Home Medicine: ಕಣ್ಣಿನ ಸೋಂಕು ಕಡಿಮೆ ಮಾಡಲು ಮನೆಯಲ್ಲೆ ಇದೆ ಔಷಧ!

By Contributor AsianetFirst Published Oct 18, 2022, 3:07 PM IST
Highlights

ಜಗತ್ತು ಸುಂದರವಾಗಿ ಕಾಣುತ್ತದೆ ಎಂದರೆ ಅದಕ್ಕೆ ಕಾರಣ ಕಣ್ಣು. ಕಣ್ಣು ಎಲ್ಲವನ್ನೂ ಹೇಳುತ್ತದೆ. ವ್ಯಕ್ತಿಯ ಸೌಂದರ್ಯ ಅಡಗಿರುವುದು ಕಣ್ಣಿನಲ್ಲೇ. ಕಣ್ಣು ಬಹಳ ಸೂಕ್ಷö್ಮವಾದ ಅಂಗವಾಗಿದ್ದು, ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಸಾನಾನ್ಯವಾಗಿ ಕಾಣಿಸಿಕೊಳ್ಳುವ ಕಣ್ಣಿನ ಸೋಂಕಿನ ಸಮಸ್ಯೆಗಳ ಬಗ್ಗೆ ಹಾಗೂ ಅದಕ್ಕೆ ಮನೆಯಲ್ಲೇ ಮಾಡಬಹುದಾದ ಔಷಧಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಮಳೆಗಾಲ ಎಲ್ಲರಿಗೂ ಇಷ್ಟ. ಆದರೆ ಎಷ್ಟು ಇಷ್ಟವೋ ಅಷ್ಟೇ ಹೆಚ್ಚು ಜನರಿಗೆ ಕಷ್ಟ ತಂದುಕೊಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಹರಡುವ ಸೋಂಕುಗಳು, ಕಾಯಿಲೆಗಳು ಬಹುತೇಕ ಜನರಿಗೆ ಮಳೆಯಿಂದ ದೂರ ಇರುವಂತೆ ಮಾಡುತ್ತದೆ. ಅದರಲ್ಲೂ ನಮ್ಮ ದೇಹದ ಸೂಕ್ಷ್ಮ ಅಂಗವಾದ ಕಣ್ಣನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ದೀರ್ಘಕಾಲದ ಮಳೆಯಿಂದಾಗಿ ಕಣ್ಣಿನ ಸೋಂಕುಗಳು ಹೆಚ್ಚಾಗುತ್ತಿವೆ. ಗುಲಾಬಿ ಬಣ್ಣದ ಕಣ್ಣುಗಳು(Pink Eye) ಎಂದೂ ಕರೆಯುತ್ತಾರೆ. ಕಾಂಜಕ್ಟಿವಿಟಿಸ್ ಗುಲಾಬಿ ಕಣ್ಣಿನ ಬ್ಯಾಕ್ಟೀರಿಯಾ(Bacteria) ಮತ್ತು ವೈರಲ್ ಸೋಂಕಿನಂತಹ ಹಲವಾರು ಕಾರಣಗಳಿಂದ ಉಂಟಾಗುತ್ತದೆ.

ಈ ಗುಲಾಬಿ ಬಣ್ಣದ ಕಣ್ಣುಗಳ ರೋಗದ ಲಕ್ಷಣಗಳು ಎಂದರೆ ಕಣ್ಣು ಕೆಂಪಾಗುವುದು, ತುರಿಕೆ ಮತ್ತು ಕಣ್ಣಿನಲ್ಲಿ ನೀರು ಬರುವುದು ಒಳಗೊಂಡಿರುತ್ತದೆ. ಧೂಳಿನಿಂದಾಗಿ, ಶಾಂಪೂ, ಡಸ್ಟ್ನಿಂದಾಗಿಯೂ ಕಣ್ಣಿನಲ್ಲಿ ಕಿರಿಕಿರಿ ಉಂಟಾಗಿ ಕಣ್ಣು ಗುಲಾಬಿಯಾಗುತ್ತದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಈ ಸಮಯದಲ್ಲಿ ಮೆಡಿಕಲ್‌ಗಳಲ್ಲಿ ಸಿಗುವ ಕೌಂಟರ್ ಡ್ರಾಪ್ಸ್ನೊಂದಿಗೆ ಸ್ವಯಂ ಔಷಧಗಳನ್ನು ಮಾಡಬಾರದು. ಈ ರೀತಿಯ ಸೋಂಕುಗಳ ಸಮಸ್ಯೆ ಎದುರಾದಾಗ ಕಣ್ಣಿನ ಸ್ಥಿತಿಯನ್ನು ನಿಭಾಯಿಸಲು ಮನೆಯಲ್ಲೇ ಮಾಡಬಹುದಾದ ಸುಲಭ ಪರಿಹಾರಗಳು ಇಲ್ಲಿವೆ. 

