ಚಳಿಗಾಲದ ಸೋಮಾರಿತನದಿಂದಾಗಿ ಅತ್ಯುತ್ತಮವಾದ ಆಹಾರವನ್ನು ಸವಿಯುವುದಿಲ್ಲ. ಕಾಲಕ್ಕನುಗುಣವಾದ ಆಹಾರ ಸೇವನೆ ಬಹಳ ಮುಖ್ಯ. ಹಾಗಾಗಿ ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ತಪ್ಪಿಸಿ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಾಗುತ್ತದೆ. ನಾಲಿಗೆಗೆ ಬೇಕಾದ್ದು, ಬಿಸಿ ಬಿಸಿ ಪದಾರ್ಥಗಳು, ಮಸಾಲೆ ಪದಾರ್ಥಗಳು, ಬೇಕರಿ ಗಳು ಮುಂತಾದ ಆಹಾರಗಳು ಸೇವಿಸಬೇಕು ಎಂದನಿಸುತ್ತದೆ. ಆದರೆ ಕೆಲ ಆಹಾರಗಳು ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಈ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ತಿನ್ನುವುದು ಅತ್ಯಗತ್ಯ. ಚಳಿಗಾಲದಲ್ಲಿ ಎಲ್ಲಾ ಆಹಾರಗಳು ದೇಹಕ್ಕೆ ಆಗಿಬರುವುದಿಲ್ಲ. ಸಿಕ್ಕ ಸಿಕ್ಕ ಆಹಾರಗಳು, ನಾಲಿಗೆ ರುಚಿ ಹಾಗೂ ಇಷ್ಟದ ಆಹಾರಗಳನ್ನು ಸೇವಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ ಚಳಿಗಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗಿರುತ್ತದೆ. ಹಾಗಾಗಿ ಜೀರ್ಣಶಕ್ತಿ ಹೆಚ್ಚಿಸುವ ಹಾಗೂ ಆರೋಗ್ಯವನ್ನು ಕಾಯ್ದುಕೊಳ್ಳುವ ಆಹಾರ ಸೇವಿಸಬೇಕು. ಅನೇಕರು ಚಳಿಗಾಲದ ಸೋಮಾರಿತನದಿಂದಾಗಿ ಅತ್ಯುತ್ತಮವಾದ ಆಹಾರವನ್ನು ಸವಿಯುವುದಿಲ್ಲ. ಕಾಲಕ್ಕನುಗುಣವಾದ ಆಹಾರ ಸೇವನೆ ಬಹಳ ಮುಖ್ಯ. ಹಾಗಾಗಿ ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ತಪ್ಪಿಸಿ. ಈ ಬಗ್ಗೆ ಮಾಹಿತಿ ಇಲ್ಲಿದೆ.
1. ಕಾಫೀ(Coffee)
ಚಳಿಗಾಲದ ಚಳಿಗೆ ಮೊದಲು ನೆನಪಾಗುವುದೇ ಕಾಫಿ ಸೇವಿಸಬೇಕು ಎಂಬುದು. ನಮ್ಮ ದೇಹವನ್ನು ಬೆಚ್ಚಗಾಗಲು ಬಿಸಿ ಕಾಫಿಯ ಅಗತ್ಯವಿರುವ ಋತುವಾಗಿದೆ. ಆದರೆ ಕಾಫಿ ದೇಹ ಬೆಚ್ಚಗಿಡುವುದರ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ ಕಾಫಿಯಲ್ಲಿನ ಕೆಫೀನ್(Caffeine) ಅಂಶ ಸಮೃದ್ಧವಾಗಿದ್ದು, ಇದು ದೇಹವು ನಿರ್ಜಲೀಕರಣಕ್ಕೆ(Dehydrate) ಕಾರಣವಾಗುತ್ತದೆ. ಜೊತೆಗೆ ಆಗಾಗ್ಗೆ ಮೂತ್ರ ವಿಸರ್ಜಿಸುತ್ತದೆ. ಬೇಸಿಗೆ ಕಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ನೀರು ಕುಡಿಯುವುದು ಕಡಿಮೆ. ಹಾಗಾಗಿ ಬಿಸಿ ಕಾಫಿಯ ಬದಲು ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು. ಅಥವಾ ಬಿಸಿ ಚಾಕೊಲೇಟ್‌ನೊಂದಿಗೆ(Hot Chocolate) ಬದಲಾಯಿಸಬೇಕು.
