Covid-19: ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜವಂತೆ, ಸತ್ಯ ಒಪ್ಪಿಕೊಂಡ ಕೇಂದ್ರ ಸರ್ಕಾರ

By Vinutha PerlaFirst Published Jan 16, 2023, 4:40 PM IST
Highlights

ಕಳೆದೆರಡು ವರ್ಷಗಳಲ್ಲಿ ಕೋವಿಡ್ ಜನಜೀವನವನ್ನು ಸಂಪೂರ್ಣವಾಗಿ ಹೈರಾಣ ಮಾಡಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ವೈರಸ್ ಹರಡುವುದರ ತೀವ್ರತೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಯಿತು. ಹೀಗಿದ್ದೂ ಲಸಿಕೆ ಹಾಕಿಸಿಕೊಂಡ ಬಳಿಕ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿರುವ ಜನರು ದೂರಿದರು. ಇದು ನಿಜ. ಲಸಿಕೆಯಿಂದ ಅಡ್ಡಪರಿಣಾಮ ಇದ್ದಿದ್ದು ನಿಜ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ.

ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ದೇಶಾದ್ಯಂತ ಅಲ್ಲೋಲಕಲ್ಲೋಲವನ್ನುಂಟು ಮಾಡಿತ್ತು. ಸೋಂಕಿನ ತೀವ್ರತೆಗೆ ಕೋಟ್ಯಾಂತರ ಮಂದಿ ಅಸ್ವಸ್ಥರಾದರು. ಅಸಂಖ್ಯಾತ ಮಂದಿ ಮೃತಪಟ್ಟರು. ಸರ್ಕಾರ ಹಂತ ಹಂತವಾಗಿ ಲಸಿಕೆಯನ್ನು ಬಿಡುಗಡೆ ಮಾಡಿದ ನಂತರ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂತು. ಆದರೆ ಕ್ರಮೇಣ ಲಸಿಕೆಯಿಂದಲೂ ಆರೋಗ್ಯ ಹದಗೆಡುತ್ತಿರುವಯದಾಗಿ ಹಲವರು ಆರೋಪಿಸಿದರು. ಅದು ನಿಜವೆಂಬುದು ಸಾಬೀತಾಗಿದೆ. ಸ್ವತಃ ಸರ್ಕಾರವೇ ಕೊರೋನಾ ಲಸಿಕೆಯಿಂದ ಅಡ್ಡಪರಿಣಾಮಗಳಿವೆ ಎಂಬುದನ್ನು ಬಹಿರಂಗಪಡಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಒಂದು ಶತಕೋಟಿಗೂ ಹೆಚ್ಚು ಭಾರತೀಯರಲ್ಲಿ ಕೋವಿಡ್-19 ಲಸಿಕೆಗಳಿಂದ ಉಂಟಾಗಿರುವ ಬಹು ಅಡ್ಡ-ಪರಿಣಾಮಗಳನ್ನು ಸರ್ಕಾರದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪುಣೆಯ ಉದ್ಯಮಿ ಪ್ರಫುಲ್ ಸರ್ದಾ ಅವರಿಗೆ ಆರ್‌ಟಿಐ ಉತ್ತರದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಬೆಚ್ಚಿಬೀಳಿಸುವ ಸಂಗತಿಗಳನ್ನು ಬಹಿರಂಗಪಡಿಸಿದೆ.

ಈ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗ್ತಿದ್ಯಾ ?

ಭಾರತವು ಅಸ್ಟ್ರಾಜೆನಾಕಾ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಅನುಮತಿ ನೀಡಿದೆ. ಪುಣೆಯ 'ಕೋವಿಶೀಲ್ಡ್' ಮತ್ತು SII ನ 'ಕೊವೊವ್ಯಾಕ್ಸ್, ಹೈದರಾಬಾದ್ ಮೂಲದ ಮೂರು ಕಂಪನಿಗಳ ಲಸಿಕೆಗಳು, ಸರ್ಕಾರ ನಡೆಸುತ್ತಿರುವ ಭಾರತ್ ಬಯೋಟೆಕ್ ಲಿಮಿಟೆಡ್‌ನ 'ಕೋವಾಕ್ಸಿನ್', ಡಾ. ರೆಡ್ಡೀಸ್ ಲ್ಯಾಬ್ ಆಮದು ಮಾಡಿಕೊಂಡ 'ಸ್ಪುಟ್ನಿಕ್ ವಿ', ಬಯೋಲಾಜಿಕಲ್ ಇ. ಲಿಮಿಟೆಡ್‌ನ 'ಕಾರ್ಬೆವಾಕ್ಸ್' ಮತ್ತು ನಂತರ, ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ., ಅಹಮದಾಬಾದ್‌ನ 'ZyCov-D'ನ (ಹದಿಹರೆಯದವರಿಗೆ ಮಾತ್ರ (12-17 ವಯಸ್ಸು) ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡಿದೆ.

