ನಮ್ಮ ದೇಹದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಅದಕ್ಕೆ ಚಿಕಿತ್ಸೆ ನೀಡುವ ಬದಲು ನಿರ್ಲಕ್ಷ್ಯ ಮಾಡೋದೇ ಹೆಚ್ಚು. ಈಗಿನ ದಿನಗಳಲ್ಲಿ ಅನೇಕರಿಗೆ ಕತ್ತು ನೋವು ಕಾಣಿಸಿಕೊಳ್ತಿದೆ. ನೋವಿನ ಮಾತ್ರೆ ನುಂಗಿ ಮತ್ತೆ ಕೆಲಸದಲ್ಲಿ ಮಗ್ನರಾಗುವ ಜನರು ಅದಕ್ಕೆ ಕಾರಣ, ಪರಿಹಾರ ತಿಳಿದುಕೊಳ್ಬೇಕು.
ಈಗ ಜನರು ಸದಾ ಬ್ಯುಸಿ. ಧಾವಂತದ ಅವರ ಬದುಕಿನಲ್ಲಿ ಅವರಿಗೇ ಸಮಯ ನೀಡಲು ಸಾಧ್ಯವಾಗ್ತಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿರಲಿ ದೊಡ್ಡ ಆರೋಗ್ಯ ಸಮಸ್ಯೆಯನ್ನು ಕೂಡ ನಿರ್ಲಕ್ಷ್ಯ ಮಾಡ್ತಾರೆ. ಇಂದಲ್ಲ ನಾಳೆ ಸರಿ ಹೋಗುತ್ತೆ ಎನ್ನುವ ಪೊಳ್ಳು ಭರವಸೆಯನ್ನು ತಮಗೆ ತಾವೇ ನೀಡ್ತಾ ಕೆಲಸ ಮುಂದುವರೆಸುತ್ತಾರೆ. ಆದ್ರೆ ಈ ನಿರ್ಲಕ್ಷ್ಯ ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುತ್ತೆ ಎಂಬ ಕಲ್ಪನೆ ಅವರಿಗಿರೋದಿಲ್ಲ.
ದಿನದಲ್ಲಿ 8 -10 ಗಂಟೆ ಕಂಪ್ಯೂಟರ್ (Computer) ಹಿಡಿದು ಕುಳಿತುಕೊಳ್ಳುವ ಜನರಿಗೆ, ಮೊಬೈಲ್ ನಲ್ಲಿ ಸದಾ ಬ್ಯುಸಿಯಾಗಿರುವ ಜನರಿಗೆ ಕತ್ತು ನೋವು ಬರೋದು ಮಾಮೂಲಿ. ವಿಪರೀತವಾಗಿ ನೋವು ಕಾಡಿದ್ರೂ ಕೆಲವರು ಆಸ್ಪತ್ರೆಗೆ ಹೋಗುವುದಿಲ್ಲ. ಆದ್ರೆ ಎಲ್ಲ ಕತ್ತು ನೋವು, ಕಂಪ್ಯೂಟರ್ ವೀಕ್ಷಣೆಯಿಂದ ಬಂದಿರೋದಿಲ್ಲ. ಅದಕ್ಕೆ ಸರ್ವಿಕಲ್ ಸ್ಪಾಂಡಿಲೋಸಿಸ್ ಕೂಡ ಕಾರಣವಾಗಿರಬಹುದು. ನಾವಿಂದು ಸರ್ವಿಕಲ್ ಸ್ಪಾಂಡಿಲೋಸಿಸ್ (Cervical Spondylosis) ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
undefined
Health Tips : ಮಾತೆತ್ತಿದ್ದರೆ ಕೋಪ ಬರುತ್ತಾ? ಆರೋಗ್ಯದಲ್ಲೇನೂ ಆಗಿರ್ಬಹುದು!
