Health Tips: ನಾಭಿಯಲ್ಲಿದೆ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗೆ ಪರಿಹಾರ

By Suvarna News  |  First Published Jan 24, 2023, 3:16 PM IST

ಭಗವಂತ ಬ್ರಹ್ಮ, ವಿಷ್ಣುವಿನ ನಾಭಿಯಿಂದ ಜನಿಸಿದನೆಂದು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನು ಹುಟ್ಟಿದ್ದು ಹೊಕ್ಕುಳಿನಿಂದಲೇ. ಹೊಕ್ಕುಳವು ದೇಹದ ಮೊದಲ ಮೆದುಳಾಗಿದ್ದು, ಅದಕ್ಕೆ ಎಣ್ಣೆ ಹಾಕಿ ಆರೈಕೆ ಮಾಡ್ಬೇಕು.
 


ತಾಯಿ – ಮಗುವನ್ನು ಹೊಟ್ಟೆಯಲ್ಲಿ ಸೇರಿಸುವ ಒಂದು ಅಂಗ ನಾಬಿ. ಈ ಹೊಕ್ಕುಳ ಬಳ್ಳಿಯನ್ನು ಮಗು ಹೊರಗೆ ಬರ್ತಿದ್ದಂತೆ ಕತ್ತರಿಸಲಾಗುತ್ತದೆ. ನಂತ್ರ ನವಜಾತ ಶಿಶುವಿನ ನಾಬಿಯನ್ನು ಜಾಗೃತೆಯಿಂದ ನೋಡಿಕೊಳ್ಳಲಾಗುತ್ತದೆ. ನಾಬಿ ಮನುಷ್ಯದ ದೇಹದ ಮುಖ್ಯ ಅಂಗವೆಂದ್ರೆ ತಪ್ಪಾಗಲಾರದು. ಯೋಗ (Yoga), ಆಯುರ್ವೇದ (Ayurveda) ದಲ್ಲಿ ಈ ನಾಬಿಯ ಬಗ್ಗೆ ಅನೇಕ ಆಸಕ್ತಿಕರ ಸಂಗತಿಯನ್ನು ನಾವು ತಿಳಿಯಬಹುದು. ಹೊಕ್ಕಳು (Navels) ಪ್ರತಿಯೊಬ್ಬ ವ್ಯಕ್ತಿಗೂ ಒಂದೇ ರೀತಿ ಇರೋದಿಲ್ಲ ಎಂಬುದು ನಿಮಗೆ ತಿಳಿದಿದೆ. ಆದ್ರೆ ಹೊಕ್ಕುಳು ಮೊಟ್ಟೆ ಇಡುವ ಪ್ರಾಣಿಗಳಲ್ಲಿ ಕಂಡು ಬರೋದಿಲ್ಲ. ಮನುಷ್ಯನ ದೇಹದ 72 ಸಾವಿರ ನಾಡಿಗಳ ಮೂಲ ಕೇಂದ್ರ ಬಿಂದು ನಾಬಿ. ಶರೀರದ ಹಾರ್ಮೋನ್ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಉಸಿರಾಟದ ವ್ಯವಸ್ಥೆಯನ್ನು ಆರೋಗ್ಯವಾಗಿಡುವ ಕೆಲಸ ನಾಬಿಯದ್ದು. ವಾತ, ಪಿತ್ತ ಮತ್ತು ಕಫವನ್ನು ಬ್ಯಾಲೆನ್ಸ್ ಮಾಡುವ ಕೆಲಸವನ್ನು ಕೂಡ ಇದೇ ಹೊಕ್ಕಳು ಮಾಡುತ್ತದೆ. 


