ಮಾನವ ದೇಹ ಕೋಟ್ಯಂತರ ಜೀವಿಗಳಿಗೆ ನೆಲೆಯಾಗಿದೆ ಎಂದರೆ ಅಚ್ಚರಿಯಾಗಬಹುದು. ಸಾಮಾನ್ಯವಾಗಿ ಜಂತುಹುಳುವನ್ನು ನಾವು ನೋಡಿರುತ್ತೇವೆ, ಅದರ ಹೊರತಾಗಿ, ದೇಹದಲ್ಲಿ ಬಹಳಷ್ಟು ಹುಳುಗಳ ಸಾಮ್ರಾಜ್ಯವೇ ಇದೆ.
ದಿನಬೆಳಗಾದರೆ ನಾವು ಮಕ್ಕಳಿಗೆ ಮುಖ ತೊಳೆದು, ಬ್ರಷ್ ಮಾಡಬೇಕು, ಕೈ ತೊಳೆದು ಆಹಾರ ಸೇವಿಸಬೇಕು, ಹೊರಗಿಂದ ಬಂದಾಕ್ಷಣ ಕೈಕಾಲು ತೊಳೆದೇ ಮನೆಯಲ್ಲಿ ಎಲ್ಲೆಂದರಲ್ಲಿ ಓಡಾಡಬಹುದು ಎಂಬಿತ್ಯಾದಿ ನೈರ್ಮಲ್ಯದ ಕ್ರಿಯೆಗಳನ್ನು ಕಲಿಸುತ್ತೇವೆ. ಆದರೆ, ನಾವು ಎಷ್ಟೇ ಕ್ಲೀನ್ ಎಂದುಕೊಂಡರೂ ನಮ್ಮ ದೇಹವೊಂದು ವಿವಿಧ ಜೀವಿಗಳ ತವರು. ಕೆಲವು ಕಣ್ಣಿಗೆ ಕಾಣಿಸಬಹುದು, ಕೆಲವು ಕಾಣಿಸದೇ ಇರಬಹುದು. ಒಟ್ಟಿನಲ್ಲಿ ನಮ್ಮ ದೇಹ ಅದೆಷ್ಟೊಂದು ಜೀವಿಗಳಿಗೆ ನೆಲೆಯಾಗಿದೆ ಎಂದರೆ ಅಚ್ಚರಿಯಾಗಬಹುದು. ಯಾವುದನ್ನು ಬೇರೆ ಬೇರೆ ಆರೋಗ್ಯ ಸಮಸ್ಯೆ ಎಂದುಕೊಂಡಿದ್ದೇವೆಯೋ ಅವು ವಿವಿಧ ಕೀಟಾಣುಗಳು, ಬ್ಯಾಕ್ಟೀರಿಯಾ, ಫಂಗಸ್ ನಿಂದ ಬರುವಂಥವೇ ಆಗಿವೆ. ತಲೆಯಲ್ಲಿನ ಹೇನಿನಿಂದ ಹಿಡಿದು, ಕರುಳಿನ ಸೂಕ್ಷ್ಮಾಣು ಜೀವಿ ಜಾಲದವರೆಗೆ ನಮ್ಮ ದೇಹದ ವಿವಿಧೆಡೆ ಹಲವು ಜೀವಿಗಳು ಇರುತ್ತವೆ. ಸಾಮಾನ್ಯವಾಗಿ ಮಕ್ಕಳ ತಲೆಯಲ್ಲಿರುವ ಹೇನುಗಳನ್ನೇ ನೋಡಿ. ಅವು ನಮ್ಮ ಕೂದಲ ಬುಡದಿಂದ ರಕ್ತ ಹೀರಿ ಬದುಕುತ್ತವೆ. ಅವುಗಳಿಂದ ತಲೆಯಲ್ಲಿ ತುರಿಕೆ ಆಗುತ್ತದೆಯೇ ವಿನಾ ಹೆಚ್ಚಿನ ತೊಂದರೆ ಆಗುವುದಿಲ್ಲ. ಕೆಲವೊಮ್ಮೆ ಎಷ್ಟೇ ಔಷಧ ಮಾಡಿದರೂ ಮೊಟ್ಟೆ ಇಟ್ಟು ಮರಿ ಮಾಡುತ್ತಲೇ ಇರುತ್ತವೆ. ದೊಡ್ಡವರಾದಂತೆ ಕಡಿಮೆ ಆಗುತ್ತದೆ.
