ಅಧಿಕ ಪೋಷಕಾಂಶಗಳು ಇವೆ ಎಂಬ ಕಾರಣಕ್ಕೆ ಹೆಪ್ಪುಗಟ್ಟಿದ ಹಾಲಿಗೆ ಅಮೆರಿಕ, ಇಂಗ್ಲಿಂಡ್ ಇತರೆ ಹಲವು ದೇಶಗಳಲ್ಲಿಯೂ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತಿದೆ.
ತಾಯಿ ಹಾಲು ಮಗುವಿಗೆ ಅಮೃತವಿದ್ದಂತೆ. ಇದನ್ನು ಪೌಷ್ಟಿಕವೆಂದು ಪರಿಗಣಿಸಲಾಗುತ್ತದೆ. ಶಿಶು, ತಾಯಿ ಹಾಲನ್ನು ಸೇವನೆ ಮಾಡಿದ್ರೆ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿರುತ್ತದೆ. ಸೋಂಕಿನ ಅಪಾಯ ಕಡಿಮೆಯಾಗಿದೆ. ಮಗುವಿನ ಬೆಳವಣಿಗೆಯೂ ತಾಯಿ ಹಾಲು ಉತ್ತಮ. ಮಗು ಹುಟ್ಟಿದ ತಕ್ಷಣದಿಂದ ಎದೆ ಹಾಲನ್ನು ನೀಡ್ಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಪ್ಪುಗಟ್ಟಿದ ಎದೆ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದಷ್ಟೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಾಯಿ ಹಾಲಿ ಮಾರಾಟದ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಯಾವುದೇ ವ್ಯಕ್ತಿ ಅಥವಾ ಕಂಪನಿ, ಹೆಪ್ಪುಗಟ್ಟಿದ ಎದೆ ಹಾಲು (Breast Milk) ಅಥವಾ ಎದೆ ಹಾಲಿನಿಂದ ಮಾಡಿದ ಯಾವುದೇ ಉತ್ಪನ್ನವನ್ನು ಮಾರಾಟ (Sale) ಮಾಡಿದ್ರೆ ಎಫ್ಎಸ್ಎಸ್ (FSS) ಕಾಯಿದೆ 2006 ರ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಪ್ರಕಾರ, ವ್ಯಕ್ತಿ ಅಥವಾ ಕಂಪನಿ ವಿರುದ್ಧ ಸೂಕ್ತ ಕಾನೂನು (Law) ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಫ್ಎಸ್ಎಸ್ಎಐ ಹೇಳಿದೆ. ನಿಮಗೆ ಅಚ್ಚರಿ ಎನ್ನಿಸಬಹುದು, ಭಾರತದಲ್ಲಿ ಕೆಲ ಕಂಪನಿಗಳು ಹೆಪ್ಪುಗಟ್ಟಿದ ಎದೆ ಹಾಲನ್ನು ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದವು. 300 ಮಿಲಿ ಹೆಪ್ಪು ಗಟ್ಟಿದ ಎದೆ ಹಾಲನ್ನು 4500 ರೂಪಾಯಿಗೆ ಮಾರಾಟ ಮಾಡಲಾಗ್ತಾ ಇತ್ತು. ಇಂಗ್ಲೆಂಡ್ ನ ಬ್ರೆಸ್ಟ್ ಮಿಲ್ಕ್ ಪ್ರಾಡೆಕ್ಟ್ (Breast Milk Product) ಕಂಪನಿ 50 ಮಿಲಿ ಬ್ರೆಸ್ಟ್ ಮಿಲ್ಕನ್ನು 4300 ರೂಪಾಯಿಗೆ ಮಾರಾಟ ಮಾಡ್ತಿದೆ.
ಎದೆ ಹಾಲಿಗೆ ಬೇಡಿಗೆ ಹೆಚ್ಚಾಗಲು ಕಾರಣವೇನು? : ಭಾರತ, ಕಾಂಬೋಡಿಯಾ, ಅಮೆರಿಕ ಮತ್ತು ಇಂಗ್ಲೆಂಡ್ ಸೇರಿದಂತೆ ವಿಶ್ವದಾದ್ಯಂತ ಎದೆ ಹಾಲಿಗೆ ಬೇಡಿಕೆ ಹೆಚ್ಚಾಗ್ತಿದೆ. ಹೆಪ್ಪುಗಟ್ಟಿದ ಎದೆಹಾಲಿನ ಉತ್ಪನ್ನಗಳೂ ಮಾರುಕಟ್ಟೆಯಲ್ಲಿ ಲಭ್ಯವಾಗ್ತಿವೆ. ಹೆಪ್ಪುಗಟ್ಟಿದ ಎದೆ ಹಾಲಿನಿಂದ ತಯಾರಾಗುವ ಉತ್ಪನ್ನಗಳಿಗೆ ಪೌಷ್ಟಿಕಾಂಶವನ್ನು ಸೇರಿಸಲಾಗುತ್ತದೆ. ಹಾಗೆಯೇ ಎದೆ ಹಾಲಿನ ಪೌಷ್ಠಿಕಾಂಶ ನಾಶವಾಗದಂತೆ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ?
