ಮಾಲ್​ಗಳಲ್ಲಿ ಟಾಯ್ಲೆಟ್ ಡೋರ್ ಮೇಲೆ-ಕೆಳಗೆ ಓಪನ್ ಇರೋದ್ಯಾಕೆ?

By Vinutha PerlaFirst Published Jan 16, 2023, 11:19 AM IST
Highlights

ಮನುಷ್ಯ ನಿತ್ಯಕರ್ಮಗಳನ್ನು ಪೂರೈಸಲು ವಾಶ್‌ರೂಮ್‌ಗಳನ್ನು ಬಳಸ್ತಾನೆ. ವಾಶ್‌ರೂಮ್‌ನ್ನು ನಾನಾ ರೀತಿಯಲ್ಲಿ, ನಾನಾ ಡಿಸೈನ್‌ನಲ್ಲಿ ಕಟ್ಟಿಸ್ತಾರೆ. ಆದ್ರೆ ಮಾಲ್‌ಗಳಲ್ಲಿರುವ ವಾಶ್‌ರೂಮ್‌ಗಳನ್ನು ನೀವು ಗಮನಿಸಿದ್ದೀರಾ ? ಮಾಲ್​ನಲ್ಲಿ ವಾಶ್ರೂ​ಮ್​ನ ಬಾಗಿಲಿನ ಕೆಳಗೆ ತುಂಬ ದೊಡ್ಡದಾಗಿ ಓಪನ್​ ಇರುತ್ತೆ. ಅದು ಯಾಕೆ ಅಂತ ನಿಮ್ಗೆ ಗೊತ್ತಿದ್ಯಾ ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಾಲ್‌ಗಳಲ್ಲಿ ಹೋಗಿ ಸಮಯ ಕಳೆಯೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅಲ್ಲಿನ ವಾತಾವರಣ, ಲೈಟಿಂಗ್ಸ್‌, ಜನರನ್ನು ಅಟ್ರ್ಯಾಕ್ಟ್ ಮಾಡಲೆಂದೇ ಮಾಡಿರೋ ಚಿತ್ರ-ವಿಚಿತ್ರ ಡಿಸೈನ್ಸ್ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆಯೇ ಜನರನ್ನು ಅಟ್ರ್ಯಾಕ್ಟ್ ಮಾಡಲೆಂದೇ ಮಾಲ್‌ ನಿರ್ವಹಿಸುವವರು ಹೊಸ ಹೊಸ ಟೆಕ್ನಿಕ್‌ಗಳನ್ನು ಬಳಸ್ತಾನೂ ಇರ್ತಾರೆ. ಹೀಗಾಗಿಯೇ ಮಾಲ್‌ನಲ್ಲಿರುವ ಎಲ್ಲಾ ಸೆಕ್ಷನ್‌ ಡಿಫರೆಂಟ್ ಆಗಿ ಅಚ್ಚರಿ ಮೂಡಿಸುವಂತಿರುತ್ತೆ. ಅದರಲ್ಲೊಂದು ಮಾಲ್‌ಗಳಲ್ಲಿರೋ ವಾಶ್‌ ರೂಮ್‌.

ಹೌದು, ಮಾಲ್‌ಗಳಲ್ಲಿರೋ ವಾಶ್‌ ರೂಮ್‌ಗಳನ್ನು ನೀವು ಗಮನಿಸಿರಬಹುದು. ಅದರ ಬಾಗಿಲು ನಿಮ್ಮ ಮನೆಯ ಶೌಚಾಲಯ (Toilet)ಕ್ಕಿಂತ ಭಿನ್ನವಾಗಿರುವುದನ್ನು ನೀವು ಗಮನಿಸಿದ್ದೀರಾ.  ಮಾಲ್​ನಲ್ಲಿ ವಾಶ್ರೂ​ಮ್​ನ ಬಾಗಿಲಿನ (Door) ಕೆಳಗೆ ತುಂಬ ದೊಡ್ಡದಾಗಿ ಓಪನ್​ ಇರುತ್ತೆ. ಅಂದ್ರೆ ಮೇಲಿನಿಂದ ಮತ್ತು ಕೆಳಗಿನಿಂದ ಸಾಕಷ್ಟು ಗ್ಯಾಪ್​ ಬಿಟ್ಟಿರುತ್ತಾರೆ. ಇದಕ್ಕೇನು ಕಾರಣ ತಿಳಿಯೋಣ.

ಶೌಚಾಲಯದ ಫ್ಲಶ್​ನಲ್ಲಿ ಎರಡು ಬಟನ್ ಇರೋದ್ಯಾಕೆ ?

