ಬೊಜ್ಜು ಹೆಚ್ಚಾಗ್ತಿದೆ ಅಂದಾಗ ಎಚ್ಚರಗೊಳ್ಳುವ ನಾವು ತರಾತುರಿಯಲ್ಲಿ ಏನೇನೋ ಸಾಹಸ ಮಾಡ್ತೇವೆ. ಆದ್ರೆ ತೂಕ ಮಾತ್ರ ಇಳಿಯೋದೇ ಇಲ್ಲ. ತೂಕ ಇಳಿಸೋದು ಹೇಗೆ ಅಂತಾ ಪ್ರಶ್ನೆ ಮಾಡ್ತೇವೆಯೇ ಹೊರತು, ತೂಕ ಇಳಿಸೋವಾಗ ಏನು ಮಾಡಬಾರದು ಅಂತಾ ಕೇಳೋದಿಲ್ಲ.
ತೂಕ ಇಳಿಸೋದು ಹೇಗೆ ಎಂಬುದು ಒಂದು ಸವಾಲಿನ ಹಾಗೂ ತೂಕದ ಪ್ರಶ್ನೆ. ಯಾಕೆಂದ್ರೆ ಅದಕ್ಕೆ ಒಬ್ಬೊಬ್ಬರಿಂದ ಒಂದೊಂದು ಉತ್ತರ ಬರುತ್ತೆ. ನಿತ್ಯ ಸಾಕಷ್ಟು ವ್ಯಾಯಾಮ ಮಾಡ್ಬೇಕು ಅಂತಾ ಒಬ್ಬರು ಹೇಳಿದ್ರೆ ಮತ್ತೊಬ್ಬರು ಡಯಟ್ ಮಾಡಿ ಎನ್ನುತ್ತಾರೆ. ಇನ್ನೊಬ್ಬರು ಯೋಗದಿಂದ ತೂಕ ಇಳಿಕೆ ಸಾಧ್ಯವೆಂದ್ರೆ ಮತ್ತ್ಯಾರೋ ಊಟ ಬಿಡಿ ಎನ್ನುತ್ತಾರೆ. ಇವರು ಹೇಳಿದ್ದೆಲ್ಲ ಭಕ್ತಿಯಿಂದ ಮಾಡಿದ್ರೂ ಕೆಲವರ ತೂಕ ಮಾತ್ರ ಸ್ವಲ್ಪವೂ ಇಳಿಯೋದಿಲ್ಲ. ನಾವು ತೂಕ ಇಳಿಸಲು ಏನು ಮಾಡ್ಬೇಕು ಎಂಬುದರ ಜೊತೆ ಏನು ಮಾಡ್ಬಾರದು ಎಂಬುದನ್ನು ಕೂಡ ತಿಳಿದಿರಬೇಕು. ನಾವಿಂದು ತೂಕ ಇಳಿಕೆ ಸಮಯದಲ್ಲಿ ನಾವು ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಅಂತಾ ನಿಮಗೆ ಹೇಳ್ತೇವೆ.
ತೂಕ (Weight) ಇಳಿಕೆ ಸಮಯದಲ್ಲಿ ಹೀಗೆ ಮಾಡ್ಬೇಡಿ :
ಪದೇ ಪದೇ ತೂಕ ತಪಾಸಣೆ : ತೂಕ ಇಳಿಬೇಕು ಎನ್ನುವ ಗುಂಗಿನಲ್ಲಿರುವ ಜನರು ಪ್ರತಿ ದಿನ ಮೂರ್ನಾಲ್ಕು ಬಾರಿ ತೂಕ ನೋಡ್ತಾರೆ. ತೂಕ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದಾಗ ಟೆನ್ಷನ್ ಗೆ ಒಳಗಾಗ್ತಾರೆ. ಇದ್ರಿಂದ ಅವರ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ನೀವೂ ತೂಕ ಇಳಿಸುವ ನಿರ್ಧಾರ ಮಾಡಿದ್ರೆ ದಿನಕ್ಕೊಮ್ಮೆ ತೂಕ ಚೆಕ್ ಮಾಡ್ಬೇಡಿ. 15 ದಿನಕ್ಕೊಮ್ಮೆ ಅಥವಾ ಒಂದು ತಿಂಗಳಿಗೊಮ್ಮೆ ನಿಮ್ಮ ತೂಕ ನೋಡಿ.
SUMMER HEALTH TIPS: ಬೇಸಿಗೆಯಲ್ಲಿ ಯಾವ ಹಣ್ಣು-ತರಕಾರಿ ತಿನ್ನೋದು ಒಳ್ಳೇದು?
ತಿಂದ ತಕ್ಷಣ ಬೆಡ್ (Bed) ಗೆ ಹೋಗ್ಬೇಡಿ : ಇದು ಬೇಸಿಗೆ ಸಮಯ. ಮಾರುಕಟ್ಟೆಯಲ್ಲಿ ಮಾವಿನ ಅಬ್ಬರ ಬೇರೆ ಶುರುವಾಗಿದೆ. ಜನರು ಆಹಾರ (Food) ಸೇವಿಸಿ, ಮಾವಿನ ಹಣ್ಣು ತಿಂದ್ರೆ ಮುಗೀತು ಕಥೆ, ಕೂತಲ್ಲಿಯೇ ತೂಕಡಿಗೆ ಶುರುವಾಗುತ್ತದೆ. ಊಟವಾದ್ಮೇಲೆ ಬಿಸಿ ಹೆಚ್ಚಿರುವ ಕಾರಣ ಕಣ್ಣು ಮುಚ್ಚಲು ಶುರುವಾಗುತ್ತದೆ. ಅನೇಕರು ಊಟವಾದ ತಕ್ಷಣ ನಿದ್ರೆ ಮಾಡ್ತಾರೆ. ಹಗಲಿರಲಿ ಇಲ್ಲ ರಾತ್ರಿಯಿರಲಿ ಊಟವಾದ ಮೇಲೆ ವಿಶ್ರಾಂತಿ ಮಾಡಿ, ನಿದ್ರೆಯನ್ನಲ್ಲ. ಸಾಧ್ಯವಾದಷ್ಟು ಮಲಗುವ 2 ಗಂಟೆ ಮೊದಲು ಆಹಾರ ಸೇವನೆ ಮಾಡಿ.
