ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ..!

By Suvarna News  |  First Published Aug 14, 2020, 6:02 PM IST

ಕೊರೋನಾ ಪಾಸಿಟಿವ್ ಇರುವ ವ್ಯಕ್ತಿ ಬಳಿ ಹಲವು ನಿಮಿಷಗಳ ಕಾಲ ಹತ್ತಿರದಿಂದ ಮಾತನಾಡುವುದೋ, ಸಂಪರ್ಕಿಸುವುದು ಮಾಡಬೇಕು. ಇಲ್ಲದೇ ಇದ್ದಲ್ಲಿ ಸಾಮಾನ್ಯವಾಗಿ ಗಾಳಿಯಲ್ಲಿ ಕೊರೋನಾ ಹರಡುವುದಿಲ್ಲ ಎಂಬ ಸುದ್ದಿ ಇದೀಗ ಜನರಲ್ಲಿ ಸ್ವಲ್ಪ ನಿರಾಳ ತಂದಿದೆ.


ಕೊರೋನಾ ವೈರಸ್ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹರಡಲಾರಂಭಿಸಿದಾಗಿನಿಂದಲೂ ಉಸಿರಾಟದ ಮೂಲಕ ಕೊರೋನಾ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಲೇ ಬಂದಿದೆ.

ಆದರೆ ಈ ರೀತಿ ಉಸಿರಾಟದಿಂದ ಕೊರೋನಾ ಹರಡಬೇಕಾದರೆ ನೀವು ಕೊರೋನಾ ಪಾಸಿಟಿವ್ ಇರುವ ವ್ಯಕ್ತಿ ಬಳಿ ಹಲವು ನಿಮಿಷಗಳ ಕಾಲ ಹತ್ತಿರದಿಂದ ಮಾತನಾಡುವುದೋ, ಸಂಪರ್ಕಿಸುವುದು ಮಾಡಬೇಕು. ಇಲ್ಲದೇ ಇದ್ದಲ್ಲಿ ಸಾಮಾನ್ಯವಾಗಿ ಗಾಳಿಯಲ್ಲಿ ಕೊರೋನಾ ಹರಡುವುದಿಲ್ಲ ಎಂಬ ಸುದ್ದಿ ಇದೀಗ ಜನರಲ್ಲಿ ಸ್ವಲ್ಪ ನಿರಾಳ ತಂದಿದೆ.

Tap to resize

Latest Videos

ಈ ಕಾರಣಕ್ಕಾಗಿ ಈರುಳ್ಳಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ..!

ಒಂದು ವೇಳೆ ರೋಗಿ ಕೆಮ್ಮಿದರೆ ಅಥವಾ ಸೀನಿದರೂ ನೀವು ವ್ಯಕ್ತಿಯಿಂದ 6 ಅಡಿ ಅಂತದಲ್ಲಿದ್ದರೆ ಮತ್ತು ಮಾಸ್ಕ್ ಧರಿಸಿಕೊಂಡಿದ್ದರೆ ಯಾವುದೇ ಅಪಾಯವಿಲ್ಲ. ಆದರೆ ಈ ಹಿಂದೆ ಈ ವಾದ ಒಪ್ಪುತ್ತಿರಲಿಲ್ಲ.

ಚೀನಾದ ಏಸಿ ರೆಸ್ಟೊರೆಂಟ್ ಒಂದರಲ್ಲಿ ಕಲುಷಿತ ಗಾಳಿಯಲ್ಲಿದ್ದ ಸೋಂಕು ಮೂರು ಪ್ರತ್ಯೇಕ ಟೇಬಲ್‌ನಲ್ಲಿದ್ದ ಗ್ರಾಹಕರಿಗೆ ತಗುಲಿತ್ತು. ಅಮೆರಿಕದಲ್ಲಿ 52 ಜನ ಗಾಯಕರು ಒಂದೇ ಹಾಲ್‌ನಲ್ಲಿ ಅಭ್ಯಾಸ ಮಾಡಿದ ಸಂದರ್ಭ ಕೊರೋನಾ ಸೋಂಕಿಗೆ ತುತ್ತಾದರು. ಇಂತಹ ಘಟನೆ ಜಗತ್ತಿನ ಇತರ ರಾಷ್ಟ್ರಗಳಲ್ಲಿಯೂ ವರದಿಯಾಯಿತು. ಹಾಗಾಗಿ ಕೊರೋನಾ ಗಾಳಿಯಲ್ಲಿ ಹರಡುತ್ತದೆ ಎಂದು ಭಾರೀ ಆಂತಕ ಉಂಟಾಯಿತು.

ಶಾಲೆ ಪುನರಾರಂಭ: 2 ವಾರದಲ್ಲಿ ಅಮೆರಿಕದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್..!