ಟಾಯ್ಲೆಟ್ ಡೋರ್ ಮೇಲೆ-ಕೆಳಗೆ ಓಪನ್ ಇಡೋದಕ್ಕೆ ಕಾರಣಗಳು
ಟಾಯ್ಲೆಟ್ ಬಾಗಿಲಿನ್ನು ಚಿಕ್ಕದಾಗಿ ಇಡುವುದರಿಂದ ಅನೇಕ ಪ್ರಯೋಜನಗಳಿವೆ.  ಚಿಕ್ಕದಾದ ಟಾಯ್ಲೆಟ್ ಗೇಟ್‌ಗಳನ್ನು ಹೊಂದಿರುವ ಮೊದಲ ಮತ್ತು ಅಗ್ರಗಣ್ಯ ಪ್ರಯೋಜನವೆಂದರೆ ಅವು ಬಾಳಿಕೆ ಬರುವ ಮತ್ತು ಸ್ವಚ್ಛ (Clean)ಗೊಳಿಸಲು ಸುಲಭವಾಗಿದೆ. ನೀರು ಮತ್ತು ತೇವಾಂಶದಿಂದಾಗಿ ನೆಲಕ್ಕೆ ಹತ್ತಿರವಿರುವ ಶೌಚಾಲಯದ ಬಾಗಿಲುಗಳು ಹೆಚ್ಚಾಗಿ ಹಾನಿಗೊಳಗಾಗುವ ಸಾಧ್ಯತೆಯಿದೆ. ಆದರೆ ಮಾಲ್‌ಗಳಲ್ಲಿ ಹೀಗೆ ಮೇಲೆ ಕೆಳಗೆ ಓಪನ್ ಆಗಿರೋ ಡೋರ್‌ಗಳನ್ನು ಇಡೋಕೆ ಕಾರಣವೇನು ?

ತುರ್ತು ಸಂದರ್ಭಗಳಲ್ಲಿ ಅನುಕೂಲವಾಗಲು: ಸಾರ್ವಜನಿಕ ಶೌಚಾಲಯಗಳನ್ನು ಪ್ರತಿದಿನ ಎಷ್ಟು ಜನ ಬಳಸುತ್ತಾರೆ ಎಂಬುದು ತಿಳಿದಿಲ್ಲ. ಹೀಗಿದ್ದಾಗ ಯಾರಾದರೂ ಅಸ್ವಸ್ಥರಾಗಿ ವಾಶ್‌ರೂಮ್‌ನಲ್ಲಿ ಬೀಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಣ್ಣ ಡೋರ್‌ ಗಾಳಿಯ ನಿರಂತರ ಹರಿವನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಉಸಿರುಗಟ್ಟುವಿಕೆಯನ್ನು ತಡೆಯುತ್ತದೆ. ಮಾತ್ರವಲ್ಲ, ಯಾರಿಗಾದರೂ ವೈದ್ಯಕೀಯ ತುರ್ತುಸ್ಥಿತಿ (Health emergency) ಇದ್ದರೆ ಇಂಥಾ ಡೋರ್ ಇದ್ದಾಗ ನೆರವಾಗುತ್ತದೆ.  ಅವರು ಪ್ರಜ್ಞಾಹೀನರಾಗಿದ್ದರೆ ಎಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ಸುಲಭ.

ಗರ್ಭಾವಸ್ಥೆಯಲ್ಲಿ ಪಬ್ಲಿಕ್‌ ಟಾಯ್ಲೆಟ್ ಬಳಕೆ ತುಂಬಾನೆ ಡೇಂಜರ್ !

ಸ್ವಚ್ಛಗೊಳಿಸಲು ಸುಲಭ: ಸಾರ್ವಜನಿಕ ವಾಶ್‌ರೂಮ್‌ಗಳಿಗೆ ಎಲ್ಲಾ ರೀತಿಯ ಜನರು ಭೇಟಿ ನೀಡುತ್ತಾರೆ ಮತ್ತು ಬಳಸುತ್ತಾರೆ. ಆದ್ದರಿಂದ, ಅದರ ಬಾಗಿಲುಗಳು ಬೇಗನೆ ಕೊಳಕು ಆಗುತ್ತವೆ. ಡೋರ್ ಚಿಕ್ಕದಾಗಿದ್ದರೆ ಅವುಗಳನ್ನು ಸ್ವಚ್ಛಗೊಳಿಸಲು ಸುಲಭವಾಗುತ್ತದೆ.

