Health Tips: ಪದೇ ಪದೇ ಟೀ ಬಿಸಿ ಮಾಡಿ ಕುಡೀತೀರಾ ? ಮಲಬದ್ಧತೆ ಕಾಡುತ್ತೆ ಹುಷಾರ್!

By Suvarna News  |  First Published Feb 9, 2023, 3:27 PM IST

ಬಿಸಿಯಾದ, ರುಚಿಯಾದ ಟೀ ಸೇವಿಸೋ ಮಜವೇ ಬೇರೆ. ಹಾಗಂತ ಆಗಾಗ ಟೀ ಮಾಡ್ಕೊಳ್ಳೋಕೆ ಬೇಕಾರು. ಒಮ್ಮೆ ಮಾಡಿಟ್ಟು, ಆಗಾಗ ಬಿಸಿ ಮಾಡಿ ಕುಡಿತೀವಿ ಅನ್ನೋರು ನೀವಾಗಿದ್ರೆ ಈ ಚಟನ ಇಂದೇ ಬಿಟ್ಬಿಡಿ.
 


ಭಾರತದಲ್ಲಿ ಟೀ ಕುಡಿಯೋರ ಸಂಖ್ಯೆ ಹೆಚ್ಚಿದೆ. ದಿನದಲ್ಲಿ ಕನಿಷ್ಠ ಎರಡು ಬಾರಿಯಾದ್ರೂ ಟೀ ಬೇಕೇಬೇಕು. ಚಳಿಯಾಗ್ಲಿ, ಸೆಕೆಯಾಗ್ಲಿ, ಟೆನ್ಷನ್ ಆಗ್ಲಿ, ಮನೆಗೆ ಅತಿಥಿಗಳು, ಸ್ನೇಹಿತರು ಬರಲಿ, ಟೀ ಕುಡಿಯೋಕೆ ಒಂದು ನೆಪವಿದ್ರೆ ಸಾಕು. ಅನೇಕರು ದಿನದಲ್ಲಿ ಅನೇಕ ಬಾರಿ ಟೀ ಸೇವನೆ ಮಾಡ್ತಾರೆ. ಪ್ರತಿ ಬಾರಿ ಟೀ ತಯಾರಿಸಿ ಕುಡಿಯೋದು ಬೇಸರದ ಕೆಲಸ. ಹಾಗಾಗಿ ಬೆಳಿಗ್ಗೆ ಟೀ ಮಾಡಿಟ್ರೆ ಮುಗಿತು. ಬೇಕಾದಾಗ ಟೀ ಬಿಸಿ ಮಾಡಿ ಸೇವನೆ ಮಾಡಿದ್ರೆ ಆಯ್ತು. ಕೆಲಸ ಸುಲಭ ಎನ್ನುವವರು ನೀವಾಗಿದ್ದರೆ ಇಂದೇ ಈ ಅಭ್ಯಾಸವನ್ನು ಬಿಟ್ಬಿಡಿ. ಯಾಕೆಂದ್ರೆ ಟೀಯನ್ನು ದಿನದಲ್ಲಿ ಮೂರ್ನಾಲ್ಕು ಬಾರಿ ಸೇವನೆ ಮಾಡೋದು ಎಷ್ಟು ಅಪಾಯಕಾರಿಯೂ ಟೀಯನ್ನು ಪದೇ ಪದೇ ಬಿಸಿ ಮಾಡಿ ಕುಡಿಯೋದು ಕೂಡ ಅಪಾಯಕಾರಿ. ಚಹಾವನ್ನು ಬಿಸಿ ಮಾಡಿ ಕುಡಿಯೋದ್ರಿಂದ ಏನೆಲ್ಲ ಸಮಸ್ಯೆ ಕಾಡುತ್ತೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ.

ಚಹಾ (Tea) ವನ್ನು ಆಗಾಗ ಬಿಸಿ ಮಾಡಿದ್ರೆ ಆಗುತೆ ಈ ಸಮಸ್ಯೆ : 

Tap to resize

Latest Videos

ಸ್ವಾದಕ್ಕೆ ಧಕ್ಕೆ : ರುಚಿ (Taste), ಸುವಾಸನೆ ಮತ್ತು ಬಿಸಿ ಇದು ಚಹಾದ ವಿಶೇಷತೆ. ಟೀ ಎಷ್ಟು ಬಿಸಿ ಇರ್ಬೇಕೋ ಅಷ್ಟೇ ರುಚಿಯಾಗೂ ಇರಬೇಕು. ನೀವು ಪದೇ ಪದೇ ಟೀ ಬಿಸಿ ಮಾಡಿದ್ರೆ ರುಚಿ ಹೋಗುತ್ತದೆ. ಈ ವಾಸನೆ (Smell) ಕೂಡ ಉಳಿಯೋದಿಲ್ಲ.

