ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕರ. ಹಾಗಂತ ಎಣ್ಣೆ ಹೊಡಿಯೋರೇನು ಕುಡಿಯೋದು ಬಿಡಲ್ಲ. ಆದೆಲ್ಲ ಸರಿ, ಆದ್ರೆ ಎಣ್ಣೆ ಹೊಟ್ಟೆಗೆ ಬಿದ್ದ ಕೂಡಲೇ ಕಣ್ಣುಗಳ್ಯಾಕೆ ಆ ಪಾಟಿ ಕೆಂಪಗಾಗೋದು?
ಮದ್ಯಪಾನ ಆರೋಗ್ಯಕ್ಕೆ ಹಾನಿಕರ.. ಸಿನಿಮಾ ನೋಡ್ಲಿ, ಸೀರಿಯಲ್ ನೋಡ್ಲಿ.. ಹೀರೋನೋ ವಿಲನ್ನೋ ಸಿಕ್ಕಾಪಟ್ಟೆ ಟೈಟಾಗಿ ಡೈಲಾಗ್ ಹೊಡೀತಿದ್ರೆ ಇಂಥದ್ದೊಂದು ಟ್ಯಾಗ್‌ಲೈನ್ ಕಾಣಿಸುತ್ತಿರುತ್ತೆ. ಎಣ್ಣೆ ಹೊಡೆಯೋರೂ, ಎಣ್ಣೆ ಹೊಡೆಯದೋರು ಎಲ್ಲರೂ ಇದನ್ನು ಕ್ಯಾಶುವಲ್ ಆಗಿ ನೋಡಿ ಸುಮ್ಮನಾಗ್ತಾರೆ. ಅಷ್ಟೇ ಏಕೆ, ಎಣ್ಣೆ ಬಾಟಲಲ್ಲಿ, ಬಾರ್‌ನಲ್ಲಿ ಎಲ್ಲೆಲ್ಲೂ ಎಣ್ಣೆ ಹೊಡೆದರೆ ಅಪಾಯ ಅನ್ನೋ ಸಂದೇಶ ಇದ್ದೇ ಇರುತ್ತೆ. ಹಾಗಂತ ಎಣ್ಣೆ ಹೊಡೆಯೋರ ಸಂಖ್ಯೆ ಏನೂ ಕಡಿಮೆ ಆದಂಗಿಲ್ಲ. ಬದಲಾಗಿ ಎಣ್ಣೆ ರೇಟು ಜಾಸ್ತಿ ಆದರೂ ಶಾಪ ಹಾಕ್ಕೊಂಡಾದ್ರೂ ಹೊಟ್ಟೆಗಿಷ್ಟು ತೀರ್ಥ ಬಿಟ್ಕೊಳದಿದ್ರೆ ಎಷ್ಟೋ ಜನರಿಗೆ ರಾತ್ರಿಯೇ ಆಗಲ್ಲ. ಸಿನಿಮಾದಲ್ಲಂತೂ ಎಣ್ಣೆ ಸಾಂಗ್ ಚಿತ್ರದ ಭಾಗವೇ ಆದಂತಾಗಿದೆ. ಹೀರೋಯಿನ್ ಕೈ ಕೊಟ್ಟಾಗ ಬಾರ್‌ಗೆ ಎಡತಾಕುವ ಹೀರೋ, ಅಲ್ಲೊಬ್ಬ ಕೆಣಕುವ ಸುಂದರಿ, ಬೇಜರಿದ್ರೂ ಒಂದು ಕಿಕ್‌ನಲ್ಲಿ ಅವಳ ಸ್ಟೆಪ್ ಜೊತೆ ಸ್ಟೆಪ್ ಹಾಕೋ ಹೀರೋ..
ಈಗ ಹೇಳ ಹೊರಟಿರೋ ಸಂಗತಿ ಇದಲ್ಲ. ಎಣ್ಣೆ ಹೊಡೆದರೆ ಕಣ್ಯಾಕೆ ಕೆಂಪಗಾಗುತ್ತೆ ಅನ್ನೋದು. ಆಲ್ಕೋಹಾಲ್ ಸೇವನೆ ಮಾಡಿದ ನಂತರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಆಗುತ್ತವೆ. ಆಲ್ಕೋಹಾಲ್ ಕುಡಿಯುವುದು ಅಮಲು ಎಂಬುದು ಎಷ್ಟು ನಿಜವೋ, ಅದು ದೇಹದ ಎಲ್ಲಾ ಭಾಗಗಳ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ ಎಂಬುದು ಕೂಡ ಅಷ್ಟೇ ಸತ್ಯ. ಅದರಲ್ಲೂ ಆಲ್ಕೋಹಾಲ್ ಸೇವಿಸಿದವರನ್ನು ಅವರ ಕಣ್ಣುಗಳನ್ನು ನೋಡಿಯೇ ಗುರುತಿಸಬಹುದು ಈ ಪಾರ್ಟಿ ಟೈಟು ಅಂತ.
