Epilepsy: ಅಪಸ್ಮಾರದ ಬಗ್ಗೆ ಅಪನಂಬಿಕೆಯೇ ಹೆಚ್ಚು, ಸ್ವಲ್ಪ ಹೆಚ್ಚಿಗೆ ಹುಷಾರಾಗಿರಿ ಸಾಕು

By Suvarna NewsFirst Published Nov 10, 2022, 4:46 PM IST
Highlights

ಅಕ್ಕಪಕ್ಕದವರು ಭಯಪಡುವಂತೆ ಇದ್ದಕ್ಕಿದ್ದ ಹಾಗೆ ಬಿದ್ದುಹೋಗುವ ಸಮಸ್ಯೆಗೆ ಪಿಟ್ಸ್ ಎನ್ನುತ್ತೇವೆ. ಇದು ಮಿದುಳಿಗೆ ಸಂಬಂಧಿಸಿದ ಅಪಸ್ಮಾರ ಸಮಸ್ಯೆ. ಇದರ ಬಗ್ಗೆ ಸಮಾಜದಲ್ಲಿ ಹಲವು ಅಪನಂಬಿಕೆಗಳು ಮನೆ ಮಾಡಿವೆ. ಅವುಗಳನ್ನು ತೆಗೆದುಹಾಕಿ ಅಪಸ್ಮಾರ ರೋಗಿಗಳಲ್ಲಿ ಧೈರ್ಯ, ವಿಶ್ವಾಸ ತುಂಬಬೇಕಾದ ಅಗತ್ಯವಿದೆ.
 

ಹಲವು ವಿಚಾರಗಳ ಬಗ್ಗೆ ನಾವೊಂದು ರೀತಿಯ ನಂಬುಗೆ ಎನ್ನಿ ಅಥವಾ ಭ್ರಮೆ ಎನ್ನಿ, ಅದನ್ನು ಬೆಳೆಸಿಕೊಂಡಿರುತ್ತೇವೆ. ಸಾಕಷ್ಟು ಸಂಗತಿಗಳ ಬಗ್ಗೆ ನಮ್ಮ ಈ ನಂಬುಗೆಯನ್ನೇ ಆಧರಿಸಿ ಚಿಂತನೆ ಮಾಡುತ್ತೇವೆ, ಅದಕ್ಕೆ ಅನುಸಾರವಾಗಿಯೇ ಕೆಲಸಕಾರ್ಯಗಳನ್ನು ನಡೆಸುತ್ತೇವೆ. ಆದರೆ, ಎಷ್ಟೋ ಬಾರಿ, ನಾವು ಅಂದುಕೊಂಡಿರುವುದು ಸತ್ಯಕ್ಕೆ ದೂರವಾಗಿದ್ದಿರಬಹುದು. ನಮ್ಮ ನಂಬುಗೆ ಕೇವಲ ಭ್ರಮೆಯಾಗಿರಬಹುದು. ಆರೋಗ್ಯದ ವಿಚಾರಕ್ಕೆ ಸಂಬಂಧಿಸಿಯಂತೂ ಇಂತಹ ಹಲವು ಭ್ರಮೆಗಳು ನಮ್ಮಲ್ಲಿ ಎಂದಿನಿಂದಲೂ ಇವೆ. ಅಂತಹದ್ದೊಂದು ಆರೋಗ್ಯ ಸಮಸ್ಯೆ ಎಂದರೆ ಅಪಸ್ಮಾರ. ಆಡುಭಾಷೆಯಲ್ಲಿ ಇದನ್ನು “ಪಿಟ್ಸ್’ ಎನ್ನುತ್ತೇವೆ. ಅಪಸ್ಮಾರದ ಕುರಿತು ನಮ್ಮ ಸಮಾಜದಲ್ಲಿ ಸಾಕಷ್ಟು ಅಪನಂಬಿಕೆಗಳು ಮನೆ ಮಾಡಿವೆ. ಅತಿಯಾದ ಕೆಲಸದ ಒತ್ತಡದೊಂದಿಗೆ ಅತಿಯಾದ ಹಸಿವೆಯೂ ಸೇರಿಕೊಂಡಾಗ ರಸ್ತೆಯಲ್ಲಿ ಬಿದ್ದು ಒದ್ದಾಡುವವರೂ ಇದ್ದಾರೆ. ಅಂಥವರನ್ನು ಕುಡುಕ ಎಂದೋ, ಮಾನಸಿಕ ರೋಗಿ ಎಂದೋ ಹಣೆಪಟ್ಟಿ ಕಟ್ಟುವ ಬದಲು ಅವರ ಬಗ್ಗೆ ಸಹಾನುಭೂತಿಯಿಂದ ವರ್ತಿಸಬೇಕು. ಮುಕ್ತವಾಗಿ ಓಡಾಡಲು ಅವರಿಗೆ ಅರ್ಹತೆ ಇಲ್ಲವೆಂಬಂತೆ ಭಾವಿಸಬಾರದು. ಅಂತಹ ಅಪಸ್ಮಾರದ ಬಗ್ಗೆ ಹಲವು ತಪ್ಪು ತಿಳಿವಳಿಕೆಗಳು ನಮ್ಮಲ್ಲಿವೆ. 

