
ನವಜಾತ ಶಿಶುವಿನ ಲಾಲನೆ-ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಗುವಿನ ಆರೋಗ್ಯ, ಆಹಾರ ಎಲ್ಲದರ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಇದಕ್ಕಾಗಿ ಪೋಷಕರು ಹಿರಿಯರು ಹೇಳಿದ್ದು, ವೈದ್ಯರು ಸೂಚಿಸಿದ್ದು ಎಲ್ಲವನ್ನೂ ಅನುಸರಿಸುತ್ತಾರೆ. ಅದರಲ್ಲೊಂದು ಮಗುವಿನ ಕಿವಿ ಮತ್ತು ಹೊಕ್ಕುಳಿಗೆ ಎಣ್ಣೆ ಹಾಕುವ ಅಭ್ಯಾಸ. ಆದ್ರೆ ಹೀಗೆ ಮಾಡುವುದರಿಂದ ಮಕ್ಕಳ ಆರೋಗ್ಯಕ್ಕೆ ಪ್ರಯೋಜನವಾಗುತ್ತಾ ? ಹಾನಿಯಾಗುತ್ತಾ ? ಈ ಬಗ್ಗೆ ಮಕ್ಕಳ ವೈದ್ಯರು ಏನು ಹೇಳುತ್ತಾರೆ?
ಕಿವಿಯಲ್ಲಿ ನೋವು ಅಥವಾ ಗ್ಯಾಸ್ ರಚನೆ ಅಥವಾ ಹೊಟ್ಟೆಯಲ್ಲಿ ನೋವು (Stomach pain) ಉಂಟಾದಾಗ ಕಿವಿ ಅಥವಾ ಹೊಕ್ಕುಳಕ್ಕೆ (Navel) ಎಣ್ಣೆ ಹಾಕುವ ಅಭ್ಯಾಸವಿದೆ. ಯಾರಿಗಾದರೂ ಹೊಟ್ಟೆ ನೋವು ಬಂದಾಗ ಅಥವಾ ಗ್ಯಾಸ್ ಪೆನ್ ಬಂದಾಗ ಹೊಕ್ಕುಳಕ್ಕೆ ಎಣ್ಣೆ ಸುರಿಯುವುದನ್ನು ನೀವು ನೋಡಿರಬೇಕು. ಮೊಡವೆಗಳನ್ನು ತೊಡೆದುಹಾಕಲು ಅಥವಾ ಹೊಳೆಯುವ ಚರ್ಮ (Skin)ವನ್ನು ಪಡೆಯಲು ಅನೇಕ ಪ್ರಯೋಜನಗಳಿಗಾಗಿ ಹೊಕ್ಕುಳಕ್ಕೆ ಎಣ್ಣೆಯನ್ನು ಸೇರಿಸಲಾಗುತ್ತದೆ. ಅದೇ ಸಮಯದಲ್ಲಿ, ಕಿವಿಯಲ್ಲಿ ನೋವು ಉಂಟಾದಾಗ ಸಾಸಿವೆ ಎಣ್ಣೆಯನ್ನು ಕಿವಿಯೊಳಗೆ ಸುರಿಯಲಾಗುತ್ತದೆ.
ವರ್ಷದೊಳಗಿನ ಮಗುವಿಗೆ ಜೇನುತುಪ್ಪ ಕೊಡಬಹುದಾ?
ವರ್ಷಗಳಿಂದ ನಮ್ಮ ಹಿರಿಯರು ಹೀಗೆ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಹೊಕ್ಕುಳ ಮತ್ತು ಕಿವಿಗೆ ಎಣ್ಣೆ ಹಾಕುವುದು ಎಷ್ಟು ಸುರಕ್ಷಿತ (Safe) ಎಂದು ತಿಳಿಯಲು ನಾವು ಎಂದಿಗೂ ಪ್ರಯತ್ನಿಸಲಿಲ್ಲ. ಮಕ್ಕಳು ಅಥವಾ ಶಿಶುಗಳೊಂದಿಗೆ ಇದನ್ನು ಮಾಡುವುದು ಎಷ್ಟು ಸೇಫ್ ? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳ ತಜ್ಞರು ನೀಡಿದ್ದಾರೆ.
ಮಗುವಿನ ಕಿವಿ, ಹೊಕ್ಕುಳಿಗೆ ಎಣ್ಣೆ ಹಾಕಬಹುದಾ ?
ಯಾವುದೇ ಸಂದರ್ಭದಲ್ಲೂ ನವಜಾತ ಶಿಶುವಿನ ಕಿವಿ ಅಥವಾ ಹೊಕ್ಕುಳಲ್ಲಿ ಎಣ್ಣೆಯನ್ನು ಹಾಕಬಾರದು ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ ಇದು ಯಾವುದೇ ರೀತಿಯಲ್ಲಿ ಸುರಕ್ಷಿತವಲ್ಲ. ಇದರಿಂದ ಯಾವುದೆಲ್ಲಾ ರೀತಿಯಲ್ಲಿ ತೊಂದರೆಯಾಗುತ್ತೆ ಅನ್ನೋದನ್ನು ತಿಳಿಯಿರಿ.
