ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...

By Suvarna NewsFirst Published Apr 27, 2024, 4:36 PM IST
Highlights

ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿಯಾದ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ವಿಡಿಯೋ ಮೂಲಕ ಮಾಡಿ ತೋರಿಸಿದ್ದಾರೆ ನೋಡಿ... 
 

ವಿಟಮಿನ್​ ಸಿ ಹೇರಳವಾಗಿರುವ ಬೆಟ್ಟದ ನೆಲ್ಲಿಕಾಯಿಯಲ್ಲಿ ಅದ್ಭುತ ಆರೋಗ್ಯಕರ ಅಂಶಗಳು ಇವೆ. ಕೊರೋನಾ ಸಮಯದಲ್ಲಂತೂ ಇದಕ್ಕೆ ಡಿಮ್ಯಾಂಡೋ ಡಿಮಾಂಡು.  ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಧುಮೇಹ ರಕ್ತದ ಒತ್ತಡದಂತಹ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಉಪಯೋಗಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಇದಕ್ಕೆ  ಪೂಜೆಗಳಲ್ಲಿಯೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ವಿಶೇಷವಾಗಿ ತುಳಸಿ ಹಬ್ಬದಂದು ಬೆಟ್ಟದ ನೆಲ್ಲಿಕಾಯಿಂದ ದೀಪ ತಯಾರಿಸಿ ಬೆಳಗಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿಯಲ್ಲಿ, ಖನಿಜಗಳು ಮತ್ತು ವಿಟಮಿನ್ ಸಮೃದ್ಧವಾಗಿದೆ. ಇವು ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ವಿಶೇಷವಾಗಿ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಬೆಟ್ಟದ ನೆಲ್ಲಿಕಾಯಿ ರಸ ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆರೋಗ್ಯ ತಜ್ಞರ ಪ್ರಕಾರ  ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇತ್ಯಾದಿಗಳ ಸಮಸ್ಯೆಗೆ ಅತ್ಯಂತ ಸುಲಭವಾಗಿ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬೇಕು ಎಂದರೆ 2 ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನವೂ ಸೇವನೆ ಮಾಡಬೇಕು. ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕೊಬ್ಬನ್ನು ಕರಗಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಮ್ಲಾ ಜ್ಯೂಸ್‌ನಲ್ಲಿರುವ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳು ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.

ಹೊಟ್ಟೆ ಬೊಜ್ಜು ಕರಗಿಸೋದು ಇಷ್ಟು ಸುಲಭನಾ? ಡಯಟೀಷಿಯನ್​ ಕುಸುಮಾ ಈಸಿ ಟಿಪ್ಸ್​

ಇತ್ತೀಚಿನ ಬಹುತೇಕ ಯುವ ಜನತೆ ಸೇರಿದಂತೆ ವಯಸ್ಸಾದವರು ಸಹ ತಾವು ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗುತ್ತಿಲ್ಲ ಎಂಬ ದೂರನ್ನು ಹೇಳುತ್ತಾರೆ. ಹೊಟ್ಟೆಯಲ್ಲಿ ಆಮ್ಲೀಯತೆ ಸಮಸ್ಯೆ ಕೆಲವರಿಗೆ ಹೆಚ್ಚಾದರೆ ಇನ್ನು ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಬೆಟ್ಟದ ನೆಲ್ಲಿಕಾಯಿಯ ನಿಯಮಿತವಾದ ಸೇವನೆಯಿಂದ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪಾರು ಮಾಡಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಿಂದ ಕಲ್ಮಷಗಳು ಹೊರಹೋಗುತ್ತವೆ. ಇದು ಮೂತ್ರ ವಿಸರ್ಜನೆಯನ್ನು ಉತ್ತೇಜಿಸುವುದರ ಜೊತೆಗೆ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುವ ಮೂಲಕ ದೇಹದಲ್ಲಿರುವ ಹಾನಿಕಾರಕ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದರಿಂದ ಮೂತ್ರನಾಳದ ಸೋಂಕು ಕೂಡಾ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇದೀಗ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್​ ಅವರು, ಬೆಟ್ಟದ ನೆಲ್ಲಿಕಾಯಿಯಿಂದ ಜ್ಯೂಸ್​ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಪ್ರಸಾರ ಆಗ್ತಿರೋ ಸವಿರುಚಿ ಕಾರ್ಯಕ್ರಮದಲ್ಲಿ ಅವರು ಇದನ್ನು ಹೇಳಿದ್ದಾರೆ. ಸರಿಯಾದ ವಿಧಾನ ಹೇಗೆ ಎನ್ನುವುದನ್ನು ಅವರು ತಿಳಿಸಿದ್ದಾರೆ. ನಲ್ಲಿಕಾಯಿಯನ್ನು ಹಾಗೆಯೇ ತಿನ್ನುವುದು ಕಷ್ಟ. ಅಂದರೆ ಒಂದೋ-ಎರಡು ತಿನ್ನಬಹುದು ಅಷ್ಟೇ. ಇದೇ ಕಾರಣಕ್ಕೆ ಜ್ಯೂಸ್​ ಮಾಡಿಕೊಂಡು ಕುಡಿದರೆ ಒಳ್ಳೆಯದು ಎನ್ನುವುದು ಅವರ ಅಭಿಮತ. ವೈದ್ಯೆಯ ಪ್ರಕಾರ, ಐದಾರು ನೆಲ್ಲಿಕಾಯಿ ಪೀಸ್​ ಮಾಡಿ, ಒಂದು-ಎರಡು ಮೆಣಸಿನ ಕಾಯಿ, ಸ್ವಲ್ಪ ಶುಂಠಿ ಹಾಗೂ ಸ್ವಲ್ಪ ಕರಿಬೇವು ಹಾಕಿಕೊಂಡು ಮಿಕ್ಸಿ ಮಾಡಬೇಕು. ನೀರು ಹಾಕಿ ಸೋಸಿಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಸೇವಿಸಿದರೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ, ದೊಡ್ಡವರು ಯಾರು ಬೇಕಾದರೂ ತೆಗೆದುಕೊಳ್ಳಬೇಕು. ಗರ್ಭಿಣಿಯರೂ ಕೂಡ  ಇದನ್ನು ಸೇವಿಸಬಹುದು ಎಂದಿದ್ದಾರೆ. ಡಾ.ಪದ್ಮಿನಿ ಪ್ರಸಾದ್​. 

ದಾವಣಗೆರೆ ಗರಿಗರಿ ಚುರುಮುರಿ ಹೇಗೆ ಮಾಡೋದು? ಸೀತಾರಾಮ ಪ್ರಿಯಾ ಅಮ್ಮ ಮಾಡಿದ್ರು ಟೇಸ್ಟಿ ಟೇಸ್ಟಿ ರೆಸಿಪಿ

click me!