ಸೊಂಪಾದ ರೇಷ್ಮೆಯಂತಹ ಹೊಳೆಯುವ ಕೂದಲಿಗಾಗಿ ಬಳಸಿ ಈರುಳ್ಳಿ ಎಣ್ಣೆ: ಇಲ್ಲಿದೆ ರೆಸಿಪಿ

Published : Apr 28, 2025, 06:12 PM ISTUpdated : Apr 28, 2025, 06:55 PM IST
ಸೊಂಪಾದ ರೇಷ್ಮೆಯಂತಹ ಹೊಳೆಯುವ ಕೂದಲಿಗಾಗಿ ಬಳಸಿ ಈರುಳ್ಳಿ ಎಣ್ಣೆ: ಇಲ್ಲಿದೆ ರೆಸಿಪಿ

ಸಾರಾಂಶ

ಕೂದಲು ಉದುರುವ ಅಥವಾ ಒಣ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಈರುಳ್ಳಿ ಎಣ್ಣೆಯನ್ನು ತಯಾರಿಸಿ ಬಳಸಿ.

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ಹಳ್ಳಿ ಬಿಟ್ಟು ಪಟ್ಟಣ ಸೇರಿದ ಬಹುತೇಕರ ತಲೆಕೂದಲು ಉದುರಿ ಉದುರಿ, ತಲೆಗಿಂತ  ಹೆಚ್ಚಿನ ಕೂದಲು ನೆಲದ ಮೇಲೆ ಇರುತ್ತೆ ಅಂತ ಅನೇಕರು ಗೋಳಾಡುತ್ತಾರೆ. ಎಣ್ಣೆ ಹಾಕಿದಷ್ಟು ಆರೈಕೆ ಮಾಡಿದಷ್ಟು ಕೂದಲು ಉದುರುವುದು ಹೆಚ್ಚಾಗ್ತಿದೆ ಎಂದು ಕೆಲವರು ಆರೋಪ ಮಾಡುತ್ತಾರೆ. ಆರೋಗ್ಯಕರ ಕೂದಲಿಗಾಗಿ ಮಹಿಳೆಯರು ವಿವಿಧ ರೀತಿಯ ಹರ್ಬಲ್‌ ಶಾಂಪೂ, ಕಂಡಿಷನರ್ ಮತ್ತು ಹೇರ್ ಮಾಸ್ಕ್‌ಗಳನ್ನು ಬಳಸುತ್ತಾರೆ. ಆದರೂ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ. ಹೀಗಿರುವಾಗ ನೀವೂ ಕೂಡ ಕೂದಲು ಉದುರುವ ಅಥವಾ ಒಣ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದರೆ, ಸರಳ ಪರಿಹಾರವನ್ನು ಪ್ರಯತ್ನಿಸಬಹುದು. ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾಗಿದೆ. ಇದನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದು ಕೂದಲನ್ನು ದಪ್ಪ, ದಟ್ಟ ಮತ್ತು ಬಲಿಷ್ಠಗೊಳಿಸುತ್ತದೆ. ಹಾಗಿದ್ದರೆ ಏನಿದು ಹೊಸ ಹೇರ್ ಕೇರ್ ಮಂತ್ರ ಇಲ್ಲಿದೆ ನೋಡಿ.

ಅಂದಹಾಗೆ ನಾವು ನಾವು ಈರುಳ್ಳಿ ಎಣ್ಣೆಯ ಬಗ್ಗೆ ಹೇಳುತ್ತಿದ್ದೇವೆ, ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲಿನ ಬೆಳವಣಿಗೆಗೂ ಪ್ರಯೋಜನಕಾರಿ. ಕೂದಲು ದುರ್ಬಲವಾಗಿದ್ದರೆ ಮತ್ತು ತೆಳುವಾಗಿದ್ದರೆ, ಈರುಳ್ಳಿ ಎಣ್ಣೆಯನ್ನು ಹಚ್ಚುವುದು ಒಳ್ಳೆಯದು. ಹಾಗಾದರೆ ಮನೆಯಲ್ಲಿ ಈರುಳ್ಳಿ ಎಣ್ಣೆಯನ್ನು ಹೇಗೆ ತಯಾರಿಸುವುದು ಎಂಬ ಬಗ್ಗೆ ಇಲ್ಲಿ ಮಾಹಿತಿ ಇದೆ. 

ಈರುಳ್ಳಿ ಎಣ್ಣೆ ತಯಾರಿಸಲು ಬೇಕಾಗುವ ಸಾಮಗ್ರಿಗಳು 

  • ಮಧ್ಯಮ ಗಾತ್ರದ ಎರಡು ಈರುಳ್ಳಿ
  • ಕರಿಬೇವು
  • ಒಂದು ಕಪ್ ತೆಂಗಿನ ಎಣ್ಣೆ
  • ಒಂದು ಕಪ್ ಸಾಸಿವೆ ಎಣ್ಣೆ
  • 2 ರಿಂದ 3 ವಿಟಮಿನ್ ಇ ಕ್ಯಾಪ್ಸುಲ್‌ಗಳು

