ಬೆಂಗಳೂರಿನಲ್ಲಿ ಹೃದಯ ರೋಗಿಗಳಿಗೆ ಉಚಿತ ಸ್ಟೆಂಟ್ ಅಳವಡಿಕೆ, ಎಲ್ಲಿ..ಯಾವಾಗ?

By Vinutha PerlaFirst Published May 24, 2023, 1:39 PM IST
Highlights

ಬಿಪಿಎಲ್ ಕಾರ್ಡ್ ಹೊಂದಿದ ಹೃದಯ ರೋಗಿಗಳಿಗೆ ಗುಡ್ ನ್ಯೂಸ್, ಜಯದೇವ ಆಸ್ಪತ್ರೆಯಲ್ಲಿ ಉಚಿತ ಸ್ಟೆಂಟ್ ಅಳವಡಿಕೆ ಕಾರ್ಯಾಗಾರ ನಡೆಯುತ್ತಿದೆ.ಜೂನ್ 12 ರಿಂದ 14ರ ವರೆಗೆ ಆಸ್ಪತ್ರೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು: ಬಡವರು, ಬಿಪಿಎಲ್ ಕಾರ್ಡ್ ಹೊಂದಿದ ಹೃದಯ ರೋಗಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 200 ಮಂದಿಗೆ ಉಚಿತ ಸ್ಟೆಂಟ್ ಅಳವಡಿಸುವ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಹಮ್ಮಿಕೊಂಡಿದೆ. ಜೂನ್ 12ರಿಂದ 18ರ ವರೆಗೆ ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್ ಹಾಗೂ ಅಮೆರಿಕದ ಮೆಡ್ ಟ್ರಾನಿಕ್ಸ್ ವಿಸ್ಕಿನ್ಸನ್ ಸಂಸ್ಥೆಗಳ ಸಹಯೋಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆಂಜಿಯೋ ಪ್ಲಾಸ್ಟಿ ಕಾರ್ಯಾಗಾರ ನಡೆಯಲಿದೆ.

ಈ ಕಾರ್ಯಾಗಾರ ಜೂನ್ 12 ರಿಂದ 14ರ ವರೆಗೆ ಆಸ್ಪತ್ರೆಯ ಕೇಂದ್ರ ಕಚೇರಿ (Hospital head office) ಬೆಂಗಳೂರಿನಲ್ಲಿ, ಜೂನ್ 15, 16 ರಂದು ಮೈಸೂರು ಶಾಖೆಯಲ್ಲಿ ಹಾಗೂ ಜೂನ್ 17, 18 ರಂದು ಕಲ್ಬುರ್ಗಿ ಶಾಖೆಯಲ್ಲಿ ನಡೆಯಲಿದೆ. ಬಡ ರೋಗಿಗಳು ಹಾಗೂ ಬಿಪಿಎಲ್ ಕುಟುಂಬದ ಹಿರಿಯ ನಾಗರೀಕರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬಹುದು. ಪ್ರತಿ ರೋಗಿಗೂ (Patient) ಉನ್ನತಮಟ್ಟದ ಸ್ಟೆಂಟ್ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತದೆ. ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳು ಸಹ ಸೌಲಭ್ಯ (Facility) ಪಡೆದುಕೊಳ್ಳಬಹುದು. 

Latest Videos

ಹೃದಯ ಸ್ತಂಭನದಿಂದ 8ನೇ ತರಗತಿ ವಿದ್ಯಾರ್ಥಿ ಸಾವು: ಯುವ ವಯಸ್ಕರಲ್ಲೇ ಹೃದಯಾಘಾತ ಹೆಚ್ಚುತ್ತಿರೋದೇಕೆ?

ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಆಸಕ್ತರು ಜೂನ್ 8 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ಮಾಹಿತಿಗಾಗಿ 9480827888, 080 26944874 ಸಂಪರ್ಕಿಸಬಹುದು.

click me!