವುಗಳನ್ನು ತಪ್ಪದೇ ಸೇವಿಸುತ್ತಾರೆ. 

ಆಹಾರದಲ್ಲಿ ನಾರಿನಂಶ ಹೆಚ್ಚಿರುವುದು ಮಧುಮೇಹ(Diabetes)ಕ್ಕೂ ಹೃದಯದ ಆರೋಗ್ಯಕ್ಕೂ ಉತ್ತಮ. ಆಹಾರ (Food) ಜೀರ್ಣವಾಗುವುದಷ್ಟೇ ಅಲ್ಲ, ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ದೂರವಾಗುತ್ತವೆ. ಇದರಿಂದ ದೀರ್ಘಾಯುಷ್ಯ (Long Life) ನಮ್ಮದಾಗುತ್ತದೆ. 

ನಿಮಗೆ ಗೊತ್ತೇ? ಅಧ್ಯಯನಗಳ ಪ್ರಕಾರ, ವಿಶ್ವದಲ್ಲಿ ನೀಲಿ ವಲಯ (Blue Zone)ವೆಂದು ಗುರುತಿಸಲಾಗಿರುವ ಹಲವು ದೇಶಗಳಲ್ಲಿ ನಾರಿನಂಶಭರಿತ ಆಹಾರವನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ನೀಲಿ ವಲಯದಲ್ಲಿ ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ಇಲ್ಲಿನ ಜನ ದೀರ್ಘಾಯುಷಿಗಳು ಎನ್ನುವುದು ವಿಶೇಷ. ಗ್ರೀಸ್‌ (Greece), ಇಟಲಿ (Italy), ಜಪಾನ್‌, ಕೋಸ್ಟರಿಕಾ ಹಾಗೂ ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾ (Loma Linda)ಗಳು ಈ ವಲಯದಲ್ಲಿ ಬರುತ್ತವೆ. ಹಾಗಿದ್ದರೆ ಅವರು ಸೇವಿಸುವ ಆ ಸೂಪರ್‌ ಫುಡ್‌ (Super Food)ಗಳು ಯಾವುವು ನೋಡಿ.

•    ಬೀನ್ಸ್‌ (Beans)
ಬೀನ್ಸ್‌ ನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುತ್ತವೆ. ಪ್ರೊಟೀನ್‌, ಫೈಬರ್‌ ಅಂಶ ಅಧಿಕವಾಗಿರುವುದರಿಂದ ಹೊಟ್ಟೆಯ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಬೀನ್ಸ್‌ ನಲ್ಲೂ ಹಲವು ವಿಧಗಳಿವೆ. ಇವೆಲ್ಲವುಗಳಲ್ಲಿ ಫೋಲೇಟ್‌ ಮತ್ತು ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಆಹಾರ ಚೆನ್ನಾಗಿ ಪಚನವಾಗುವ ಜತೆಗೆ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. 

ಸೇನೆಯ ಮುಖ್ಯ ಹುದ್ದೆ ಬಿಟ್ಟು porn ಚಿತ್ರೋದ್ಯಮಕ್ಕೆ ಧುಮುಕಿದ ಬೆಡಗಿ

•    ದವಸ ಧಾನ್ಯಗಳು (Cereals)
ಧಾನ್ಯಗಳಲ್ಲಿ ಫೈಬರ್‌ ಅಂಶ ಅತಿ ಹೆಚ್ಚಾಗಿರುತ್ತದೆ. ಕೆಂಪಕ್ಕಿ, ಕಪ್ಪು ಅಕ್ಕಿ, ಜೋಳ ಮುಂತಾದ ಹಲವು ಧಾನ್ಯಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲ, ಇವುಗಳಲ್ಲಿ ಪ್ರೊಟೀನ್‌, ವಿಟಮಿನ್‌ ಬಿ, ಆಂಟಿಆಕ್ಸಿಡಂಟ್ಸ್‌, ಕಬ್ಬಿಣಾಂಶ, ಝಿಂಕ್‌, ತಾಮ್ರ, ಮ್ಯಾಗ್ನಿಷಿಯಂ ಹಾಗೂ ಮಿನರಲ್‌ ಸಾಕಷ್ಟು ಪ್ರಮಾಣದಲ್ಲಿರುತ್ತವೆ. 

