ಭಾರತದಲ್ಲಿ ಹೃದಯಾಘಾತದ ಜೊತೆಗೆ ಕ್ಯಾನ್ಸರ್ ಪ್ರಮಾಣ ಕೂಡ ಹೆಚ್ಚಾಗಿದೆ. ಕ್ಯಾನ್ಸರ್ ನಲ್ಲಿ ಸಾಕಷ್ಟು ವಿಧಾನವಿದೆ. ಅದ್ರಲ್ಲಿ ತಲೆ – ಕುತ್ತಿಗೆ ಕ್ಯಾನ್ಸರ್ ಕೂಡ ಸೇರಿದ್ದು, ದಿನೇ ದಿನೇ ಇದರಿಂದ ಬಳಲುವವರ ಸಂಖ್ಯೆ ಹೆಚ್ಚಾಗ್ತಿದೆ.
ಭಾರತ ಸೇರಿ ವಿಶ್ವದಾದ್ಯಂತ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣ ವೇಗವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಚಿಕಿತ್ಸೆ ಪಡೆಯಲು ಹಣ ಹಾಗೂ ಸೌಲಭ್ಯವಿರದ ಜನರಲ್ಲಿ ಇದು ಹೆಚ್ಚು ಕಾಡುತ್ತಿದೆ. ಕಾರ್ಮಿಕರಲ್ಲಿ, ಬಡವರಲ್ಲಿ ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್ ತೀವ್ರ ಸ್ವರೂಪದಲ್ಲಿ ಬೆಳೆಯುತ್ತಿದೆ. ತಂಬಾಕು ಸೇವನೆ ಮಾಡುವವರಲ್ಲಿ ಈ ಕ್ಯಾನ್ಸರ್ ಅಪಾಯ ಹೆಚ್ಚು.
ರಾಜೀವ್ ಗಾಂಧಿ ಕ್ಯಾನ್ಸರ್ (Cancer) ಸಂಸ್ಥೆ ಮತ್ತು ಸಂಶೋಧನಾ (Research) ಕೇಂದ್ರ ನಡೆಸಿದ ತಲೆ ಮತ್ತು ಕತ್ತಿನ ಕ್ಯಾನ್ಸರ್ ಕುರಿತು ಕಾರ್ಯಕ್ರಮದಲ್ಲಿ ಈ ವಿಷ್ಯ ಬಹಿರಂಗವಾಗಿದೆ. ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಭಾರತದಲ್ಲಿನ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಶೇಕಡಾ 30ರಷ್ಟಿದೆ. 2040 ರ ವೇಳೆಗೆ ಇದು ಶೇಕಡಾ 50ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕ್ಯಾನ್ಸರ್ ಕಾರ್ಮಿಕ (Workers) ರಿಗೆ ಹೆಚ್ಚು ಕಾಡಲು ಕಾರಣವಿದೆ. ಒಂದಲ್ಲ ಒಂದು ರೀತಿಯಲ್ಲಿ ಶೇಕಡಾ 60ರಷ್ಟು ಕಾರ್ಮಿಕರು ಯಾವುದಾದರೂ ರೂಪದಲ್ಲಿ ತಂಬಾಕನ್ನು ಸೇವಿಸುತ್ತಾರೆ. ಹಾಗಾಗಿ ಸಮಾಜದಲ್ಲಿ ದೊಡ್ಡ ಅಪಾಯ ಈ ವರ್ಗದ ಜನರಿಗೆ ಎಂದು ತಜ್ಞರು ಹೇಳಿದ್ದಾರೆ.
ಈ ಮಹಿಳೆಗೆ ಬ್ರೇನ್ ಟ್ಯೂಮರ್ ಇರುವುದನ್ನು ತೋರಿಸಿಕೊಟ್ಟಿದ್ದೊಂದು ಸೆಲ್ಫೀ!
ಈ ಕ್ಯಾನ್ಸರ್ ತಡೆಗಟ್ಟುವ ಕ್ರಮಗಳು ಬಹಳ ಮುಖ್ಯ. ರೋಗವನ್ನು ಆರಂಭಿಕವಾಗಿ ಪತ್ತೆ ಮಾಡಿದಾಗ ಚಿಕಿತ್ಸೆ ಸುಲಭವಾಗುತ್ತದೆ. ಆರಂಭಿಕ ರೋಗ ಪತ್ತೆ ಇಲ್ಲಿ ಮುಖ್ಯವಾಗುತ್ತದೆ. ಆರಂಭಿಕ ಹಂತಗಳಲ್ಲಿ ಪತ್ತೆಯಾದರೆ ಶೇಕಡಾ 80ರಷ್ಟು ಕ್ಯಾನ್ಸರ್ ರೋಗಿಗಳು ಗುಣಮುಖರಾಗುವ ಸಾಧ್ಯತೆ ಇರುತ್ತದೆ.
ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದ್ರ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಗುಣಪಡಿಸುವಲ್ಲಿ ತಂತ್ರಜ್ಞಾನದ ಪಾತ್ರದ ಬಗ್ಗೆ ಚರ್ಚಿಸಲಾಗಿದೆ. ಎಐ ಅಲ್ಗಾರಿದಮ್‌ಗಳು ಕ್ಯಾನ್ಸರ್ ಮಾದರಿಗಳನ್ನು ತ್ವರಿತವಾಗಿ ಗುರುತಿಸುತ್ತವೆ. ಇದರಿಂದಾಗಿ ರೋಗದ ರೋಗನಿರ್ಣಯದ ನಿಖರತೆ ಹೆಚ್ಚಾಗುತ್ತದೆ. ಸಮಯವೂ ಕಡಿಮೆಯಾಗುತ್ತದೆ. ಕುತ್ತಿಗೆ ಮತ್ತು ತಲೆ ಕ್ಯಾನ್ಸರನ್ನು ಬಡವರ ಕ್ಯಾನ್ಸರ್ ಎನ್ನಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.