•    ಒಮ್ಮೆ ಎಚ್ಚರತಪ್ಪಿ (Seizure) ಬಿದ್ದುಬಿಟ್ಟರೆ ಅದು ಪಿಟ್ಸ್ (Pits)
ಇದ್ದಕ್ಕಿದ್ದ ಹಾಗೆ ಬಿದ್ದುಬಿಡುವ ಸಮಸ್ಯೆ ಎಲ್ಲವೂ ಪಿಟ್ಸ್ ಅಲ್ಲ. ನಿದ್ರೆ (Sleep) ಸಮಸ್ಯೆ, ಹೊಸ ಔಷಧದ (Medicine) ಪ್ರಭಾವದಿಂದಲೂ ಕೆಲವೊಮ್ಮೆ ವ್ಯಕ್ತಿ ಬಿದ್ದುಹೋಗಬಹುದು.

•    ಪಿಟ್ಸ್ ಬಂದಾಗ ಬಾಯೊಳಗೆ (Mouth) ಏನಾದರೂ ಹಾಕಬೇಕು
ಪಿಟ್ಸ್ ಬಂದರೆ ಬಾಯೊಳಗೆ ಏನನ್ನೂ ಹಾಕಬಾರದು. ಹಾಗೆ ಏನಾದರೂ ವಸ್ತು ಹಾಕುವುದರಿಂದಲೇ ಗಾಯ(Wound)ವಾಗಬಹುದು. ಬದಲಿಗೆ, ಆ ವ್ಯಕ್ತಿಯನ್ನು ಬೇರೆ ವಸ್ತುಗಳಿಂದ ದೂರವಿರಿಸಬೇಕು.

ಭಾರತದಲ್ಲಿ ಹೆಚ್ಚುತ್ತಿದೆ ಹೃದಯಸ್ತಂಭನ, ಒತ್ತಡ ನಿರ್ವಹಣೆ ಅತೀ ಅಗತ್ಯವೆಂದ ತಜ್ಞರು

•    ಪಿಟ್ಸ್ ಬಂದಾಗ ತಮ್ಮ ನಾಲಗೆಯನ್ನು (Tongue) ಕಚ್ಚಿ ನುಂಗುತ್ತಾರೆ!
ಪಿಟ್ಸ್ ಬಂದಾಗ ತಮ್ಮ ನಾಲಗೆಯನ್ನು ಕೆಲವೊಮ್ಮೆ ಕಚ್ಚಿಕೊಳ್ಳುವುದು ಹೌದಾದರೂ ನುಂಗುವುದು ಸಾಧ್ಯವಿಲ್ಲ. ಇದು ಅತಿರಂಜಿತ ಕಲ್ಪನೆ. 

•    ಅಪಸ್ಮಾರ ಗುಣವಾಗದ ಕಾಯಿಲೆ, ಅದಕ್ಕೆ ಔಷಧವಿಲ್ಲ
ಅಸಲಿಗೆ, ಅಪಸ್ಮಾರವನ್ನು ಸುಲಭವಾಗಿ ನಿರ್ವಹಿಸುವ ಬಗ್ಗೆ ವೈದ್ಯಕೀಯ ಜಗತ್ತು ಇಂದು ಸಾಕಷ್ಟು ಮುಂದುವರಿದಿದೆ. ಈ ಸಮಸ್ಯೆ ಇದ್ದರೂ ಎಲ್ಲರಂತೆ ಕ್ರಿಯಾಶೀಲರಾಗಿ (Active) ಬದುಕಬಹುದು, ಸಾಧನೆ ಮಾಡಬಹುದು. ಇದರಿಂದ ವ್ಯಕ್ತಿಯ ಸಾಮಾಜಿಕ (Social), ಸಾಂಸಾರಿಕ (Family), ದೈಹಿಕ, ಮಾನಸಿಕ (Mental) ಸ್ಥಿತಿಗತಿ ಖಂಡಿತವಾಗಿ ಹಾಳಾಗಬೇಕಿಲ್ಲ. 

Asthma attack ಆದಾಗ ಪ್ರಥಮ ಚಿಕಿತ್ಸೆ ಹೇಗಿರಬೇಕು? ಡಾಕ್ಟರ್ ಏನ್ ಹೇಳ್ತಾರೆ ನೋಡಿ

ಅಪಸ್ಮಾರದ ಲಕ್ಷಣಗಳು
•    ತಾತ್ಕಾಲಿಕ ಗೊಂದಲ (Confusion)
•    ದಿಟ್ಟಿಸಿ (Staring) ನೋಡುತ್ತಿರುವುದು
•    ಕೈ ಮತ್ತು ಕಾಲುಗಳ ಅನಿಯಂತ್ರಿತ ಚಲನೆ (Uncontrollable Movement)
•    ಅರಿವು (Awareness) ಅಥವಾ ಪ್ರಜ್ಞೆಯ ನಾಶ
•    ಮಾನಸಿಕತೆಗೆ ಸಂಬಂಧಿಸಿದ ಭಯ, ಆತಂಕ ಮತ್ತು ವಿಚಿತ್ರ ತಳಮಳ