ಸರ್ವಿಕಲ್ ಸ್ಪಾಂಡಿಲೋಸಿಸ್ ಅಂದ್ರೇನು? : ಸರ್ವಿಕಲ್ ಸ್ಪಾಂಡಿಲೋಸಿಸ್ ನಮ್ಮ ಕತ್ತಿನ ಹಿಂದೆ ಬೆನ್ನುಮೂಳೆಯಲ್ಲಿ ಕಂಡುಬರುತ್ತದೆ. ಇದೊಂದು ಗಂಭೀರ ಕಾಯಿಲೆ. ಇದರಲ್ಲಿ ಬೆನ್ನುಹುರಿಯಲ್ಲಿ ಉರಿಯೂತ ಉಂಟಾಗುತ್ತದೆ. ಈ ರೋಗವು ಮುಖ್ಯವಾಗಿ ಕುತ್ತಿಗೆಯಲ್ಲಿರುವ ಗರ್ಭಕಂಠದ ಬೆನ್ನುಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಗರ್ಭಕಂಠದ ಅಸ್ಥಿಸಂಧಿವಾತ ಮತ್ತು ಕತ್ತಿನ ಸಂಧಿವಾತ ಎಂದೂ ಕರೆಯಲಾಗುತ್ತದೆ. ಕುತ್ತಿಗೆಯ ಮೂಳೆ, ಬೆನ್ನುಹುರಿ ಮತ್ತು ಡಿಸ್ಕ್ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ. ಸರ್ವಿಕಲ್ ಸ್ಪಾಂಡಿಲೋಸಿಸ್ ನಿಂದಾಗಿ ನಿಮ್ಮ ಡಿಸ್ಕ್ ನಿರ್ಜಲೀಕರಣಗೊಳ್ಳುತ್ತದೆ. ಕುಗ್ಗಲು ಪ್ರಾರಂಭಿಸುತ್ತದೆ.
ಯಾರಿಗೆ ಹೆಚ್ಚು ಕಾಡುತ್ತೆ ಸರ್ವಿಕಲ್ ಸ್ಪಾಂಡಿಲೋಸಿಸ್ ? : ವಯಸ್ಕರಿಗೆ ಬರೋದಿಲ್ಲ ಎಂದಲ್ಲ. ಸಾಮಾನ್ಯವಾಗಿ ಈ ಸಮಸ್ಯೆ 60 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 85ರಷ್ಟು ಜನರಲ್ಲಿ ಕಂಡುಬರುತ್ತದೆ. ನೋವು ಕಾಣಿಸಿಕೊಳ್ತಿದ್ದಂತೆ ಕೆಲವರು ನೋವಿನ ಮಾತ್ರೆ ಬಳಕೆ ಮಾಡ್ತಾರೆ. ಮತ್ತೆ ಕೆಲವರು ಮನೆ ಮದ್ದು ಅಥವಾ ಮಸಾಜ್ ಇತ್ಯಾದಿಗಳ ಮೊರೆ ಹೋಗ್ತಾರೆ. ಆದ್ರೆ ಸರ್ವಿಕಲ್ ಸ್ಪಾಂಡಿಲೋಸಿಸ್ ಅಷ್ಟು ಸುಲಭವಾಗಿ ಹೋಗುವ ಸಮಸ್ಯೆಯಲ್ಲ.