ಈರುಳ್ಳಿ ಎಣ್ಣೆಯನ್ನು ಮನೆಯಲ್ಲಿ ಹೇಗೆ ತಯಾರಿಸುವುದು? 
ಮೊದಲು ಈರುಳ್ಳಿಯನ್ನು ಹೆಚ್ಚಿ ನೀರು ಹಾಕದೆ ಗ್ರೈಂಡರ್‌ನಲ್ಲಿ ರುಬ್ಬಿಕೊಳ್ಳಿ. ನಂತರ ಎರಡು ಚಮಚ ಸಾಸಿವೆ ಎಣ್ಣೆಯನ್ನು ಸೇರಿಸಿ. ಈಗ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ಈರುಳ್ಳಿ ಪೇಸ್ಟ್ ಸಿದ್ಧವಾದ ನಂತರ, ಅದಕ್ಕೆ ಹೆಚ್ಚಿದ ಕರಿಬೇವನ್ನು ಸೇರಿಸಿ. ಕರಿಬೇವು ಕೂದಲನ್ನು ಪೋಷಿಸುತ್ತದೆ. ನಿಮ್ಮ ಕೂದಲು ತುಂಬಾ ಒಣಗಿದ್ದರೆ, ಎರಡು ಚಮಚ ಮೆಂತ್ಯವನ್ನು ಸಹ ಈ ಎಣ್ಣೆಗೆ ಸೇರಿಸಬಹುದು.

ಇದನ್ನೂ ಓದಿ: ಬೇಸಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನುತ್ತೀರಾ? ಈ ವಿಷಯ ತಿಳ್ಕೊಳ್ಳಿ!

ಈ ಪೇಸ್ಟ್ ಸಿದ್ಧವಾದ ನಂತರ, ಎಣ್ಣೆಯನ್ನು ತೆಗೆಯಲು ಕಬ್ಬಿಣದ ಬಾಣಲೆಯಲ್ಲಿ ಎಲ್ಲಾ ಪೇಸ್ಟ್ ಜೊತೆಗೆ 200 ಗ್ರಾಂ ಸಾಸಿವೆ ಎಣ್ಣೆ ಹಾಗೂ ಈಗ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಎರಡರಿಂದ ಮೂರು ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಿ. ಒಮ್ಮೆ ಪಾತ್ರೆ ಬಿಸಿಯಾದ ನಂತರ ಅದನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ಈ ಸಮಯದಲ್ಲಿ ಈರುಳ್ಳಿ ಸುಡಬಾರದು. ಹೀಗಾಗಿ ತುಂಬಾ ಕಡಿಮೆ ಉರಿಯಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಯಿಸಿ ಬೇಕಾಗಬಹುದು. ಅದು ನೊರೆ ಬಿಡಲು ಪ್ರಾರಂಭಿಸಿದಾಗ, ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ. ನಂತರ ಅದನ್ನು ಬಟ್ಟೆಯ ಸಹಾಯದಿಂದ ಬಟ್ಟಲಿನಲ್ಲಿ ಸೋಸಿಕೊಳ್ಳಿ. ಈಗ ಈ  ಈರುಳ್ಳಿ ಎಣ್ಣೆ ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ದೀರ್ಘಕಾಲದವರೆಗೆ ಬಳಸಬಹುದಾಗಿದೆ.

ಇದನ್ನೂ ಓದಿ: ತ್ವಚೆಯ ಮೇಲೆ ಈ 5 ಚಿಹ್ನೆಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಅಪಾಯದಲ್ಲಿದೆ ಎಂದರ್ಥ! 


ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಬಹುದೊಡ್ಡದಿದೆ. ಇದೇ ಕಾರಣಕ್ಕಾಗಿಯೇ ಹಿಂದೆಲ್ಲಾ  ಗಂಡ ಸತ್ತ ಬಳಿಕ,  ಹೆಣ್ಣಿನ ಕೂದಲನ್ನು ಬೋಳಿಸುವ ಪದ್ಧತಿ ಇತ್ತು. ಈಗಲೂ ಕೆಲವು ಕಡೆಗಳಲ್ಲಿ ಈ ಅನಿಷ್ಠ ಪದ್ಧತಿ ಚಾಲ್ತಿಯಲ್ಲಿ ಇದೆ. ಗಂಡ ಸತ್ತ ಮೇಲೆ ಹೆಣ್ಣು ಚೆನ್ನಾಗಿ ಕಾಣಿಸಬಾರದು, ಬೇರೆಯವರು ಆಕೆಯ ಬಳಿ ಸೆಳೆಯಬಾರದು ಎನ್ನುವ ಕಾರಣದಿಂದ ಹೀಗೆ ಮಾಡುವುದು. ಇದರ ಅರ್ಥ ತಲೆಗೂದಲು ಸೌಂದರ್ಯದಲ್ಲಿ ಅಷ್ಟು ದೊಡ್ಡ ಕೊಡುಗೆಯನ್ನು ನೀಡುತ್ತದೆ. ಇದೇ ಕಾರಣಕ್ಕೆ ಕೂದಲಿನ ಅಲಂಕಾರಕ್ಕಾಗಿಯೇ ಈಗ ದೊಡ್ಡ ದೊಡ್ಡ ಷೋರೂಮ್​ಗಳೇ ತೆರೆಯಲಾಗುತ್ತಿದೆ. ನೂರಾರು ಬಗೆಯ ಸ್ಟೈಲ್​ಗಳೂ ಇವೆ. ಹಾಗೆಂದು ಇದು ಹೆಣ್ಣಿಗೆ  ಮಾತ್ರವಲ್ಲ, ಗಂಡಸರೂ ಕೂದಲಿನ ಅಲಂಕಾರದಲ್ಲಿ ಒಂದು ಹೆಜ್ಜೆ ಮುಂದಕ್ಕೇ ಇದ್ದಾರೆ. ವಿಭಿನ್ನ ರೀತಿಯ ಹೇರ್​ಸ್ಟೈಲ್​ಗಳು ಈಗ ಕಾಣಸಿಗುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..