ರಾತ್ರಿಯಿಡೀ ಮಳೆಯಲ್ಲೇ ಇತ್ತು ಸೋಂಕಿತನ ಮೃತದೇಹ: ಮಗ ಸತ್ತ ಸುದ್ದಿ ಕೇಳಿ ತಾಯಿಯೂ ಸಾವು..!

By Suvarna NewsFirst Published Aug 14, 2020, 6:57 PM IST
Highlights

ಮಗ ಕೊರೋನಾದಿಂದ ಮೃತಪಟ್ಟ ಸುದ್ದಿ ಕೇಳಿ ತಾಯಿಯೂ ಶಾಕ್‌ನಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿಯ ಮಂಗಲಪೇಟೆಯಲ್ಲಿ ನಡೆದಿದೆ.

ಹೈದರಾಬಾದ್(ಆ.14): ಮಗ ಕೊರೋನಾದಿಂದ ಮೃತಪಟ್ಟ ಸುದ್ದಿ ಕೇಳಿ ತಾಯಿಯೂ ಶಾಕ್‌ನಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿಯ ಮಂಗಲಪೇಟೆಯಲ್ಲಿ ನಡೆದಿದೆ.

ಮಗ ಕೊರೋನಾದಿಂದ ಮೃತಪಟ್ಟಾಗ ತಾಯಿ ಆಘಾತಕ್ಕೊಳಗಾಗಿದ್ದಾರೆ. ಕುಟುಂಬದ 13 ಜನರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಎಲ್ಲರನ್ನೂ ಹೋಂ ಕ್ವಾರೆಂಟೈನ್ ಮಾಡಲಾಗಿದೆ.

ಕೊರೋನಾದಿಂದ ಬಳಲುತ್ತಿರುವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಗಂಭೀರ

ನಾರಾಯಂಕೇಡ್‌ನಲ್ಲಿ ಜೊತೆಯಾಗಿ ವಾಸಿಸುತ್ತಿದ್ದ ಕುಟುಂಬದಲ್ಲಿಯುವಕ ಹಾಗೂ ಆತನ ಪತ್ನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಮನೆಯಲ್ಲಿ ಮಕ್ಕಳೂ, ಹಿರಿಯರೂ ಇದ್ದರೂ ವೈದ್ಯರು ಅವರನ್ನು ಕ್ವಾರೆಂಟೈನ್‌ನಲ್ಲಿರುವಂತೆ ಹೇಳಿದ್ದರು.

ಮರುದಿನ ಕುಟುಂಬದ ಇನ್ನು 5 ಜನರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಅವರನ್ನೂ ಹೋಂ ಕ್ವಾರೆಂಟೈನ್ ಮಾಡಲಾಯಿತು. ಹಾಗೂ ಸತ್ವಯುತ ಆಹಾರ ಸೇವಿಸಲು ವೈದ್ಯರು ಸಲಹೆ ಕೊಟ್ಟರು. ವ್ಯಕ್ತಿಯ ತಾಯಿಗೆ ಉಸಿರಾಟದ ತೊಂದರೆ ಇದ್ದರೂ, ಕೊರೋನಾ ನೆಗೆಟಿವ್ ಬಂದಿತ್ತು.

ರಾತ್ರಿ ಪೂರಾ ಮಳೆಯಲ್ಲೇ ನೆನೆದ ಸೋಂಕಿತನ ಮೃತದೇಹ

ತಡ ರಾತ್ರಿ ವ್ಯಕ್ತಿ ಸೋಫಾದಲ್ಲಿ ಮಲಗಿದ್ದಾಗ ಅಲ್ಲಿಯೇ ಮೃತಪಟ್ಟಿದ್ದಾನೆ. ವ್ಯಕ್ತಿಯನ್ನು ಮುಟ್ಟಲು ಹೆದರಿದ ಕುಟುಂಬಸ್ಥರು ಸೋಫಾ ಸಮೇತ ಮೃತದೇಹ ಎತ್ತಿ ಹೊರಗಿಟ್ಟಿದ್ದರು. ರಾತ್ರಿ ಪೂರಾ ಆತನ ಮೃತದೇಹ ಮಳೆಯಲ್ಲೇ ನೆನೆಯುತ್ತಿತ್ತು. ಮರುದಿನ ತಾಯಿಗೆ ವಿಷಯ ತಿಳಿಸಲಾಗಿತ್ತು. ವಿಷಯ ತಿಳಿದು ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊರೋನಾ; ಮೃತಪಟ್ಟ ತಂದೆ ದೇಹ ನೋಡಲು ಸ್ಮಶಾನದಲ್ಲಿ ಆಸ್ಪತ್ರೆಯ ಚೌಕಾಶಿ ವ್ಯವಹಾರ!

ಆಸುಪಾಸಿನ ಜನರೂ ಅವರ ನೆರವಿಗೆ ಬರಲಿಲ್ಲ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ಮರುದಿನ ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ಮೃತದೇಹವನ್ನು ಚಿತಾಗಾರಕ್ಕೆ ಒಯ್ದಿದ್ದಾರೆ. ಸಿಬ್ಬಂದಿ ಕುಟುಂಬಸ್ಥರನ್ನು ಮೊದಲೇ ಆಸ್ಪತ್ರೆಗೆ ದಾಖಲಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದಿದ್ದಾರೆ ಸ್ಥಳೀಯರು

click me!