ಧೂಮಪಾನ ಮಾಡದಂತೆ ತಡೆಯುತ್ತದೆ: ಟಾಯ್ಲೆಟ್‌ಗಳ ಒಳಗೆ ಧೂಮಪಾನ ಮಾಡುವ ಅಭ್ಯಾಸವನ್ನು ಹೆಚ್ಚಿನವರು ಹೊಂದಿರುತ್ತಾರೆ. ಸಂಪೂರ್ಣವಾಗಿ ಮುಚ್ಚಿದ ಬಾಗಿಲುಗಳನ್ನು ಹೊಂದಿರುವ ರೆಸ್ಟ್‌ರೂಮ್‌ಗಳಲ್ಲಿ ಯಾರು ಧೂಮಪಾನ (Smoking) ಮಾಡುತ್ತಿದ್ದಾರೆ ಎಂದು ತಿಳಿಯುವುದು ಕಷ್ಟ. ಸಣ್ಣ ಡೋರ್ ಇದ್ದು, ಧೂಮಪಾನ ಮಾಡಿದರೆ ಅದು ಗಮನಕ್ಕೆ ಬರುತ್ತದೆ. ಏಕೆಂದರೆ ಹೊಗೆ ತಕ್ಷಣವೇ ಹೊರಬರುತ್ತದೆ. ಆದ್ದರಿಂದ, ಇಂಥಾ ಡೋರ್ ಇರೋ ವಾಶ್‌ರೂಮ್‌ಗಳಲ್ಲಿ ಜನರು ಸ್ಮೋಕ್ ಮಾಡೋಕೆ ಹಿಂಜರಿಯುತ್ತಾರೆ.

ಉತ್ತಮವಾಗಿ ಗಾಳಿಯಾಡುತ್ತದೆ: ಸಾರ್ವಜನಿಕ ಶೌಚಾಲಯಗಳನ್ನು ಜನರು ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಇದು ಬೇಗನೇ ವಾಸನೆ ಬರಲು ಶುರುವಾಗುತ್ತದೆ. ಅದರಲ್ಲೂ ಸಂಪೂರ್ಣವಾಗಿ ಮುಚ್ಚಿದ ಡೋರ್ ಇದ್ದರೆ ಅದನ್ನು ಬಳಸುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ಅದರ ಬಾಗಿಲುಗಳು ಮೇಲ್ಭಾಗ ಮತ್ತು ಕೆಳಭಾಗದಲ್ಲಿ ತೆರೆದಿದ್ದರೆ ಉತ್ತಮವಾಗಿ ಗಾಳಿಯಾಡುವ ಮೂಲಕ ವಾಶ್‌ರೂಮ್ ಸ್ವಚ್ಛವಾಗಿರುತ್ತದೆ.

ಡೋರ್ ನಿರ್ಮಾಣಕ್ಕೆ ವೆಚ್ಚ ಕಡಿಮೆ: ಡೋರ್‌ನ್ನು ಸಂಪೂರ್ಣವಾಗಿ ನಿರ್ಮಿಸಿದಾಗ, ಆ ಬಾಗಿಲಿಗೆ ಹೆಚ್ಚಿನ ಕೆಲಸಗಳು ಇರುತ್ತದೆ. ಅಂದ್ರೆ ಅದಕ್ಕಾಗಿ ಕೊಂಡಿಗಳು, ಸ್ರ್ಕ್ಯಾಚ್​ ಆಗದೇ ಇರುವ ಹಾಗೆ ಮ್ಯಾಟ್​ಗಳು, ಅಯಸ್ಕಾಂತ ಹೀಗೆ ನಾನಾ ರೀತಿಯ ವಸ್ತುಗಳನ್ನು ಬಳಸಬೇಕಾಗುತ್ತದೆ. ಅದರ ಬದಲು ಈ ರೀತಿಯ ಪುಟ್ಟ ಡೋರ್​ಗಳನ್ನು ಬಳಸಿದರೆ ಸುಲಭವಾಗಿ ತಯಾರಿಸಬಹುದು ಮತ್ತು ಇದಕ್ಕೆ ವೆಚ್ಚ ಕೂಡಾ ಕಡಿಮೆ.

ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು: ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅವಘಡಗಳನ್ನು ತಪ್ಪಿಸಲು ಡೋರ್‌ಗಳನ್ನು ಚಿಕ್ಕದಾಗಿ ಇರಿಸಲಾಗಿರುತ್ತದೆ. ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು ತಡೆಗಟ್ಟುವಲ್ಲಿ ಇದು ತುಂಬಾ ಸಹಾಯಕವಾಗಿದೆ.

click me!