ಕಳೆದ ತಿಂಗಳು 239 ವಿಜ್ಞಾನಿ ಹಾಗೂ ಎಂಜಿನಿಯರ್‌ಗಳು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದು ಕೊರೋನಾ ಗಾಳಿಯಲ್ಲಿ ಹರಡುವುದನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದ್ದರು. ಇದರ ನಂತರ ಗಾಳಿಯಲ್ಲಿ ಕೊರೋನಾ ಹರಡುವುದನ್ನು ವಿಶ್ವಸಂಸ್ಥೆಯೂ ಒಪ್ಪಿತು. ಆದರೆ ವಿಶ್ವಸಂಸ್ಥೆ  ಗಾಳಿಯಲ್ಲಿ ಮಾತ್ರ ಕೊರೋನಾ ಹರಡುತ್ತದೆ ಎಂದು ಯಾವತ್ತೂ ಹೇಳಿಲ್ಲ.

ಎಂಜಲು ಮತ್ತು ಏರೋಸಾಲ್ಸ್

ಒಂದು ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚು ಹೊತ್ತು ಸೇರಿದ್ದಾಗ, ಅಲ್ಲಿನ ವೆಂಟಿಲೇಟರ್ ವ್ಯವಸ್ಥೆ ಚೆನ್ನಾಗಿರದಿದ್ದರೆ ಅಂತಹ ಸಂದರ್ಭದಲ್ಲಿ ಕೊರೋನಾ ಗಾಳಿಯಲ್ಲಿ ಹರಡುತ್ತದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಅಮೆರಿಕದ ಗಾಯಕರು ಅಭ್ಯಾಸ ನಡೆಸಿದ ಹಾಲ್‌ನಲ್ಲಿಯೂ ಬಹಳ ಜನ ಬಹಳಷ್ಟು ಹೊತ್ತು ಅಭ್ಯಾಸ ನಡೆಸುತ್ತಿದ್ದ ಕಾರಣ ವೈರಸ್ ಹರಡಿತು.

ಎಷ್ಟರ ಮಟ್ಟಿಗೆ ಪರಸ್ಪರ ಕೊರೋನಾ ಹರಡುಬಹುದು..?

ಕೊರೋನಾ ಎಂಜಲಿನ ಜೊತೆ ಕೆಳಗೆ ಬೀಳುತ್ತದೆಯೇ ಅಥವಾ ಗಾಳಿಯಲ್ಲಿ ತೇಲುತ್ತಿರುತ್ತದೆಯೋ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡುತ್ತಿದೆ. ಚಿಕನ್ ಪೋಕ್ಸ್, ಟ್ಯೂಬರ್‌ಕ್ಲೋಸಿಸ್, ದಡಾರದಂತಹ ರೋಗದ ಸೂಕ್ಷ್ಮ ಅಣುಗಳು ಗಾಳಿ, ಧೂಳಿನಲ್ಲಿರಬಹುದು. ಒಬ್ಬ ದಡಾರಾ ರೋಗಿಯಿಂದ 12ರಿಂದ 18 ಜನರಿಗೆ ಕೊರೋನಾ ಹರಡಬಹುದು. ಆದರೆ ಫ್ಳೂ, ಶೀತ, ಕೆಮ್ಮು ಬಹಳ ಹತ್ತಿರದಿಂದ ಮಾತ್ರ ಹರಡಲು ಸಾಧ್ಯ. ಹಾಗಾಗಿ ದೂರದಲ್ಲಿದ್ದರೆ ಕೊರೋನಾ ಸೋಂಕು ತಗುಲುವುದು ಸಾಧ್ಯವಿಲ್ಲ,

ನೀವೇನು ಮಾಡಬೇಕು: 

ಜನಸಂದಣಿ ಇರುವ ಪ್ರದೇಶಗಳಲ್ಲಿ ಹೋಗದಿರುವುದು ಉತ್ತಮ. ಇನ್ನು ಸ್ವಲ್ಪ ಹೆಚ್ಚು ಜನರಿದ್ದು, ನೀವಲ್ಲಿ ಹೆಚ್ಚು ಹೊತ್ತು ನಿಲ್ಲುವುದನ್ನು ಅವಾಯ್ಡ್ ಮಾಡಿ. ನೀವು ಬಾಲ್ಕನಿಯಲ್ಲಿ ಕುಳಿತು ಟೀ ಹೀರುವುದಕ್ಕೋ, ವಾಕಿಂಗ್ ಹೋಗುವುದಕ್ಕೋ ಸಮಸ್ಯೆ ಇಲ್ಲ. 

click me!