ಆಹಾರದಲ್ಲಿ ಮುಸುಕಿನ ಜೋಳ ಸೇರಿಸಿ ಆರೋಗ್ಯ ಲಾಭ ಪಡೆದುಕೊಳ್ಳಿ

By Suvarna NewsFirst Published Dec 23, 2022, 10:49 AM IST
Highlights

ನಮ್ಮ ಭಾರತೀಯರ ಆಹಾರ ಪದಾರ್ಥಗಳಲ್ಲಿ ಧಾನ್ಯಗಳಿಗೆ (Grains) ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಅದೆಷ್ಟೋ ಧಾನ್ಯಗಳು ನಮ್ಮ ಆರೋಗ್ಯವನ್ನು ಹದಗೆಡುವುದರಿಂದ ತಪ್ಪಿಸುತ್ತಿದೆ. ಅದರಲ್ಲಿ ಮುಸುಕಿನ ಜೋಳವೂ ಒಂದಾಗಿದ್ದು, ದಿನವೂ ಸೇವಿಸುವುದರಿಂದ ಡಯೆಟ್‌ಗೆ ಸಹಾಯವಾಗುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಹತ್ತಾರು ವರ್ಷಗಳಿಂದ ಧಾನ್ಯಗಳು(Grains) ಮಾನವನ ಆಹಾರದ ಭಾಗವಾಗಿದೆ. ಆದರೆ ಪ್ಯಾಲಿಯೊ ಆಹಾರದಂತಹ ಅನೇಕ ಆಧುನಿಕ ಆಹಾರಕ್ರಮಗಳ ಪ್ರತಿಪಾದಕರು ಧಾನ್ಯಗಳನ್ನು ತಿನ್ನುವುದು ಆರೋಗ್ಯಕ್ಕೆ ಕೆಟ್ಟದು ಎಂದು ಹೇಳುತ್ತಾರೆ. ಸಂಸ್ಕರಿಸಿದ ಧಾನ್ಯಗಳ ಹೆಚ್ಚಿನ ಸೇವನೆಯು ಸ್ಥೂಲಕಾಯತೆ ಮತ್ತು ಉರಿಯೂತದಂತಹ (Inflammation) ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ವಾಸ್ತವವಾಗಿ ಧಾನ್ಯಗಳನ್ನು ತಿನ್ನುವುದು ಮಧುಮೇಹ(Diabetes), ಹೃದ್ರೋಗ(Heart Problems) ಮತ್ತು ಅಧಿಕ ರಕ್ತದೊತ್ತಡದ(High Blood Pressure) ಕಡಿಮೆ ಅಪಾಯವನ್ನು ಒಳಗೊಂಡಂತೆ ವಿವಿಧ ಪ್ರಯೋಜನಗಳೊಂದಿಗೆ ಸಂಬಂಧಿಸಿದೆ. 

ಭಾರತೀಯರ ಆಹಾರ ಪದ್ಧತಿಯಲ್ಲಿ ಮುಸುಕಿನ ಜೋಳವನ್ನು (Jowar) ಬಳಸುವುದು ಸಾಮಾನ್ಯವಾಗಿದೆ. ಏಕದಳ ಧಾನ್ಯವಾಗಿದ್ದು, ಬೇಯಿಸಿ (Cooked) ಮತ್ತು ಪಾಪ್ ಕಾರ್ನ್ Popcorn) ರೀತಿಯೂ ಸೇವಿಸಲಾಗುತ್ತದೆ. ಜೋಳದಲ್ಲಿ ಹಲವು ಪೌಷ್ಠಿಕಾಂಶಗಳು(Protein), ವಿಟಮಿನ್ (Vitamin), ಖನಿಜಗಳು (Minerals) ಇವೆ. ಮುಸುಕಿನ ಜೋಳವು ಅಂಟು ಮುಕ್ತ ಗುಣಲಕ್ಷಣಗಳು ಮತ್ತು ಸಂಪೂರ್ಣ ಧಾನ್ಯದ ಒಳ್ಳೆಯತನಕ್ಕೆ ಹೆಸರುವಾಗಿಯಾಗಿದೆ. ಬ್ರೆಡ್ (Bread), ಕೇಕ್ (Cake), ಕುಕೀಸ್ (Cookies), ಮಾಲ್ಟೆಡ್ ಪಾನೀಯಗಳು(Malt) ಮತ್ತು ರೊಟ್ಟಿಯಂತಹ ಸ್ಟೇಪಲ್ಸ್ಗಳನ್ನು ಒಳಗೊಂಡAತೆ ವಿವಿಧ ಕ್ಲಾಸಿಕ್ ಟ್ರೀಟ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.

