ತೂಕ ಇಳಿಸಿಕೊಳ್ಳೋದು ಈಗಿನ ದಿನಗಳಲ್ಲಿ ಪ್ರತಿಯೊಬ್ಬರ ಗುರಿ. ಇದಕ್ಕಾಗಿ ಜನರು ಉಪವಾಸ ಮಾಡ್ತಾರೆ. ಆದ್ರೆ ಎಲ್ಲರಿಗೂ ಎಲ್ಲ ಉಪವಾಸ ಕ್ರಮ ಒಳ್ಳೆಯದಲ್ಲ. ಕೆಲವೊಂದು ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಹುಷಾರ್.
ಬೊಜ್ಜು ಹೆಚ್ಚಾಗ್ತಿರುವ ಈ ಸಮಯದಲ್ಲಿ ಜನರಿಗೆ ತೂಕ ಇಳಿಕೆ ಅನಿವಾರ್ಯವಾಗಿದೆ. ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ, ಒತ್ತಡದ ಜೀವನ ಜನರ ತೂಕ ಹೆಚ್ಚಿಸುತ್ತದೆ. ಒಮ್ಮೆ ತೂಕದಲ್ಲಿ ಏರಿಕೆ ಕಂಡು ಬಂದ್ರೆ ಅದನ್ನು ನಿಯಂತ್ರಿಸೋದು ಕಷ್ಟ. ದೇಹಕ್ಕೆ ಹೆಚ್ಚು ಶ್ರಮವಿಲ್ಲದೆ ತೂಕ ಇಳಿಸೋದು ಹೇಗೆ ಎಂಬ ಪ್ರಶ್ನೆಯಲ್ಲಿ ಜನರಿರುತ್ತಾರೆ. ಅದಕ್ಕಾಗಿ ಔಷಧಿ, ಮಾತ್ರೆ ಸೇವನೆ ಮಾಡ್ತಾರೆ. ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾಗ್ತಾರೆ. ಮತ್ತೆ ಕೆಲವರ ಉಪವಾಸದ ಮೊರೆ ಹೋಗ್ತಾರೆ. ವಾರದಲ್ಲಿ ಒಮ್ಮೆ ಉಪವಾಸ ಮಾಡೋದು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ನಾವು ಹೇಗೆ ಉಪವಾಸ ಮಾಡುತ್ತಿದ್ದೇವೆ ಎಂಬುದು ಮುಖ್ಯ. ಈಗಿನ ದಿನಗಳಲ್ಲಿ ಹೊಸ ಹೊಸ ಡಯಟ್ ಜಾರಿಯಲ್ಲಿದ್ದು, ಅದ್ರಲ್ಲಿ ಕೆಲವು ಜನರ ಪ್ರಾಣ ತೆಗೆಯುವಷ್ಟು ಅಪಾಯಕಾರಿಯಾಗಿರುತ್ತದೆ. ನಾವಿಂದು ಹೇಳ್ತಿರುವ ಮಧ್ಯಂತರ ಉಪವಾಸ ಕೂಡ ನೀವಂದುಕೊಂಡಷ್ಟು ಆರೋಗ್ಯಕ್ಕೆ ಯೋಗ್ಯವಲ್ಲ. ಮಧ್ಯಂತರ ಉಪವಾಸ ಎಂದ್ರೇನು, ಅದ್ರ ಲಾಭ – ನಷ್ಟವೇನು ಎಂಬ ವಿವರ ಇಲ್ಲಿದೆ.
