ದೇಹದ ಭಂಗಿ ಸುಧಾರಿಸುವ ಆಸನಗಳು ಇಲ್ಲಿವೆ, ನಿತ್ಯ ಯೋಗ ಮಾಡಿದರೆ ಆರೋಗ್ಯಕ್ಕೆ ಲಾಭ

By Suvarna News  |  First Published Nov 11, 2022, 3:57 PM IST

ಎಲ್ಲಾದರೂ ಹೊರಗೆ ಹೋದಾಗ ಇನ್ನೊಬ್ಬರನ್ನು ನೋಡಿ ನಮ್ಮ ಭಂಗಿಯನ್ನು(Posture) ಬದಲಾಯಿಸಬೇಕು ಎನಿಸುತ್ತದೆ. ಅದು ಕುಳಿತುಕೊಳ್ಳುವುದು, ನಡೆಯುವುದು ಮುಂತಾದ ವಿಚಾರದಲ್ಲಿರಬಹುದು. ಯೋಗದಿಂದ ಎಲ್ಲವೂ ಸಾಧ್ಯ. ದೈಹಿಕ ಭಂಗಿಯನ್ನು(Physical Posture) ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಆರೋಗ್ಯವನ್ನು(Mental Health) ಉತ್ತಮಗೊಳಿಸುವ ಕೆಲ ಆಸನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.


ನಮ್ಮ ದೇಹದ ಅಪಿಯರೆನ್ಸ್ ಕೂಡ ನಮ್ಮಲ್ಲಿ ಉತ್ಸಾಹ ಮೂಡಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೆ. ದೇಹದ ಸರಿಯಾದ ಭಂಗಿಯು ಹಲವು ರೀತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಮಾತನಾಡುವಾಗ ನಿಂತಿರುವ ಅಥವಾ ಕುಳಿತುಕೊಳ್ಳುವ ವಿಧಾನವು ಇತರೆ ವ್ಯಕ್ತಿಯ ಮನಸ್ಸಿನ ಮೇಲೆ ಬಲವಾದ ಪರಿಣಾಮ ಬೀರುತ್ತದೆ.
ಯೋಗದಿಂದ ಆರೋಗ್ಯ ವೃದ್ಧಿ ಎನ್ನುವುದನ್ನು ಕೇಳಿದ್ದೇವೆ. ಯೋಗವು ದೇಹವನ್ನು ಹೊಂದಿಕೊಳ್ಳುವ ಮತ್ತು ಉತ್ತಮ ದೈಹಿಕ ಭಂಗಿಯನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಯೋಗವನ್ನು ನಿಯಮಿತವಾಗಿ ಮಾಡುವುದರಿಂದ ಒತ್ತಡ(Stress) ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ದೇಹದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.

ದೇಹದ ಭಂಗಿಯನ್ನು ಸುಧಾರಿಸಲು ಆಸನ: 
1. ಶಲಭಾಸನ (Shalabhasana)

ಮೊದಲನೆಯದಾಗಿ ನಿಮ್ಮ ಹೊಟ್ಟೆಯ ಮೇಲೆ ಮಲಗಿಕೊಳ್ಳಿ. ಎರಡೂ ಕೈಗಳನ್ನು ತೊಡೆಯ ಕೆಳಗೆ ಇರಿಸಿ. ಉಸಿರನ್ನು ಒಳಗೆಳೆದುಕೊಳ್ಳುವಾಗ ಮೊದಲು ಬಲಗಾಲನ್ನು ಕೆಲವು ಸೆಕೆಂಡುಗಳ ಕಾಲ ಬಗ್ಗಿಸದೆ ನಿಧಾನವಾಗಿ ಮೇಲಕ್ಕೆ ಮೇಲೆತ್ತಿ, ಬಲಗಾಲನ್ನು ಅದೇ ಭಂಗಿಯಲ್ಲಿಟ್ಟುಕೊAಡು, ಎಡಗಾಲನ್ನು ಬಲಗಾಲಿನಂತೆ ಮೇಲಕ್ಕೆ ಎತ್ತಬೇಕು. ಪ್ರತಿ ಸ್ಥಾನದಲ್ಲಿಯೂ ನಿಮ್ಮ ಗಲ್ಲವನ್ನು ನೆಲಕ್ಕೆ ಮುಟ್ಟಿಸಬೇಕು. ಉಸಿರನ್ನು ಬಿಡುತ್ತಾ ಪೂರ್ಣ ಸ್ಥಾನಕ್ಕೆ ಬನ್ನಿ. ಹೀಗೆ ಕನಿಷ್ಟ 10 ಬಾರಿಯಾದರೂ ಪುನರಾವರ್ತಿಸಿ.