ಸಾವಿನ ನಂತರವೂ ಆತ್ಮವು ಹೊಕ್ಕುಳಲ್ಲಿ 6 ನಿಮಿಷಗಳ ಕಾಲ ಇರುತ್ತದೆ ಎಂದು ಹೇಳಲಾಗುತ್ತದೆ. ದೇಹದಲ್ಲಿ ಮೆದುಳಿಗಿಂತ ಹೊಕ್ಕುಳೇ ಮುಖ್ಯ. ಹೊಕ್ಕುಳು ದೇಹದ ಮೊದಲ ಮೆದುಳು ಎನ್ನಲಾಗುತ್ತದೆ. ಸಪ್ತ ದಾತುವಿನಲ್ಲಿ ಶಕ್ತಿ ಹೆಚ್ಚಿಸುವ ಕೆಲಸವನ್ನು ನಾಬಿ ಮಾಡುತ್ತದೆ.  ಯೋಗ ಶಾಸ್ತ್ರದಲ್ಲಿ ನಾಭಿ ಚಕ್ರವನ್ನು ಮಣಿಪುರ ಚಕ್ರ ಎಂದು ಕರೆಯಲಾಗುತ್ತದೆ. ಹೊಕ್ಕುಳದ ಮೂಲದಲ್ಲಿರುವ ರಕ್ತದ ಬಣ್ಣದ ಈ ಚಕ್ರವು ದೇಹದ ಅಡಿಯಲ್ಲಿ ಮಣಿಪುರ ಎಂದು ಕರೆಯಲ್ಪಡುವ ಮೂರನೇ ಚಕ್ರವಾಗಿದೆ. ಇದು ಕಮಲದ ದಳಗಳ 10 ಗುಂಪುಗಳಿಂದ ಮಾಡಲ್ಪಟ್ಟಿದೆ.  

Tap to resize

Latest Videos

ನಾಬಿ ಕ್ರಿಯಾಶೀಲವಾಗಿರುವುದು, ಆರೋಗ್ಯವಾಗಿರುವುದ ಬಹಳ ಮುಖ್ಯ. ನಮ್ಮ ಹೊಕ್ಕುಳು ಆರೋಗ್ಯವಾಗಿದ್ದರೆ ಆಯಸ್ಸು ವೃದ್ಧಿಸುತ್ತದೆ. ನಾವು ಆರೋಗ್ಯವಾಗಿರಬಹುದು. ವಾತ, ಪಿತ್ತ ಕಫ ನಮ್ಮ ದೇಹದಲ್ಲಿ ಬ್ಯಾಲೆನ್ ಆಗುವ ಜೊತೆಗೆ ಎಲ್ಲ ಹೊಲಸುಗಳು ದೇಹದಿಂದ ಸರಾಗವಾಗಿ ಹೊರಗೆ ಹೋಗುತ್ತದೆ.  ನಾವೆಲ್ಲ ನಮ್ಮ ದೇಹದ ಇತರ ಭಾಗಗಳ ಆರೈಕೆಗೆ ಹೆಚ್ಚು ಮಹತ್ವ ನೀಡ್ತೇವೆ. ಆದ್ರೆ ಹೊಕ್ಕಳಿನ ಆರೋಗ್ಯವನ್ನು ಮರೆಯುತ್ತೇವೆ. ವಾಸ್ತವವಾಗಿ ನಾಬಿ ಆರೋಗ್ಯ ಕಾಪಾಡುವುದು ಬಹಳ ಸರಳ. ಅದಕ್ಕೆ ಎಣ್ಣೆ ಹಾಕಿದ್ರೆ ಸಾಕು. 

ನಾಬಿಗೆ ಎಣ್ಣೆ ಹಾಕಿದ್ರೆ ಆರೋಗ್ಯ ಸುಧಾರಿಸುತ್ತದೆ ನಿಜ. ಆದ್ರೆ ಯಾವ ಋತುವಿನಲ್ಲಿ ಯಾವ ಎಣ್ಣೆ ಹಾಕ್ಬೇಕು ಎಂಬ ಪ್ರಶ್ನೆ ಬರುತ್ತದೆ. ಮಳೆಗಾಲದಲ್ಲಿ ನೀವು ಸಾಸಿವೆ ಎಣ್ಣೆಯನ್ನು ನಾಬಿಗೆ ಹಾಕಬೇಕು. ಹಾಗೆಯೇ ಚಳಿಗಾಲದಲ್ಲಿ ತೆಂಗಿನ ಎಣ್ಣೆ ಬಳಸಿದ್ರೆ, ಬೇಸಿಗೆ ಕಾಲದಲ್ಲಿ ನೀವು ಹರಳೆಣ್ಣೆಯನ್ನು ನಾಬಿಗೆ ಹಾಕಬೇಕು. 

