ಈಗಿನ ದಿನಗಳಲ್ಲಿ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ಕೊಡುವವರೇ ಹೆಚ್ಚು. ಆದರೆ ಈ ಸಲಹೆಗಳಲ್ಲಿ ನೀವು ಫಿಟ್ನೆಸ್ ಬಗ್ಗೆ ನಂಬಿಕೊಂಡಿರುವ ಎಲ್ಲ ವಿಷಯಗಳೂ ಸತ್ಯವೇ? ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು, ಇದರ ಬಗ್ಗೆ ಆರೋಗ್ಯ ತಜ್ಞರೇ ಹೊರ ಬಿಟ್ಟಿರುವ ಮಾಹಿದೆ ಇಲ್ಲಿದೆ.
ನಾವು ಫಿಟ್ (Fit) ಆಗಿರಬೇಕು ಎಂದು ಎಷ್ಟೆಲ್ಲಾ ಕಷ್ಟಪಡುತ್ತೀವಿ, ಫಿಟ್ನೆಸ್ ಮೈಂಟೇನ್ ಮಾಡುವವರಲ್ಲಿ ಹೋಗಿ ಸಲಹೆ ಕೇಳುತ್ತೀವಿ. ಅವರು ಹೇಳುವ ಮಾರ್ಗವನ್ನೆಲ್ಲಾ ಪಾಲಿಸುತ್ತೀವಿ, ಆದರೂ ಯಾಕೆ ತೂಕ ಕಡಿಮೆಯಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿರಬೇಕಲ್ಲವೇ? ತೂಕ ಕಡಿಮೆ ಮಾಡಿಕೊಳ್ಳಲು ಯಾರೆಲ್ಲಾ ಏನೇನು ಸಲಹೆ ನೀಡುತ್ತಾರೋ ಅದೆಲ್ಲಾ ಪಾಲಿಸುವ ಮುನ್ನ ಇವುಗಳಲ್ಲಿ ಯಾವುದು ಎಷ್ಟು ಸತ್ಯ ಎಂಬುದನ್ನು ತಿಳಿದುಕೊಳ್ಳಿ, ಇಲ್ಲವಾದರೆ ನಿಮ್ಮದು ವ್ಯರ್ಥ ಪ್ರಯತ್ನವಾಗಿ ಬಿಡಬಹುದು.
ಒಂದು ಲೋಟ ಡಿಟಾಕ್ಸ್ (Detox) ನೀರು ಕುಡಿಯುವುದರಿಂದ ಒಬ್ಬ ವ್ಯಕ್ತಿಯು ತೂಕ ಸುಲಭವಾಗಿ ಇಳಿಸಿಬಿಡಬಹುದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ತೂಕ ಇಳಿಯುತ್ತದೆ, ವ್ಯಾಯಾಮ ಮಾಡಿದಾಗ ನೋವು ಕಾಣಿಸಿಕೊಂಡಿಲ್ಲ ಅಂದರೆ ಆ ವ್ಯಾಯಾಮ ಫಲಿತಾಂಶ ಕೂಡ ನೀಡುತ್ತಿಲ್ಲ ಎಂದರ್ಥ.. ಹೀಗೇ ಇನ್ನೂ ಕೆಲವು ಸಂಗತಿಗಳನ್ನು ನೀವು ನಂಬಿ ನಡೆಯುತ್ತಿದ್ದೀರಿ ಎಂದರೆ ಇದರ ಸತ್ಯಾಸತ್ಯತೆಯ ಬಗ್ಗೆ ತಿಳಿಯಿರಿ.
ಸಲಹೆ: ಒಂದು ಲೋಟ ಡಿಟಾಕ್ಸ್ ನೀರು (Detox water) ಕುಡಿಯುವುದರಿಂದ ಆರೋಗ್ಯವಾಗಿರುವ ಜೊತೆಗೆ ತೂಕ ಕಡಿಮೆ ಮಾಡಿಕೊಳ್ಳಬಹುದು..
ಇದರ ಬಗ್ಗೆ ಹೆಲ್ತ್ ಎಕ್ಸ್‌ಪರ್ಟ್ ಹೇಳುವ ಪ್ರಕಾರ, ಹೀಗೆ ಬರಿಯ ಒಂದು ಲೋಟ ನೀರು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುವುದಿಲ್ಲ. ಇದರ ಜೊತೆಗೆ ಯೋಗ, ಎಕ್ಸರ್ಸೈಜ್ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಅವಶ್ಯಕತೆಯಿದೆ. ನಿಯಮಿತವಾದ ಡಯಟ್ (Diet) ಕೂಡ ಪಾಲನೆ ಮಾಡಬೇಕಾಗುತ್ತದೆ. ಇದೆಲ್ಲದರ ಜೊತೆಗೆ ನೀವು ಡಿಟಾಕ್ಸ್ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡಿದ್ದರೆ ಆಗ ಉಪಯೋಗಕ್ಕೆ ಬರುತ್ತದೆ.
undefined
ಡಿಟಾಕ್ಸ್ ವಾಟರ್ ಅಂದರೆ ನೀರಿನೊಂದಿಗೆ ನಿಂಬೆ ರಸ ಅಥವಾ ಆ್ಯಪಲ್ ಸೈಡರ್ (Apple Cider) ವಿನೆಗರ್ ನಂಥ ದ್ರವವನ್ನು ನೀರಿನೊಂದಿಗೆ ಬೆರೆಸಿಕೊಂಡು ಕುಡಿಯುವುದು.
