Health Tips : ಮಾತೆತ್ತಿದ್ದರೆ ಕೋಪ ಬರುತ್ತಾ? ಆರೋಗ್ಯದಲ್ಲೇನೂ ಆಗಿರ್ಬಹುದು!

By Suvarna News  |  First Published Jun 13, 2023, 7:00 AM IST

ಮೊದಲಿದ್ದಂತೆ ನಮ್ಮ ಸ್ವಭಾವ ಇಲ್ಲ ಎಂಬುದು ಯಾರಿಗೆ ತಿಳಿದಿಲ್ಲವೆಂದ್ರೂ ನಮ್ಮ ಅರಿವಿಗೆ ಬಂದಿರುತ್ತದೆ. ಕೋಪ, ನೆಮ್ಮದಿ ಇಲ್ಲದ ಜೀವನ, ಕಿರಿಕಿರಿ, ಒತ್ತಡ ಇದೆಲ್ಲವನ್ನು ನಿರ್ಲಕ್ಷ್ಯ ಮಾಡಿದ್ರೆ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತೆ. 
 


ಯಾವುದೇ ಕೆಲಸ ಮಾಡಬೇಕಾದರೂ ನಮ್ಮನ್ನು ನಾವು ಅದರಲ್ಲಿ ತೊಡಗಿಸಿಕೊಳ್ಳುವುದು ಅತೀ ಮುಖ್ಯ. ಹಾಗೆ ನಮ್ಮನ್ನು ನಾವು ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಂದ್ರೆ ನಮ್ಮ ಮೂಡ್ ಚೆನ್ನಾಗಿರಬೇಕು. ಅಂದ್ರೆ ಮಾನಸಿಕವಾಗಿ ನಾವು ಆ ಕೆಲಸಕ್ಕೆ ಸಿದ್ಧರಾದಾಗ ಮಾತ್ರ ಆ ಕೆಲಸವನ್ನು ಶ್ರದ್ಧೆಯಿಂದ ಮಾಡಲು ಸಾಧ್ಯ. ಕೆಲವೊಮ್ಮೆ ನಮ್ಮ ಜೊತೆಗಿರುವವರ ಮೂಡ್ ಹಾಳಾದರೆ ಅಥವಾ ಅವರು ಮತ್ತೆ ಮತ್ತೆ ಕೋಪಗೊಳ್ಳುವ ಸ್ವಭಾವದವರಾಗಿದ್ದರೂ ಕೂಡ ಅದರಿಂದ ನಮ್ಮ ಮೂಡ್ ಔಟ್ ಆಗುವುದುಂಟು.

ನಮ್ಮ ಮೂಡ್ (Mood) ಗೂ ಮಾನಸಿಕ (Mental) ಆರೋಗ್ಯಕ್ಕೂ ಹತ್ತಿರದ ಸಂಬಂಧವಿದೆ. ಮನುಷ್ಯನಿಗೆ ಸಿಟ್ಟು, ದುಃಖ, ಸಂತೋಷ ಎಲ್ಲ ಭಾವನೆಗಳೂ ಇರುವುದು ಸಾಮಾನ್ಯ. ಆದರೆ ಸಣ್ಣ ಪುಟ್ಟ ವಿಷಯಕ್ಕೂ ಮತ್ತೆ ಮತ್ತೆ ಸಿಟ್ಟಿಗೆ ಒಳಗಾಗುವುದು, ಕಿರಿಕಿರಿಗೊಳ್ಳುವುದು ಮುಂತಾದ ಸ್ವಭಾವಗಳು ಮಾನಸಿಕ ಆರೋಗ್ಯ (Health) ದುರ್ಬಲವಾಗಿರುವುದನ್ನು ಸೂಚಿಸುತ್ತದೆ. ಅಂತಹ ಸ್ವಭಾವವನ್ನು ನಿರ್ಲಕ್ಷ ಮಾಡಬಾರದು ಏಕೆಂದರೆ ಅದು ಡಿಸ್ಟೈಮಿಯಾ ಕೂಡ ಆಗಿರಬಹುದು.

