ಅತಿಯಾಗಿ ಚಿಕನ್ ತಿಂತೀರಾ? ಇದು ವಿಶ್ವದ ಅತ್ಯಂತ ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಆದರೆ, ಪೌಲ್ಟ್ರಿ ಉದ್ಯಮದ ಪಶುವೈದ್ಯರ ಸಂಸ್ಥೆ (ಐವಿಪಿಐ) ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇಂಥ ಯಾವುದೇ ಹೇಳಿಕೆ ನೀಡಿಲ್ಲ ಎಂದಿದೆ.
ನವದೆಹಲಿ (ಜೂ.2): ಚಿಕನ್ ಇಲ್ಲದೆ ನಿಮ್ಮ ದಿನ ಪೂರ್ತಿಯಾಗದೇ ಇಲ್ಲವೇ? ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಚಿಕನ್ ಇರ್ಲೇಬೇಕು ಅನ್ನೋದು ನಿಮ್ಮ ಅಭ್ಯಾಸವಾಗಿದ್ದರೆ, ಖಂಡಿತಾ ಈ ಸುದ್ದಿ ಓದಲೇಬೇಕು ಏಕೆಂದರೆ, ಅತಿಯಾಗಿ ಚಿಕನ್ ತಿನ್ನುವ ಅಭ್ಯಾಸದಿಂದಾಗಿ ಆಸ್ಪತ್ರೆಯಲ್ಲಿ ನೀವು ದಿನ ದೂಡಬೇಕಾದ ಸಮಯ ಬರಬಹುದು. ಹೌದು.. ಅತಿಯಾದ ಚಿಕನ್ ಸೇವೆಯಿಂದಾಗಿ ನೀವು ವಿಶ್ವದ 10ನೇ ಅತ್ಯಂತ ಅಪಾಯಕಾರಿ ಕಾಯಿಲೆ ಬಲಿಪಶುವಾಗಬಹುದು ಈ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆ ನೀಡಿದೆ. ಯಾಕೆಂದರೆ, ಅತಿಯಾದ ಚಿಕನ್ ಸೇವನೆಯಿಂದಾಗಿ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಅಥವಾ ಎಎಂಆರ್ ಎನ್ನುವ ಅಪಾಯಕಾರಿ ಕಾಯಿಲೆಗೆ ತುತ್ತಾಗಬಹುದು. ಇದು ವಿಶ್ವ 10ನೇ ಅತ್ಯಂತ ಅಪಾಯಕಾರಿ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆರೋಗ್ಯ ತಜ್ಞ ಡಾ.ಎಂ.ವಲಿ ಈ ಕುರಿತಾಗಿ ಮಾತನಾಡಿದ್ದು, ಚಿಕನ್ ತಿನ್ನುವ ಮೂಲಕ ಜನರು ಎಎಂಆರ್‌ಗೆ ಅತಿ ವೇಗವಾಗಿ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಈ ಹೇಳಿಕೆಯನ್ನು ಪೌಲ್ಟ್ರಿ ಉದ್ಯಮದ ಪಶುವೈದ್ಯರ ಸಂಸ್ಥೆ (ಐವಿಪಿಐ) ಸಂಪೂರ್ಣವಾಗಿ ನಿರಾಕರಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಎಂಆರ್ ಎಚ್ಚರಿಕೆಯಲ್ಲಿ 'ಚಿಕನ್' ಅನ್ನು ಉಲ್ಲೇಖ ಮಾಡಿಲ್ಲ ಎಂದಿದೆ.