ಕೋವಿಶೀಲ್ಡ್: ಇಂಜೆಕ್ಷನ್ ಚುಚ್ಚಿದ ಬಳಿಕ ಮೈಕೈ ನೋವು, ಚುಚ್ಚುಮದ್ದಿನ ಸ್ಥಳವಲ್ಲದೆ ಇತರೆಡೆ ಅನೇಕ ಕೆಂಪು ಕಲೆಗಳು ಅಥವಾ ಮೂಗೇಟುಗಳು, ನಿರಂತರ ವಾಂತಿ, ತೀವ್ರವಾದ ಅಥವಾ ನಿರಂತರ ಹೊಟ್ಟೆ ನೋವು, ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಉಸಿರಾಟ, ಎದೆ ನೋವು, ಕೈಕಾಲುಗಳಲ್ಲಿ ನೋವು, ಊತ, ಕಪಾಲದ ನರಗಳು, ಕಣ್ಣುಗಳಲ್ಲಿ ನೋವು, ಮಸುಕಾದ ದೃಷ್ಟಿ ಅಥವಾ ಡಿಪ್ಲೋಪಿಯಾ ಸೇರಿದಂತೆ ಯಾವುದೇ ನಿರ್ದಿಷ್ಟ ಭಾಗ ಅಥವಾ ದೇಹದ ಭಾಗಗಳ ದೌರ್ಬಲ್ಯ,  ಪಾರ್ಶ್ವವಾಯು ಮಾನಸಿಕ ಸ್ಥಿತಿ, ಎನ್ಸೆಫಲೋಪತಿ  ಸಮಸ್ಯೆ ಕಂಡುಬರಬಹುದು ಎಂದು ಹೇಳಲಾಗಿದೆ.

ಬೂಸ್ಟರ್‌ ಡೋಸ್‌ ಲಸಿಕೆ ಫ್ರೀ ಕೊಟ್ರೂ ಶೇ.91 ಜನ ಪಡೆದಿಲ್ಲ..!

ಕಾರ್ಬೋವ್ಯಾಕ್ಸ್‌: ಕೊರೋನಾಗೆ ನೀಡಿರುವ ಈ ಲಸಿಕೆ ಆಯಾಸ, ಅಸ್ವಸ್ಥತೆ, ತಲೆನೋವು, ಜ್ವರ, ಸ್ನಾಯುಗಳ ನೋವು, ಕೀಲು ನೋವುಗಳು, ವಾಕರಿಕೆ, ಶೀತ, ಕೈಕಾಲುಗಳಲ್ಲಿ ತೀವ್ರವಾದ ನೋವು, ಅಸ್ತೇನಿಯಾ (ದೌರ್ಬಲ್ಯ ಅಥವಾ ಶಕ್ತಿಯ ಕೊರತೆ. ), ಬೆನ್ನು ನೋವು, ಮತ್ತು ವಿರಳವಾಗಿ ತಲೆತಿರುಗುವಿಕೆ ಅಥವಾ ಅರೆನಿದ್ರಾವಸ್ಥೆಯ ಸ್ಥಿತಿಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

ಕೋವ್ಯಾಕ್ಸಿನ್: ಈ ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ತಲೆನೋವು, ಆಯಾಸ, ಜ್ವರ, ದೇಹನೋವು, ಕಿಬ್ಬೊಟ್ಟೆಯ ನೋವು, ವಾಕರಿಕೆ, ವಾಂತಿ, ತಲೆತಿರುಗುವಿಕೆ, ನಡುಕ, ಬೆವರು, ಶೀತ ಮತ್ತು ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲ, ಚಳಿ, ಜ್ವರ, ಆರ್ತ್ರಾಲ್ಜಿಯಾ, ಮೈಯಾಲ್ಜಿಯಾ, ಅಸ್ತೇನಿಯಾ, ತಲೆನೋವು, ಸಾಮಾನ್ಯ ಅಸ್ವಸ್ಥತೆ, ವಾಕರಿಕೆ, ಹಸಿವಿನ ಕೊರತೆ ಮೊದಲಾದ ಸಮಸ್ಯೆನೂ ಕಂಡುಬರಬಹುದು.

click me!