ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಆಹಾರ ಮತ್ತು ಅಭ್ಯಾಸಗಳ ಬಗ್ಗೆ ಕಾಳಜಿ ವಹಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಅವರ ನವಜಾತ ಶಿಶು ಆರೋಗ್ಯವಾಗಿರುತ್ತದೆ. ಆದರೆ ಇಲ್ಲೊಬ್ಬಾಕೆ ತಾಯಿ ಹೆರಿಗೆಯ ನಂತರವೂ ಮದ್ಯ ಸೇವನೆ ಮುಂದುವರಿಸಿದ್ದು, ಪರಿಣಾಮ ಎರಡು ತಿಂಗಳ ಮಗು ಸಾವನ್ನಪ್ಪಿದೆ.
ಮಹಿಳೆ ಗರ್ಭಾವಸ್ಥೆ ಹಾಗೂ ಹೆರಿಗೆಯ ನಂತರ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಯಾಕೆಂದರೆ ಇಉ ನೇರವಾಗಿ ಆಕೆಯ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದೆ. ಈ ಕಾರಣಕ್ಕಾಗಿಯೇ ಗರ್ಭಿಣಿ ಅಥವಾ ಹೆರಿಗೆಯ ನಂತರ ಮಹಿಳೆ ಪೌಷ್ಟಿಕ ಆಹಾರ ಸೇವಿಸಬೇಕು. ಹಾಲು, ಹಣ್ಣಿನ ರಸಗಳನ್ನು ಹೆಚ್ಚು ಸೇವಿಸಬೇಕೆಂದು ಸೂಚಿಸುತ್ತಾರೆ. ಮಾತ್ರವಲ್ಲ, ಅಲ್ಕೋಹಾಲ್, ಸಿಗರೇಟ್‌ನಿಂದ ದೂರವಿರುವಂತೆ ಹೇಳುತ್ತಾರೆ. ಯಾಕೆಂದರೆ ಹೆರಿಗೆಯ ನಂತರ ಆಕೆ ಏನು ತಿಂದರೂ ಅದು ಅವಳ ಎದೆಹಾಲಿನ ಮೂಲಕ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಹೀಗಾಗಿಯೇ ಸ್ತನ್ಯಪಾನ ಮಾಡುವ ತಾಯಂದಿರಿಗೆ ಅಲ್ಕೋಹಾಲ್ ಸೇವಿಸದಂತೆ ಸಲಹೆ ನೀಡಲಾಗುತ್ತದೆ, ಏಕೆಂದರೆ ಮಗುವಿನ (Baby) ಯಕೃತ್ತು ಆಲ್ಕೋಹಾಲ್ ಅನ್ನು ಜೀರ್ಣಿಸಿಕೊಳ್ಳಲು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ. ಆದರೆ ಇಲ್ಲೊಬ್ಬಾಕೆ ತಾಯಿ (Mother) ವೈದ್ಯರ ಸಲಹೆಯನ್ನು ಪಾಲಿಸದೆ ಹೆರಿಗೆಯ (Delivery) ನಂತರವೂ ಅಲ್ಕೋಹಾಲ್ ಕುಡಿದು ಮಗುವನ್ನು ಕಳೆದುಕೊಂಡಿದ್ದಾಳೆ.
Breast Feeding, ಕ್ಯಾನ್ಸರ್ ಬಗ್ಗೆ ಇರಲಿ ತುಸು ಎಚ್ಚರ, ಮರೀಬೇಡಿ ಆರೋಗ್ಯದ ಕಾಳಜಿ
ದೇಹದಲ್ಲಿ ಹೆಚ್ಚಿನ ಪ್ರಮಾಣದ ಅಲ್ಕೋಹಾಲ್ ಅಂಶದಿಂದಾಗಿ ಮಗು ಸಾವು
ಜನವರಿ 2017ರಲ್ಲಿ, ಎರಡು ತಿಂಗಳ ವಯಸ್ಸಿನ ಮಗು ನೀಲಮಣಿ ವಿಲಿಯಮ್ಸ್ ತನ್ನ ದೇಹದಲ್ಲಿ ಹೆಚ್ಚಿನ ಪ್ರಮಾಣದ ಅಲ್ಕೋಹಾಲ್ ಅಂಶದಿಂದಾಗಿ ಸಾವನ್ನಪ್ಪಿತು (Death). ಮಗುವಿನ ತಾಯಿಗೆ ಹಾಲುಣಿಸುವಾಗ ಮದ್ಯಪಾನ (Alcohol) ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರತಿಕ್ರಿಯೆಯಲ್ಲಿ ವೈದ್ಯರ ಗುಂಪು ಓಪಲ್ ಪತ್ರವನ್ನು ಬರೆದಿದೆ. 700 ಕ್ಕೂ ಹೆಚ್ಚು ಮಕ್ಕಳ ವೈದ್ಯರು ಮತ್ತು ಸ್ತ್ರೀರೋಗತಜ್ಞರು ಪತ್ರಕ್ಕೆ ಸಹಿ ಹಾಕಿದ್ದಾರೆ. ಮಗು ನೀಲಮಣಿಯ ದೇಹದಲ್ಲಿ ತಾಯಿ ಸೇವಿಸಿದ ಆಲ್ಕೋಹಾಲ್‌ನ ಹತ್ತನೇ ಒಂದು ಭಾಗ ಎದೆಹಾಲಿನ ಮೂಲಕ ಆಕೆಯ ದೇಹ (Body)ವನ್ನು ತಲುಪಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ಹೆರಿಗೆಯ ನಂತರ ಮಹಿಳೆಯರಿಗೆ ಅಲ್ಕೋಹಾಲ್ ಏಕೆ ಅಪಾಯಕಾರಿ?
ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರ ಮಹಿಳೆ ಸೇವಿಸುವ ಪ್ರತಿಯೊಂದು ಆಹಾರವೂ (Food) ಮಗುವಿನೊಂದಿಗೆ ಸಂಪರ್ಕ ಪಡೆದುಕೊಳ್ಳುತ್ತದೆ. ತಾಯಿ ಅಲ್ಕೋಹಾಲ್ ಸೇವಿಸಿದರೆ ಎದೆಹಾಲಿನ (Breastmilk) ಮೂಲಕ ಇದು ಮಗುವನ್ನು ತಲುಪುತ್ತದೆ. ಇದು ಮಗುವಿನ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು. ಮಾತ್ರವಲ್ಲ ತಾಯಿಯು ತನ್ನ ಮಗುವನ್ನು ಅಮಲಿನಲ್ಲಿ ಹೇಗೆ ನಿಭಾಯಿಸಬಹುದು ಎಂಬುದು ಆತಂಕದ ವಿಷಯವಾಗಿದೆ. ಅಲ್ಕೋಹಾಲ್ ಕುಡಿದ ನಂತರ, ತಾಯಿ ಮಗುವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದೆ, ಇದ್ದಕ್ಕಿದ್ದಂತೆ ಬೀಳುವ ಅಥವಾ ಗಾಯಗೊಳ್ಳುವ ಹೆಚ್ಚಿನ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಮಕ್ಕಳಿಗೆ ಆರು ತಿಂಗಳ ವರೆಗೆ ಹಾಲುಣಿಸಲೇಬೇಕು ಅನ್ನೋದು ಯಾಕೆ ?
ನೀಲಮಣಿ ಮತ್ತು ಅವಳ ಅವಳಿ ಸಹೋದರಿ ಅವಧಿ ಪೂರ್ವ ಮತ್ತು 33 ವಾರಗಳಲ್ಲಿ ಜನಿಸಿದರು. ಇಬ್ಬರೂ ಕಡಿಮೆ ತೂಕವನ್ನು ಹೊಂದಿದ್ದರು ಮತ್ತು ಕೆಲವು ವೈದ್ಯಕೀಯ ಸಮಸ್ಯೆಗಳನ್ನು ಸಹ ಹೊಂದಿದ್ದರು. ಜನವರಿ 2, 2017 ರಂದು, ಸುಮಾರು 2 ಗಂಟೆಗೆ ಮಗು ನೀಲಮಣಿ ತನ್ನ ತಾಯಿ ಎದೆಹಾಲು ಕುಡಿಸಿದಾಗ ಅಳಲು ಶುರು ಮಾಡಿತು. ನಂತರ ಸ್ಪಲ್ಪ ಹೊತ್ತಿನಲ್ಲಿ ಮಗುವಿಗೆ ರಕ್ತಸ್ರಾವವಾಯಿ. ರೋಗಶಾಸ್ತ್ರಜ್ಞ ಡಾ. ಸೈಮನ್ ಸ್ಟೇಬಲ್ ನೀಲಮಣಿಯ ಹೃದಯವು ರಕ್ತದಲ್ಲಿ 308 ಗ್ರಾಂ ಅಲ್ಕೋಹಾಲ್ ಅನ್ನು ಹೊಂದಿದ್ದು ಅದು ತುಂಬಾ ಹೆಚ್ಚಾಗಿದೆ ಎಂದು ಕಂಡುಹಿಡಿದಿರು. ಮರು ಪರೀಕ್ಷೆಯಲ್ಲಿ ಇದು ದೃಢಪಟ್ಟಿತು.
ತಾಯಿಯ ಮಡಿಲು IVF ಕೇಂದ್ರದ ವೈದ್ಯಕೀಯ ನಿರ್ದೇಶಕಿ ಮತ್ತು IVF ತಜ್ಞ ಡಾ. ಶೋಭಾ ಗುಪ್ತಾ ಅವರು ಹಾಲುಣಿಸುವ ತಾಯಿ ಅಲ್ಕೊಹಾಲ್ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತಾರೆ. ಅಲ್ಕೋಹಾಲ್ ಸೇವಿಸಿದ ನಂತರ ಸುಮಾರು ಅರ್ಧ ಘಂಟೆಯವರೆಗೆ ಇದು ರಕ್ತದಲ್ಲಿ ಉಳಿಯುತ್ತದೆ, ಆದ್ದರಿಂದ ಈ ಸಮಯದಲ್ಲಿ ಮಗುವಿಗೆ ಹಾಲುಣಿಸಬಾರದು ಎಂದು ಸೂಚಿಸುತ್ತಾರೆ.