ಮಧ್ಯಂತರ (Intermittent ) ಉಪವಾಸ ಎಂದ್ರೇನು? : ಕೆಲವು ಗಂಟೆಗಳ ಕಾಲ ಉಪವಾಸ (Fasting) ಮಾಡಿ, ನಂತರ ಆಹಾರ (Food) ವನ್ನು ಸೇವಿಸುವುದು ಈ ಮಧ್ಯಂತರ ಉಪವಾಸದ ಕ್ರಮವಾಗಿದೆ. ಒಮ್ಮೆ ಆಹಾರ ಸೇವನೆ ಮಾಡಿದ ನಂತ್ರ ಮತ್ತೆ ಕೆಲ ಗಂಟೆ ಉಪವಾಸ ಇರಬೇಕಾಗುತ್ತದೆ. ಈ ಉಪವಾಸವು ಹಸಿವಿನ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಕ್ರಮೇಣ ಇದು ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ವಿಧಾನವು ಆಹಾರ ಮತ್ತು ಕ್ಯಾಲೋರಿ ಸೇವನೆಯನ್ನು ನಿಯಂತ್ರಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
1 ಲೋಟ ಹಾಲು ಒಂದು ಖರ್ಜೂರ ತಿಂದು 26 ಕೆಜಿ ಕಳೆದುಕೊಂಡ ನಟ; ಫೋಟೋ ವೈರಲ್
ಇದರಲ್ಲಿ ಜನರು 16 ಗಂಟೆಗಳ ಕಾಲ ಉಪವಾಸ ಮಾಡಿ 8 ಗಂಟೆಗಳ ಕಾಲ ತಿನ್ನಬಹುದು. 16 ಗಂಟೆಗಳ ಉಪವಾಸದ ಸಮಯದಲ್ಲಿ ನೀವು ಘನ ಆಹಾರವನ್ನು ತೆಗೆದುಕೊಳ್ಳಬೇಕಾಗಿಲ್ಲ. ನೀರು, ಚಹಾ, ಕಾಫಿ ಅಥವಾ ನಿಂಬೆ ಪಾನಕದಂತಹ ದ್ರವಗಳನ್ನು ಮಾತ್ರ ತೆಗೆದುಕೊಳ್ಳಬಹುದು. ಕೆಲವರು 5:2 ರ ರೀತಿಯಲ್ಲೂ ಮಧ್ಯಂತರ ಉಪವಾಸ ಮಾಡುತ್ತಾರೆ. ವಾರದ 5 ದಿನಗಳವರೆಗೆ ಸಾಮಾನ್ಯ ಆಹಾರವನ್ನು ಸೇವಿಸಬಹುದು ಮತ್ತು 2 ದಿನ ಉಪವಾಸ ಮಾಡುವುದು ಇದ್ರ ಕ್ರಮವಾಗಿದೆ. ಉಪವಾಸದ ಎರಡು ದಿನ ಜನರು ತರಕಾರಿ, ಹಾಲು ಮತ್ತು ಗಂಜಿಯಂತಹ ಕಡಿಮೆ ಕ್ಯಾಲೋರಿ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ.
ಇದಲ್ಲದೆ ಜನರು ಅಲ್ಟರ್ನೇಟ್ ಡೇ ಫಾಸ್ಟಿಂಗ್ ಕೂಡ ಮಾಡ್ತಾರೆ. ಒಂದು ದಿನ ಆಹಾರ ಸೇವನೆ ಮಾಡಿದ್ರೆ ಒಂದು ದಿನ ಉಪವಾಸ ಇರ್ತಾರೆ. ಮಧ್ಯಂತರ ಉಪವಾಸದಿಂದಾಗುವ ನಷ್ಟ : ಮಧ್ಯಂತರ ಉಪವಾಸ ನಿಮ್ಮ ತೂಕ ಇಳಿಕೆಗೆ ಸಹಾಯವಾಗುತ್ತದೆ ನಿಜ. ಆದ್ರೆ ಇದ್ರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ ಎಂಬ ಸಂಗತಿ ಹೊರಬಿದ್ದಿದೆ. ತಜ್ಞರ ಪ್ರಕಾರ ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟುಮಾಡುತ್ತದೆ. ಹೃದ್ರೋಗದಿಂದ ಸಾವಿನ ಅಪಾಯವು ಶೇಕಡಾ 91ರಷ್ಟು ಇದ್ರಿಂದ ಹೆಚ್ಚಾಗುತ್ತದೆ ಎಂದು ಅಧ್ಯಯನವು ಪತ್ತೆ ಮಾಡಿದೆ. ಇದು ಎಲ್ಲರಿಗೂ ಹೊಂದಾಣಿಕೆಯಾಗುವ ಉಪವಾಸವಲ್ಲ. ಮಧ್ಯಂತರ ಉಪವಾಸ ಮಾಡುವ ಜನರಿಗೆ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಸಾಧ್ಯತೆ ಹೆಚ್ಚಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
3 ತಿಂಗಳ ಚಿಕಿತ್ಸೆಯಿಂದ 10 ಕೆಜಿ ಕಳೆದುಕೊಂಡ ಯತಿ; ಮಗನ ಆರೋಗ್ಯದ ಬಗ್ಗೆ ಸತ್ಯ ಬಿಚ್ಚಿಟ್ಟ ಪರಿಮಳ
ದೀರ್ಘ ಸಮಯದ ಕಾಲ ಉಪವಾಸ ಇರುವ ಕಾರಣ ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಅಲ್ಲದೆ ಇದ್ರಿಂದ ಮೂಡ್ ಸ್ವಿಂಗ್ ಆಗುತ್ತದೆ. ಕೀಲು ನೋವು ಕಾಣಿಸಿಕೊಳ್ಳುವ ಅಪಾಯವಿದೆ. ಅನೇಕರಿಗೆ ತೀವ್ರ ಹಸಿವು ಕಾಡುತ್ತದೆ. ಇದ್ರಿಂದ ತಲೆತಿರುಗುವಿಕೆ, ಒತ್ತಡದ ಸಮಸ್ಯೆ ಹೆಚ್ಚಾಗುತ್ತದೆ.