Tap to resize

Latest Videos

Women Health : ಮುಟ್ಟಿನ ಬದಲು 'ನಾನು ಡೌನ್' ಅನ್ನೋದೇಕೆ?

ಡಿಸ್ಟೈಮಿಯಾ ಎಂದರೇನು? :ವೈದ್ಯಕೀಯ ಭಾಷೆಯಲ್ಲಿ ಇದನ್ನು ಪರ್ಸಿಸ್ಟೆನ್ಸ್ ಡಿಪ್ರೆಸಿವ್ ಡಿಸಾರ್ಡರ್ ಎಂದು ಕರೆಯುತ್ತಾರೆ. ಇದು ದೀರ್ಘಕಾಲದ ಖಿನ್ನತೆ ಅಥವಾ ಮೂಡ್ ಡಿಸಾರ್ಡರ್ ಖಾಯಿಲೆಯಾಗಿದೆ. ಪ್ರಾಥಮಿಕ ಹಂತದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಇದು ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಸಮಸ್ಯೆಯಿರುವವರು ನಿರಾಸೆ, ಮೂಡ್ ಸ್ವಿಂಗ್, ಸಿಟ್ಟಿನ ಸ್ವಭಾವವನ್ನು ತೋರುತ್ತಾರೆ. ಈ ತೊಂದರೆಗೆ ಒಳಗಾದವರು ಯಾವ ವಸ್ತುವನ್ನು ಕೂಡ ಬಹಳ ಕಾಲದವರೆಗೆ ಇಷ್ಟಪಡುವುದಿಲ್ಲ ಹಾಗೂ ಯಾವಾಗಲೂ ಒಂಟಿಯಾಗಿರಲು ಬಯಸುತ್ತಾರೆ. ಅವರ ಬಿಹೇವಿಯರ್ ಕೂಡ ಬದಲಾಗುತ್ತಲೇ ಇರುತ್ತೆ.

ಡಿಸ್ಟೈಮಿಯಾ ಲಕ್ಷಣಗಳು : ಯಾವುದೇ ರೋಗವೇ ಆದರೂ ಅದು ಬರುವ ಮೊದಲು ಯಾವುದಾದರೂ ಒಂದು ಲಕ್ಷಣವನ್ನು ತೋರಿಸುತ್ತೆ. ಅದರಲ್ಲೂ ಮಾನಸಿಕ ಖಾಯಿಲೆಗಳು ಬಹಿರಂಗವಾಗಿಯೇ ತಿಳಿಯುತ್ತದೆ. ಡಿಸ್ಟೈಮಿಯಾ ಕೂಡ ಮಾನಸಿಕ ಖಾಯಿಲೆಯಾದ್ದರಿಂದ ಇದನ್ನು ಕೂಡ ಕೆಲವು ಲಕ್ಷಣಗಳಿಂದ ಗುರುತಿಸಬಹುದು. ಮೂಡ್ ಡಿಸ್ಟರ್ಬೆನ್ಸ್, ದಿನವಿಡೀ ದುಃಖಿತರಾಗಿರುವುದು, ಲೋ ಮೂಡ್, ಶಕ್ತಿಯ ಕೊರತೆ, ನಿರಾಸೆ, ಸುಸ್ತು, ಏಕಾಗ್ರತೆಯ ಕೊರತೆ, ಮಾತು ಮಾತಿಗೆ ಕೋಪ, ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು, ನಿರ್ಣಯವನ್ನು ತೆಗೆದುಕೊಳ್ಳಲು ಹಿಂಜರಿಯುವುದು, ಎಲ್ಲದಕ್ಕೂ ತಾನೇ ಕಾರಣ ಎಂದು ತನ್ನನ್ನು ತಾನು ದೂಷಿಸಿಕೊಳ್ಳುವುದು, ಹಸಿವಿನ ಕೊರತೆ ಮುಂತಾದವು ಡಿಸ್ಟೈಮಿಯಾ ಖಾಯಿಲೆಯ ಮುನ್ಸೂಚನೆಯಾಗಿದೆ.

ನಿದ್ರೆಯಲ್ಲಿ ಮಾತನಾಡೋದಕ್ಕೂ ಆಧ್ಯಾತ್ಮಿಕತೆಗೂ ಏನು ಸಂಬಂಧ?