ಬೇಗ ತೂಕ ಇಳಿಸಲು ಸಹಾಯ ಮಾಡುತ್ತೆ 5 ಆರೋಗ್ಯಕರ ಚಪಾತಿಗಳು

ಮುಸುಕಿನ ಜೋಳವು ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು (Carbohydrates) ಮತ್ತು ಆಹಾರದ ಫೈಬರ್‌ನಲ್ಲಿ(Fiber) ಅಧಿಕವಾಗಿದೆ. ಇವೆಲ್ಲವೂ ಬೆಳವಣಿಗೆಯನ್ನು ಬೆಂಬಳಿಸುತ್ತದೆ. ಸಿರಿಧಾನ್ಯಗಳಲ್ಲಿ ಕ್ಯಾಲ್ಸಿಯಂ (Calcium), ಕಬ್ಬಿಣ (Iron), ರಂಜಕ, ಪೊಟ್ಯಾಸಿಯಂ(Potassium) ಮತ್ತು ಸೋಡಿಯಂ(Sodium) ಕೂಡ ಹೇರಳವಾಗಿದೆ. ಪರಿಣಾಮವಾಗಿ ಜೋಳವು ಮೂಳೆಗಳನ್ನು(Bone) ಬಲಪಡಿಸಲು, ರೋಗನಿರೋಧಕ ಶಕ್ತಿಯನ್ನು(Immunity Power) ಹೆಚ್ಚಿಸಲು ಮತ್ತು ರೋಗವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ ಜೋಳವು ಗಮನಾರ್ಹ ಪ್ರಮಾಣದ ವಿಟಮಿನ್‌ಗಳಾದ ಥಯಾಮಿನ್, ನಿಯಾಸಿನ್(Niacin), ಫೋಲೇಟ್ ಮತ್ತು ರೈಬೋಫ್ಲಾವಿನ್ ಅನ್ನು ಹೊಂದಿರುತ್ತದೆ. ಇವೆಲ್ಲವೂ ಸಾಮಾನ್ಯ ಆರೋಗ್ಯವನ್ನು ಸುಧಾರಿಸುತ್ತದೆ.

ಮುಸುಕಿನ ಜೋಳದಿಂದಾಗುವ ಪ್ರಯೋಜನಗಳು
1. ಕ್ಯಾನ್ಸರ್ ತಡೆಯುತ್ತದೆ(Cancer)

ಮುಸುಕಿನ ಜೋಳದಲ್ಲಿ ಆಂಟಿಆಕ್ಸಿಡೆAಟ್‌ಗಳನ್ನು(Antioxidant) ಹೊಂದಿದ್ದು ಅದು ಆಕ್ಸಿಡೇಟಿವ್ ಒತ್ತಡವನ್ನು(Oxidative Stress) ಕಡಿಮೆ ಮಾಡಲು ಮತ್ತು ಫ್ರೀ ರಾಡಿಕಲ್ಸಗಳ(Free Radicals) ಉಪಸ್ಥಿತಿಯಲ್ಲಿ ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್(Cancer) ತಡೆಗಟ್ಟುವುದಲ್ಲದೆ, ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಬೆಂಬಲಿಸುತ್ತದೆ.

Shilpa Shetty Diet: ಫಿಟ್ ಆಗಿರಲು ಕರಾವಳಿ ಬೆಡಗಿ ತಿನ್ನೋದೇನು?

2. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ(Weight Loss)
ಮುಸುಕಿನ ಜೋಳದಲ್ಲಿ ನಾರಿನಾಂಶ ಅಧಿಕವಾಗಿದೆ ಮತ್ತು ಸೇವಿಸಿದಾಗ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅತಿಯಾದ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು(Weight Loss) ಬಯಸಿದರೆ, ಆಹಾರದಲ್ಲಿ ಗೋಧಿ ಹಿಟ್ಟಿಗೆ ಜೋಳದ ಹಿಟ್ಟನ್ನು ಬದಲಿಸಲು ಪ್ರಯತ್ನಿಸಿ. ಏಕೆಂದರೆ ಇದು ನಿಮ್ಮ ಆರೋಗ್ಯ ಮತ್ತು ತೂಕದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

3. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ(Blood Sugar Level)
ಮುಸುಕಿನ ಜೋಳವು ಮಧುಮೇಹಿಗಳಿಗೆ(Diabetes) ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಜನಪ್ರಿಯ ಆಹಾರ ಆಯ್ಕೆಯಾಗಿದೆ. ಜೊತೆಗೆ ಜೋಳವು ಗೋಧಿಗಿಂತ(Wheat flour) ಕಡಿಮೆ ಗ್ಲೆöÊಸೆಮಿಕ್(Glycogen) ಸೂಚಿಯನ್ನು ಹೊಂದಿದೆ. ಪರಿಣಾಮವಾಗಿ ಗ್ಲೂಕೋಸ್(Glucose) ಅನ್ನು ರಕ್ತಕ್ಕೆ ಬಿಡುಗಡೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ.

4. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ(Immunity Power)
ಮೆಗ್ನೀಸಿಯಮ್(Magnesium), ತಾಮ್ರ(Copper) ಮತ್ತು ಕ್ಯಾಲ್ಸಿಯಂ(Calcium) ಜೋಳದಲ್ಲಿ ಹೇರಳವಾಗಿದೆ. ಅಲ್ಲದೆ ಈ ಅಂಶಗಳು ಬಲವಾದ ಮೂಳೆಗಳು ಮತ್ತು ಅಂಗಾAಶಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಕೆಂಪು ರಕ್ತ ಕಣಗಳನ್ನು(Red Blood Cells) ಹೆಚ್ಚಿಸಲು ಸಹಾಯ ಮಾಡುವ ಕಬ್ಬಿಣಾಂಶ ಇದರಲ್ಲಿದೆ. ಇವೆಲ್ಲವೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

5. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ಜೋಳದಲ್ಲಿ ಫೈಬರ್(Fiber) ಸಮೃದ್ಧವಾಗಿದೆ. ಅಲ್ಲದೆ ಕೆಟ್ಟ ಕೊಲೆಸ್ಟಾçಲ್(Cholesterol) LDL) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ LDL ಮಟ್ಟಗಳು ಪಾರ್ಶ್ವವಾಯು(Stroke) ಸೇರಿದಂತೆ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೇಗ ತೂಕ ಇಳಿಸಲು ಸಹಾಯ ಮಾಡುತ್ತೆ 5 ಆರೋಗ್ಯಕರ ಚಪಾತಿಗಳು

6. ಜೀರ್ಣಕ್ರಿಯೆ ಬೆಂಬಲಿಸುತ್ತದೆ(Digestion) 
ಮುಸುಕಿನ ಜೋಳದಲ್ಲಿನ ಫೈಬರ್ ಅಂಶ ಜೀರ್ಣಕಾರಿ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ನೈಸರ್ಗಿಕವಾಗಿ ಅಂಟು-ಮುಕ್ತ ಧಾನ್ಯವಾಗಿದ್ದು, ಅರ್ಧ ಕಪ್ ಜೋಳವು 6ಗ್ರಾಂ ಹೆಚ್ಚಿನ ಫೈಬರ್ ಅನ್ನು ಒದಗಿಸುತ್ತದೆ. ಇದರಲ್ಲಿ ನಾನಾ ಫೈಬರ್‌ಗಳನ್ನು ಒದಗಿಸುತ್ತದೆ, ಕರಗಬಲ್ಲದಿಂದ ಕರಗದವರೆಗೆ,  ಪ್ರಿಬಯಾಟಿಕ್ ಫೈಬರ್‌ಗಳು(Pre Biotic Fiber) ನಿಮ್ಮ ಕರುಳಿನಲ್ಲಿ ಲೈವ್ ಪ್ರೋಬಯಾಟಿಕ್‌ಗಳನ್ನು(Live Pro Biotic) ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಇತ್ತೀಚಿನ ಅಧ್ಯಯನಗಳು ಧಾನ್ಯದ ಹೊಟ್ಟುಗಳಲ್ಲಿ ಕಂಡುಬರುವ ಪಾಲಿಫಿನಾಲ್‌ಗಳ(Polyfinal) ರೂಪದಲ್ಲಿ ಮುಸುಕಿನ ಜೋಳವು ಸಂಭಾವ್ಯ ಪ್ರಿಬಯಾಟಿಕ್ ಚಟುವಟಿಕೆಯನ್ನು ತೋರಿಸಿವೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.  

click me!