ಪೌಲ್ಟ್ರಿ ಫಾರ್ಮ್‌ನಲ್ಲಿ ಕೋಳಿಗಳಿಗೆ ಆ್ಯಂಟಿಬಯೋಟಿಕ್ ನೀಡಲಾಗುತ್ತಿದೆ: ಚಿಕನ್‌ನಲ್ಲಿ ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳು ತುಂಬಿವೆ ಎಂದು ವೈದ್ಯರು ಹೇಳಿದ್ದಾರೆ. ಹೀಗಿದ್ದಾಗ, ಈ ಪೋಷಕಾಂಶಗಳು ನಿಮ್ಮನ್ನು ಹೇಗೆ ಅನಾರೋಗ್ಯಕ್ಕೆ ಒಳಪಡಿಸಬಹುದು? ಎನ್ನುವ ಪ್ರಶ್ನೆ ಉದ್ಭವವಾಗಬಹುದು. ಆದರೆ, ನೆನಪಿರಲಿ, ಕೋಳಿಯನ್ನು ಆರೋಗ್ಯಕರವಾಗಿ ಮತ್ತು ತಾಜಾವಾಗಿಸಲು ಇತ್ತೀಚಿನ ದಿನಗಳಲ್ಲಿ ಕೋಳಿಗಳಿಗೆ ಪ್ರತಿಜೀವಕಗಳು ಅಥವಾ ಆ್ಯಂಟಿಬಯೋಟಿಕ್ ನೀಡಲಾಗುತ್ತದೆ. ಇದರಿಂದಾಗಿ ಕೋಳಿಯ ದೇಹದಲ್ಲಿ ಬಹಳಷ್ಟು ಆ್ಯಂಟಿಬಯೋಟಿಕ್ ಸಂಗ್ರಹಗೊಳ್ಳುತ್ತವೆ. ಇದು ಕೋಳಿ ತಿನ್ನುವವರ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಕೋಳಿಯನ್ನು ತಿಂದಾಗ ಕೋಳಿಯೊಳಗಿನ ಆ್ಯಂಟಿಬಯೋಟಿಕ್ ತಿನ್ನುವವರ ದೇಹದಲ್ಲಿ ಸಂಗ್ರಹವಾಗುತ್ತದೆ.
ದೇಹದಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧವು ಏರಿಕೆ: ದೇಹದಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ರೀತಿಯ ಕೋಳಿಯನ್ನು ಸೇವಿಸುವುದರಿಂದ, ನಿಮ್ಮ ದೇಹದಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಅದರ ಕೆಟ್ಟ ಪರಿಣಾಮವೆಂದರೆ ನಿಮ್ಮ ದೇಹದ ಮೇಲೆ ಪ್ರತಿಜೀವಕಗಳ ಪರಿಣಾಮವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಚಿಕನ್ ತಿಂದ ನಂತರ ದೇಹಕ್ಕೆ ಬರುವ ಆ್ಯಂಟಿಬಯೋಟಿಕ್‌ಗಳು ಸ್ವಲ್ಪ ಸಮಯದ ನಂತರ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಎಎಂಆರ್ ಆಗಿ ಬದಲಾಗುತ್ತವೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ದೇಹವು ಅನೇಕ ರೀತಿಯ ಸೋಂಕುಗಳಿಗೆ ಬಲಿಯಾಗಬಹುದು ಮತ್ತು ಈ ಸೋಂಕಿನ ಚಿಕಿತ್ಸೆಯು ತುಂಬಾ ಕಷ್ಟಕರ ಮತ್ತು ಅಸಾಧ್ಯವಾಗಿರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಐಪಿಪಿಐ ಹೇಳಿದ್ದೇನು:
ಚಿಕನ್ ಸೇವನೆಯಿಂದ ಎಎಂಆರ್ ಕಾಯಿಲೆ, ಸ್ಪಷ್ಟನೆ ನೀಡಿದ ಪೌಲ್ಟ್ರಿ ಉದ್ಯಮ
ಜೀವನದಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳಿ: ಆ್ಯಂಟಿಬಯೋಟಿಕ್ಸ್ ದೇಹದಲ್ಲಿ ಸಂಗ್ರಹವಾಗುವ ರೀತಿ ಎಎಂಆರ್ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇಂತಹ ಪರಿಸ್ಥಿತಿಯಲ್ಲಿ ಸಸ್ಯಾಹಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಹಸಿರು ತರಕಾರಿಗಳು, ಪನೀರ್, ಹಾಲು ಮತ್ತು ಮೊಸರು ಬಳಸಬೇಕು. ಇದು ಪ್ರೋಟೀನ್‌ನ ಉತ್ತಮ ಮೂಲವೂ ಆಗಿದೆ ಎಂದು ಹೇಳುತ್ತಾರೆ.
ಹೊಟ್ಟೆಯಲ್ಲಿ ಗುಡು ಗುಡು ಅನಿಸ್ತಾ ಇದೆಯಾ? ಏನಿದು ಸಮಸ್ಯೆ?