ಕಡಿಮೆ ಆಹಾರ ಸೇವನೆ : ತೂಕ ಇಳಿಬೇಕು ಅಂತಾ ನೀವು ಆಹಾರ ಕಡಿಮೆ ತಿಂದ್ರೆ ಕೊಬ್ಬು ಕರಗೋದಿಲ್ಲ. ಕೊಬ್ಬು ಹೆಚ್ಚಿರುವ ಆಹಾರ ಸೇವನೆ ಬಿಡಬೇಕೇ ಹೊರತು, ಆಹಾರ ಬಿಡಬೇಡಿ. ಕೆಲವೊಮ್ಮೆ ಹಸಿವಿನಿಂದಲೂ ತೂಕ ಹೆಚ್ಚಾಗುತ್ತದೆ.
ಡಯಟ್ ಫುಡ್ ಖರೀದಿ ಸಹವಾಸ ಬೇಡ : ತೂಕ ಇಳಿಸಬೇಕು ಎಂದ ತಕ್ಷಣ ಜನರು ಡಯಟ್ ಫುಡ್ ಖರೀದಿಗೆ ಮುಂದಾಗ್ತಾರೆ. ಈಗಿನ ದಿನಗಳಲ್ಲಿ ಜನರನ್ನು ಆಕರ್ಷಿಸಲು ಎಲ್ಲ ಆಹಾರಕ್ಕೂ ಡಯಟ್ ಫುಡ್ ಎಂಬ ಹಣೆಪಟ್ಟಿಕಟ್ಟಿ ಮಾರಾಟ ಮಾಡಲಾಗ್ತಿದೆ. ನೀವು ಈ ಡಯಟ್ ಫುಡ್ ಸೇವನೆ ಮಾಡಿಯೇ ತೂಕ ಇಳಿಸಿಕೊಳ್ಳಬೇಕಾಗಿಲ್ಲ. ಮನೆಯಲ್ಲಿರುವ ಆಹಾರದಿಂದಲೇ ನಿಮ್ಮ ತೂಕ ಕಡಿಮೆ ಮಾಡಬಹುದು.
Mango Benefit : ಮಧುಮೇಹಿಗಳಿಗೆ ಮಾವು ನಿಷಿದ್ಧ, ಆದ್ರೆ ಹೀಗ್ ತಿನ್ನಬಹುದು!
ಆಹಾರದ ಪ್ಲೇಟ್ ಬಗ್ಗೆ ಗಮನವಿರಲಿ : ನಾವು ಏನು ತಿನ್ನುತ್ತಿದ್ದೇವೆ ಎಂಬುದನ್ನು ನೀವು ಗಮನಿಸಬೇಕು. ನಿಮ್ಮ ಆಹಾರದ ಪ್ಲೇಟ್ ನಲ್ಲಿ ಯಾವುದು ಎಷ್ಟಿರಬೇಕೆಂಬುದು ಗೊತ್ತಿರಲಿ. ಶೇಕಡಾ 50ರಷ್ಟು ತರಕಾರಿ ಇರಲಿ. ಶೇಕಡಾ 25ರಷ್ಟು ಕಾರ್ಬೋಹೈಡ್ರೇಟ್ಗಳು ಮತ್ತು ಶೇಕಡಾ 25ರಷ್ಟು ಪ್ರೋಟೀನ್ ಇರಲಿ.
ಅತಿಯಾದ್ರೆ ವ್ಯಾಯಾಮವೂ ವಿಷವೇ : ತೂಕ ಇಳಿಸ್ಬೇಕು ಎನ್ನುವ ಕಾರಣಕ್ಕೆ ವ್ಯಾಯಾಮವನ್ನು ಅತಿಯಾಗಿ ಮಾಡಬೇಡಿ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀವು ವ್ಯಾಯಾಮ ಮಾಡಬೇಕು. ವ್ಯಾಯಾಮ ಹೆಚ್ಚಾದ್ರೆ ಸಮಸ್ಯೆ ಶುರುವಾಗುತ್ತದೆ.
ಆಗಾಗ ಆಹಾರ ಸೇವನೆ ಒಳ್ಳೆಯದಲ್ಲ : ಕೆಲವರು ಡಯಟ್ ಹೆಸರಿನಲ್ಲಿ ಕಡಿಮೆ ಆಹಾರ ತಿನ್ನುತ್ತಾರೆ. ಆದ್ರೆ ಆಗಾಗ ಆಹಾರ ಸೇವನೆ ಮಾಡ್ತಾರೆ. ಎರಡು ಗಂಟೆಗೊಮ್ಮೆ ಅಲರಾಂ ಇಟ್ಟು ಆಹಾರ ತಿನ್ನುವವರಿದ್ದಾರೆ. ಆಹಾರವನ್ನು ಹಸಿವಾದಾಗ ತಿಂದ್ರೆ ಒಳ್ಳೆಯದು.