ನಿದ್ರೆ ಸರಿಯಾಗಿದ್ರೆ ಬಹುತೇಕ ಆರೋಗ್ಯ ಸರಿಯಾಗಿದ್ದಂತೆ. ನಿದ್ರೆ ವ್ಯತ್ಯಯ ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೆ ದಾರಿ. ಇಡೀ ರಾತ್ರಿ ಸಂತೆಯಲ್ಲಿ ಮಲಗಿದ್ರೂ ನಿದ್ರೆ ಬರ್ಬೇಕು ಎನ್ನುವವರಿಗೆ ಇದು ಬೆಸ್ಟ್ ಟ್ರಿಕ್.
ನಿದ್ರೆ ನಮ್ಮ ಆರೋಗ್ಯಕ್ಕೆ ಅತೀ ಅವಶ್ಯಕ. ನಿತ್ಯದ ಕೆಲಸದ ದಣಿವನ್ನು ಇದು ಸಂಪೂರ್ಣವಾಗಿ ನೀಗಿಸುತ್ತದೆ. ಚೆನ್ನಾಗಿ ನಿದ್ದೆ ಮಾಡುವವರ ಆರೋಗ್ಯವೂ ಚೆನ್ನಾಗಿರುತ್ತೆ. ನಿದ್ರೆ ಸರಿಯಾದ್ರೆ ಕೆಲಸದಲ್ಲಿ ಹುಮ್ಮಸ್ಸು ಕಾಣಿಸಿಕೊಳ್ಳುತ್ತೆ. ಆದರೆ ಕೆಲವು ಮಂದಿಗೆ ನಿದ್ರೆಯೇ ದೊಡ್ಡ ಸಮಸ್ಯೆ.
ರಾತ್ರಿ (Night) ಮಲಗಿದಾಕ್ಷಣ ನಿದ್ರೆ ಬರದೇ ಅನೇಕ ಮಂದಿ ಒದ್ದಾಡುತ್ತಾರೆ. ಇನ್ನು ವಯಸ್ಸಾದವರಿಗಂತೂ ಬೇಗ ನಿದ್ರೆ ಹತ್ತುವುದೇ ಇಲ್ಲ. ಕೆಲವರಿಗೆ ರಾತ್ರಿ ಸ್ವಲ್ಪ ಹೊತ್ತು ನಿದ್ದೆ (Sleep) ಬಂದು ಎಚ್ಚರವಾದರೆ ಮುಗೀತು, ಬೆಳಗಾಗುವವರೆಗೂ ಹಾಸಿಗೆಯಲ್ಲಿ ಹೊರಳಾಡ್ತಿರುತ್ತಾರೆ. ನಿದ್ರೆ ಬರದೇ ಇದ್ದಾಗ ಸಾಮಾನ್ಯವಾಗಿ ಎಲ್ಲರೂ ಆಗಾಗ ಮಗ್ಗಲು ಬದಲಿಸುತ್ತಾರೆ. ಇದರಿಂದ ಬೆನ್ನು ನೋವು ಮುಂತಾದ ತೊಂದರೆಗಳು ಆರಂಭವಾಗುತ್ತದೆ. ಕೆಲವು ಮಂದಿಯಂತೂ ನಿದ್ದೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ನಿದ್ರೆ ಮಾತ್ರೆಯನ್ನು ತೆಗೆದುಕೊಳ್ತಾರೆ. ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಮಾತ್ರೆಗಳ ಬದಲು ಕೆಲವು ಸುಲಭ ವಿಧಾನಗಳಿಂದಲೇ ನಾವು ಚೆನ್ನಾಗಿ ನಿದ್ರೆ ಮಾಡಬಹುದು. ನಿದ್ರೆ ಚೆನ್ನಾಗಿ ಬರುವಂತಹ ಅಮೆರಿಕ ಸೇನೆಯ ಕೆಲವು ಸ್ಲೀಪಿಂಗ್ ಹ್ಯಾಕ್ಸ್ ಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.
undefined
ನಿದ್ರೆಯಲ್ಲಿ ಮಾತನಾಡೋದಕ್ಕೂ ಆಧ್ಯಾತ್ಮಿಕತೆಗೂ ಏನು ಸಂಬಂಧ?
ಪುಸ್ತಕದಲ್ಲಿ ಪ್ರಕಟವಾಗಿತ್ತು ಈ ಸ್ಲೀಪಿಂಗ್ ಹ್ಯಾಕ್ (Hack) : ಲಾಯ್ಡ್ ಬಡ್ ವಿಂಟರ್ ಅವರ ಪುಸ್ತಕ “ರಿಲ್ಯಾಕ್ಸ್ ಎಂಡ್ ವಿನ್ : ಚಾಂಪಿಯನ್ಶಿಪ್ ಪರ್ಪಾರ್ಮೆನ್ಸ್” ಎಂಬ ಪುಸ್ತಕದಲ್ಲಿ ನಿದ್ರೆ ಚೆನ್ನಾಗಿ ಬರುವ ಈ ಟ್ರಿಕ್ ಗಳ ಬಗ್ಗೆ ಉಲ್ಲೇಖಿಸಲಾಗಿದೆ. 1981 ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಮೊದಲ ಬಾರಿಗೆ ಸ್ಲೀಪಿಂಗ್ ಹ್ಯಾಕ್ಸ್ ಕುರಿತು ಹೇಳಲಾಗಿತ್ತು. ಒಬ್ಬ ಫಿಟ್ನೆಸ್ ಕೋಚ್ ಆದ ಜಸ್ಟಿನ್ ಅಗಸ್ಟಿನ್ ಕೂಡ ಇಂತಹುದೇ ತಂತ್ರವನ್ನು ಬಳಸಿ ಸ್ಲೀಪಿಂಗ್ ಹ್ಯಾಕ್ಸ್ ಕುರಿತು ಒಂದು ವಿಡಿಯೋ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 7.2 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿತ್ತು. ಜಸ್ಟಿನ್ ಅಗಸ್ಟಿನ್ 1.7 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ.