ಕಂಜಕ್ಟಿವಿಟಿ ಎಂದರೇನು?
ಕಂಜಕ್ಟಿವಿಟಿ ಎಂದರೆ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುವುದು ಎಂದು. ಅಂದರೆ ಸಾಮಾನ್ಯವಾಗಿ ಕಣ್ಣು ಕೆಂಪಗಾಗುವುದು ಎಂದು ಹೇಳುತ್ತೇವೆ. ಇದು ಕಣ್ಣಿನಲ್ಲಿ ಸುಮ್ಮನೇ ನೀರು ತರಿಸುವುದಲ್ಲದೆ ಇನ್ನು ಕೆಲವರಿಗೆ ತುರಿಕೆ, ಕೆಂಪಗಾಗುವುದು ಆಗುತ್ತದೆ. ಈ ವೇಳೆ ಕಣ್ಣು ಮುಚ್ಚಿದಾಗ ಕಣ್ಣಿನಲ್ಲಿ ಉರಿಯೂ ಕಾಣಿಸಿಕೊಳ್ಳುತ್ತದೆ. ಸೋಂಕಿನಿಂದಾಗಿ ಕಣ್ಣಿನಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ ಹೆಚ್ಚು ವಿಷಕಾರಿ ರೂಪದ ಕಂಜಕ್ಟಿವಿಟಿ ರೋಗಿಗಳ ಅಥವಾ ಕಣ್ಣಿನ ಸಮಸ್ಯೆ ಇರುವವರ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ. 
ಗುಲಾಬಿ ಕಣ್ಣು(Pink Eye) ಕಾಂಜಕ್ಟಿವಾ(Conjunctiva) ಕಣ್ಣುಗಳ ಬಿಳಿ ಭಾಗದ ಮೇಲೆ ಇರುವ ತೆಳುವಾದ ಸ್ಪಷ್ಟ ಅಂಗಾಂಶವಾಗಿದೆ. ಈ ಪದರವು ಕಣ್ಣುರೆಪ್ಪೆಯ ಒಳಭಾಗವನ್ನು ರೇಖೆ ಮಾಡುತ್ತದೆ. 

ಸಾಮಾನ್ಯ ರೋಗ ಲಕ್ಷಣಗಳು: ಕಣ್ಣುಗಳ ಸುತ್ತ ಕೆಂಪಗಾಗುವುದು, ನೀರು, ತುರಿಕೆ, ಚುಚ್ಚುವಿಕೆ, ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆ ಹೊಂದಿರುವ ಬಹುತೇಕ ಜನರಲ್ಲಿ ಸೋಂಕಿನ ಶೀತ, ಕೆಮ್ಮು, ಜ್ವರದಿಂದಲೂ ಬಳಲುತ್ತಾರೆ. ತಜ್ಞರ ಪ್ರಕಾರ ಕಂಜಕ್ಟಿವಿಟಿ(Conjunctivitis) ಕಣ್ಣಿನ ಸಮಸ್ಯೆಗೆ ಒಳಗಾದವರು ಯಾವುದೇ ರೀತಿಯ ಸ್ವಯಂ ಔಷಧ ಮಾಡಬಾರು. ಏಕೆಂದರೆ ಹೀಗೆ ಮಾಡಿದ್ದಲ್ಲಿ ಅದು ದೀರ್ಘಕಾಲದ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ಹಾಗಾಗಿ ಹತ್ತಿರದ ಕಣ್ಣಿನ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. 