ತಲೆ ಮತ್ತು ಕತ್ತಿನ ಕ್ಯಾನ್ಸರ್ ಸಾಮಾನ್ಯವಾಗಿ ನಿಮ್ಮ ಬಾಯಿ, ಗಂಟಲು ಅಥವಾ ಧ್ವನಿ ಪೆಟ್ಟಿಗೆಯ ಕೋಶಗಳಲ್ಲಿ ಪ್ರಾರಂಭವಾಗುವ ಹಲವಾರು ರೀತಿಯ ಕ್ಯಾನ್ಸರ್ ಅನ್ನು ಒಳಗೊಂಡಿರುತ್ತದೆ. ಈ ಕೋಶಗಳನ್ನು ಸ್ಕ್ವಾಮಸ್ ಕೋಶಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ನಿಮ್ಮ ಸೈನಸ್ ಅಥವಾ ಲಾಲಾರಸ ಗ್ರಂಥಿಗಳಲ್ಲಿ ರೂಪುಗೊಳ್ಳುತ್ತದೆ. ಜೀವಕೋಶಗಳು ಕ್ಯಾನ್ಸರ್ ಕೋಶಗಳಾಗಿ ಬದಲಾದ ನಂತರ ಹೆಚ್ಚಿನ ತಲೆ ಮತ್ತು ಕತ್ತಿನ ಕ್ಯಾನ್ಸರ್ಗಳನ್ನು ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಎಂದು ವರ್ಗೀಕರಿಸಲಾಗಿದೆ.
ತಲೆ ಮತ್ತು ಕತ್ತಿನ ಕ್ಯಾನ್ಸರ್ ವಿಧಗಳು : ತಲೆ ಮತ್ತು ಕತ್ತಿಗೆ ಕ್ಯಾನ್ಸರ್ ಅನ್ನು ಅನೇಕ ಬಗೆಯಲ್ಲಿ ವಿಂಗಡಿಸಲಾಗಿದೆ. ಬಾಯಿ ಕ್ಯಾನ್ಸರ್, ಓರೊಫಾರ್ಂಜಿಯಲ್ ಕ್ಯಾನ್ಸರ್., ಹೈಪೋಫಾರ್ಂಜಿಯಲ್ ಕ್ಯಾನ್ಸರ್, ಲಾರಿಂಜಿಯಲ್ ಕ್ಯಾನ್ಸರ್, ನಾಸೊಫಾರ್ಂಜಿಯಲ್ ಕ್ಯಾನ್ಸರ್, ಲಾಲಾರಸ ಗ್ರಂಥಿಯ ಕ್ಯಾನ್ಸರ್, ಮೂಗಿನ ಕುಹರ ಮತ್ತು ಪರಾನಾಸಲ್ ಸೈನಸ್ ಕ್ಯಾನ್ಸರ್ ಎಂದು ವಿಂಗಡಿಸಲಾಗಿದೆ. ತಲೆ ಮತ್ತು ಕತ್ತಿನ ಕ್ಯಾನ್ಸರ್ ರೋಗನಿರ್ಣಯ ಮಾಡಲು ಕಷ್ಟವಾಗಬಹುದು ಏಕೆಂದರೆ ರೋಗಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ ಮತ್ತು ಶೀತ ಅಥವಾ ನೋಯುತ್ತಿರುವ ಗಂಟಲಿನಂತಹ ಕಡಿಮೆ ಗಂಭೀರ ಪರಿಸ್ಥಿತಿಗಳನ್ನು ಹೊಂದಿರುತ್ತದೆ.
Womens Health : ನಿರ್ಜಲೀಕರಣವೂ ಈ ಕ್ಯಾನ್ಸರ್ ಲಕ್ಷಣ!
ನಿರಂತರ ನೋಯುತ್ತಿರುವ ಗಂಟಲು, ಆಗಾಗ್ಗೆ ಬರುವ ತಲೆನೋವು, ಒರಟಾಗುವ ಧ್ವನಿ, ಅಗಿಯುವಾಗ ಅಥವಾ ನುಂಗುವಾಗ ನೋವು, ಹಲ್ಲುಗಳಲ್ಲಿ ನೋವು, ನಿರಂತರವಾಗಿ ಕಾಡುವ ಕುತ್ತಿಗೆ ನೋವು, ಉಸಿರಾಡಲು ಅಥವಾ ಮಾತನಾಡಲು ತೊಂದರೆ, ಗಂಟಲು, ಬಾಯಿ ಅಥವಾ ಕುತ್ತಿಗೆಯಲ್ಲಿ ಉಂಡೆ, ನಿರಂತರ ಕಿವಿ ನೋವು, ಮೂಗಿನಿಂದ ರಕ್ತಸ್ರಾವ, ಲಾಲಾರಸ ಅಥವಾ ಕಫದಲ್ಲಿ ರಕ್ತಸ್ರಾವ. ವಾಸಿಯಾಗದ ಬಾಯಿ ಅಥವಾ ನಾಲಿಗೆ ಮೇಲಿನ ಗಾಯ ಸೇರಿದೆ.