Acid Reflux: ಈ ದಿನನಿತ್ಯದ ಅಭ್ಯಾಸಗಳು ನಿಮಗೆ ಅಸಿಡಿಟಿ ತರುತ್ತಿರಬಹುದು..
ಸಲಹೆ: ಕಷಾಯ ಕುಡಿಯುವುದರಿಂದ ಆರೋಗ್ಯವಾಗಿರಬಹುದು ಮತ್ತು ತೂಕ ಇಳಿಸಬಹುದು.
ಇದು ಕೂಡ ಸಾಧ್ಯವಿಲ್ಲ. ಒಂದು ಲೋಟ ಕಷಾಯ ಸೇವನೆ ಮಾಡಿದರೆ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಜೊತೆಗೆ ಕಟ್ಟು ನಿಟ್ಟಿನ ಡಯಟ್ ಪಾಲಿಸಿದಾಗ ಮಾತ್ರ ಕಷಾಯ ತನ್ನ ಕೆಲಸ ಮಾಡುತ್ತದೆ. ಇಲ್ಲವಾದರೆ ನಿಮ್ಮ ತೂಕದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ಸಲಹೆ: ದೇಹ ದಂಡಿಸಿದಾಗ ನೋವಾಗುತ್ತಿಲ್ಲ(No pain) ಅಂದರೆ ಅದರಿಂದ ಪ್ರಯೋಜನವಿಲ್ಲ
ಹೆಚ್ಚಿನ ಜನರು ಈ ಮಿಥ್ಯವನ್ನು ನಂಬಿರುತ್ತಾರೆ, ಆದರೆ ಇದು ಕೂಡ ಸುಳ್ಳು. ನಿಮಗೆ ವ್ಯಾಯಾಮ ಮಾಡಿದಾಗ ಸ್ವಲ್ಪ ಅಸಹಜತೆ ಅನ್ನಿಸಿದರೆ ತೊಂದರೆಯಿಲ್ಲ. ಇಲ್ಲವಾದರೆ ಬಹಳ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತಿದೆ ಅಂದಾಗ ಅದರ ಕಡೆ ಸ್ವಲ್ಪ ಗಮನ ಕೊಡಿ. ಇದು ಆರೋಗ್ಯದಲ್ಲಿ ಏರು ಪೇರು ಉಂಟುಮಾಡಬಹುದು.
Type 2 Diabetes :ವಾಕಿಂಗ್ ಮಾಡುವುದರಿಂದ ದೊಡ್ಡ ರಿಲೀಫ್
ಸಲಹೆ: ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕು
ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕು ಎಂಬುದನ್ನು ಹೆಚ್ಚಿನ ಜನರು ಪಾಲಿಸಿಕೊಂಡು ಬಂದಿರುತ್ತೀರಿ. ಆದರೆ ವ್ಯಾಯಾಮ ಮಾಡುವ 30ರಿಂದ 40 ನಿಮಿಷಗಳ ಮುಂಚಿತವಾಗಿ ಹಣ್ಣುಗಳನ್ನು (Fruits) ಸೇವಿಸಿರುವುದು ಅಥವಾ ಜ್ಯೂಸ್ ಕುಡಿಯುವುದು ಉತ್ತಮ. ಇಲ್ಲವಾದರೆ ಹೊಟ್ಟೆಯಲ್ಲಿ ಏನೂ ಇಲ್ಲದಿರುವ ಕಾರಣದಿಂದಾಗಿ ಬೇಗ ಸುಸ್ತಾಗಬಹುದು.
ಸಲಹೆ: ಹೆಚ್ಚು ಗಂಟೆಗಳ ಕಾಲ ವ್ಯಾಯಾಮ ಮಾಡಿದಷ್ಟು ಹೆಚ್ಚು ಫಲಿತಾಂಶ (Result)ಸಿಗುತ್ತದೆ.
ನೀವು ಎಷ್ಟು ಸಮಯವನ್ನು ಜಿಮ್‌ನಲ್ಲಿ ಅಥವಾ ವರ್ಕೌಟ್‌ನಲ್ಲಿ ಕಳೆಯುತ್ತೀರಾ ಅಷ್ಟು ಫಿಟ್ ಆಗಿರುತ್ತೀರ ಎಂದು ಜನ ಹೇಳುತ್ತಾರೆ ಆದರೆ ಫಿಟ್ನೆಸ್ ಸ್ಪೆಷಲಿಸ್ಟ್ ಹೇಳುವ ಪ್ರಕಾರ, ನೀವು ವರ್ಕೌಟ್ ಮಾಡಿ ಮುಗಿಸಿ ಸುಮ್ಮನೆ ಕುಳಿತಿದ್ದಾಗ ನಿಜವಾಗಿಯೂ ನಿಮ್ಮ ಕ್ಯಾಲೋರೀಸ್ ಬರ್ನ್ ಆಗುತ್ತದೆ. ಈಗ ಯೋಚಿಸಿ ನಿಮ್ಮ ಹೆಚ್ಚಿನ ಸಮಯ ಜಿಮ್‌ನಲ್ಲಿ ಕಳೆದರೆ ನಿಮ್ಮ ದೇಹಕ್ಕೆ ಕೊಬ್ಬು ಕರಗಿಸಲು ಕಡಿಮೆ ಸಮಯ ನೀಡುತ್ತೀರ ಎಂದರ್ಥ.