Delicious sweet: ಸಿಹಿಯಾದ ಎಳ್ಳುಂಡೆ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು
2. ಟೊಮೆಟೊ(Tomato)
ಟೊಮೆಟೊ ನೋಡಲು ಕೆಂಪು, ಪರಿಮಳ ಹಾಗೂ ಅದರ ರಸದಿಂದ ಆಕರ್ಷಿಸುತ್ತದೆ. ಬೇಸಿಗೆಯ(Summer) ಕೊನೆಯಲ್ಲಿ ಲಭ್ಯವಿರುವ ಟೊಮೆಟೊಗಳು ವರ್ಷದ ಅತ್ಯುತ್ತಮ ಟೊಮೆಟೊಗಳು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಚಳಿಗಾಲದಲ್ಲಿ ಸಿಗುವ ಟೊಮೆಟೊಗಳು ಕೆಂಪು ಬಣ್ಣದೊಂದಿಗೆ ಸುಂದರವಾಗಿ ಕಂಡರೂ ಅದರ ರುಚಿಯು ಅದರ ತದ್ವಿರುದ್ಧವಾಗಿರುತ್ತದೆ. ಚಳಿಗಾಲದಲ್ಲಿ ಟೊಮೆಟೊಗಳು ರುಚಿ ಇರುವುದಿಲ್ಲ ಹಾಗೂ ನಿರಾಶಾದಾಯಕವಾಗಿರುತ್ತದೆ. ಆದ್ದರಿಂದ ಈ ಚಳಿಗಾಲದಲ್ಲಿ ಟೊಮೆಟೊ ಸೇವನೆ ಒಳ್ಳೆಯದಲ್ಲ.
3. ಸ್ಟ್ರಾಬರಿ (Strawberry)
ಸ್ಟಾçಬರ‍್ರಿಗಳು ಬೇಸಿಗೆಯಲ್ಲಿ ಹೆಚ್ಚು ಕೆಂಪಾಗಿ ಹಾಗೂ ರುಚಿಯೂ ಇರುವ ಒಳ್ಳೆಯ ಹಣ್ಣುಗಳು ಸಿಗುವ ಸೀಜನ್ ಆಗಿದೆ. ಆದರೆ ಚಳಿಗಾಲದಲ್ಲಿ ಸಿಗುವ ಸ್ಟಾçಬರ‍್ರಿಗಳು ತೆಳುವಾಗಿರುತ್ತವೆ. ಜೊತೆಗೆ ಅದರ ಬಣ್ಣವು ಫೈಟೊನ್ಯೂಟ್ರಿಯೆಂಟ್ (Phytonutrient) ವಿಷಯಕ್ಕೆ ನೇರ ಸಂಬAಧವನ್ನು ಹೊಂದಿದೆ. ಬಣ್ಣ ಹೆಚ್ಚಿದ್ದರೆ ಹೆಚ್ಚಿನ ಪೋಷಕಾಂಶದ ಅಂಶ ಹೊಂದಿದೆ ಎಂದರ್ಥ. ಆದರೆ ಚಳಿಗಾಲದಲ್ಲಿ ಸಿಗುವ ಸ್ಟಾçಬರ‍್ರಿಯು ನ್ಯಾಚರಲ್ ಹಣ್ಣಿಗಿಂತ(Natural Fruit) ಬಣ್ಣವಿಲ್ಲದ, ತೆಳುವಾದ, ರುಚಿ ಇಲ್ಲದಂತೆ ಸಿಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸ್ಟಾçಬರ‍್ರಿ ಸೇವನೆ ಉತ್ತಮವಲ್ಲ.
4. ಬೇಕರಿ ಪದಾರ್ಥಗಳೂ (Bakery Food)
ಒಂದು ಕಪ್ ಬಿಸಿ ಚಾಕೊಲೇಟ್ ಮತ್ತು ಕುಕೀಸ್‌ಗಳ(Cookies) ಬ್ಯಾಚ್ ಒಂದು ಅದ್ಭುತ ಸಂಯೋಜನೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಚಳಿಗಾಲದಲ್ಲಿ ಸ್ಯಾಚುರೇಟೆಡ್(Saturate) ಕೊಬ್ಬಿನ ಜೀರ್ಣಕ್ರಿಯೆಯು(Digestion) ನಿಧಾನವಾಗಿರುತ್ತದೆ. ಇದು ನಮ್ಮ ದೇಹದಲ್ಲಿ ಕೊಬ್ಬು(Cholesterol) ಸಂಗ್ರಹಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ದೈಹಿಕ ಚಟುವಟಿಕೆಗಳು ಸಹ ಸಾರ್ವಕಾಲಿಕ ಕಡಿಮೆಯಾಗಿರುತ್ತದೆ. ಈ ಎಲ್ಲಾ ಅಂಶಗಳು ಬೇಯಿಸಿದ ಸರಕುಗಳು ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬನ್ನು ಒಳಗೊಂಡಿರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಬೇಕರಿ ಪದಾರ್ಥಗಳನ್ನು ಸೇವಿಸುವುದು ಉತ್ತಮವಲ್ಲ.
