
'ನಾವೆಲ್ಲ ಆ ಮೂರು ದಿನ ಸ್ನಾನನೇ ಮಾಡ್ತಿರಲಿಲ್ಲ. ನಾಲ್ಕನೇ ದಿನ ತಲೆಗೆ ಮೈಗೆ ನೀರು ಹುಯ್ಕೊಂಡು ಬರ್ತಿದ್ವಿ' ಅಂತ ಮುತ್ತಜ್ಜಿ ಹೇಳ್ತಿದ್ರೆ ಮರಿ ಮೊಮ್ಮಗಳು, 'ಥೂ ಏನ್ ಗಲೀಜು ಜನಗಳಪ್ಪ ನೀನು' ಅಂತ ಮೂಗು ಮುರೀತಾಳೆ. ಶಾರ್ಟ್ ಆಗಿ ಹೇರ್ ಕಟ್ ಮಾಡಿಸಿಕೊಂಡಿರುವ ಅವಳಿಗೆ ದಿನಾ ತಲೆಗೆ ಸ್ನಾನ ಮಾಡಿ ರೂಢಿ. ಈ ಮುತ್ತಜ್ಜಿ ಕಾಲದಲ್ಲಿ ಆ ಟೈಮಲ್ಲಿ ಮೈಗೂ ಸ್ನಾನ ಮಾಡ್ತಿರಲಿಲ್ಲ ಅನ್ನೋದನ್ನು ಕೇಳಿಯೇ ಅವಳಿಗೆ ಒಂಥರಾ ಆಗಿತ್ತು. ಪೀರಿಯೆಡ್ಸ್ ಟೈಮಲ್ಲಿ ಮೈ ಹೆಚ್ಚು ಬೆಚ್ಚಗಿರುತ್ತೆ. ಬೆವರೋದು ಹೆಚ್ಚೇ. ತಲೆಯೂ ಬೆವರುತ್ತೆ. ಸೋ, ಈ ಬೆವರು, ಮೈ ಬೆಂದ ಹಾಗಾಗೋದ್ರಿಂದ ಪಾರಾಗಲು ಹೆಚ್ಚಿನವರು ಅದರಲ್ಲೂ ಈ ಕಾಲದ ಹೆಣ್ಮಕ್ಕಳು ಆ ಸಮಯದಲ್ಲಿ ತಲೆಗೂ ಸ್ನಾನ ಮಾಡ್ತಾರೆ. ಆದರೆ ಅಧ್ಯಯನಗಳ ಪ್ರಕಾರ ಆ ದಿನಗಳಲ್ಲಿ ತಲೆಗೆ ಸ್ನಾನ ಮಾಡೋದು ಒಳ್ಳೆಯದಲ್ಲವಂತೆ. ಅದರಿಂದ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಒಂದಿಷ್ಟು ದುಷ್ಪರಿಣಾಮಗಳಾಗುತ್ತವಂತೆ.
ಪೀರಿಯೆಡ್ಸ್ ಸಮಯದಲ್ಲಿ ಈ ಕೆಲವು ತಪ್ಪುಗಳನ್ನು ಮಾಡುವುದರಿಂದ ದೇಹದ ಮೇಲೆ ಇನ್ನಷ್ಟು ಒತ್ತಡ ಉಂಟಾಗುತ್ತದೆ ಎನ್ನುತ್ತಾರೆ ಯೋಗ ಎಕ್ಸ್‌ಪರ್ಟ್. ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯರು ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮುಟ್ಟಿನ ನೈರ್ಮಲ್ಯದ ಜೊತೆಗೆ ತಾವು ಸೇವಿಸುವ ಆಹಾರ ಹಾಗೂ ವ್ಯಾಯಾಮದ ಬಗ್ಗೆಯೂ ಗಮನಹರಿಸಬೇಕು. ಪಿರಿಯೆಡ್ಸ್ ಸಮಯದಲ್ಲಿ ಯೋಗ ಮಾಡಿದರೆ ದೇಹವನ್ನು ತಲೆಕೆಳಗಾಗಿಸಬೇಕಾದ ಯೋಗಾಸನಗಳನ್ನು ಮಾಡುವುದನ್ನು ತಪ್ಪಿಸಬೇಕು. ಸರ್ವಾಂಗಾಸನ, ಶೀರ್ಷಾಸನ ಮತ್ತು ಹಲಾಸನಗಳಲ್ಲಿ, ಕಾಲುಗಳನ್ನು ಮೇಲಕ್ಕೆ ಎತ್ತಬೇಕಾಗುತ್ತದೆ, ಇದರಿಂದಾಗಿ ರಕ್ತಸ್ರಾವದ ನೈಸರ್ಗಿಕ ಗುರುತ್ವಾಕರ್ಷಣೆಯ ಹರಿವು ತೊಂದರೆಗೊಳಗಾಗುತ್ತದೆ.
ಊಟ ಮಾಡಿದ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ!