ಪರೋಪಜೀವಿ ಹುಳುಕಡ್ಡಿ, ಕೊಕ್ಕೆಹುಳು
ರಿಂಗ್ ವರ್ಮ್(Ringworm) ಎಂದು ಕರೆಯುವ ಹುಳುಕಡ್ಡಿ ಸಮಸ್ಯೆಯೂ ಒಂದು ಬಗೆಯ ಶಿಲೀಂಧ್ರದಿಂದ (Fungus) ಉಂಟಾಗುವಂಥದ್ದು. ದೇಹದ ಯಾವುದೇ ಭಾಗದಲ್ಲಿ ಉಂಟಾಗಬಹುದು. ಕಾಲಿನಲ್ಲಾದರೆ ಇದನ್ನು ಅಥ್ಲೀಟ್ಸ್ ಫುಟ್ ಎಂದು ಕರೆಯಲಾಗುತ್ತದೆ. ಇದಕ್ಕೂ ಸಾಕಷ್ಟು ಮದ್ದುಗಳಿವೆ. ಇನ್ನು, ಹೊಟ್ಟೆಯಲ್ಲಾಗುವ ಕೊಕ್ಕೆಹುಳು (Hookworm) ಸಹ ಪರಾವಲಂಬಿ ಜೀವಿ. ಸೋಂಕು ಇರುವ ಮಣ್ಣಿನ ಮೇಲೆ ಬರಿಗಾಲಿನಲ್ಲಿ ಓಡಾಡಿದರೆ ಕಾಲುಗಳ ಮೂಲಕ ದೇಹ (Body) ಸೇರುತ್ತವೆ. ಕರುಳಿನಲ್ಲಿ (Gut) ನೆಲೆ ನಿಲ್ಲುತ್ತದೆ. ಮಲದ (Poop) ಮೂಲಕ ಹೊರಬರುತ್ತವೆ. ಇದರ ಬಾಧೆ ಹೆಚ್ಚಾದರೆ ರಕ್ತಹೀನತೆ ಉಂಟಾಗುತ್ತದೆ.
undefined
ಹೊಟ್ಟೆಯಲ್ಲಿ ಹುಳದ ಸಮಸ್ಯೆ.... ಲಕ್ಷಣಗಳೇನು ? ನಿವಾರಣೆ ಹೇಗೆ?
ಕಾಟ ಕೊಡುವ ಲಾಡಿಹುಳ (Tapeworm), ಜಂತುಹುಳ
ಲಾಡಿಹುಳು ದೇಹಕ್ಕೆ ತೊಂದರೆ ಒಡ್ಡಬಲ್ಲ ಪರಾವಲಂಬಿ ಜೀವಿ. ಚಪ್ಪಟೆಯಾಗಿದ್ದು, ಕರುಳಿನಲ್ಲಿ ಅಂಟಿಕೊಂಡಂತೆ ಇರುತ್ತವೆ. ಇವು ಸುಮಾರು ದೇಹದೊಳಗೆ ಸುಮಾರು 30 ಅಡಿ ಉದ್ದ ಬೆಳೆಯಬಲ್ಲವು! ಕರುಳಿನಲ್ಲಿರುವ ಆಹಾರ ಹೀರಿಕೊಂಡು ಬೆಳೆದುಬಿಡುತ್ತವೆ. ಈ ಸಮಯದಲ್ಲಿ ಭೇದಿ, ನೋವು, ತೂಕ ಕಡಿಮೆ ಆಗಬಹುದು. ಮಿದುಳಿನ ಕಾರ್ಯಕ್ಷಮತೆಗೂ ಇವು ಧಕ್ಕೆ ತಂದ ಪ್ರಕರಣಗಳಿವೆ. ಹೀಗಾಗಿ, ಎಚ್ಚರಿಕೆ ಅಗತ್ಯ. ಜಂತುಹುಳು (Worm) ಸಮಸ್ಯೆ ಸಹ ಆರೋಗ್ಯಕ್ಕೆ ಹಾನಿ ತರಬಲ್ಲದು. ದೇಹದ ಬಹುತೇಕ ಎಲ್ಲ ಅಂಗಾಂಗಗಳನ್ನೂ ಪ್ರವೇಶಿಸುವ ಸಾಮರ್ಥ್ಯ ಹೊಂದಿದ್ದು, ತೊಂದರೆ ನೀಡುತ್ತವೆ. ಇವುಗಳ ನಿವಾರಣೆಗೆ ಸೂಕ್ತ ಔಷಧ ಅಗತ್ಯ.