ಈ ಯೋಗ ಮಾಡಿದ್ರೆ ವಯಸ್ಸಾದ್ರೂ ನೀವು ಯಂಗ್ ಆಗಿ ಕಾಣ್ತೀರಿ
ಸರ್ವಿಕಲ್ ಸ್ಪಾಂಡಿಲೋಸಿಸ್ ಗೆ ಕಾರಣವೇನು? : ದಿನವಿಡಿ ಕತ್ತು ಬಗ್ಗಿಸಿ ಕೆಲಸ ಮಾಡುವುದ್ರಿಂದ ಸರ್ವಿಕಲ್ ಸ್ಪಾಂಡಿಲೋಸಿಸ್ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಬೊಜ್ಜು ಹೆಚ್ಚಿರುವ ಜನರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅತಿ ಭಾರದ ವಸ್ತುಗಳನ್ನು ಎತ್ತುವವರು, ಬೆನ್ನು ಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾದವರು, ಕುತ್ತಿಗೆ ಮೇಲೆ ಯಾವುದೇ ಗಾಯವಾಗಿದ್ದರೆ ಅಂಥವರಿಗೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಸರ್ವಿಕಲ್ ಸ್ಪಾಂಡಿಲೋಸಿಸ್ ಲಕ್ಷಣ : ಸರ್ವಿಕಲ್ ಸ್ಪಾಂಡಿಲೋಸಿಸ್ ಕಾಣಿಸಿಕೊಂಡವರಿಗೆ ಕುತ್ತಿಗೆಯಲ್ಲಿ ನೋವು ಮತ್ತು ಒತ್ತಡವಿರುತ್ತದೆ. ಭುಜದಿಂದ ನಿಮ್ಮ ಬೆರಳುಗಳವರೆಗೆ ನೀವು ಈ ನೋವನ್ನು ಕಾಣಬಹುದು. ಮರಗಟ್ಟುವಿಕೆ ಅಥವಾ ಬೆರಳುಗಳಲ್ಲಿ ಚುಚ್ಚುದಂತ ನೋವಾಗುತ್ತದೆ. ನಿರಂತರ ತಲೆನೋವ, ತಲೆ ಭಾರವಾದಂತೆ ಭಾಸವಾಗುತ್ತದೆ. ಸೀನಿದಾಗ, ಕೆಮ್ಮಿದಾಗ, ನಕ್ಕಾಗಲೂ ನಿಮಗೆ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ರಾತ್ರಿಯಲ್ಲಿ ಈ ನೋವು ಕಾಡೋದು ಹೆಚ್ಚು.
ನಿಮಗೆ ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
ಸರ್ವಿಕಲ್ ಸ್ಪಾಂಡಿಲೋಸಿಸ್ ಮನೆ ಮದ್ದು : ನೀವು ಮನೆಯಲ್ಲಿಯೇ ಕೆಲ ಮದ್ದುಗಳನ್ನು ಮಾಡಿ ಈ ನೋವನ್ನು ಗುಣಪಡಿಸಿಕೊಳ್ಳಬಹುದು. ರಾತ್ರಿ ನೀವು ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ ಕುಡಿಯುತ್ತ ಬಂದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.
ಪ್ರತಿ ದಿನ 2 -3 ಬೆಳ್ಳುಳ್ಳಿ ಸೇವನೆ ಅಥವಾ ಶುಂಠಿ ಸೇವನೆ ಮಾಡಿದರೂ ನೀವು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಎಳ್ಳಿನ ಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ 10 ನಿಮಿಷ ಬಿಡಬೇಕು. ದಿನಕ್ಕೆ ಮೂರ್ನಾಲ್ಕು ಸಲ ಹೀಗೆ ಮಾಡಿದ್ರೆ ಬೇಗ ನೋವು ಗುಣವಾಗುತ್ತದೆ.
ಇದಲ್ಲದೆ ನೀವು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ತೂಕವನ್ನು ನಿಯಂತ್ರಿಸುವುದು, ವಿಶ್ರಾಂತಿ, ನಿದ್ರೆಗೆ ಆದ್ಯತೆ ನೀಡುವುದು, ಉತ್ತಮ ಆಹಾರ ಸೇವನೆ ಮಾಡುವುದು ಹಾಗೂ ಕುಳಿತುಕೊಳ್ಳುವ ಭಂಗಿ ಬದಲಾವಣೆಯಿಂದ ನೀವು ಸರ್ವಿಕಲ್ ಸ್ಪಾಂಡಿಲೋಸಿಸ್ ನಿಂದ ಬಚಾವ್ ಆಗಬಹುದು.