ಆಂಟಿಯಾದರೂ ಯಂಗ್ ಆಗಿ ಕಾಣಿಸೋದು ಯಾರಿಗಿಷ್ಟವಿಲ್ಲ ಹೇಳಿ? ಹೀಗ್ ಮಾಡಿ

Tap to resize

Latest Videos

undefined

2. ಮಕರಾಸನ(Makarasana) 
ಇದು ಶವಾಸನದ ತದ್ವಿರುದ್ಧವಾಗಿರುತ್ತದೆ. ಅಂದರೆ ಹೊಟ್ಟೆಯ ಮೇಲೆ ಮಲಗಿ ಮತ್ತು ತಲೆಯನ್ನು ಮಡಚಿದ ಕೈಮೇಲೆ ಇರಿಸುವುದು. ನಿಧಾನವಾಗಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಎರಡೂ ಪಾದಗಳ ಹಿಮ್ಮಡಿಗಳನ್ನು ಸೊಂಟದಿAದ ಸ್ಪರ್ಶಿಸಲು ಪ್ರಯತ್ನಿಸಿ ಉಸಿರನ್ನು ಬಿಡುತ್ತಾ ಹಿಂದಿನ ಸ್ಥಿತಿಗೆ ಬನ್ನಿ.

3. ಧನುರಾಸನ(Dhanurasana)
ಇದು ದೇಹವನ್ನು ಬಿಲ್ಲಿನಂತೆ ಬಗ್ಗಿಸುವುದು. ನಿಮ್ಮ ಹೊಟ್ಟೆಯ ಮೇಲೆ ಮಲಗಿ, ಎರಡೂ ಕಾಲುಗಳ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಸೊಂಟದ ಮೇಲೆ ತಂದು ಎರಡೂ ಕೈಗಳಿಂದ ಎರಡೂ ಕಾಲ್ಬೆರಳುಗಳನ್ನು ಹಿಡಿದುಕೊಳ್ಳಿ. ಉಸಿರಾಡುವಾಗ, ನಿಧಾನವಾಗಿ ಅದನ್ನು ಮೇಲಕ್ಕೆತ್ತಿ ಮತ್ತು ಬಿಲ್ಲು ರೀತಿಯ ಸಂಯೋಜನೆಯನ್ನು ಮಾಡಿ. ಈ ಸಮಯದಲ್ಲಿ, ಕುತ್ತಿಗೆಯನ್ನು ನೇರವಾಗಿ ಇರಿಸಿ ಮತ್ತು ಮುಂಭಾಗದ ಕಡೆಗೆ ನೋಡಿ. ಸಾಮರ್ಥ್ಯಕ್ಕೆ ಅನುಗುಣವಾಗಿ ಉಳಿದು, ನಿಧಾನವಾಗಿ ಉಸಿರನ್ನು ಬಿಡುತ್ತಾ ಹಿಂದಿನ ಸ್ಥಿತಿಗೆ ಹಿಂತಿರುಗಿ. ಈ ಆಸನ ಮಾಡುವುದರಿಂದ ತೂಕವನ್ನು ಬಹುಬೇಗ ಕಡಿಮೆ(Weight Loss) ಮಾಡಿಕೊಳ್ಳಬಹುದು ಹಾಗೂ ಹೊಟ್ಟೆಯನ್ನೂ ಕರಗಿಸಬಹುದು.