ಸೂಕ್ಷ್ಮ ಜೀವಿಗಳ ಬೆಳವಣಿಗೆ : ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಅದರ ಪೋಷಕಾಂಶ (Nutrients) ಗಳು ಕಡಿಮೆಯಾಗುತ್ತವೆ ಬಹಳ ಹಿಂದೆಯೇ ಮಾಡಿದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ಆರೋಗ್ಯ ಹದಗೆಡುತ್ತದೆ. ನೀವು ಮಾಡಿಟ್ಟ ಟೀನಲ್ಲಿ ಸೂಕ್ಷ್ಮಜೀವಿಯ ಬೆಳವಣಿಗೆ ಶುರುವಾಗುತ್ತದೆ. ಬಹುತೇಕರ ಮನೆಯಲ್ಲಿ ಹಾಲಿನ ಟೀ ಮಾಡಲಾಗುತ್ತದೆ. ಟೀನಲ್ಲಿ ಹಾಲಿನ ಪ್ರಮಾಣ ಅಧಿಕವಾಗಿರುತ್ತದೆ. ಈ ಕಾರಣದಿಂದಾಗಿ ಸೂಕ್ಷ್ಮಜೀವಿ ಬೆಳವಣಿಗೆ ಹೆಚ್ಚಾಗುತ್ತದೆ. ಈ ಸೂಕ್ಷ್ಮ ಜೀವಿಗಳು ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ.

ತಂದೆಯಾದ ನಂತರ, ಪುರುಷರಲ್ಲೂ ಈ ಎಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ?

ಪೋಷಕಾಂಶಗಳ ನಾಶ : ನೀವು ಗಿಡಮೂಲಿಕೆ ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿದ್ರೆ ಅದ್ರ ಪೋಷಕಾಂಶ ಮಾಯವಾಗುತ್ತದೆ. 

ಕಾಡುತ್ತೆ ಹೊಟ್ಟೆ ಸಮಸ್ಯೆ : ಬೆಳಿಗ್ಗೆ ಮಾಡಿಟ್ಟ ಟೀಯನ್ನು ನೀವು ಮಧ್ಯಾಹ್ನ ಸೇವನೆ ಮಾಡೋದ್ರಿಂದ ನಿಮ್ಮ ಹೊಟ್ಟೆ ಹಾಳಾಗುತ್ತದೆ. ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಉರಿಯೂತದ ಸಮಸ್ಯೆ ನಿಮ್ಮನ್ನು ಕಾಡುತ್ತದೆ. 

ಎದೆಯುರಿ ಸಮಸ್ಯೆ : ಒಮ್ಮೆ ಮಾಡಿಟ್ಟು ತುಂಬಾ ಸಮಯದ ನಂತ್ರ ಮತ್ತೆ ಬಿಸಿ ಮಾಡಿ ಸೇವನೆ ಮಾಡಿದ್ರೆ ಅದು ಹಳಸಿದ ಟೀಯಾಗುತ್ತದೆ. ನೀವು ಈ ಹಳಸಿದ ಟೀ ಸೇವನೆ ಮಾಡೋದ್ರಿಂದ ಆರೋಗ್ಯ ಹಾಳಾಗುತ್ತದೆ. ಕರುಳಿನಲ್ಲಿ ಆಮ್ಲದ ಉತ್ಪಾದನೆಯು ಹೆಚ್ಚಾಗುತ್ತದೆ. ಇದು ಎದೆಯುರಿ ಮತ್ತು ನೋವನ್ನು ಉಂಟುಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿ : ಚಹಾವನ್ನು ಆಗಾಗ ಬಿಸಿ ಮಾಡಿ ಸೇವನೆ ಮಾಡೋದ್ರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಚಹಾದಲ್ಲಿರುವ ಆಮ್ಲೀಯ ಗುಣಗಳು ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬಹುದು. ಇದು ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗೆ ದಾರಿಮಾಡಿಕೊಡುತ್ತದೆ. 

ವಿಪರೀತ ಮೊಬೈಲ್‌ ಬಳಕೆಯಿಂದ ಕಣ್ಣಿನ ದೃಷ್ಟಿ ಕಳೆದುಕೊಂಡ ಮಹಿಳೆ, ವೈದ್ಯರ ಟ್ವೀಟ್ ವೈರಲ್‌

ಅಧಿಕ ಬಿಪಿ ಇರೋರು ಈ ಟೀ ಸೇವನೆ ಮಾಡ್ಬೇಡಿ : ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಎಂದಿಗೂ ಟೀಯನ್ನು ಪದೇ ಪದೇ ಬಿಸಿ ಮಾಡಿ ಕುಡಿಯಬಾರದು.  

ಟೀ ಕುಡಿಯಲು ಬೆಸ್ಟ್ ವಿಧಾನ ಯಾವುದು ಗೊತ್ತಾ? : ಟೀ ತಯಾರಿಸಿದ ತಕ್ಷಣ ಸೇವನೆ ಮಾಡಿದ್ರೆ ಬಹಳ ಒಳ್ಳೆಯದು. ಒಂದ್ವೇಳೆ ಬಿಸಿ ಮಾಡಿ ಕುಡಿತೇನೆ ಎನ್ನುವವರು ಟೀ ತಯಾರಿಸಿದ 15 ನಿಮಿಷದಲ್ಲಿ ಬಿಸಿ ಮಾಡಿ ಸೇವನೆ ಮಾಡಬಹುದು. 

click me!