ನಾಬಿಗೆ ಎಣ್ಣೆ ಹಾಕುವ ವಿಧಾನ : ಮೊದಲು ನೀವು ನೇರವಾಗಿ ಮಲಗಿಕೊಳ್ಳಿ. ನಾಬಿಗೆ ಎರಡರಿಂದ ಆರು ಹನಿ ಎಣ್ಣೆಯನ್ನು ಹಾಕಿ. ಎಣ್ಣೆ ಹಾಕಿದ ಮೇಲೆ ಅರ್ಧ ಗಂಟೆ ಹಾಗೆಯೇ ಮಲಗಿರಬೇಕು. ಅತ್ತಿತ್ತ ಹೊರಳಾಡಬಾರದು. ನಿಮಗೆ ಸಾಧ್ಯವೆಂದ್ರೆ ನೀವು ಯೋಗ ನಿದ್ರೆಯನ್ನು ಮಾಡಬಹುದು.  

HEALTH TIPS: ನಿಮ್ಮ ಎತ್ತರ ಹೆಚ್ಚಾದಂತೆ ಕ್ಯಾನ್ಸರ್ ಅಪಾಯ ಹೆಚ್ಚು!

ಯಾರ್ಯಾರು ನಾಬಿಗೆ ಎಣ್ಣೆ ಹಾಕಬಹುದು? : ನಾಬಿಗೆ ಎಲ್ಲ ವಯಸ್ಸಿನ ಜನರು ಎಣ್ಣೆ ಹಾಕಬಹುದು. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಈ ವಿಧಾನದ ಮೂಲಕ ಹೊಕ್ಕಳಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಆದ್ರೆ ಗರ್ಭಿಣಿಯರು ಮಾತ್ರ ವೈದ್ಯರ ಸಲಹೆ ಪಡೆದು ಎಣ್ಣೆ ಬಳಸುವುದು ಯೋಗ್ಯ.  

Health Tips: ಕಾಲು ನೋವು ನಿರ್ಲಕ್ಷ್ಯಿಸಬೇಡಿ: ದೇಹದಲ್ಲಿನ ಈ ಸಮಸ್ಯೆ ಲಕ್ಷಣವಿರಬಹುದು!

ಹೊಕ್ಕುಳಿಗೆ ಎಣ್ಣೆ ಹಾಕುವುದ್ರಿಂದಾಗುವ ಲಾಭ : ಹೊಕ್ಕುಳಿಗೆ ಎಣ್ಣೆ ಹಾಕುವುದ್ರಿಂದ  ವಾತ ಮತ್ತು ಪಿತ್ತ ಬ್ಯಾಲೆನ್ಸ್ ಆಗುತ್ತದೆ. ನೋವು ಮತ್ತು ಒತ್ತಡ ಕಡಿಮೆಯಾಗುತ್ತದೆ. ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ನಿದ್ರೆ ಸಮಸ್ಯೆ ದೂರವಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ. ಹೊಳೆಯುವ ಚರ್ಮ ಪಡೆಯಬಹುದು. ಸೂಕ್ಷ್ಮ ಶಕ್ತಿಯ ಕೇಂದ್ರ ಜಾಗೃತವಾಗುತ್ತದೆ. ಸುಸ್ತು, ಆಯಾಸ ಕಾಡುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಧುಮೇಹ, ಹೃಯದ ಖಾಯಿಲೆ, ಮೆದುಳಿನ ಖಾಯಿಲೆ ಸೇರಿದಂತೆ ಯಾವುದೇ ಖಾಯಿಲೆ ನಿಮ್ಮನ್ನು ಕಾಡುವುದಿಲ್ಲ. 

click me!