Weight Loss : ಬೇಗ ಸಣ್ಣಗಾಗ್ಬೇಕೆಂದ್ರೆ ಈ ಸಿಂಪಲ್ ರೂಲ್ಸ್ ಫಾಲೋ ಮಾಡಿ

4. ಭುಜಂಗಾಸನ(Bhujangasana) 
ಇದನ್ನು ಹಾವಿನ ಆಕಾರದ ಆಸನ ಎಂದು ಕರೆಯಲಾಗುತ್ತದೆ. ಇದರಲ್ಲೂ ಹಿಂದಿನ ಭಂಗಿಯAತೆ ಹೊಟ್ಟೆಯ ಮೇಲೆ ಮಲಗಬೇಕು. ನಂತರ ಎದೆಯ ಭಾಗವನ್ನು ಅರ್ಧದಷ್ಟು ಹಾಗೂ ತಲೆಯನ್ನು ಮೇಲಕ್ಕೆತ್ತಬೇಕು. ಹೊಕ್ಕಳಿನ ಭಾಗವು ನೆಲಕ್ಕೆ ತಾಗಿರಬೇಕು. ಎರಡೂ ಅಂಗೈಗಳು ನೆಲಕ್ಕೆ ಗಟ್ಟಿಯಾಗಿ ಊರಿರಬೇಕು. ದೀರ್ಘ ಉಸಿರನ್ನು ತೆಗೆದುಕೊಳ್ಳುತ್ತಾ ತಲೆಯನ್ನು ಮೇಲಕ್ಕೆತ್ತಿ. ಸ್ವಲ್ಪ ಸಮಯ ನಿಲ್ಲಿಸಿ ಮತ್ತು ಹಿಂದಿನ ಸ್ಥಿತಿಗೆ ಹಿಂತಿರುಗಿ. 
ಈ ಆಸನವು ಬೆನ್ನಿನ ಮೂಳೆ(Spinal Card), ಕೈಗಳನ್ನು ಬಲಿಷ್ಠವಾಗಿರುವಂತೆ ಸಹಾಯ ಮಾಡುತ್ತದೆ. ಹಾಗೂ ಕೈಗಳ ತೋಳು ಹಾಗೂ ಸ್ನಾಯುಗಳನ್ನು(Muscles) ಬಲಗೊಳಿಸುತ್ತದೆ. 

5. ಮರ್ಕಟಾಸನ(Markatasana) 
ಮರ್ಕಟಾ ಎಂದರೆ ಮಂಗ ಅಥವಾ ಕೋತಿ(Monkey) ಎಂದರ್ಥ. ಬೆನ್ನುನೋವಿಗೆ ಈ ಆಸನ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ಮೊದಲನೆಯದಾಗಿ ಬೆನ್ನಿನ(Spin) ಮೇಲೆ ಮಲಗಿಕೊಳ್ಳಿ. ನಿಮ್ಮ ಅಂಗೈಗಳನ್ನು ತೆರೆದು ಭುಜದ ಸಾಲಿನಲ್ಲಿ ಎರಡೂ ಕೈಗಳನ್ನು ವಿಸ್ತರಿಸಿ. ಮೊಣಕಾಲಿನ ಎರಡೂ ಕಾಲುಗಳನ್ನು ಬಾಗಿಸಿ, ಈಗ ಕಾಲುಗಳನ್ನು ಬಲಕ್ಕೆ ಬಾಗಿಸಿ ಮತ್ತು ಕುತ್ತಿಗೆಯನ್ನು ಎಡಕ್ಕೆ ಬಗ್ಗಿಸಿ. ಅಂತೆಯೇ, ಕಾಲುಗಳನ್ನು ಎಡಭಾಗದಲ್ಲಿ ಬಗ್ಗಿಸಿ ಮತ್ತು ಕುತ್ತಿಗೆಯನ್ನು ಬಲಭಾಗದಲ್ಲಿ ಇರಿಸಿ. ಈ ರೀತಿ 5-6 ಸೆಕೆಂಡುಗಳ ಕಾಲ ಮಾಡಿ. 

World Spine Day: ಬೆನ್ನು ನೋವಿನಿಂದ ಕಂಗೆಟ್ಟಿದ್ದೀರಾ ? ಸರಳ ಯೋಗಾಸನ ಮಾಡಿ ಸಾಕು

6. ವಜ್ರಾಸನ(Vajrasana)
ಇದು ಸರಳವಾಗಿದ್ದು ಎರಡೂ ಕಾಲುಗಳನ್ನು ಹಿಂಬದಿಗೆ ಮಡಚಿ ಪಾದಗಳ ಮೇಲೆ ನೇರವಾಗಿ ಕುಳಿತುಕೊಳ್ಳಬೇಕು. ಇದು ಮಂಡಿಯ ಮೇಲೆ ಕುಳಿತಂತೆ ಕಂಡರೂ ದೇಹದ ಭಾರವೆಲ್ಲಾ ಪಾದದ ಮೇಲಿರುತ್ತದೆ. ಹೀಗೆ ಕುಳಿತಾಗ ಆಳವಾದ ಉಸಿರು ತೆಗೆದುಕೊಂಡು 3ರಿಂದ 4 ನಿಮಿಷ ಹೀಗೆ ಕುಳಿತುಕೊಳ್ಳಬೇಕು. ಹೀಗೆ ಮಾಡುವುದರಿಂದ ಕುಳಿತುಕೊಳ್ಳುವ ಭಂಗಿ ಬದಲಾಗುವುದಲ್ಲದೆ ಹೊಟ್ಟೆಯನ್ನೂ ಕರಗಿಸಬಹುದು ಹಾಗೂ ಉಸಿರಾಟ(Respiration) ಮತ್ತು ಜೀರ್ಣಶಕ್ತಿಯೂ(Digestion) ಉತ್ತಮಗೊಳಿಸುತ್ತದೆ. 

click me!