ಯಾರಾದರೂ ಅಪಸ್ಮಾರಕ್ಕೆ ತುತ್ತಾದಾಗ ಏನ್ ಮಾಡ್ಬೇಕು?
•    ನೆಲದ ಮೇಲೆ ಸರಿಯಾಗಿ ಮಲಗಿಸಬೇಕು. ಒಂದು ಮಗ್ಗುಲಿಗೆ ತಿರುಗಿಸಿ ಮಲಗಿಸಲು ಯತ್ನಿಸಬೇಕು, ಇದರಿಂದ ಅವರಿಗೆ ಸರಿಯಾಗಿ ಉಸಿರಾಡಿಸಲು (Breathe) ಸಾಧ್ಯವಾಗುತ್ತದೆ.
•    ತಲೆ ಅಥವಾ ದೇಹದ ಕೆಳಗಿರುವ ಗಟ್ಟಿಯಾದ ವಸ್ತುವನ್ನು ತೆಗೆಯಲು ಯತ್ನಿಸಬೇಕು. ತಲೆಯ ಕೆಳಭಾಗಕ್ಕೆ ಮೃದು (Soft) ವಸ್ತುವನ್ನು ಕೊಡಬೇಕು. ಕನ್ನಡಕ ಧರಿಸಿದ್ದರೆ ತೆಗೆಯಬೇಕು.
•    ಉಸಿರಾಟಕ್ಕೆ ತೊಂದರೆಯಾಗುವಂತೆ ಕುತ್ತಿಗೆಗೆ ಟೈ ಇದ್ದರೆ ಬಿಡಿಸಬೇಕು. 
•    ಆ ಸಮಯ ಹಾಗೆಯೇ ಕರಗಿಹೋಗುತ್ತದೆ. ಐದು ನಿಮಿಷಕ್ಕಿಂತ ಹೆಚ್ಚು ಸಮಯ ವ್ಯಕ್ತಿ ಪ್ರಜ್ಞಾಹೀನನಾಗಿದ್ದರೆ ವೈದ್ಯರ ಬಳಿ ಕರೆದೊಯ್ಯಬೇಕು. 

 

ನಿರ್ವಹಣೆ ಅಗತ್ಯ (Management)
ಅಸಲಿಗೆ, ಅಪಸ್ಮಾರ (Epilepsy) ರೋಗವಲ್ಲ. ಮಿದುಳಿನ (Brain) ಆಘಾತ ಅಥವಾ ನರಮಂಡಲದ ನರಕೋಶಗಳ ಸಂವಹನದ ಕೊರತೆಯಿಂದ ಉಂಟಾಗುವ ಸಮಸ್ಯೆ. ಹಲವು ರೋಗಗಳಿಗೆ ಇದು ಪ್ರಾಥಮಿಕ ಲಕ್ಷಣವೂ ಆಗಿದೆ. ಹೀಗಾಗಿ, ನಿರ್ಲಕ್ಷ್ಯ ಸಲ್ಲದು. ಇದ್ದಕ್ಕಿದ್ದ ಹಾಗೆ ಬಿದ್ದುಹೋಗುವುದರಿಂದ ಓಡಾಡುವಾಗ ಜಾಗ್ರತೆ ವಹಿಸಬೇಕು. ಒಬ್ಬರೇ ವಾಹನಚಾಲನೆ (Driving), ಈಜುವುದು, ದೂರಪ್ರಯಾಣ ಮಾಡಬಾರದು. ಅಧಿಕ ಶ್ರಮ, ಒತ್ತಡ (Stress) ಮಾಡಿಕೊಳ್ಳಬಾರದು. ಸಮಸ್ಯೆ ಹೆಚ್ಚಿರುವವರು ಕುಟುಂಬ, ಸ್ನೇಹಿತರು ಹಾಗೂ ಹಿತೈಷಿಗಳ ಕಣ್ಗಾವಲಿನಲ್ಲಿ ಇರಬೇಕಾದ ಅಗತ್ಯವಿರುತ್ತದೆ. ಸೂಕ್ತ ಔಷಧಿ ಮತ್ತು ಆರೋಗ್ಯಪೂರ್ಣ ಜೀವನಶೈಲಿ (Healthy Lifestyle) ಅನುಸರಿಸುವುದು ಬಹುಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ, ಅಪಸ್ಮಾರ ಇರುವ ಜನರ ಕುರಿತು ಸಮಾಜ ಸಹಾನುಭೂತಿಯಿಂದ ವರ್ತಿಸಬೇಕು. ಅವರಲ್ಲಿ ಧೈರ್ಯ ತುಂಬಬೇಕು. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿದಾಗ ಖಂಡಿತವಾಗಿ ಈ ಸಮಸ್ಯೆ ನಿಯಂತ್ರಣದಲ್ಲಿ ಇರುತ್ತದೆ. 

Dr. Abhishek Juneja
Sr. Consultant Neurologist - Maharaja Agrasen Hospital, New Delhi, Dr. Juneja's Neuro center

click me!