ಪಾರಿಜಾತ ಪುರಾಣ; ಆರೋಗ್ಯಕ್ಕೆ ರಾಮಬಾಣ

By Suvarna News  |  First Published Aug 17, 2020, 2:26 PM IST

ಸಾಮಾನ್ಯವಾಗಿ ಕೆಳಗೆ ಬಿದ್ದ ಹೂವುಗಳನ್ನು ದೇವರಿಗೇರಿಸುವುದಿಲ್ಲ. ಆದರೆ, ಸ್ವರ್ಗದ ವೃಕ್ಷಗಳಾದ ಕಾರಣ ಪಾರಿಜಾತ ಹಾಗೂ ಬಕುಳದ ಹೂವುಗಳು ನೆಲಕ್ಕೆ ಬಿದ್ದರೂ ದೇವರ ಮುಡಿಗೇರಲು ಅರ್ಹವಾಗಿವೆ ಎಂಬ ನಂಬಿಕೆ ಇದೆ. 


ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ ಸಸ್ಯಕ್ಕೆ ಪ್ರೇಮಿಗಳ ಮರ, ದುಃಖದ ಮರ, ಸಂಜೆಮಲ್ಲಿಗೆ, ರಾತ್ರಿರಾಣಿ ಮುಂತಾದ ಹೆಸರುಗಳಿವೆ. 

ಮಲ್ಲಿಗೆಯಂಥ ದಳಗಳು, ಕೇಸರಿ ಬಣ್ಣದ ತೊಟ್ಟುಗಳನ್ನು ಹೊಂದಿ ಮರದ ತುಂಬಾ ನಕ್ಷತ್ರಗಳಂತೆ ಹೊಳೆಯುವ ಪಾರಿಜಾತದ ಚೆಲುವು ಬಹಳ ಆಕರ್ಷಕ. ಭಾರತ, ಪಾಕಿಸ್ತಾನ, ಥೈಲ್ಯಾಂಡ್, ನೇಪಾಳ, ಇಂಡೋನೇಶ್ಯಾಗಳಲ್ಲಿ ಕಂಡುಬರುವ ಪಾರಿಜಾತ ಏಷ್ಯಾದ ಎಗ್ಗಿಲ್ಲದ ಚೆಲುವೆ. ಸ್ವರ್ಗದ ಐದು ವೃಕ್ಷಗಳಲ್ಲಿ ಪಾರಿಜಾತವೂ ಇದೆ. ಹೌದು, ಪುರಾಣ ಪುಣ್ಯ ಕತೆಗಳಲ್ಲಿ ಪಾರಿಜಾತ ಹಲವೆಡೆ ಸ್ಥಾನ ಪಡೆದುಕೊಂಡಿದೆ. ಪಾವಿತ್ರತೆಯ ಕಾರಣದಿಂದಲೇ ಮೊನ್ನೆ ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನೆರವೇರಿಸುವಾಗ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಾರಿಜಾತದ ಸಸ್ಯ ನೆಟ್ಟು ಪೂಜೆ ನೆರವೇರಿಸಿದರು. 

Latest Videos

undefined

ಸಮುದ್ರ ಮಂಥನ ಸಮಯದಲ್ಲಿ ಉದಯಿಸಿದ ಐದು ವೃಕ್ಷಗಳಲ್ಲೊಂದು ಪಾರಿಜಾತ. ಪತ್ನಿ ಸತ್ಯಭಾಮೆಗೆ ಪಾರಿಜಾತವನ್ನು ತಂದು ಕೊಡುವ ಸಲುವಾಗಿ ಕೃಷ್ಣನು ಇಂದ್ರನೊಡನೆ ಯುದ್ಧ ಮಾಡಿದ ಕತೆಯೂ ಇದೆ. ಹರಿವಂಶ ಪುರಾಣದಲ್ಲಿ ಈ ವೃಕ್ಷವನ್ನು ಕೇಳಿದ್ದೆಲ್ಲ ಕೊಡುವ ಕಲ್ಪವೃಕ್ಷ ಎಂದು ಕರೆಯಲಾಗಿದೆ. ಸಾಮಾನ್ಯವಾಗಿ ಕೆಳಗೆ ಬಿದ್ದ ಹೂವುಗಳನ್ನು ದೇವರಿಗೇರಿಸುವುದಿಲ್ಲ. ಆದರೆ, ಸ್ವರ್ಗದ ವೃಕ್ಷಗಳಾದ ಕಾರಣ ಪಾರಿಜಾತ ಹಾಗೂ ಬಕುಳದ ಹೂವುಗಳು ನೆಲಕ್ಕೆ ಬಿದ್ದರೂ ದೇವರ ಮುಡಿಗೇರಲು ಅರ್ಹವಾಗಿವೆ ಎಂಬ ನಂಬಿಕೆ ಇದೆ.

ಶ್ವಾಸಕೋಶ ಸಮಸ್ಯೆಗೆ ರುದ್ರಾಕ್ಷಿ ಮದ್ದು

ಹೀಗೆ ಪವಿತ್ರವೆಂದು ಭಾವಿಸಿದ ಪಾರಿಜಾತ ಹೂವು ಮತ್ತು ಎಲೆಗಳಿಂದ ಹಲವಾರು ಆರೋಗ್ಯ ಲಾಭಗಳಿವೆ. ಏನೇನು ನೋಡೋಣ.