ಪೀರಿಯೆಡ್ಸ್ ಸಂದರ್ಭದಲ್ಲಿ ವ್ಯಾಯಾಮ ಮಾಡುವಾಗ ಅಥವಾ ವರ್ಕೌಟ್(Workout) ಮಾಡುವಾಗ ಯಾವುದೇ ತೀವ್ರವಾದ ಚಟುವಟಿಕೆಯನ್ನು ಮಾಡಬಾರದು. ಹೀಗೆ ಮಾಡುವುದರಿಂದ ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಭಾರೀ ವ್ಯಾಯಾಮಗಳು ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು.
ಯೋಗದ ಪ್ರಕಾರ, ಪೀರಿಯಡ್ಸ್ ಸಮಯದಲ್ಲಿ ತಲೆ ಸ್ನಾನ ಮಾಡಬಾರದು. ತಲೆಯ ಮೇಲೆ ನೀರನ್ನು ಸುರಿದರೆ, ಅಪನ ವಾಯುವು ಕೆಳಮುಖವಾಗಿ ಹರಿಯಲು ಪ್ರಾರಂಭಿಸುತ್ತದೆ, ಇದು ಹಾನಿಕಾರಕವಾಗಿದೆ(Harmful) ಎಂದು ಯೋಗ ಹೇಳುತ್ತದೆ. ಇದನ್ನು ಬೇಕಿದ್ದರೆ ನೀವೇ ಗಮನಿಸಬಹುದು. ಪೀರಿಯೆಡ್ಸ್ ಟೈಮಲ್ಲಿ ತಲೆ ಸ್ನಾನ ಮಾಡಿದರೆ ರಕ್ತಸ್ರಾವ ಹೆಚ್ಚಾಗೋದು ನಿಮ್ಮ ಗಮನಕ್ಕೆ ಬರಬಹುದು. ಸುಸ್ತು, ಸಣ್ಣಗೆ ತಲೆನೋವು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಬಳಲಿಕೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಆ ಸಮಯದಲ್ಲಿ ತಲೆಸ್ನಾನ ಮಾಡಬಾರದು ಅನ್ನುವುದು ಆಯುರ್ವೇದ(Ayurveda) ಮಾತ್ರ. ಆಧುನಿಕ ವೈದ್ಯಕೀಯದ ಪ್ರಕಾರ ಇದು ತಪ್ಪು ಕಲ್ಪನೆ. ಪೀರಿಯೆಡ್ಸ್ ಟೈಮಲ್ಲಿ ತಲೆಸ್ನಾನ(Head bath) ಮಾಡೋದ್ರಿಂದ ಯಾವ ದುಷ್ಪರಿಣಾಮವೂ ಆಗೋದಿಲ್ಲ ಅಂತ ಆಧುನಿಕ ವೈದ್ಯ ವಿಜ್ಞಾನ(Medical science) ಹೇಳುತ್ತದೆ.
Relationship Tips : ನಶೆಯಲ್ಲಿ ಸೆಕ್ಸ್ ಇಷ್ಟವಾದ್ರೂ, ಭವಿಷ್ಯದಲ್ಲಿದೆ ಹಬ್ಬ!
ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನೋದನ್ನು ಸ್ಪೆಸಿಫಿಕ್(Specific) ಆಗಿ ಹೇಳೋದು ಕಷ್ಟ. ಆದರೆ ಒಬ್ಬೊಬ್ಬ ಹೆಣ್ಣಿನ ದೇಹವೂ ಒಂದೊಂದು ಥರ ಇರುತ್ತೆ. ಹೀಗಾಗಿ ನಿಮ್ಮ ದೇಹದ ರೀತಿಗೆ ಯಾವುದು ಸರಿಹೊಂದುವುದೋ ಅದನ್ನು ಆರಿಸಿಕೊಳ್ಳೋದು ಜಾಣತನ. ನಿಮಗೆ ಪೀರಿಯೆಡ್ಸ್(Periods) ಟೈಮಲ್ಲಿ ತಲೆಸ್ನಾನ ಮಾಡೋದು ರೂಢಿಯಾಗಿದೆ ಅಂದರೆ ಅದನ್ನು ಮುಂದುವರಿಸಿ. ಯಾಕೋ ತಲೆಸ್ನಾನ ಮಾಡಿದ ಬಳಿಕ ಸುಸ್ತು ಹೆಚ್ಚಾಗುತ್ತೆ. ಸ್ರಾವ ಹೆಚ್ಚಾಗ್ತಿದೆ ಅನಿಸಿದರೆ ಆ ಟೈಮಲ್ಲಿ ತಲೆಸ್ನಾನ ಮಾಡೋದನ್ನು ಅವಾಯ್ಡ್ ಮಾಡಿ. ಇದರಿಂದ ಹೆಚ್ಚಿನ ಪರಿಣಾಮ ಏನೂ ಆಗೋದಿಲ್ಲ. ಸಣ್ಣಪುಟ್ಟ ಪರಿಣಾಮಗಳಷ್ಟೇ ಆಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.