2 ನಿಮಿಷದಲ್ಲಿ ನಿದ್ದೆ ಮಾಡುವ ಆ ಟ್ರಿಕ್ ಯಾವುದು? : ಚೆನ್ನಾಗಿ ನಿದ್ದೆ ಮಾಡಲು, ಮಲಗಿದ ತಕ್ಷಣ ನಿದ್ದೆ ಬರಲು ಮಲಗುವ ಮುನ್ನ ನಾವು ಅನುಸರಿಸಬೇಕಾದ ಕೆಲವು ವಿಧಾನಗಳು ಇಲ್ಲಿವೆ.
• ಯಾವಾಗಲೂ ಮಲಗುವ ಮುನ್ನ ನಿಮ್ಮ ಶರೀರವನ್ನು ಶಾಂತಗೊಳಿಸಿ ಮತ್ತು ನಿಮ್ಮನ್ನು ನೀವು ರಿಲಾಕ್ಸ್ ಮಾಡಿಕೊಳ್ಳಿ.
• ಮಲಗಿದ ತಕ್ಷಣ ನೀವು ನಿಮ್ಮ ಶರೀರದ ಒಂದೊಂದೇ ಭಾಗವನ್ನು ನಿಧಾನವಾಗಿ ಶಟ್ ಡೌನ್ ಮಾಡುತ್ತಾ ಬನ್ನಿ.
• ನಿಮ್ಮ ಹಣೆಯ ಸ್ನಾಯುಗಳಿಗೆ ವಿಶ್ರಾಂತಿ ನೀಡಿ ಮತ್ತು ಸ್ಲೀಪಿಂಗ್ ಹ್ಯಾಕ್ಸ್ ಅನ್ನು ನಿಧಾನವಾಗಿ ಅಭ್ಯಾಸ ಮಾಡಿ.
• ನಿಮ್ಮ ಉಸಿರಾಟದ ಕಡೆಯೇ ನಿಮ್ಮ ಗಮನವನ್ನು ಕೇಂದ್ರೀಕರಿಸಿ ದೇಹದ ಒಂದೊಂದೇ ಭಾಗಕ್ಕೆ ವಿಶ್ರಾಂತಿ ಕೊಡುತ್ತ ಬನ್ನಿ.
ನೀವು ಸಂಜೆ ನಿದ್ದೆ ಮಾಡುತ್ತೀರಾ?: ಹಾಗಾದ್ರೆ ದರಿದ್ರ ನಿಮ್ಮ ಹೆಗಲು ಏರುವುದು ಪಕ್ಕಾ..!
• ನಿಮ್ಮ ಭುಜಗಳನ್ನು ಸಾಧ್ಯವಾದಷ್ಟು ಕೆಳಗೆ ತೆಗೆದುಕೊಳ್ಳಿ ಹಾಗೂ ಕೈ ಬೆರಳುಗಳನ್ನು ಸಡಿಲಗೊಳಿಸಿ.
• ದೀರ್ಘವಾದ ಉಸಿರನ್ನು ತೆಗೆದುಕೊಂಡು ಎದೆ, ಹೊಟ್ಟೆ ಮತ್ತು ಕಾಲುಗಳನ್ನು ಪೂರ್ತಿಯಾಗಿ ನಿಮಗೆ ಕಂಫರ್ಟೆಬಲ್ ಆಗುವಂತೆ ಇರಿಸಿ. ಈ ಸಮಯದಲ್ಲಿ ನಿಮ್ಮ ಮೆದುಳು ಕೂಡ ಶಾಂತವಾಗಿರುವಂತೆ ನೋಡಿಕೊಳ್ಳಿ.
• ಅಮೆರಿಕದ ಈ ಸ್ಲೀಪಿಂಗ್ ಹ್ಯಾಕ್ಸ್ ಅಭ್ಯಾಸ ಮಾಡುವಾಗ ನೀವು ಸ್ವಚ್ಛವಾದ ನೀರಿನಲ್ಲಿ ಇರುವಂತೆ, ಶಾಂತವಾದ ಸರೋವರದಲ್ಲಿ ಇರುವಂತೆ ಅಥವಾ ಕತ್ತಲೆ ಕೋಣೆಯಲ್ಲಿ ಜೋಕಾಲಿಯ ಮೇಲೆ ಮಲಗಿರುವಂತೆ ನಿಮ್ಮನ್ನು ನೀವು ಊಹಿಸಿಕೊಳ್ಳಿ.
6 ವಾರಗಳ ತನಕ ಪ್ರತಿ ದಿನ ಈ ಸ್ಲೀಪಿಂಗ್ ಹ್ಯಾಕ್ಸ್ ಅನ್ನು ಮಾಡಿದರೆ ಕೇವಲ ಎರಡೇ ನಿಮಿಷದಲ್ಲಿ ನಿದ್ರೆ ಬರುತ್ತದೆ ಎಂದು ಅಗಸ್ಟಿನ್ ಹೇಳುತ್ತಾರೆ.