•    ಬೀಜಗಳು (Nuts)
ಬಾದಾಮಿ, ಗೋಡಂಬಿ, ಪಿಸ್ತಾ, ಅಕ್ರೋಟ್‌, ನೆಲಗಡಲೆಗಳಲ್ಲಿ ಫೈಬರ್‌ ಅಂಶ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇವು ಪಚನಕ್ರಿಯೆಯನ್ನು ಸುಗಮಗೊಳಿಸುತ್ತವೆ. 

•    ಬ್ರೊಕೊಲಿ (Broccoli)
ಬ್ರೊಕೊಲಿಯಲ್ಲಿ ನಾರಿನಂಶದ ಜತೆಗೆ ಕ್ಯಾಲ್ಸಿಯಂ, ವಿಟಮಿನ್‌-ಸಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. 100 ಗ್ರಾಮ್‌ ಬ್ರೊಕೊಲಿಯಲ್ಲಿ 2.6 ಗ್ರಾಮ್‌ ಫೈಬರ್‌ ಅಂಶವಿರುತ್ತದೆ. 

Types Of Tea: ಹಾಲಿನ ಚಹಾ ಕುಡಿದು ಬೋರಾಗಿದ್ಯಾ ? ಕಲರ್‌ ಕಲರ್ ಟೀ ಕುಡೀರಿ

•    ಹಣ್ಣುಗಳು (Fruits)
ಪೇರಳೆ ಅಥವಾ ಸೀಬೆ, ಸ್ಟ್ರಾಬೆರಿ ಸೇರಿದಂತೆ ಹಲವಾರು ಹಣ್ಣುಗಳಲ್ಲಿ ಅಧಿಕ ನಾರಿನಂಶದ ಜತೆಗೆ ವಿಟಮಿನ್‌ ಸಿ, ವಿಟಮಿನ್‌ ಎ, ಥಯಾಮಿನ್‌, ರೈಬೋಫ್ಲೇವಿನ್‌, ವಿಟಮಿನ್‌ ಬಿ6, ಕ್ಯಾಲ್ಸಿಯಂ ಹಾಗೂ ಝಿಂಕ್‌ ಅಂಶಗಳಿದ್ದು, ದೇಹಕ್ಕೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ. 

•    ಅಗಸೆ ಬೀಜ (Flex Seed)
ಆಹಾರದಲ್ಲಿ ಅಗಸೆ ಬೀಜವನ್ನು ಯಾವುದಾದರೂ ರೂಪದಲ್ಲಿ ಬಳಸಬೇಕು. ಏಕೆಂದರೆ, ಇದರಲ್ಲಿ ನಾರಿನಂಶದ ಜತೆಗೆ ಮಿನರಲ್ಸ್‌, ವಿಟಮಿನ್ಸ್‌, ಮ್ಯಾಗ್ನಿಷಿಯಂ, ತಾಮ್ರ, ಒಮೆಗಾ-೩ ಫ್ಯಾಟಿ ಆಸಿಡ್‌, ಫಾಸ್ಫರಸ್‌ ಅಂಶಗಳಿರುತ್ತವೆ. 100 ಗ್ರಾಮ್‌ ಅಗಸೆ ಬೀಜದಲ್ಲಿ 27 ಗ್ರಾಮ್‌ ಫೈಬರ್‌ ದೊರೆಯುತ್ತದೆ. ಹೀಗಾಗಿ, ಇದನ್ನು ಅಗತ್ಯವಾಗಿ ನಿಮ್ಮ ಡಯೆಟ್‌ ನಲ್ಲಿ ಸೇರ್ಪಡೆ ಮಾಡಿಕೊಳ್ಳಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!