ಮದ್ಯ ಸೇವನೆ ಮಾಡದ ವ್ಯಕ್ತಿಯ ಕಣ್ಣು ಕೆಂಪಗಾಗಿದ್ದರೆ ಅದಕ್ಕೆ ಅನಾರೋಗ್ಯ, ಧೂಳಿನ ಕಣಗಳು ಕಣ್ಣು ಸೇರುವುದು, ಗಾಳಿ ಇತ್ಯಾದಿ ಕಾರಣಗಳು ಇರಬಹುದು. ಆದರೆ ಇವ್ಯಾವುದೂ ಇಲ್ಲದೆ ಒಬ್ಬ ವ್ಯಕ್ತಿ ಹೆಚ್ಚು ಮದ್ಯ ಸೇವಿಸುತ್ತಿದ್ದರೆ ಅಂತಹ ವ್ಯಕ್ತಿಯ ಕಣ್ಣುಗಳು ಕೆಂಪಾಗುತ್ತವೆ. ಇದನ್ನು ನೀವು ಗಮನಿಸಿರುತ್ತೀರಿ. ಹಾಗಾದರೆ ಆಲ್ಕೋಹಾಲ್ ಸೇವನೆಯಿಂದ ಕಣ್ಣುಗಳು ಕೆಂಪಾಗಲು ನಿಜವಾದ ಕಾರಣ ಏನು ಗೊತ್ತಾ.
ಅಬ್ಬಬ್ಬಾ! 800 ಗ್ರಾಂ ತೂಕದ ಕಿಡ್ನಿ ಸ್ಟೋನ್ ಹೊರತೆಗೆದ ವೈದ್ಯರು: ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆ
ಆಲ್ಕೋಹಾಲ್ ಸೇವಿಸುವ ವ್ಯಕ್ತಿಯ ರಕ್ತನಾಳಗಳು ಹೆಚ್ಚು ಹಿಗ್ಗುತ್ತವೆ. ಇದರಿಂದಾಗಿ ದೇಹದಲ್ಲಿ ರಕ್ತ ಪೂರೈಕೆಯು ಹೆಚ್ಚಾಗುತ್ತದೆ. ಇದು ಕಣ್ಣಿನ(Eye) ಮೇಲ್ಮೈಯಲ್ಲಿರುವ ಸಣ್ಣ ರಕ್ತನಾಳಗಳನ್ನು ಹಿಗ್ಗಿಸಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ, ಕಣ್ಣಿನ ರಕ್ತನಾಳಗಳು ರಕ್ತ ಕೆಂಪಾಗುತ್ತವೆ. ಆಲ್ಕೋಹಾಲ್(Alcohol) ದೇಹವನ್ನು ಪ್ರವೇಶಿಸಿದ ತಕ್ಷಣ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಆಲ್ಕೋಹಾಲ್ ದೇಹದ ಪ್ರತಿಯೊಂದು ಅಣುಗಳಿಗೆ ಹೋಗುತ್ತದೆ. ಆಲ್ಕೋಹಾಲ್ ಇತರ ಪದಾರ್ಥಗಳಿಗಿಂತ ಹೆಚ್ಚು ವೇಗವಾಗಿ ದೇಹಕ್ಕೆ ಹೋಗುತ್ತದೆ. ಆದರೆ ಯಕೃತ್ತು ಆಲ್ಕೋಹಾಲ್ ಕಣಗಳನ್ನು ಒಡೆಯಲು ಪ್ರಯತ್ನಿಸುತ್ತದೆ. ಯಕೃತ್ತು ಅದಕ್ಕಾಗಿ ಕಿಣ್ವಗಳನ್ನು ಉತ್ಪಾದಿಸುತ್ತದೆ. ಆಲ್ಕೋಹಾಲ್ ಕುಡಿಯುವ ಜನರು ಹೆಚ್ಚಿನ ಕ್ಯಾಲೊರಿಗಳನ್ನು ಪಡೆಯುತ್ತಾರೆ.
ಎಣ್ಣೆ ಹೊಡೆದರೆ ಕಣ್ಣುಗಳು ಕೆಂಪಾಗೋದಕ್ಕೆ ಇದು ಕಾರಣ. ಇದೇನು ಪರ್ಮನೆಂಟಾಗಿ ಉಳಿಯಲ್ಲ. ಎಣ್ಣೆ ಪವರ್ ಇಳಿದ ಕೂಡಲೇ ಕಣ್ಣು ಕೂಡ ನಾರ್ಮಲೈಸ್(Normalise) ಆಗುತ್ತೆ. ಈ ಕಾರಣಕ್ಕೋ ಏನೋ ಎಣ್ಣೆ ಹೊಡೆದಾಗ ಕಣ್ಣು ಕೆಂಪಾಗೋದನ್ನು ಯಾರೂ ಕ್ಯಾರೇ ಮಾಡಲ್ಲ. ಇನ್ನು ಎಣ್ಣೆ ಹೊಡೆಯೋದ್ರಿಂದ ಆಗೋ ಸಮಸ್ಯೆಗಳನ್ನು(Problem) ನೋಡ್ತಾ ಹೋದ್ರೆ ಅದು ಹನುಮಂತನ ಬಾಲದ ಹಾಗೆ ಬೆಳೆಯುತ್ತ ಹೋಗುತ್ತದೆ. ಅದನ್ನು ಪಟ್ಟಿ ಮಾಡಿದ್ರೆ ಪ್ರಯೋಜನವೂ ಇಲ್ಲ. ಏಕಂದರೆ ಎಣ್ಣೆ ಹೊಡಿಯೋರು ಇದನ್ನೋದಿ ಬದಲಾಗೋದು ಅಷ್ಟರಲ್ಲೇ ಇದೆ.
ರಾತ್ರಿಯಿಡೀ ಎದ್ದು, ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯಾ, ಸ್ನೇಹಿತರ ಫಸ್ಟ್ ನೈಟ್ ವಿಶ್ ಬ್ಯಾನರ್ ವೈರಲ್