ಮುಖದ ಮೇಲೆ ಹುಳ, ಹೊಕ್ಕುಳಿನಲ್ಲೂ ಬ್ಯಾಕ್ಟೀರಿಯಾ (Bacteria)
60 ವರ್ಷದ ಬಳಿಕ ಮುಖದ ಮೇಲೆ ಹುಳುಗಳು ನೆಲೆ ನಿಲ್ಲುತ್ತವೆ. ಇವುಗಳಿಂದ ಯಾವುದೇ ಧಕ್ಕೆಯಿಲ್ಲ. ಮೃತ ಚರ್ಮ (Dead Skin) ತಿಂದು ಬದುಕುತ್ತವೆ. ಇವುಗಳಿಂದ ಚರ್ಮಕ್ಕೆ ಹಾನಿಯಿಲ್ಲದ ಜಿಡ್ಡಿನಂತಹ ಅಂಶ ಹೊರಬರುತ್ತದೆ. ಇನ್ನು, ನಮ್ಮ ದೇಹದ ಮೇಲೆ ತುರಿಕಜ್ಜಿ (Scabies) ಆಗುವುದು ಹೇಗೆಂದುಕೊಂಡಿದ್ದೀರಿ? ಇದು ಸಹ ಒಂದು ಜಾತಿಯ ಹುಳುಗಳ ಪ್ರಭಾವವೇ ಆಗಿದೆ. ಹೊಟ್ಟೆಯ ಹೊಕ್ಕುಳಿನಲ್ಲಿ ಬ್ಯಾಕ್ಟೀರಿಯಾ ನೆಲೆ ನಿಲ್ಲುತ್ತವೆ. ಇವುಗಳಲ್ಲೂ ವೈವಿಧ್ಯವಿದೆ. ನಾವು ವಾಸಿಸುವ ಪ್ರದೇಶ, ದೇಹಕ್ಕೆ ಬಳಸುವ ಪ್ರಸಾಧನ, ವಂಶವಾಹಿ, ಲಿಂಗ ಇತ್ಯಾದಿ ಆಧಾರದ ಮೇಲೆ ವಿಭಿನ್ನ ಬ್ಯಾಕ್ಟೀರಿಯಾ ಇರುತ್ತವೆ.
Healthy Gut: ಆರೋಗ್ಯಪೂರ್ಣ ಕರುಳಿನಿಂದ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ
ಕರುಳಿನಲ್ಲಿ ಕೋಟ್ಯಂತರ ಸೂಕ್ಷ್ಮಜೀವಿಗಳು (Microbiobe)
ನಮ್ಮ ಕರುಳಂತೂ ಅಪಾರ ಜೀವಿಗಳಿಗೆ ನೆಲೆ ನೀಡಿದೆ. ಕರುಳಿನ ಒಂದು ಪದರವೇ ಟ್ರಿಲಿಯನ್ (Trillion) ಸೂಕ್ಷ್ಮಜೀವಿಗಳಿಂದ ರೂಪುಗೊಂಡಿದೆ ಎಂದು ಅಚ್ಚರಿಯಾಗಬಹುದು. ಇಲ್ಲೇ ಒಂದು ಪ್ರತ್ಯೇಕ ನರಮಂಡಲವೂ ಇದೆ. ಈ ಜೀವಿಗಳ ಆಧಾರದ ಮೇಲೆ ಕರುಳು ಹಾಗೂ ದೇಹದ ಒಟ್ಟಾರೆ ಆರೋಗ್ಯ ವ್ಯವಸ್ಥೆ, ಮಿದುಳಿನ ಕಾರ್ಯಕ್ಷಮತೆ ನಿರ್ಮಾಣಗೊಳ್ಳುತ್ತದೆ.
ಮಾನವನ ಬಾಯಿ, ನಾಲಿಗೆ, ಹಲ್ಲು, ಜನನಾಂಗ, ಕಂಕುಳು ಸೇರಿದಂತೆ ಹಲವು ಭಾಗಗಳಲ್ಲಿ ವೈವಿಧ್ಯಮಯ ಹುಳುಗಳು ವಾಸವಾಗಿರುತ್ತವೆ. ಚರ್ಮದ ಮೇಲೆ ಉಂಟಾಗುವ ಸರ್ಪಸುತ್ತು (Herpes), ಚಿಕನ್ ಪಾಕ್ಸ್ ಹಾಗೂ ಗಂಟಲು ಕೆರೆತ, ಅಲರ್ಜಿ ಕೆಮ್ಮು, ಕಣ್ಣುಗಳ ಸೋಂಕು ಎಲ್ಲವೂ ವಿವಿಧ ಜೀವಿಗಳಿಂದ ಉಂಟಾಗುವಂಥವೇ ಆಗಿವೆ.