1. ಯಾವುದೇ ಕಾರಣಕ್ಕು ಕಣ್ಣು ಉಜ್ಜುವುದಾಗಲಿ ಮಾಡಬೇಡಿ. ಬದಲಾಗಿ ಮೊದಲು ಕಣ್ಣನ್ನು ತಣ್ಣೀರಿನಲ್ಲಿ ತೊಳೆಯಿರಿ. 
2. ಸೋಂಕಿನಿAದಾಗಿ ಕಣ್ಣಿನಲ್ಲಿ ಹೆಚ್ಚುವರಿ ನೀರು ಬರುತ್ತಿದ್ದರೆ. ಕಣ್ಣಿನ ನೀರು ಒರೆಸಲು ಬಟ್ಟೆ, ಕೈ ಬಳಸದೇ ಟಿಶ್ಯು ಬಳಸಿ. 
3. ಯಾವುದೇ ವ್ಯಕ್ತಿಯ ತಲೆ ಅಥವಾ ಕಣ್ಣುಗಳನ್ನು ಸ್ಪರ್ಶಿಸಿದರೆ ಮತ್ತು ನಂತರ ಇತರರೊಂದಿಗೆ ಸಂಪರ್ಕಕ್ಕೆ ಬರುವ ಯಾವುದೇ ಮೇಲ್ಮೆಯನ್ನು ಸ್ಪರ್ಶಿಸಿದರೆ ಕಂಜಕ್ಟಿವಿಟಿಸ್ ಅಥವಾ ಕಣ್ಣು ಗುಲಾಬಿಯಾಗುವುದು ಹರಡುತ್ತದೆ.
4. ಕಣ್ಣಿನಲ್ಲಿ ಈ ರೀತಿಯ ಸೋಂಕು ಕಾಣಿಸಿಕೊಂಡರೆ Contact Lens ಅನ್ನು ಸ್ವಲ್ಪ ದಿನಗಳ ಕಾಲ ಬಳಸದಿರುವುದು ಒಳ್ಳೆಯದು. ಏಕೆಂದರೆ ಈ ಸೋಂಕು ಸ್ವಲ್ಪದಿನಗಳ ಕಾಲ ಇರುತ್ತದೆ. 

ಮನೆಯಲ್ಲೇ ಮಾಡಬಹುದಾದ ಔಷಧಗಳು
1. ಜೇನು(Honey)

ಜೇನುತುಪ್ಪವನ್ನು ನೈಸರ್ಗಿಕ ಔಷಧ ಎಂದು ಹೇಳಲಾಗುತ್ತದೆ. ಇದು ಕಣ್ಣಿನ ಸೋಂಕನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಎರಡು ಕಪ್ ಕುರಿಯುವ ನೀರಿಗೆ, ಮೂರು ಚಮಚ ಜೇನುತುಪ್ಪ ಹಾಕಿ ಚೆನ್ನಾಗಿ ಕಲಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಈ ನೀರಿನ ಮಿಶ್ರಣದ ಒಂದೆರಡು ಹನಿಯನ್ನು ಕಣ್ಣಿಗೆ ಬಿಟ್ಟುಕೊಳ್ಳಿ. ಅಥವಾ ಒಂದು ಕಾಟನ್ ಬಟ್ಟೆಯನ್ನು ಈ ಮಿಶ್ರಣದಲ್ಲಿ ನೆನೆಸಿ ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಸೋಂಕಿನಿAದಾಗು ಕಿರಿಕಿರಿಯಿಂದ ಮುಕ್ತಿಸಿಗುತ್ತದೆ. ಏಕೆಂದರೆ ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಾಗಿದ್ದು ಸೋಂಕಿನ ವಿರುದ್ಧ ಹೋರಾಡುತ್ತದೆ. 