ಬಾಡಿ ಬಿಲ್ಡರ್ಸ್, ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳು ಮಾತ್ರವಲ್ಲದೆ ಆರೋಗ್ಯಕರ ವ್ಯಕ್ತಿಗಳು ಕೂಡ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಎದೆ ಹಾಲು ಹಾಗೂ ಅದ್ರ ಉತ್ಪನ್ನಗಳನ್ನು ಸೇವನೆ ಮಾಡ್ತಿದ್ದಾರೆ. ಆರೋಗ್ಯ ರಕ್ಷಕರಿಗೆ ಹಾಗೂ ಆಸ್ಪತ್ರೆಗಳಿಗೆ ಕೂಡ ಇದನ್ನು ಮಾರಾಟ ಮಾಡಲಾಗ್ತಿದೆ.ಇಂಗ್ಲೆಂಡ್ ನ ಕಂಪನಿಯೊಂದು ಎದೆ ಹಾಲನ್ನು ಆನ್ಲೈನ್ ನಲ್ಲಿ ಮಾರಾಟ ಮಾಡ್ತಿದೆ. ಮಕ್ಕಳಿಗೆ ಸ್ತನಪಾನ ಮಾಡಲು ಸಾಧ್ಯವಾಗದ ತಾಯಂದಿರಿಗಾಗಿ ಕಂಪನಿ ಈ ಸೇವೆ ಶುರು ಮಾಡಿದೆ.
ಎದೆ ಹಾಲು ಆರೋಗ್ಯಕ್ಕೆ ಒಳ್ಳೆಯದು ನಿಜ ಆದ್ರೆ ಅನೌಪಚಾರಿಕವಾಗಿ ಎದೆ ಹಾಲನ್ನು ಮಾರಾಟ ಮಾಡುವುದ್ರಿಂದ ಸಮಸ್ಯೆ ಎದುರಾಗುತ್ತದೆ. ಎದೆ ಹಾಲನ್ನು ತೆಗೆಯಲು ಹಾಗೂ ಅದನ್ನು ಸಂಗ್ರಹಿಸಲು ಕೆಲ ವಿಧಾನವಿದೆ. ಒಂದ್ವೇಳೆ ಈ ನಿಯಮಗಳನ್ನು ಪಾಲನೆ ಮಾಡದೆ ಹೋದ್ರೆ ನವಜಾತ ಶಿಶು, ಮಗು ಅಥವಾ ವಯಸ್ಕರಿಗೆ ಹಾನಿ ಮಾಡುವ ವೈರಸ್ (Virus) ಗಳು ಅಥವಾ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಕಂಪನಿಗಳು ಔಪಚಾರಿಕ ವಿಧಾನಗಳಲ್ಲಿ ಎದೆ ಹಾಲನ್ನು ಸಂಗ್ರಹಿಸುವುದು ಮುಖ್ಯವಾಗುತ್ತದೆ.
Neem ಎಲೆ ಮಾತ್ರವಲ್ಲ, ಇದರ ಮರದ ಅಂಗ ಅಂಗದಲ್ಲೂ ಔಷಧವಿದೆ
ತಾಜಾ ಎದೆ ಹಾಲಿಗಿಂತ ಹೆಪ್ಪುಗಟ್ಟಿಸಿದ ಎದೆ ಹಾಲಿನಲ್ಲಿ ಉತ್ಕರ್ಷಣ ನಿರೋಧಕಗಳು ಕಡಿಮೆ ಇರುತ್ತವೆ ಎಂಬುದು ಅಧ್ಯಯನದಿಂದ ಪತ್ತೆಯಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ಎದೆ ಹಾಲನ್ನು ಫ್ರೀಜ್ ಮಾಡಿದ್ರೆ ಅದರ ರುಚಿ ಹಾಳಾಗುತ್ತದೆ. ಹಾಗೆಯೇ ಅದ್ರಲ್ಲಿರುವ ಪೌಷ್ಟಿಕಾಂಶದ ನಷ್ಟವಾಗುತ್ತದೆ. ಎದೆ ಹಾಲನ್ನು ಫ್ರಿಜ್‌ನಲ್ಲಿ ಸ್ಟೋರ್ ಮಾಡಿ ಎಂಟು ದಿನಗಳವರೆಗೆ ಇಡಬಹುದು. ಆದ್ರೆ ನಾಲ್ಕು ದಿನದ ನಂತ್ರ ಅದ್ರಲ್ಲಿ ಬದಲಾವಣೆ ಶುರುವಾಗುತ್ತದೆ. ಸಾಮಾನ್ಯ ತಾಪಮಾನದಲ್ಲಿ ನೀವು ಎದೆ ಹಾಲನ್ನು ಸಂಗ್ರಹಿಸಿಡಬಹುದು. ಆದ್ರೆ ರೂಮಿನ ತಾಪಮಾನ 25 ಡಿಗ್ರಿಗಿಂತ ಕಡಿಮೆ ಇದ್ದರೆ ಮಾತ್ರ ನೀವು ನಾಲ್ಕು ಗಂಟೆಯವರೆಗೆ ಎದೆ ಹಾಲನ್ನು ಸಂಗ್ರಹಿಸಿಡಬಹುದು.