ಡಿಸ್ಟೈಮಿಯಾ ಉಂಟಾಗಲು ಕಾರಣವೇನು? : ಡಿಸ್ಟೈಮಿಯಾ ಖಾಯಿಲೆಗೆ ನಿಖರವಾದ ಕಾರಣ ಏನು ಎಂಬುದು ವೈದ್ಯರಿಗೂ ತಿಳಿದಿಲ್ಲ. ಆದರೆ ನಿತ್ಯ ಜೀವನದಲ್ಲಿ ಕೆಲವು ಘಟನೆಗಳು, ಪರಿಸ್ಥಿತಿಗಳು, ಸುತ್ತಲಿನ ಸಮಾಜದ ಕಾರಣದಿಂದ ಮನುಷ್ಯ ಈ ಸ್ಥಿತಿಗೆ ಬರಬಹುದು. ನೌಕರಿಯಲ್ಲಿ ಅಸಮಾಧಾನ, ಉದ್ವೇಗದ ಜೀವನ, ಬ್ರೇಕ್ ಅಪ್ ಸಮಸ್ಯೆ, ಆರ್ಥಿಕ ಪರಿಸ್ಥಿತಿ, ಸಿರೊಟೋನಿನ್ ಅಥವಾ ಡೋಪಮೈನ್ ಕೊರತೆಯ ಕಾರಣದಿಂದಾಗುವ ಮೆದುಳಿನ ಅಸಮತೋಲನ ಮುಂತಾದವು ಡಿಸ್ಟೈಮಿಯಾ ಗೆ ಕಾರಣವಿರಬಹುದು ಎಂದು ವೈದ್ಯರು ಹೇಳುತ್ತಾರೆ.

ಡಿಸ್ಟೈಮಿಯಾ ಗೆ ಚಿಕಿತ್ಸೆಯೇನು? : ವ್ಯಕ್ತಿಯ ಆರೋಗ್ಯವಂತ ಶರೀರಕ್ಕೆ ಮಾನಸಿಕ ಆರೋಗ್ಯ ಬಹಳ ಮುಖ್ಯ. ಏಕೆಂದರೆ ದೀರ್ಘಕಾಲದ ಖಿನ್ನತೆ, ಕೋಪ, ಕಿರಿಕಿರಿ ಮುಂತಾದವು ಸಮಾಜದಲ್ಲಿ ಪ್ರತ್ಯೇಕತೆಯನ್ನು ಉಂಟುಮಾಡುತ್ತೆ ಹಾಗೂ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತೆ. ಮಾನಸಿಕ ಆರೋಗ್ಯದಲ್ಲಿ ಏರುಪೇರಾದಾಗ ಉಂಟಾಗುವ ಹಾರ್ಮೋನ್ ಇಂಬಾಲೆನ್ಸ್ ನಿಂದ ದೈಹಿಕ ಆರೋಗ್ಯವೂ ಹಾಳಾಗುತ್ತದೆ. ಹಾಗಾಗಿ ದೀರ್ಘಕಾಲದ ಖಿನ್ನತೆಯನ್ನು ಹೊಂದಿರುವವರು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಉತ್ತಮ ಆಹಾರ, ವ್ಯಾಯಾಮ ಹಾಗೂ ಮೆಡಿಟೇಶನ್ ಅಭ್ಯಾಸ ರೂಢಿಸಿಕೊಳ್ಳಬೇಕು. ಸ್ಟ್ರೆಸ್ ಮ್ಯಾನೇಜ್ ಮೆಂಟ್ ಅನ್ನು ಕಲಿಯಬೇಕು ಮತ್ತು ಮದ್ಯಪಾನ, ಧೂಮಪಾನಗಳಿಂದ ದೂರವಿರಬೇಕು. ಇದರ ಹೊರತಾಗಿ ಔಷಧಿ ಮತ್ತು ಮಾನಸಿಕ ಚಿಕಿತ್ಸೆಗಳಿಂದಲೂ ಡಿಸ್ಟೈಮಿಯಾ ಗುಣಪಡಿಸಬಹುದು.

click me!