ಸೋಂಕು ಸಂಭವಿಸಬಹುದು: ಹೊಕ್ಕುಳ ಮತ್ತು ಕಿವಿ ಎರಡೂ ಬೆಚ್ಚಗಿರುತ್ತದೆ. ಅಲ್ಲಿ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳು ಬೆಳೆಯಬಹುದು ಮತ್ತು ನಿಮ್ಮ ಮಗುವಿಗೆ ಸೋಂಕನ್ನು ಉಂಟುಮಾಡಬಹುದು. ನೀವು ಯಾವುದೇ ಮಸಾಜ್ ಎಣ್ಣೆಯನ್ನು ಬಳಸಿದರೂ, ಅದು ಸೋಂಕು ರಹಿತವಾಗುವುದಿಲ್ಲ ಮತ್ತು ಆದ್ದರಿಂದ ನಿಮ್ಮ ಮಗುವಿನ ಕಿವಿ (Ear) ಅಥವಾ ಹೊಕ್ಕುಳಕ್ಕೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚಿದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ.
Parenting Tips: ಖಾಸಗಿ ಅಂಗ ಸ್ಪರ್ಶಿಸುವ ಮಕ್ಕಳ ಹವ್ಯಾಸ ಹೀಗೆ ಓಡಿಸಿ
ಮಗುವಿನ ಕಿವಿಯನ್ನು ಸ್ವಚ್ಛ ಮಾಡುವುದು ಹೇಗೆ ?
ಇಯರ್‌ವಾಕ್ಸ್ ಅನ್ನು ಮೃದುಗೊಳಿಸಲು ಮತ್ತು ಅದನ್ನು ತೆಗೆದುಹಾಕಲು ತೈಲವು ಸಹಾಯ ಮಾಡುತ್ತದೆ ಎಂದು ಅನೇಕ ಪೋಷಕರು (Parents) ಭಾವಿಸುತ್ತಾರೆ. ಆದರೆ ನವಜಾತ ಶಿಶುಗಳ ಕಿವಿಗಳು ತುಂಬಾ ಚಿಕ್ಕದಾಗಿದ್ದು, ಅವುಗಳನ್ನು ಇಯರ್‌ಬಡ್ ಅಥವಾ ಹತ್ತಿ ಸ್ವ್ಯಾಬ್‌ನಿಂದ ಸ್ವಚ್ಛಗೊಳಿಸಲಾಗುವುದಿಲ್ಲ. ಇದು ಮಕ್ಕಳ ಕಿವಿಯನ್ನು ನೋಯಿಸಬಹುದು. ಹೀಗಾಗಿ ಇದನ್ನೆಲ್ಲಾ ಮಾಡುವುದನ್ನು ತಪ್ಪಿಸಿ.
ವೈದ್ಯರನ್ನು ಯಾವಾಗ ನೋಡಬೇಕು ?
ಮಗುವಿನ ಹೊಕ್ಕುಳಕ್ಕೆ ಸಂಬಂಧಿಸಿದಂತೆ, ಹೊಕ್ಕುಳಬಳ್ಳಿಯ ಸ್ಟಂಪ್ ಬೀಳುವವರೆಗೆ ಅದನ್ನು ಸ್ವಚ್ಛವಾಗಿಸಿ ಮತ್ತು ಒಣಗಿಸಿ. ಸೋಂಕಿನ ಚಿಹ್ನೆಗಳಿಗಾಗಿ ಗಮನವಿರಲಿ. ಸೋಂಕಿನ ಯಾವುದೇ ಲಕ್ಷಣಗಳನ್ನು ನೀವು ಗಮನಿಸಿದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಮಗುವಿನ ಹೊಕ್ಕುಳ ಮತ್ತು ಸುತ್ತಮುತ್ತಲಿನ ಪ್ರದೇಶವು ಊದಿಕೊಂಡಿದ್ದರೆ ಅಥವಾ ಜ್ವರ (Fever) ಕಾಣಿಸಿಕೊಂಡರೆ ಮಕ್ಕಳು ಅಸ್ವಸ್ಥರಾಗುತ್ತಾರೆ. ಹಾಗಿದ್ದಲ್ಲಿ ತಕ್ಷಣ ವೈದ್ಯರೊಂದಿಗೆ ಮಾತನಾಡಿ.
ಶಿಶುವೈದ್ಯರ ಅಭಿಪ್ರಾಯ
ಮಗುವಿನ ಕಿವಿ ಮತ್ತು ಹೊಕ್ಕುಳಲ್ಲಿ ಎಣ್ಣೆ ಹಾಕುವುದರಿಂದ ಮಗುವಿಗೆ ಫಂಗಲ್ ಸೋಂಕು ಉಂಟಾಗುತ್ತದೆ. ಇದನ್ನು ತಪ್ಪಿಸಲು, ಮಗುವಿನ ಹೊಕ್ಕುಳ ಮತ್ತು ಕಿವಿಗೆ ಎಣ್ಣೆಯನ್ನು ಹಾಕುವುದನ್ನು ತಪ್ಪಿಸಿ ಎಂದು ಶಿಶು ವೈದ್ಯರು ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.