2. ಆಲೂಗೆಡ್ಡೆ(Potato)
ಆಲೂಗಡ್ಡೆ ಸಾಮಾನ್ಯವಾಗಿ ನೈಸರ್ಗಿಕ ಸಂಕೋಚಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಗುಲಾಬಿ ಕಣ್ಣನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಒಂದು ಆಲೂಗಡ್ಡೆಯನ್ನು ಕತ್ತರಿಸಿ ಹೋಳಾಗಿ ಮಾಡಿಕೊಳ್ಳಿ. ಈ ಹೋಳುಗಳನ್ನು ಸೋಂಕಿತ ಕಣ್ಣಿನ ಮೇಲೆ 15 ರಿಂದ 20 ನಿಮಿಷಗಳ ಕಾಲ ಇರಿಸಿ. ಸೋಂಕನ್ನು ನೈಸರ್ಗಿಕವಾಗಿ ಗುಣಪಡಿಸಲು ಉತ್ತಮ ಫಲಿತಾಂಶ ಪಡೆಯಲು 2-3 ದಿನ ಹೀಗೆ ಮಾಡಿನೋಡಿ. 

ಇದನ್ನೂ ಓದಿ: HEALTH TIPS: ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ ನೋಡಿ ಏನೆಲ್ಲ ಬೆನಿಫಿಟ್ಸ್ ಇದೆ ಅಂತ!

3. ಸೋಂಪು ಕಾಳು(Fennel Seeds)
ಸೋಂಪು ಕಾಳು ಇದು ವಿವಿಧ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಕಣ್ಣಿನಲ್ಲಿ ಉಂಟಾದ ಈ ಕಿರಿಕಿರಿಯನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ. ಒಂದಷ್ಟು ಸೋಂಪು ಕಾಳುಗಳನ್ನು ತೆಗೆದುಕೊಂಡು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಈ ನೀರು ತಣ್ಣಗಾದ ಮೇಲೆ ಕಣ್ಣನ್ನು ತೊಳೆಯಿರಿ. ಕಂಜಕ್ಟಿವಿಟಿ ಹೋಗಲಾಡಿಸಲು ನೈಸರ್ಗಿಕ ಚಿಕಿತ್ಸೆಯಾಗಿದೆ.

4. ಅಲೋವೆರಾ(Alovera)
ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುತ್ತದಲ್ಲದೆ, ಬಹುತೇಕ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತದೆ. ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಫ್ರೆಶ್ ಅಲೀವೆಯಾ ಜೆಲ್‌ನಲ್ಲಿ ನೆನೆಸಿ. ನಂತರ ಸೋಂಕಿತ ಕಣ್ಣಿನ ಮೇಲೆ ಇರಿಸಿ. ಅಲೋವೆರಾ ತನ್ನ ಔಷಧೀಯ ಗುಣಗಳಿಂದಾಗಿ ಸೋಂಕನ್ನು ಗುಣಪಡಿಸುತ್ತದೆ.

ಇದನ್ನೂ ಓದಿ: Neem ಎಲೆ ಮಾತ್ರವಲ್ಲ, ಇದರ ಮರದ ಅಂಗ ಅಂಗದಲ್ಲೂ ಔಷಧವಿದೆ

5.  ಹರಳೆಣ್ಣೆ(Castor Oli)
ಹರಳೆಣ್ಣೆಯಲ್ಲಿ ತಂಪಿನ ಶಕ್ತಿ ಅಡಗಿದೆ. ನಮ್ಮ ಹಿರಿಯರ ಕಾಲದಿಂದಲೂ ಇದಕ್ಕೆ ಬಹಳ ಮಹತ್ವವಿದೆ. ಇದು ಬಹುತೇಕ ಸೋಂಕುಗಳ ಸಮಸ್ಯೆಯನ್ನು ಗುಣಪಡಿಸುತ್ತದೆ. ಒಂದು ಹನಿ ಹರಳೆಣ್ಣೆಯನ್ನು ಸೋಂಕಿತ ಕಣ್ಣಿಗೆ ಬಿಟ್ಟುಕೊಳ್ಳುವುದರಿಂದ ಸೋಂಕು ಬೇಗ ಕಡಿಮೆಯಾಗುತ್ತದೆ. ಈ ರೀತಿ ದಿನಕ್ಕೆ ಮೂರು ಬಾರಿ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಹಾಗೂ ಕಣ್ಣು ಸುಂದರವಾಗಿಡುತ್ತದೆ.

click me!