Winter Tips: ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಯೇ? ಈ ರೀತಿ ದೂರ ಮಾಡಿ
5. ಮಸಾಲೆ ಪದಾರ್ಥಗಳು(Spicy)
ಚಳಿಗಾಲದ ಚಳಿ ನೀಗಿಸಿಕೊಳ್ಳಲು ಆಹಾರ ಪದಾರ್ಥಗಳು ಖಾರವಾಗಿ, ಮಸಾಲೆಯಿಂದ ಕೂಡಿರಬೇಕು ಎಂದು ಬಯಸುವುದು ಸಹಜ. ಮುಚ್ಚಿದ ಮೂಗು ಸಹ ತೆರೆದುಕೊಳ್ಳುವಂತೆ, ಮೆಣಸುಗಳನ್ನು ಸೇವಿಸುವುದು ಸೈನಸ್(Sinuses) ಮತ್ತು ಶೀತಕ್ಕೆ(Cold) ಸಹಾಯವಾಗುತ್ತದೆ ಎಂಬುದು ನಿಜ. ಆದರೆ ಈ ರೀತಿಯ ಪದಾರ್ಥಗಳನ್ನು ಸೇವಿಸುವುದು ಹೊಟ್ಟೆಗೆ ಒಳ್ಳೆಯದಲ್ಲ. ಸುಲಭವಾಗಿ ಜೀರ್ಣವಾಗುವ ಮತ್ತು ಹೆಚ್ಚು ಮಸಾಲೆಯುಕ್ತವಾಗಿರದ ಆಹಾರ ಸೇವಿಸುವುದು ಒಳ್ಳೆಯದು. ಮೆಣಸಿನಕಾಯಿ ಹಾಗೂ ಮಸಾಲೆ ಪದಾರ್ಥಗಳ ಬದಲಾಗಿ ಕರಿಮೆಣಸು(Black Pepper) ಮತ್ತು ಶುಂಠಿಯನ್ನು(Ginger) ಸೇವಿಸುವುದಕ್ಕೆ ಬದಲಾಯಿಸಿಕೊಳ್ಳಿ.
6. ಪ್ಯಾಕ್ ಮಾಡಿದ ತರಕಾರಿಗಳು
ಇತ್ತೀಚೆಗೆ ಸೂಪರ್ ಮಾರುಕಟ್ಟೆ(Super Market) ಹೆಚ್ಚಾಗಿವೆ. ಇಲ್ಲೆಲ್ಲಾ ತರಕಾರಿಗಳು ಒಂದು ಕವರ್‌ನಲ್ಲಿ ಪ್ಯಾಕ್ ಆಗಿರುವುದನ್ನು ಕಾಣಬಹುದು. ಈ ರೀತಿಯ ತರಕಾರಿಗಳ(Vegetables) ಸೇವನೆ ಚಳಿಗಾಲದಲ್ಲಿ ಒಳ್ಳೆಯದಲ್ಲ. ಅನ್‌ಸೀಜನ್ಡ್ ತರಕಾರಿಗಳೂ ಸಹ ಈ ರೀತಿ ಪ್ಯಾಕ್ ಆಗಿರುತ್ತವೆ. ಮೊದಲೇ ತೊಳೆದ, ಮೊದಲೇ ಕತ್ತರಿಸಿದ ತರಕಾರಿಗಳನ್ನು ಪಡೆಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿಯ ತರಕಾರಿಗಳಲ್ಲಿ ಜೀವಸತ್ವಗಳು ಕಳೆದುಕೊಂಡಿರುತ್ತವೆ. ಅಲ್ಲದೆ ಅವುಗಳಲ್ಲಿನ ವಿಟಮಿನ್, ಖನಿಜಾಂಶಗಳು ತಾಜವಾಗಿ ಹಾಗೂ ನೈಸರ್ಗಿಕವಾಗಿ ದೇಹಕ್ಕೆ ಸಿಗುವುದಿಲ್ಲ. ಹಾಗಾಗಿ ಪ್ಯಾಕ್ ಮಾಡಿದ ಸೊಪ್ಪು, ತರಕಾರಿಗಳನ್ನು ಖರೀದಿಸದೆ ತಾಜಾ ತರಕಾರಿಗಳನ್ನು ಹಾಗೂ ಸೀಜನ್ಡ್ ತರಕಾರಿಗಳನ್ನು(Seasoned Vegetables) ಸೇವಿಸುವುದು ಬಹಳ ಉತ್ತಮವಾಗಿದೆ.