- ತಂಪು
ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ ದೇಹದ ಎಲ್ಲೇ ಉರಿ, ಗಾಯ, ಊತಗಳಿದ್ದರೂ ಇದರಿಂದ ತಯಾರಿಸಿದ ಎಣ್ಣೆ ಬಳಸುವುದರಿಂದ ಉರಿ ತಗ್ಗುತ್ತದೆ. ಇದರಲ್ಲಿರುವ ಬೆಂಜೋಯಿಕ್ ಆ್ಯಸಿಡ್ ಹಾಗೂ ಕೆರೋಟಿನ್ ಪಾರಿಜಾತದ ಎಲೆಗೆ ಈ ಗುಣ ನೀಡಿದೆ. 

ಅಷ್ಟಕ್ಕೂ ರುದ್ರಾಕ್ಷಿಗೇಕೆ ಪೂಜೆಯಲ್ಲಿ ಇಷ್ಟು ಮಹತ್ವ

- ಜ್ವರ ಚಿಕಿತ್ಸಕ
ಆಯುರ್ವೇದ ಔಷಧಿಗಳಲ್ಲಿ ಪಾರಿಜಾತದ ಎಲೆಗಳನ್ನು ಮಲೇರಿಯಾ ಹಾಗೂ ಡೆಂಘೆ ಜ್ವರಗಳ ಚಿಕಿತ್ಸೆಗೆ ಔಷಧವಾಗಿ ಬಳಸಲಾಗುತ್ತದೆ. ಜ್ವರದ ಚಿಕಿತ್ಸೆಗೆ ಇದರ ತೊಗಟೆಯೂ ಉಪಯೋಗವಾಗುತ್ತದೆ. ಪಾರಿಜಾತದ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಅಂಗಾಲಿಗೆ ತಿಕ್ಕುವುದರಿಂದ ಜ್ವರ ಕಡಿಮೆಯಾಗುತ್ತದೆ. 

- ನೋವು ನಿವಾರಕ
ಮಂಡಿನೋವಿದ್ದಾಗ ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದರಿಂದ ಉಪಶಮನ ದೊರೆಯುತ್ತದೆ. 

- ಕ್ಯಾನ್ಸರ್ ತಡೆ
ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗದಂತೆ ನೋಡಿಕೊಳ್ಳುವ ಗುಣ ಪಾರಿಜಾತದ ಎಲೆಗಳಿಗಿದೆ. ಇದರಲ್ಲಿರುವ ಅತ್ಯಧಿಕ ಆ್ಯಂಟಿ ಆಕ್ಸಿಡೆಂಟ್ ಗುಣ ಇದಕ್ಕೆ ಕಾರಣವಾಗಿದೆ. 20-25 ಎಲೆಗಳನ್ನು ಗ್ರೈಂಡ್ ಮಾಡಿ ನೀರಿನಲ್ಲಿ ಅರ್ಧದಿಂದ 1 ಗಂಟೆಗಳ ಕಾಲ ಕುದಿಸಿ. ನಂತರ ಶೋಧಿಸಿ ಪ್ರತಿದಿನ ಕುಡಿಯುವ ಅಭ್ಯಾಸ  ಉತ್ತಮ.

- ಕೆಮ್ಮಿಗೆ ಮುಕ್ತಿ
ಪಾರಿಜಾತ ಹೂವು ಹಾಗೂ ಎಲೆಗಳಲ್ಲಿರುವ ಎಥನಾಲ್ ಎಂಬ ಕಾಂಪೌಂಡ್ ಕೆಮ್ಮನ್ನು ಗುಣ ಮಾಡುತ್ತದೆ. ಈ ಗುಣವೇ ಅಸ್ತಮಾ ನಿವಾರಣೆಗೆ ಕೂಡಾ ಸಹಕಾರಿಯಾಗಿದೆ. ಪಾರಿಜಾತ ಎಲೆಗಳನ್ನು ಕುದಿಸಿದ ನೀರಿಗೆ ಸ್ವಲ್ಪ ಶುಂಠಿ ಅಥವಾ ಜೇನುತುಪ್ಪ ಸೇರಿಸಿ ಸೇವಿಸಿ. 

ದ್ರಾಕ್ಷಿ ಮಲಬ್ಧತೆಗೆ ಮದ್ದು

- ಮಲಬದ್ಧತೆ ನಿವಾರಣೆ
ಪಾರಿಜಾತದ ಎಲೆಗಳಲ್ಲಿರುವ ಮಿನರಲ್‌ಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಪಾರಿಜಾತದ ಟೀ(ಕಷಾಯ) ದಿನಕ್ಕೊಮ್ಮೆ ಸೇವಿಸಿದರೆ ಸಾಕು. 

- ಮೂಳೆ ಸವೆತ ತಪ್ಪಿಸುತ್ತದೆ
ದೇಹದಲ್ಲಿ ಮೂಳೆ ಸವೆತ ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿ ಪಾರಿಜಾತ ಕಷಾಯಕ್ಕಿದೆ. ಏಕೆಂದರೆ ಪಾರಿಜಾತ ಎಲೆಯ ಕಷಾಯದಲ್ಲಿ ಕಾರ್ಟಿಲೆಜ್ ಎಂಬ ಅಂಶವಿದ್ದು, ಮೂಳೆ ಸವೆದು ಹೋದಾಗ ಮತ್ತೆ ಮೂಳೆಗಳಿಗೆ ಕಾರ್ಟಿಲೆಜ್ ಅಂಶವನ್ನು ಪಾರಿಜಾತ ಕಷಾಯ ನೀಡುತ್ತದೆ.

click me!